(1)ಈ ವಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.
(2) ಈ ವಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಹಾರಿಗೆ ಬರತಕ್ಕದ್ದು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ) ನಿಯಮಗಳು. 2020., Rural Development and Panchayat Raj Department
2020 · PDF page 1
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ,-
(i) “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ: 14);
(ii) “ಅಧ್ಯಕ್ಷರು” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಅಧ್ಯಕ್ಷರು;
(iii) “ಆಶಾ ಕಾರ್ಯಕರ್ತೆ” ಎಂದರೆ ಆರೋಗ್ಯ ಕಾರ್ಯಕತೆಯಾಗಿದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋಜನೆಗೊಂಡ ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸುವವರು;
(iv) “ಉಪಾಧ್ಯಕ್ಷರು” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಉಪಾಧ್ಯಕ್ಷರು;
(v) “ಕಾಯಿದೆಯೊಡನೆ ಸಂಘರ್ಷದಲ್ಲಿರುವ ಮಗು” : (Child in Conflict with law) ಎಂದರೆ, ಯಾವುದೇ ಮಗುವು ಅಪರಾಧವನ್ನು ಮಾಡಿದೆಯೆಂದು ದೂರಲಾದ ಅಥವಾ ಅಪರಾಧ ಮಾಡಿರುವುದು ಕಂಡುಬಂದಿದ್ದು ಅಪರಾಧ ಮಾಡಿದ ದಿನಾಂಕದಂದು ಹದಿನೆಂಟು ವರ್ಷ ವಯಸ್ಸನ್ನು ಮೀರದ ಮಗು;
(vi) “ಜಾಡು ಪತ್ತೆ, ಮಾಡು (Track the Child Portal)” ಎಂದರೆ ಮಕ್ಕಳು ನಾಪತ್ತೆಯಾದ ಘಟನೆಗೆ ಪೂರಕವಾದ ಸರಣಿ ಕ್ರಿಯೆಗಳು / ಮಗುವಿನ ನಾಪತ್ತೆಯ ಮೂಲವನ್ನು ವಿಶ್ಲೇಷಿಸುವ ಸರಣಿ ಕ್ರಿಯೆಗಳು;
(vii) “ಜಿಲ್ಲಾ ನ್ಯಾಯಾಲಯ” ಎಂದರೆ ಕೌಟುಂಬಿಕ ನ್ಯಾಯಾಲಯಗಳ ಅಧಿವಿಯಮ 1984 (1984ರ ಕೇಂದ್ರ ಅಧಿನಿಯಮ ಸಂ:66ರ ಪ್ರಕರಣ 3ರ ಮೇರೆಗೆ ಯಾವ ಪ್ರದೇಶಕ್ಕಾಗಿ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯೋ ಮತ್ತು ಸಿವಿಲ್ ನ್ಯಾಯಾಲಯ ಇರುವಲ್ಲಿ ಆ ಸಿವಿಲ್ ನ್ಯಾಯಾಲಯ ಮತ್ತು ಯಾವುದೇ ಇತರ ಪ್ರದೇಶದಲ್ಲಿ ಮೂಲ ಅಧಿಕಾರ ವ್ಯಾಪ್ತಿ ಹೊಂದಿರುವ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದಲ್ಲಿನ ವಿಷಯಗಳಿಗೆ ಸಂಬಂ೦ದಿಸಿದಂತೆ ಅಧಿಕಾರ ವ್ಯಾಪಿ, ಹೊಂದಿರುವುದೆಂದು ನಿರ್ಧಿಷ್ಟಪಡಿಸಬಹುದಾದಂತಹ ಯಾವುದೇ ಇತರ ಸಿವಿಲ್ ನ್ಯಾಯಾಲಯವನ್ನು ಒಳಗೊಳ್ಳುತ್ತದೆ;
(viii) “ "ಪ್ರಾಯ ಪೂರ್ವ” ಎಂದರೆ 10ರಿಂದ 18 ವರ್ಷದೊಳಗಿನ ವ್ಯಕ್ತಿ;
(ix) “ಪೊಲೀಸ್ ಅಧಿಕಾರಿ” ಎಂದರೆ ಗ್ರಾಮ ಪಂಚಾಯತ್ ಮಟ್ಟದ ಗ್ರಾಮಗಳಿಗೆ, ಆಯಾ ಪೊಲೀಸ್ ಠಾಣೆಯ, ಆರಕ್ಷಕ ಉಪನಿರೀಕ್ಷಕರಿಂದ ನಿಯೋಜಿಸ ಲ್ಪಡುವ ಪೊಲೀಸ್ ಅಧಿಕಾ (ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ);
(x) “ಬಾಲ್ಯವಿವಾಹ” ಎಂದರೆ ಗಂಡು ಆಗಿದ್ದರೆ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ಮತ್ತು ಹೆಣ್ಣು ಆಗಿದ್ದರೆ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ವ್ಯಕ್ತಿಗಳು ವಿವಾಹವಾದಲ್ಲಿ ಅಥವಾ ಅವರಲ್ಲಿ ಒಬ್ಬರಾದರೂ ಮೇಲ್ಕಂಡ ವಯಸ್ಸಿನ ಕೆಳಗಿದ್ದರೆ ಬಾಲ್ಯ ವಿವಾಹ ಎಂದು ಅರ್ಥ;
(xi) “ಬಾಲ್ಯವಿವಾಹ ನಿಷೇಧ ಅಧಿಕಾರಿ” ಎಂದರೆ ಬಾಲ್ಯವಿವಾಹ ನಿಷೇಧ ಅಧಿನಿಯಮ, 2006 (2007ರ ಕೇಂದ್ರ ಅಧಿನಿಯಮ ಸಂಖ್ಯೆ 6) 2006ರಡಿ ಬರುವ 16ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ನೇಮಕಗೊಂಡ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು;
(xii) “ಬಾಲ ನ್ಯಾಯ ಮಂಡಳಿ” ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ, 2015 (2016ರ ಕೇಂದ್ರ ಅಧಿನಿಯಮ 2) ರ ಪ್ರಕರಣ 4ರಡಿಯಲ್ಲಿ ರಚಿಸಿದಂತಹ ಬಾಲ ನ್ಯಾಯ ಮಂಡಳಿ;
(ಅ) “ಜಿಲ್ಲಾ ಮಕ್ಕಳ ರಕ್ಷಣಾ ಘಟಕ” ಎಂದರೆ ಬಾಲನ್ಯಾಯ ಅಧಿನಿಯಮದ ಪ್ರಕರಣ 106 ರಡಿಯಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಈ ಅಧಿನಿಯಮದ ಉಪ ಬಂಧಗಳನ್ನು ಹಾರಿಗೆ ತರಲು ಮತ್ತು ಇತರ ಮಕ್ಕಳ ಸಂರಕ್ಷಣಾ ಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಖಾತ್ರಿಪಡಿಸುವಂತಹ ಘಟಕ;
(ಆ)“ಅನಾಥ ಮಗು” ಎಂದರೆ ಹೆತ್ತ ತಂದೆ ತಾಯಿಯಾಗಲಿ ಅಥವಾ ದತ್ತಕದ 308 ತಾಯಿಯಾಗಲಿ ಅಥವಾ ಪೋಷಕರಾಗಲಿ ಇಲ್ಲದಂತಹ ಮತ್ತು ಕಾನೂನಾತ ಪೋಷಕರು ಪಾಲನೆ ಪೋಷಣೆ ಮಾಡಲು ಇಜಚ್ಡಿಸದಿದ್ದಲ್ಲಿ ಅಥವಾ ಮಗುವಿನ ಪಾಲನೆ ಪೋಷಣೆ ಮಾಡಲು ಸಮರ್ಥರಿಲ್ಲದಿದ್ದಲ್ಲಿ ಅಂತಹ ಮಗು;
(ಇ)”“ಲೈಂಗಿಕ ಅತ್ಯಾಚಾರ / ಲೈಂಗಿಕ ಕಿರುಕುಳ” ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ, 2012 (2012 ರ ಕೇಂದ್ರ ಅಧಿನಿಯಮ NHOM85:32)8 ಪ್ರಕರಣ 7 ಮತ್ತು 11ರ ಪ್ರಕಾರ ನೀಡಿರುವ ಅರ್ಥವನ್ನೇ ಹೊಂದಿರತಕ್ಕದ್ದು;
(xiii) “ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ” ಎಂದರೆ ಮಾಲೀಕರು, ಸಾಗಾಣಿಕೆದಾರರು ಮತ್ತು ಅಪರಾಧಿ ಜಾಲಗಳು, ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು, ಲೈಂಗಿಕ. ಶೋಷಣೆ. ಸುಳ್ಳು ದತ್ತುಗಳಂತಹ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಶೋಚನೀಯ ಪರಿಸ್ಥಿತಿಗೆ ಬಲಾತ್ಮಾರದಿಂದ ತಳ್ಳುವುದು;
(xiv) “ಮಗು” ಎಂದರೆ ಪ್ರಾಪ್ತ ವಯಸ್ಕ ಅಧಿನಿಯಮ 1975 (1875 ರ ಕೇಂದ್ರ ಅಧಿನಿಯಮ ಸಂಖ್ಯೆ: 9) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಧಿನಿಯಮ, 2012 (2012ರ ಕೇಂದ್ರ ಅಧಿನಿಯಮ ಸಂಖ್ಯೆ 32) ಮೇರೆಗೆ ಹದಿನೆಂಟು ವರ್ಷ ವಯಸ್ಸನ್ನು ಮೀರದ ಯಾರೇ ವ್ಯಕ್ತಿ;
(xv) “ಮಕ್ಕಳ ಕಲ್ಯಾಣ ಸಮಿತಿ” ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ 2015 (2016 ರ ಕೇಂದ್ರ ಅಧಿನಿಯಮ 2) ರ ಪ್ರಕರಣ 27ರಡಿಯಲ್ಲಿ ರಚಿಸಿದಂತಹ ಸಮಿತಿ;
(xvi) “ಮಕ್ಕಳ ಅಭಿವೃದ್ಧಿಗೆ ಮಾರಕವಾದ ಮೂಡನಂಬಿಕೆಗಳು” ಎಂದರೆ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ, 2012 ರಡಿಯಲ್ಲಿ ನಿಷೇಧಿಸಲ್ಪಟ್ಟಿರುವ ಮೂಢನಂಬಿಕೆಗಳು / ಕೆಟ್ಟ ನಂಬಿಕೆಗಳು, ಆಚಾರಗಳು ಮತ್ತು ಜೀವನ ಕ್ರಮಗಳು ಮತ್ತು ಮಕ್ಕಳ ಬದುಕು, ಬೆಳವಣಿಗೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿರುವ ಪದ್ಧತಿಗಳು;
(xvii) “ಸದಸ್ಯರು” ಎಂದರೆ ಸಮಿತಿಯ ಸದಸ್ಯರು;
(xviii) “ಸಭೆ” ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸಭೆಗಳು;
(xix) “ಸಮಿತಿ” ಎಂದರೆ ನಿಯಮ 3 ರಡಿಯಲ್ಲಿ ರಚಿಸಲ್ಪಟ್ಟ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ;
(xx) “ಸಾಧಾರಣ ಕೋರಂ೦” ಎಂದರೆ ಹಾಜರಿದ್ದ ಸದಸ್ಯರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯ ಹಾಜರಿ;
(xxi) “ಸಂರಕ್ಷಣೆ ಮತ್ತು ಪಾಲನೆಯ ಅಗತ್ಯವುಳ್ಳ ಮಗು” (Child in need of care and Protection) ಎಂದರೆ,-
(ಅ) ಯಾವುದೇ ನಿವಾಸ ಅಥವಾ ನೆಮ್ಮದಿಯ ನೆಲೆಯಿಲ್ಲದ ಮತ್ತು ಮೇಲ್ನೋಟಕ್ಕೆ ಜೀವನ ನಿರ್ವಹಣೆಗೆ ಯಾವುದೇ ಮಾರ್ಗವಿಲ್ಲದ; ಅಥವಾ
(ಆ) ತಾತ್ಕಾಲಿಕ ಜಾರಿಯಲ್ಲಿರುವ ಯಾವುದೇ ಕಾರ್ಮಿಕ ಅಧಿನಿಯಮಗಳ ಉಪ ಬಂದಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿರುವ ಅಥವಾ ಭಿಕ್ಷೆ ಬೇಡುತ್ತಿರುವ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ; ಅಥವಾ
(ಇ) ಯಾರೇ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ (ಅಂತಹ ವ್ಯಕ್ತಿಯು ಮಗುವಿನ ಪೋಷಕನಾಗಿರಬಹುದು ಅಥವಾ ಅಲ್ಲದಿರಬಹುದು) ಮತ್ತು ಅಂತಹ ವ್ಯಕ್ತಿಯು ಮಗುವನ್ನು ಘಾಸಿಗೊಳಿಸಿ, ಶೋಷಣೆ ಮಾಡಿ, ಹಿಂಸಿಸಿ ಅಥವಾ ಉದಾಸಿನ ಮಾಡಿ ಮಗುವಿನ ಸಂರಕ್ಷಣೆಗಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿರುವಂತಹ ಮಗು.
(1) ಈ ಸಮಿತಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕದ್ದು.
| ಕ್ರಸಂ | ಸದಸ್ಯರು | ಪದನಾಮ |
| (1) | ಗ್ರಾಮ ಪಂಚಾಯತ್ ಅಧ್ಯಕ್ಷರು (ಸಮಿತಿಯ ಅಧ್ಯಕ್ಷರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರು ಪುರುಷರಾಗಿದ್ದಲ್ಲಿ ಉಪಾಧ್ಯಕ್ಷರು. ಉಪಾಧ್ಯಕ್ಷರು ಪುರುಷರಾಗಿದ್ದಲ್ಲಿ, ಗ್ರಾಮ ಪಂಚಾಯತ್ ಆಯ್ಕೆ ಮಾಡಿದ ಇತರ ಮಹಿಳಾ ಸದಸ್ಯರು). | ಅಧ್ಯಕ್ಷರು |
| (2) | ಗ್ರಾಮ ಪಂಚಾಯತ್ ಉಪಾಧ್ಯಕ್ಷರು (ಸಮಿತಿಯ ಉಪಾಧ್ಯಕ್ಷರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಪುರುಷರಾಗಿದ್ದಲ್ಲಿ, ಗ್ರಾಮ ಪಂಚಾಯತ್ ಆಯ್ಕೆ ಮಾಡಿದ ಇತರ ಮಹಿಳಾ ಸದಸ್ಯರು) | ಉಪಾಧ್ಯಕ್ಷರು |
| (3) | ಗ್ರಾಮ ಪಂಚಾಯಿತಿಯು ಆಯ್ಕೆ ಮಾಡಿದ ಇಬ್ಬರು ಸದಸ್ಯರು. (ಇವರಲ್ಲಿ ಒಬ್ಬರು... ಮಹಿಳಾ ಸದಸ್ಯರು ಆಗಿರತಕ್ಕದ್ದು) | ಸದಸ್ಯರು |
| (4) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬರು ಪ್ರಾಥಮಿಕ ಶಾಲೆ, ಹಾಗೂ ಒಬ್ಬರು ಪೌಢಶಾಲೆಯ ಮುಖ್ಯೋಪಾಧ್ಯಾಯರು (ತಾಲ್ತೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯ್ಕೆ ಮಾಡುವುದು) | ಸದಸ್ಯರು |
| (5) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬರು ಗ್ರಾಮ ಲೆಕ್ಕಿಗರು (ತಹಶೀಲ್ದಾರರು ನೇಮಿಸುವುದು) | ಸದಸ್ಯರು |
| (6) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಎಚ್ವಿ/ ಎಎನ್ಎಂ ಮತ್ತು ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರು (ತಾಲ್ಲೂಕು ವೈದ್ಯಾಧಿಕಾರಿಗಳು ನಾವು ನಿರ್ದೇಶನ ಮಾಡುವುದು) | ಸದಸ್ಯರು |
| (7) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟ್ ಪೊಲೀಸ್ ಅಧಿಕಾರಿ (ವೃತ್ತ ನಿರೀಕ್ಷಕರು ನಿಯೋಜಿಸುವುದು) | ಸದಸ್ಯರು |
| (8) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ) ಮೇಲ್ವಿಚಾರಕಿ (ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೇಮಿಸುವುದು) | ಸದಸ್ಯರು |
| (9) | ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರು ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪುತಿನವಿಧಿ, ಸ್ಪೀ ಶಕ್ತಿ ಸ್ವ-ಸಹಾಯ ಸಂಘಗಳ ಪ್ರತಿನಿಧಿ, (ಗ್ರಾಮ ಪಂಚಾಯಿತಿಯು ನಾಮ ವಿರ್ದೇಶನ ಮಾಡುವುದು) | ಸದಸ್ಯರು |
| (10) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌಢಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬಳು ವಿದ್ಯಾರ್ಥಿನಿ (ಇವರನ್ನು ಸಂಬಂಧಪಟ್ಟ ಪೌಢಶಾಲೆಯ ಮುಖ್ಯೋಪಾಧ್ಯಾಯರು ಸೂಚಿಸುವುದು) | ಸದಸ್ಯರು |
| (11) | ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬ ಅಂಗನವಾಡಿ ಕಾರ್ಯಕರ್ತೆ (ಇವರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೇಮಿಸುವುದು) | ಸದಸ್ಯರು |
| (12) | ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ / ಪಂಚಾಯತಿ ಕಾರ್ಯದರ್ಶಿ ಗ್ರೇಡ್-1. | ಸದಸ್ಯ ಕಾರ್ಯದರ್ಶಿ |
(3) ಇತರ ನಾಮ ನಿರ್ದೇಶಿತ ಸದಸ್ಯರು ಎರಡು ವರ್ಷ ಅವಧಿ ಹೊಂದಿರತಕ್ಕದ್ದು.
(4) ಸಮಿತಿಯು ಎರಡು ತಿಂಗಳಿಗೊಮ್ಮೆ ಅಥವಾ ಅಗತ್ಯವಿದ್ದಾಗ ಅದಕ್ಕೂ ಮೊದಲೆ ಸಭೆ ಸೇರುವುದು.
(1) ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳ ಮಾಹಿತಿ ಇಡಬೇಕು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳ 908 ಸಂಖ್ಯೆಗಳನ್ನು ದಾಖಲಿಸಿಕೊಂಡಿರಬೇಕು.
(2) ಪಂಚಾಯತಿ ಕಛೇರಿ, ಶಾಲೆ, ಪೊಲೀಸ್, ಅಂಗನವಾಡಿ ಮಹಿಳಾ ಸ್ವಸಹಾಯ ಸಂಘಗಳು, ಯುವ ಸಂಘಟನೆಗಳು ಮಕ್ಕಳ ಆರೋಗ್ಯ, ಶೈಕ್ಷಣಿಕ ಮಟ್ಟ ಹಾಗೂ ಕ್ರಿಡಾ ಚಟುವಟಿಕೆಗಳ ಮತ್ತು ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು.
(3) ಅನೈತಿಕ ಸಾಗಾಣಿಕೆಗೆ ಒಳಗಾದ ಮಹಿಳೆಯರಿಗೆ ಮತ್ತು ಮಕ(ಳಿಗೆ ರಕ್ಷಣೆ ನೀಡುವುದು ಮತ್ತು ಅವರಿಗೆ ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ, ನೈತಿಕ, ಸಾಮಾಜಿಕ, ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ದೊರೆಯುವಂತೆ ಮಾಡುವುದು.
(4) ಸಮುದಾಯದ ಎಲ್ಲರ ಭಾಗವಹಿಸುವಿಕೆಯೊಂದಿಗೆ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ನಿಷೇಧಿಸುವ ಹಾಗೂ ಇಂಥಹ ಚಟುವಟಿಕೆಯ ಮೇಲೆ ನಿಗಾ ವಹಿಸುವುದು.
(5) ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಯಲು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮಿಹಶೂಳ್ಳುವುದು. ಸಾಗಾಣಿಕೆ ತಡೆಯಲು ಪ್ರಚಾರಕ್ಕಾಗಿ ಮಾಹಿತಿ ಸಂಗೃಹಿಸಿ, ಉತ್ತಮವಾದ ಸಾಮಾಜಿಕ ವ್ಯವಸ್ಥೆಗಾಗಿ ಬೇಕಾದ ಸಂಪನ್ಮೂಲಗಳ ಕ್ರೋಢಿಕರಣಗೊಳಿಸುವುದು.
(6) ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ವಿರುದ್ಧ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದು.
(7) ಗ್ರಾಮಗಳಲ್ಲಿ ಮತ್ತು ಶಾಲೆಗಳ ಬಳಿ ಅನುಮಾನಸ್ಪದವಾಗಿ ಸಂಚರಿಸುವ ಹೊಸ ವ್ಯಕ್ತಿಗಳ ಬಗ್ಗೆ ಸಮಿತಿಯ ಸದಸ್ಯರು ವಿಗಾ ವಹಿಸುವುದು. ಅನುಮಾನ ಖಾತರಿಗೊಂಡಲ್ಲಿ ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸುವುದು.
(8) ಗ್ರಾಮದಿಂದ ಕಾಣೆಯಾದ ಮಹಿಳೆಯರ ಮತ್ತು ಮಕ್ಕಳ ದಾಖಲೆ ಇಡುವುದು.
(9) ವಲಸೆ ಹೋದ ಕುಟುಂಬದವರ ಮಾಹಿತಿ ಇಡುವುದು ಮತ್ತು ಈ ಕುಟುಂಬದವರು ವಲಸೆ ಹೋಗಿರುವ ಪ್ರದೇಶದಲ್ಲಿ ಕುಟುಂಬ ನಿರ್ವಹಣೆಗಾಗಿ ಅನುಸರಿಸುತ್ತಿರುವ ಜೀವನ ಬಗ್ಗೆ ಲಭ್ಯ ಮಾಹಿತಿಗಳನ್ನು ಅವರ ಪರಿಚಯಸ್ಮರಿಂದ ಪಡೆದುಕೊಳ್ಳುತ್ತಿರಬೇಕು. ಅವರುಗಳು ಹಿಂತಿರುಗಿದ ನಂತರ ಅವರೊಂದಿಗೆ ಇದ್ದ ಸದಸ್ಯರುಗಳೆಲ್ಲರೂ ಹಿಂತಿರುಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
(10). ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಮತ್ತು ಬಾಲ್ಯವಿವಾಹ ವಿಷೇಧದ ಕಾನೂನಿನ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವುದು.
(11) ಗ್ರಾಮದಲ್ಲಿ ಯಾವುದೇ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಗಮನಕ್ಕೆ ತಂದು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಒಳಗೊಂಡಂತೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.
(12) ಬೇಸಿಗೆ ರಜೆ ಅವಧಿ ಮುಗಿದ ನಂತರ ಶಾಲೆಗೆ ದಾಖಲಾದ/ದಾಖಲಾಗಬೇಕಾದ ಮಕ್ಕಳ ಸಮೀಕ್ಕೆ ನಡೆಸುವುದು.
(13) ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿ. ಶಾಲೆಯಿಂದ ಹೊರಗುಳಿದ ಮಕ್ಕಳ ಪೋಷಕರ ಮನವೋಲಿಸಿ, ಶಾಲೆಗೆ ಮರಳಿ ದಾಖಲಾಗುವ ಬಗ್ಗೆ ಕ್ರಮ ವಹಿಸುವುದು.
(14) ಗ್ರಾಮ ಸಭೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಮಹತ್ವ ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯ ಮುಂತಾದವುಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು.
(15) ಶಾಲೆಯಿಂದ ಹೊರಗುಳಿದ ಪ್ರಾಯಪೂರ್ವ ಮಕ್ಕಳಿಗೆ ವಿವಿಧ ರೀತಿಯ ಕೌಶಲ್ಯ ತರಬೇತಿಯನ್ನು ನೀಡಲು ಕ್ರಮವಹಿಸುವುದು.
(16) ಉತ್ತಮ ಅಂಕಗಳನ್ನು ಪಡೆದ ಮಕ್ಕಳನ್ನು ಗ್ರಾಮ ಸಭೆಗಳಲ್ಲಿ ಗುರುತಿಸಿ ಗ್ರಾಮ ಪಂಚಾಯತಿಯಿಂದ ಬಹುಮಾನ ಕೊಡುವ ಮೂಲಕ ಪ್ರೋತ್ಸಾಹಿಸುವುದು.
(17) ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿರುವ ಶಾಲೆಗಳನ್ನು ಗುರುತಿಸಿ, ಗ್ರಾಮ ಸಭೆಗಳಲ್ಲಿ ಸನ್ಮಾನಿಸುವುದು.
(18) ಗ್ರಾಮ ಸಭೆಗಳ ಮೂಲಕ ಉತ್ತಮ ಶಿಕ್ಷಣ ತಜಣ್ಞರಿಂದ ವಿದ್ಯಾಭ್ಯಾಸದ ಮಹತ್ವದ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸುವುದು.
(19) 7ನೇ ತರಗತಿಯಿಂದ 8ನೇ ತರಗತಿ ಮತು 10ನೇ ತರಗತಿಯಿಂದ ಪಿಯುಸಿ ತರಗತಿಗಳಿಗೆ ಮಕ್ಕಳು ದಾಖಲಾಗುವಂ೦ತೆ ಸಮಿತಿಯ ಸದಸ್ಯರು ಖಚಿತಪಡಿಸಿಕೊಳ್ಳುವುದು.
(20) ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸೌಲಭ್ಯಗಳನ್ನು ವೀಡುವಾಗ ಪಲಾನುಭವಿಗಳಿಂಂದ ಅವರ ಕುಟುಂಬಗಳಲ್ಲಿ ಬಾಲ ಕಾರ್ಮಿಕದಂತಹ ಅನಿಷ್ಠ ಪದ್ಧತಿಯನ್ನು ಅನುಸರಿಸುವುದಿಲ್ಲವೆಂದು ಕರಾರು ಪತ್ರ ಬರೆಯಿಸಿಕೊಳ್ಳುವುದು.
(21) ಮಕ್ಕಳನ್ನು ದುಡಿಸುವ ಮಾಲೀಕರುಗಳಿಗೆ ಮತ್ತು ಅವರಿಗೆ ಸಹಕರಿಸುವವರ ವಿರುದ್ಧ ಕ್ರಮ ಜರುಗಿಸಲು ಸಂಬಂಧಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
(22) ಗ್ರಾಮ ಪಂಚಾಯತ್ ವ್ಯಾಪ್ತಿಯ 18 ವರ್ಷದೊಳಗಿನ ಎಲ್ಲಾ ಮಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಮುದಾಯದ, ವಿವಿಧ ಇಲಾಖೆಗಳ, ಸ್ಥಳೀಯ ನಾಗರಿಕ ಸಂಘ ಸಂ೦ಸ್ಥೆಗಳಿಂದ ಅಗತ್ಯ ನೆರವನ್ನು ಪಡೆದುಕೊಳ್ಳುವುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರುಗಳ ಹೆಚ್ಚಿನ ವಿದ್ಯಾಭ್ಯಾಕ್ಕೆ ಅನುವಾಗುವಂತೆ ವಿವಿಧ ರೀತಿಯ ಸಹಾಯಗಳನ್ನು ಸಂಘ ಸಂಸ್ಥೆಗಳಿಂದ, ಸ್ಮಳೀಯ ಕೈಗಾರಿಕೋದ್ಯಮಿಗಳಿಂದ ಪಡೆದುಕೊಳ್ಳಲು ಪ್ರಯತ್ನಿಸುವು
(23) ಗ್ರಾಮ ಪಂಚಾಯತ್ ಮಟ್ಟದಲ್ಲಿ ರೈತರು / ಕಾರ್ಮಿಕರು ಹೊಲ, ಗದ್ದೆ, ಜೀತ ಸಂಬಳಕ್ಕೆ 18 ವರ್ಷದೊಳಗಿನ ಮಕ್ಕಳನ್ನು ದುಡಿಸದಂತೆ ಹಾಗೂ ದನ, ಕುರಿ, ಎಮ್ಮೆ ಮೇಯಿಸಲು ಮಕ್ಕಳನ್ನು ಬಳಸದಂತೆ ವಿರಂತರ ವಿಗಾವಹಿಸಿ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ನಿರಂತರ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಳ್ಳುವುದು.
(24) ವಿಕೃತ ಮೂಢನಂಬಿಕೆಗಳಿಗೆ ಮತ್ತು ಇತರೆ ಕಂದಾಚಾರಗಳಿಗೆ 18 ವರ್ಷದೊಳಗಿನ ಮಕ್ಕಳು ಬಲಿಯಾಗದಂತೆ ರಕ್ಷಣೆ ನೀಡುವುದು ಹಾಗೂ ಈ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮಿಘಚೊಳ್ಳುವುದು.
(25) ಪೋಷಕರಿಗೆ ಬೇಡವಾದ ಮಕ್ಕಳು ಮತ್ತು ರಸ್ತೆಯಲ್ಲಿ ಅನಾಥವಾಗಿ ಕಂಡು ಬಂದ ಮಕ್ಕಳನ್ನು ಗುರುತಿಸಿ, ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡುವುದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕುಟುಂಬಗಳಲ್ಲಿ ರಕ್ಷಣೆಯಿಲ್ಲದೇ, ಒಬ್ಬಂಟಿಯಾಗಿರುವ ಹೆಣ್ಣು ಮಕ್ಕಳನ್ನು ಗುರುತಿಸುವುದು ಹಾಗೂ ಪೋಷಕರುಗಳ ದುಶ್ಚಟದಿಂದಾಗಿ ರಕ್ಷಣೆ ಇಲ್ಲದ ಮಕ್ಕಳನ್ನು ಗುರುತಿಸಿ ಅಂಥಹ ಕುಟುಂಬದ ಮಕ್ಕಳ ವಿವರ ಮತ್ತು ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸುವುದು. ಸಂಕಷ್ಟದಲ್ಲಿರುವ ಮಹಿಳೆ/ಹೆಣ್ಣು ಮಕ್ಕಳು ಗರ್ಭಿಣಿಯಾದಾಗ ಅವರನ್ನು ನಿರಂತರವಾಗಿ ಅನುಸರಣೆ ಮಾಡುವುದು ಹಾಗೂ ಮಕ್ಕಳ ಪೋಷಣೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸುವುದು.
(26) ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಅವುಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ನೆರವಾಗುವುದು.
(27) ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು ಕಂಡುಬಂ೦ದಲ್ಲಿ, ಮಗುವಿಗೆ ರಕ್ಷಣೆ ನೀಡಿ ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದು.
(28) ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆ ನಡೆಸಲು ಮತ್ತು ಸದರಿ ಸಭೆಯಲ್ಲಿ ಚರ್ಚಿಸಿದ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವುದು.
(29) ಮಕ್ಕಳಿಗೆ ಸಂಬಂಧಿಸಿದ ಸೂಕ್ತ ಯೋಜನೆಗಳಲ್ಲಿ ಅವಶ್ಯಕವಾದ ಸೌಲಭ್ಯ ಪರಿಹಾರ, ಪುನರ್ವಸತಿ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಆಯಾ ಇಲಾಖೆಗಳ ಅನುಸಾರವಾಗಿ ಮಕ್ಕಳಿಗೆ / ಕುಟುಂಬಗಳಿಗೆ ಒದಗಿಸುವುದು.
(30) ಗ್ರಾಮ ಪಂಚಾಯಿತಿಯ ಪ್ರತಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್/ಮೀನಾ ತಂಡ (ಬಾಲಕಿಯರ ಗುಂಪು) ಮಕ್ಕಳ ಸುರಕ್ಷಾ ಸಮಿತಿಗಳ ಕಾರ್ಯ ವೈಖರಿಯ ಬಗ್ಗೆ ಮೇಲ್ವಿಚಾರಣೆ ಮಾಡುವುದು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿಕಲಚೇತನ ಮಕ್ಕಳಿಗೆ ಅನುವಾಗುವ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು.