ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು.-
(i) ‘ಅಧಿನಿಯಮ’ ಎಂದರೆ ಕರ್ನಾಟಕ ಬೋಸ್ರ್ಟಲ್ ಶಾಲೆಗಳ ಅಧಿನಿಯಮ, 1963
(ii) ‘ನಮೂನೆ’ ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ ;
(iii) ‘ಸೂಪರಿಂಟೆಂಡೆಂಟ್’ ಎಂದರೆ ಬೋಸ್ರ್ಟಲ್ ಶಾಲೆಯ ಸೂಪರಿಂಟೆಂಡೆಂಟ್ ;
(iv) ‘ಶಾಲೆ’ ಎಂದರೆ ಬೋಸ್ರ್ಟಲ್ ಶಾಲೆ.
4-6-1971ನೇ ದಿನಾಂಕದ ಅಧಿಸೂಚನೆಯ ಮೂಲಕ ತಿದ್ದುಪಡಿಯಾದಂತೆ. 3. ಸೂಪರಿಂಟೆಂಡೆಂಟ್ ಮತ್ತು ಇತರ ಅಧಿಕಾರಿಗಳ ನೇಮಕಾತಿ: ರಾಜ್ಯ ಸರ್ಕಾರವು ಸೂಪರಿಂಟೆಂಡೆಂಟ್ ಮತ್ತು ಅದು ಸೂಕ್ತವೆಂದು ಭಾವಿಸುವಂಥ ಇತರ ಅಧಿಕಾರಿಗಳನ್ನು ನೇಮಕ ಮಾಡತಕ್ಕದ್ದು. 4. ಕೆಲವು ವ್ಯಕ್ತಿಗಳನ್ನು ಶಾಲೆಯಲ್ಲಿ ಬಂಧನದಲ್ಲಿಡಲು ಆದೇಶಿಸತಕ್ಕದ್ದಲ್ಲ : ಭಾರತ ದಂಡ ಸಂಹಿತೆಯ 354, 366, 376, 377, 493, 497 ಮತ್ತು 498ನೇ ಪ್ರಕರಣಗಳ ಮೇರೆಗಿನ ಅಪರಾಧದ ಬಗ್ಗೆ ತಪ್ಪಿತಸ್ಥನೆಂದು ಕಂಡುಬಂದ ಯುವಾಪರಾಧಿಗಳನ್ನು ಶಾಲೆಯಲ್ಲಿ ಬಂಧನದಲ್ಲಿಡಲು ಆದೇಶಿಸತಕ್ಕದ್ದಲ್ಲ.