(1)ಈ ವಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.
(2) ಈ ವಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಹಾರಿಗೆ ಬರತಕ್ಕದ್ದು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ) ನಿಯಮಗಳು. 2020., Rural Development and Panchayat Raj Department
2020 · PDF page 1
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ,-
(i) “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ: 14);
(ii) “ಅಧ್ಯಕ್ಷರು” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಅಧ್ಯಕ್ಷರು;
(iii) “ಆಶಾ ಕಾರ್ಯಕರ್ತೆ” ಎಂದರೆ ಆರೋಗ್ಯ ಕಾರ್ಯಕತೆಯಾಗಿದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋಜನೆಗೊಂಡ ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸುವವರು;
(iv) “ಉಪಾಧ್ಯಕ್ಷರು” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಉಪಾಧ್ಯಕ್ಷರು;
(v) “ಕಾಯಿದೆಯೊಡನೆ ಸಂಘರ್ಷದಲ್ಲಿರುವ ಮಗು” : (Child in Conflict with law) ಎಂದರೆ, ಯಾವುದೇ ಮಗುವು ಅಪರಾಧವನ್ನು ಮಾಡಿದೆಯೆಂದು ದೂರಲಾದ ಅಥವಾ ಅಪರಾಧ ಮಾಡಿರುವುದು ಕಂಡುಬಂದಿದ್ದು ಅಪರಾಧ ಮಾಡಿದ ದಿನಾಂಕದಂದು ಹದಿನೆಂಟು ವರ್ಷ ವಯಸ್ಸನ್ನು ಮೀರದ ಮಗು;
(vi) “ಜಾಡು ಪತ್ತೆ, ಮಾಡು (Track the Child Portal)” ಎಂದರೆ ಮಕ್ಕಳು ನಾಪತ್ತೆಯಾದ ಘಟನೆಗೆ ಪೂರಕವಾದ ಸರಣಿ ಕ್ರಿಯೆಗಳು / ಮಗುವಿನ ನಾಪತ್ತೆಯ ಮೂಲವನ್ನು ವಿಶ್ಲೇಷಿಸುವ ಸರಣಿ ಕ್ರಿಯೆಗಳು;
(vii) “ಜಿಲ್ಲಾ ನ್ಯಾಯಾಲಯ” ಎಂದರೆ ಕೌಟುಂಬಿಕ ನ್ಯಾಯಾಲಯಗಳ ಅಧಿವಿಯಮ 1984 (1984ರ ಕೇಂದ್ರ ಅಧಿನಿಯಮ ಸಂ:66ರ ಪ್ರಕರಣ 3ರ ಮೇರೆಗೆ ಯಾವ ಪ್ರದೇಶಕ್ಕಾಗಿ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯೋ ಮತ್ತು ಸಿವಿಲ್ ನ್ಯಾಯಾಲಯ ಇರುವಲ್ಲಿ ಆ ಸಿವಿಲ್ ನ್ಯಾಯಾಲಯ ಮತ್ತು ಯಾವುದೇ ಇತರ ಪ್ರದೇಶದಲ್ಲಿ ಮೂಲ ಅಧಿಕಾರ ವ್ಯಾಪ್ತಿ ಹೊಂದಿರುವ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದಲ್ಲಿನ ವಿಷಯಗಳಿಗೆ ಸಂಬಂ೦ದಿಸಿದಂತೆ ಅಧಿಕಾರ ವ್ಯಾಪಿ, ಹೊಂದಿರುವುದೆಂದು ನಿರ್ಧಿಷ್ಟಪಡಿಸಬಹುದಾದಂತಹ ಯಾವುದೇ ಇತರ ಸಿವಿಲ್ ನ್ಯಾಯಾಲಯವನ್ನು ಒಳಗೊಳ್ಳುತ್ತದೆ;
(viii) “ "ಪ್ರಾಯ ಪೂರ್ವ” ಎಂದರೆ 10ರಿಂದ 18 ವರ್ಷದೊಳಗಿನ ವ್ಯಕ್ತಿ;
(ix) “ಪೊಲೀಸ್ ಅಧಿಕಾರಿ” ಎಂದರೆ ಗ್ರಾಮ ಪಂಚಾಯತ್ ಮಟ್ಟದ ಗ್ರಾಮಗಳಿಗೆ, ಆಯಾ ಪೊಲೀಸ್ ಠಾಣೆಯ, ಆರಕ್ಷಕ ಉಪನಿರೀಕ್ಷಕರಿಂದ ನಿಯೋಜಿಸ ಲ್ಪಡುವ ಪೊಲೀಸ್ ಅಧಿಕಾ (ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ);
(x) “ಬಾಲ್ಯವಿವಾಹ” ಎಂದರೆ ಗಂಡು ಆಗಿದ್ದರೆ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ಮತ್ತು ಹೆಣ್ಣು ಆಗಿದ್ದರೆ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ವ್ಯಕ್ತಿಗಳು ವಿವಾಹವಾದಲ್ಲಿ ಅಥವಾ ಅವರಲ್ಲಿ ಒಬ್ಬರಾದರೂ ಮೇಲ್ಕಂಡ ವಯಸ್ಸಿನ ಕೆಳಗಿದ್ದರೆ ಬಾಲ್ಯ ವಿವಾಹ ಎಂದು ಅರ್ಥ;
(xi) “ಬಾಲ್ಯವಿವಾಹ ನಿಷೇಧ ಅಧಿಕಾರಿ” ಎಂದರೆ ಬಾಲ್ಯವಿವಾಹ ನಿಷೇಧ ಅಧಿನಿಯಮ, 2006 (2007ರ ಕೇಂದ್ರ ಅಧಿನಿಯಮ ಸಂಖ್ಯೆ 6) 2006ರಡಿ ಬರುವ 16ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ನೇಮಕಗೊಂಡ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು;
(xii) “ಬಾಲ ನ್ಯಾಯ ಮಂಡಳಿ” ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ, 2015 (2016ರ ಕೇಂದ್ರ ಅಧಿನಿಯಮ 2) ರ ಪ್ರಕರಣ 4ರಡಿಯಲ್ಲಿ ರಚಿಸಿದಂತಹ ಬಾಲ ನ್ಯಾಯ ಮಂಡಳಿ;
(ಅ) “ಜಿಲ್ಲಾ ಮಕ್ಕಳ ರಕ್ಷಣಾ ಘಟಕ” ಎಂದರೆ ಬಾಲನ್ಯಾಯ ಅಧಿನಿಯಮದ ಪ್ರಕರಣ 106 ರಡಿಯಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಈ ಅಧಿನಿಯಮದ ಉಪ ಬಂಧಗಳನ್ನು ಹಾರಿಗೆ ತರಲು ಮತ್ತು ಇತರ ಮಕ್ಕಳ ಸಂರಕ್ಷಣಾ ಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಖಾತ್ರಿಪಡಿಸುವಂತಹ ಘಟಕ;
(ಆ)“ಅನಾಥ ಮಗು” ಎಂದರೆ ಹೆತ್ತ ತಂದೆ ತಾಯಿಯಾಗಲಿ ಅಥವಾ ದತ್ತಕದ 308 ತಾಯಿಯಾಗಲಿ ಅಥವಾ ಪೋಷಕರಾಗಲಿ ಇಲ್ಲದಂತಹ ಮತ್ತು ಕಾನೂನಾತ ಪೋಷಕರು ಪಾಲನೆ ಪೋಷಣೆ ಮಾಡಲು ಇಜಚ್ಡಿಸದಿದ್ದಲ್ಲಿ ಅಥವಾ ಮಗುವಿನ ಪಾಲನೆ ಪೋಷಣೆ ಮಾಡಲು ಸಮರ್ಥರಿಲ್ಲದಿದ್ದಲ್ಲಿ ಅಂತಹ ಮಗು;
(ಇ)”“ಲೈಂಗಿಕ ಅತ್ಯಾಚಾರ / ಲೈಂಗಿಕ ಕಿರುಕುಳ” ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ, 2012 (2012 ರ ಕೇಂದ್ರ ಅಧಿನಿಯಮ NHOM85:32)8 ಪ್ರಕರಣ 7 ಮತ್ತು 11ರ ಪ್ರಕಾರ ನೀಡಿರುವ ಅರ್ಥವನ್ನೇ ಹೊಂದಿರತಕ್ಕದ್ದು;
(xiii) “ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ” ಎಂದರೆ ಮಾಲೀಕರು, ಸಾಗಾಣಿಕೆದಾರರು ಮತ್ತು ಅಪರಾಧಿ ಜಾಲಗಳು, ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು, ಲೈಂಗಿಕ. ಶೋಷಣೆ. ಸುಳ್ಳು ದತ್ತುಗಳಂತಹ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಶೋಚನೀಯ ಪರಿಸ್ಥಿತಿಗೆ ಬಲಾತ್ಮಾರದಿಂದ ತಳ್ಳುವುದು;
(xiv) “ಮಗು” ಎಂದರೆ ಪ್ರಾಪ್ತ ವಯಸ್ಕ ಅಧಿನಿಯಮ 1975 (1875 ರ ಕೇಂದ್ರ ಅಧಿನಿಯಮ ಸಂಖ್ಯೆ: 9) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಧಿನಿಯಮ, 2012 (2012ರ ಕೇಂದ್ರ ಅಧಿನಿಯಮ ಸಂಖ್ಯೆ 32) ಮೇರೆಗೆ ಹದಿನೆಂಟು ವರ್ಷ ವಯಸ್ಸನ್ನು ಮೀರದ ಯಾರೇ ವ್ಯಕ್ತಿ;
(xv) “ಮಕ್ಕಳ ಕಲ್ಯಾಣ ಸಮಿತಿ” ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ 2015 (2016 ರ ಕೇಂದ್ರ ಅಧಿನಿಯಮ 2) ರ ಪ್ರಕರಣ 27ರಡಿಯಲ್ಲಿ ರಚಿಸಿದಂತಹ ಸಮಿತಿ;
(xvi) “ಮಕ್ಕಳ ಅಭಿವೃದ್ಧಿಗೆ ಮಾರಕವಾದ ಮೂಡನಂಬಿಕೆಗಳು” ಎಂದರೆ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ, 2012 ರಡಿಯಲ್ಲಿ ನಿಷೇಧಿಸಲ್ಪಟ್ಟಿರುವ ಮೂಢನಂಬಿಕೆಗಳು / ಕೆಟ್ಟ ನಂಬಿಕೆಗಳು, ಆಚಾರಗಳು ಮತ್ತು ಜೀವನ ಕ್ರಮಗಳು ಮತ್ತು ಮಕ್ಕಳ ಬದುಕು, ಬೆಳವಣಿಗೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿರುವ ಪದ್ಧತಿಗಳು;
(xvii) “ಸದಸ್ಯರು” ಎಂದರೆ ಸಮಿತಿಯ ಸದಸ್ಯರು;
(xviii) “ಸಭೆ” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸಭೆಗಳು;
(xix) “ಸಮಿತಿ” ಎಂದರೆ ನಿಯಮ 3 ರಡಿಯಲ್ಲಿ ರಚಿಸಲ್ಪಟ್ಟ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ;
(xx) “ಸಾಧಾರಣ ಕೋರಂ೦” ಎಂದರೆ ಹಾಜರಿದ್ದ ಸದಸ್ಯರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯ ಹಾಜರಿ;
(xxi) “ಸಂರಕ್ಷಣೆ ಮತ್ತು ಪಾಲನೆಯ ಅಗತ್ಯವುಳ್ಳ ಮಗು” (Child in need of care and Protection) ಎಂದರೆ,-
(ಅ) ಯಾವುದೇ ನಿವಾಸ ಅಥವಾ ನೆಮ್ಮದಿಯ ನೆಲೆಯಿಲ್ಲದ ಮತ್ತು ಮೇಲ್ನೋಟಕ್ಕೆ ಜೀವನ ನಿರ್ವಹಣೆಗೆ ಯಾವುದೇ ಮಾರ್ಗವಿಲ್ಲದ; ಅಥವಾ
(ಆ) ತಾತ್ಕಾಲಿಕ ಜಾರಿಯಲ್ಲಿರುವ ಯಾವುದೇ ಕಾರ್ಮಿಕ ಅಧಿನಿಯಮಗಳ ಉಪ ಬಂದಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿರುವ ಅಥವಾ ಭಿಕ್ಷೆ ಬೇಡುತ್ತಿರುವ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ; ಅಥವಾ
(ಇ) ಯಾರೇ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ (ಅಂತಹ ವ್ಯಕ್ತಿಯು ಮಗುವಿನ ಪೋಷಕನಾಗಿರಬಹುದು ಅಥವಾ ಅಲ್ಲದಿರಬಹುದು) ಮತ್ತು ಅಂತಹ ವ್ಯಕ್ತಿಯು ಮಗುವನ್ನು ಘಾಸಿಗೊಳಿಸಿ, ಶೋಷಣೆ ಮಾಡಿ, ಹಿಂಸಿಸಿ ಅಥವಾ ಉದಾಸಿನ ಮಾಡಿ ಮಗುವಿನ ಸಂರಕ್ಷಣೆಗಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿರುವಂತಹ ಮಗು.