(1) ಅಧಿಕೃತಗೊಳಿಸಿದ ವಿಚಾರಣಾ ಪ್ರಾಧಿಕಾರವು, ಸಾಕ್ಷವನ್ನು ಕೊಡುವುದಕ್ಕೆ ಆಗಲಿ ಅಥವಾ ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕೆ ಆಗಲಿ ಅಥವಾ ಅವರೆಡಕ್ಕಾಗಿ ಯಾವ ವ್ಯಕ್ತಿಗಳ ಹಾಜರಾತಿಯು ಅದರ ಮುಂದೆ ಅಗತ್ಯವಾಗಿದೆಯೋ ಆ ವ್ಯಕ್ತಿಗಳಿಗೆ ಸಮನ್ಸ್ ಹೊರಡಿಸಬಹುದು.
(2) ಅಧಿಕೃತಗೊಳಿಸಿದ ವಿಚಾರಣಾ ಪ್ರಾಧಿಕಾರವು ಹೊರಡಿಸಿದ ಪ್ರತಿಯೊಂದು ಸಮನು ದ್ವಿಪ್ರತಿಯಲ್ಲಿ ಮತ್ತು ಆದಷ್ಟು ಮಟ್ಟಿಗೆ ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಅನುಸೂಚಿ-1ರ ಅನುಬಂಧ (ಬಿ) ದ ನಮೂನೆ 13ರಲ್ಲಿ ಇರತಕ್ಕುದು ಮತ್ತು ಅದಕ್ಕೆ ಅಧಿಕೃತಗೊಳಿಸಿದ ವಿಚಾರಣಾ ಪ್ರಾಧಿಕಾರವು ಸಹಿ ಹಾಕಿರತಕ್ಕುದು ಮತ್ತು *‘ಲೋಕಾಯುಕ್ತ ಅಥವಾ ಉಪಲೋಕಾಯುಕ್ತ ಅಥವಾ ಲೋಕಾಯುಕ್ತ ಸಿಬ್ಬಂದಿಯಲ್ಲಿನ ಒಬ್ಬ ಅಧಿಕಾರಿಯು] ವಿಚಾರಣಾ ಪ್ರಾಧಿಕಾರವಾಗಿದ್ದರೆ. ‘'ಲೋಕಾಯುಕ್ತದ] ಮೊಹರು ಸಹ ಹಾಕಿರತಕ್ಕುದು.
1.ಜಿ.ಎಸ್.ಆರ್. 275 ದಿನಾಂಕ:15.10.1986ರ (ಅಧಿಸೂಚನೆ ಸಂಖ್ಯೆ:ಡಿಪಿಎಆರ್ 111 ಎಲ್ಆರ್ಓ 86 ದಿನಾಂಕ:9-10-1986ರ ಮೂಲಕ ಪ್ರತಿಯೋಜಿಸಲಾಗಿದೆ.)
(3) ವ್ಯಕ್ತಿಯನ್ನು ಸಾಕ್ಷವನ್ನು ಕೊಡಲು ಸಮನು ಮಾಡದೆಯೇ ದಸ್ತಾವೇಜನ್ನು ಹಾಜರುಪಡಿಸಲು ಸಮನ್ಸ್ ಕೊಡಬಹುದು ಮತ್ತು ಕೇವಲ ದಸ್ತಾವೇಜನ್ನು ಹಾಜರಪಡಿಸಲು ಯಾವನೇ ವ್ಯಕ್ತಿಗೆ ಸಮನ್ ಕೊಟ್ಟಿದ್ದರೆ, ಆ ದಸ್ತಾವೇಜನ್ನು ಹಾಜರುಪಡಿಸಲು ಖುದ್ದಾಗಿ ಹಾಜರಾಗುವುದಕ್ಕೆ ಬದಲು ಅವನು ಅಂಥ ದಸ್ತಾವೇಜನ್ನು ಹಾಜರುಪಡಿಸುವಂತೆ ಮಾಡಿದ್ದರೆ, ಆ ಸಮನ್ಸನ್ನು ಪಾಲಿಸಲಾಗಿದೆ. ಎಂದು ಭಾವಿಸತಕ್ಕುದು.
(4) ದಸ್ತಾವೇಜುಗಳನ್ನು ಹಾಜರುಪಡಿಸಲು ಹೊರಡಿಸುವ ಸಮನ್ಸನ್ನು, ಸಮನ್ ಮಾಡಲಾದ ವ್ಯಕ್ತಿಯ ಸ್ವಾಧೀನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ನಿರ್ದಿಷ್ಟ ವಿವರಣೆಯ ಎಲ್ಲಾ ದಸ್ತಾವೇಜುಗಳನ್ನು ಹಾಜರುಪಡಿಸುವುದಕ್ಕಾಗಿಯು ಕೊಡಬಹುದು.
(5) ಈ ನಿಯಮಗಳ ಮೇರೆಗೆ ಅಧಿಕೃತಗೊಳಿಸಿದ ವಿಚಾರಣಾ ಪ್ರಾಧಿಕಾರವು ಹೊರಡಿಸಿದ ಪ್ರತಿಯೊಂದು ಸಮನ್ಸನ್ನು ಸಂದೇಶ ವಾಹಕನ ಮೂಲಕ ಪ್ರತ್ಯಕ್ಷವಾಗಿಯೇ ಆಗಲಿ ಅಥವ ಅಂಚೆಯ ಮೂಲಕವಾಗಿಯೇ ಆಗಲಿ ಜಾರಿಮಾಡತಕ್ಕುದು.
KEKKKKERE The above translation of the Karnataka Departmental Inquiries (Enforcement of Attendance of Witnesses and Production of Documents) Act, 1981; and the Karnataka Departmental Inquiries (Enforcement of Attendance of Witnesses and Production of Documents) Rules, 1981 (Karnataka Act No. 29 of 1981) shall be authoritative text in the Kannada Language under clause (ii) of section 5A of the Karnataka Official Language Act, 1963 (Karnataka Act No. 26 of 1963) Bangalore GOVERNOR OF KARNATAKA Bangalore GOVERNOR OF KARNATAKA Date:
ಮತ್ತು ಅವರ ಹೆಸರಿನಲ್ಲಿ, Date: ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮರಾ. ಹೆಗಡೆ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.