ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಕರ್) ನಿಯಮಗಳು, 1967 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರಲ್ಲಿ, 5 ನೇ ನಿಯಮದಲ್ಲಿ “ಬ್ರೀವರಿ” ಎಂಬ ಪದದ ತರುವಾಯ ವಿರಾಮ ಚಿಹ್ನೆ ಮತ್ತು “ಕ್ರಾಫ್ಟ್ ಬ್ರೀವರಿ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗಳು” ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು. 3. 10-ಎ ನೇ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 10-ಎ ನೇ ನಿಯಮದಲ್ಲಿ, ಉಪ ನಿಯಮ (1) ರ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:- “ಪರಂತು ಸನ್ನದುದಾರನು, ಕರ್ನಾಟಕ ರಾಜ್ಯದೊಳಗಿನ ಕ್ರಾಫ್ಟ್ ಬ್ರೀವರಿಯಲ್ಲಿ ತಯಾರಾಗುವ ಪ್ರತಿ ಬಿಯರ್ ಬ್ರಾಂಡ್ನ ಲೇಬಲ್ ಅನುಮೋದನೆಗಾಗಿ ಹತ್ತು ಸಾವಿರ ರೂಪಾಯಿಗಳ ಶುಲ್ಕವನ್ನು ಸಂದಾಯ ಮಾಡತಕ್ಕದ್ದು”.
Loading…