(1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ) ತಿದ್ದುಪಡಿ ನಿಯಮಗಳು, 2021 ಎಂದು ಕರೆಯತಕ್ಕದ್ದು.
i. ಸದರಿ ನಿಯಮಗಳ ಉಪ ನಿಯಮ 3(1) ಉಪಬಂಧದಲ್ಲಿ ಮುಂದಿನ ವಾಕ್ಯವನ್ನು ಸೇರಿಸುವುದು. 'ನೋಟೀಸ್ ನಲ್ಲಿ ಸಹಿ ಮಾಡಿರುವ ಎಲ್ಲಾ ಸದಸ್ಯರುಗಳ ಸಹಿಗಳನ್ನು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ದೃಢೀಕರಿಸಬೇಕು'.
ii. ಸದರಿ ನಿಯಮಗಳ ಉಪ ನಿಯಮ 3(2)ರಲ್ಲಿ ಹದಿನೈದು ದಿನಗಳಿಗೆ ಮೀರದಂತೆ ಎಂದಿರುವುದನ್ನು “ಮೂವತ್ತು ದಿನಗಳಿಗೆ ಮೀರದಂತೆ” ಎಂದು ಓದಿಕೊಳ್ಳತಕ್ಕದ್ದು.