ಸದರಿ ನಿಯಮಗಳ ನಿಯಮ 15-ಬಿ ಯ ತರುವಾಯ, ಈ ಮುಂದಿನ ನಿಯಮಗಳನ್ನು ಸೇರಿಸತಕ್ಕದ್ದು, ಎಂದರೆ:-
“15-ಸಿ.ಸನ್ನದುದಾರ ಅಥವಾ ಗುತ್ತಿಗೆದಾರನ ಮರಣದ ಸಂದರ್ಭದಲ್ಲಿ ಕಾನೂನು ಸಮ್ಮತ ಪ್ರತಿನಿಧಿಗೆ ಬಾಟ್ಲಿಂಗ್ ಸನ್ನದಿನ ವರ್ಗಾವಣೆ:- ಸನ್ನದು ಅಥವಾ ಗುತ್ತಿಗೆಯು ಚಲಾವಣೆಯಲ್ಲಿರುವ ಸಮಯದಲ್ಲಿ ಸನ್ನದುದಾರ ಅಥವಾ ಗುತ್ತಿಗೆದಾರ ಮರಣ ಹೊಂದಿದರೆ, ಅಬಕಾರಿ ಆಯುಕ್ತರು ಮರಣ ಹೊಂದಿದ ಸನ್ನದುದಾರ ಅಥವಾ ಗುತ್ತಿಗೆದಾರನ ಕಾನೂನು ಸಮ್ಮತ ವಾರಸುದಾರನ ಅರ್ಜಿಯ ಮೇಲೆ, ಅಂತಹ ಕಾನೂನು ಸಮ್ಮತ ವಾರಸುದಾರನು ಅನ್ಯಥಾ ಈ ಕಾಯ್ದೆ ಅಥವಾ ಅದರಡಿ ರಚಿಸಲಾದ ನಿಯಮಗಳ ಅಡಿಯಲ್ಲಿ ಬಾಟ್ಲಿಂಗ್ ಸನ್ನದನ್ನು ಮಂಜೂರು ಮಾಡಲು ಅರ್ಹರಾಗಿದ್ದರೆ, ಅವರ ಪರವಾಗಿ ಸಂದರ್ಭಾನುಸಾರ ಬಾಟ್ಲಿಂಗ್ ಸನ್ನದು ಅಥವಾ ಗುತ್ತಿಗೆಯನ್ನು ವರ್ಗಾವಣೆ ಮಾಡಬಹುದಾಗಿದೆ.
15-ಡಿ.ಇತರೆ ಪ್ರಕರಣಗಳಲ್ಲಿ ಬಾಟ್ಲಿಂಗ್ ಸನ್ನದಿನ ವರ್ಗಾವಣೆ:- (1) ಅಬಕಾರಿ ಆಯುಕ್ತರು ಸನ್ನದುದಾರನ ಅರ್ಜಿಯ ಮೇಲೆ ಮತ್ತು ಸಂದರ್ಭಾನುಸಾರ ಡಿಸ್ಟಿಲರಿ, ಬ್ರೀವರಿ, ಫೋರ್ಟಿಫೈಡ್ ವೈನರಿ ಮತ್ತು ವೈನರಿಗಳಿಗೆ ಬಾಟ್ಲಿಂಗ್ ಸನ್ನದನ್ನು ಮಂಜೂರು ಮಾಡಲು ವಿಧಿಸಲಾದ ವಾರ್ಷಿಕ ಸನ್ನದು ಶುಲ್ಕದ ಶೇ. ಇಪ್ಪತ್ತೈದಕ್ಕೆ ಸಮಾನವಾದ ವರ್ಗಾವಣೆ ಶುಲ್ಕವನ್ನು ಪಾವತಿಸಿಕೊಂಡು, ಅಂತಹ ಸನ್ನದುದಾರನಿಂದ ಹೆಸರಿಸಲಾದ ಯಾವುದೇ ವ್ಯಕ್ತಿಯ ಪರವಾಗಿ, ಅನ್ಯಥಾ ಈ ಕಾಯ್ದೆ ಅಥವಾ ಅದರ ಅಡಿ ರಚಿಸಲಾದ ನಿಯಮಗಳ ಅಡಿಯಲ್ಲಿ ಸನ್ನದನ್ನು ಮಂಜೂರು ಮಾಡಲು ಅಂತಹ ವ್ಯಕ್ತಿಯು ಅರ್ಹರಾಗಿದ್ದರೆ, ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಮೂಲಸೌಕರ್ಯಗಳೊಂದಿಗೆ ಅಂತಹ ಸನ್ನದನ್ನು ವರ್ಗಾಯಿಸಬಹುದು.
(2) ನಿಯಮ 15-ಸಿ ಅಡಿಯಲ್ಲಿ ಸನ್ನದು ವರ್ಗಾವಣೆಗೆ ಈ ನಿಯಮಗಳಲ್ಲಿ ಯಾವುದೂ ಅನ್ವಯಿಸುವುದಿಲ್ಲ.
15-ಇ. ಹೆಚ್ಚುವರಿ ಸನ್ನದು ಶುಲ್ಕ-ಬಾಟ್ಲಿಂಗ್ ಸನ್ನದು ವರ್ಗಾವಣೆಗೆ ಸಂಬಂಧಿಸಿದಂತೆ, ನಿಯಮ 15-ಡಿ ಅಡಿಯಲ್ಲಿ ವಿಧಿಸಲಾದ ಸನ್ನದು ವರ್ಗಾವಣೆ ಶುಲ್ಕದ ಶೇ. 15 ಕ್ಕೆ ಸಮನಾದ ಹೆಚ್ಚುವರಿ ಸನ್ನದು ಶುಲ್ಕವನ್ನು ವಿಧಿಸಲಾಗುವುದು, ಇದನ್ನು ರಾಜ್ಯದಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳ ಉದ್ದೇಶಕ್ಕಾಗಿ, ಬೆಂಗಳೂರು ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಲಿಮಿಟೆಡ್ನಲ್ಲಿ ಇಕ್ವಿಟಿ ಹೂಡಿಕೆಗಾಗಿ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಸ್ಥಾಪಿಸಲು ಅನುಕ್ರಮವಾಗಿ 57:28:15 ರ ಅನುಪಾತದಲ್ಲಿ ಹೂಡಲಾಗುವುದು”