ಇನ್ಸ್ಪೆಕ್ಟರ್ ಜನರಲ್ಲನು ಒಂದು ಶಾಲೆಯಲ್ಲಿ ಬಂಧನದಲ್ಲಿಟ್ಟ ಯುವಾಪರಾಧಿಯನ್ನು ಶಿಸ್ತಿನ ಕಾರಣಗಳ ಮೇಲೆ ಮತ್ತೊಂದು ಶಾಲೆಗೆ ವರ್ಗಾಯಿಸಬಹುದು. 6. ಸೇರಿಸಿಕೊಂಡಮೇಲೆ ಪರೀಕ್ಷೆ: ಸೇರಿಸಿಕೊಂಡಮೇಲೆ ಸೂಪರಿಂಟೆಂಡೆಂಟನು ಯುವಾಪರಾಧಿಯನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸತಕ್ಕದ್ದು, ಅವನು ಶಾಲೆಯ ವೈಯಕ್ತಿಕ ದಾಖಲೆಯಲ್ಲಿ ಅವನ ನಿರ್ಣಯಗಳನ್ನು ದಾಖಲು ಮಾಡತಕ್ಕದ್ದು. ಸೂಪರಿಂಟೆಂಡೆಂಟನು ಯಾವನೇ ಮನಶಾಸ್ತ್ರಜ್ಞ, ಅವನು ಲಭ್ಯವಾಗಿದ್ದರೆ ಅವನ ನೆರವನ್ನು ಪಡೆದುಕೊಳ್ಳಬಹುದು. 7. ವೈದ್ಯಕೀಯ ಪರೀಕ್ಷೆ : ಶಾಲೆಯ ವೈದ್ಯಾಧಿಕಾರಿಯು, ಪ್ರವೇಶದ ತರುವಾಯ ಆದಷ್ಟು ಬೇಗನೆ ಮತ್ತು ಆ ತರುವಾಯ ಒಂದು ತಿಂಗಳಿಗಿಂತ ಹೆಚ್ಚಿಲ್ಲದ ಮಧ್ಯಂತರಗಳಲ್ಲಿ, ಆ ಶಾಲೆಯ ಪ್ರತಿಯೊಬ್ಬ ನಿವಾಸಿಯನ್ನು ಸವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸತಕ್ಕದ್ದು ಮತ್ತು ಇನ್ಸ್ಪೆಕ್ಟರ್ ಜನರಲ್ಲನು ಕಾಲಕಾಲಕ್ಕೆ ನಿಯಮಿಸಬಹುದಾದಂಥ ನಮೂನೆಯಲ್ಲಿ ಅವನ ನಿರ್ಣಯಗಳನ್ನು ದಾಖಲು ಮಾಡತಕ್ಕದ್ದು. ಅವನು ನಿವಾಸಿಯ ಆರೋಗ್ಯಕ್ಕೆ ಬಾಧಕವನ್ನುಂಟು ಮಾಡುವ ಯಾವುದೇ ಮಹತ್ವದ ವಿಷಯವನ್ನು ವಿಳಂಬವಿಲ್ಲದೆ ಅವಶ್ಯವೆಂದು ಕಂಡು ಬರಬಹುದಾದಂಥ ಕ್ರಮಕ್ಕಾಗಿ ಸೂಪರಿಂಟೆಂಡೆಂಟನ ಗಮನಕ್ಕೆ ತರತಕ್ಕದ್ದು. 8. ಬೋಸ್ರ್ಟಲ್ ತರಬೇತಿಗಾಗಿ ಅನರ್ಹನಾದ ನಿವಾಸಿಯ ಬಗ್ಗೆ ವರದಿ : ಸೂಪರಿಂಟೆಂಡೆಂಟನು ವಿಳಂಬವಿಲ್ಲದೆ ವೈದ್ಯಕೀಯ ಅಧಿಕಾರಿಯ ಅಭಿಪ್ರಾಯದಲ್ಲಿ ಬೋಸ್ರ್ಟಲ್ ತರಬೇತಿಗಾಗಿ ಅನರ್ಹನಾಗಿರುವ ಯಾವನೇ ನಿವಾಸಿಯ ಪ್ರಕರಣವನ್ನು ಬಂದೀಖಾನೆಗಳ ಇನ್ಸ್ಪೆಕ್ಟರ್ ಜನರಲ್ಲನಿಗೆ ವರದಿಯನ್ನು ಮಾಡತಕ್ಕದ್ದು, ಇನ್ಸ್ಪೆಕ್ಟರ್ ಜನರಲ್ಲನು ಆ ತರುವಾಯ ಅವನನ್ನು ಬಂದೀಖಾನೆಗೆ ವರ್ಗಾಯಿಸಬೇಕೆ ಹೇಗೆ ಎಂಬ ಬಗ್ಗೆ ತೀರ್ಮಾನಿಸಬಹುದು. 9. ನಿವಾಸಿಗಳ ಬಗ್ಗೆ ಗೃಹ ವ್ಯವಸ್ಥೆ ಮತ್ತು ವರ್ಗೀಕರಣ ಮತ್ತು ಶುಶ್ರೂಷೆ : (1) ಪ್ರತಿಯೊಂದು ಶಾಲೆಯಲ್ಲಿ ಗೃಹಗಳನ್ನಾಗಿ ವಿಭಜಿಸತಕ್ಕದ್ದು.
(2) ಪ್ರತಿಯೊಂದು ಗೃಹವು ಸರಿಸುಮಾರು ಒಂದೇ ಸಂಖ್ಯೆಯ ನಿವಾಸಿಗಳನ್ನು ಹೊಂದಿರತಕ್ಕದ್ದು, ಒಂದೇ ಗೃಹದಲ್ಲಿ ಅತ್ಯುತ್ತಮ ಅಥವಾ ಅತಿಕೆಟ್ಟ ನಿವಾಸಿಗಳು ಕೇಂದ್ರೀಕೃತವಾಗದಂತೆ ಖಚಿತಪಡಿಸಿಕೊಳ್ಳಲು ಎಚ್ಚರವಹಿಸಬೇಕು.
(3) ಪ್ರತಿಯೊಂದು ಗೃಹವು, ಒಬ್ಬ ಹೌಸ್ ಮಾಸ್ಟರ್ ಅಥವಾ ಶಾಲಾ ಉಪಾಧ್ಯಾಯನನ್ನು ಹೊಂದಿರತಕ್ಕದ್ದು, ಒಬ್ಬ ಸಣ್ಣ ಅಧಿಕಾರಿಯು ಪ್ರತಿಯೊಬ್ಬ ಹೌಸ್ ಮಾಸ್ಟರ್ ಅಥವಾ ಉಪಾಧ್ಯಾಯನಿಗೆ ಸಹಾಯ ಮಾಡಬಹುದು. 10. ಹೌಸ್ ಮಾಸ್ಟರ್ ಅಥವಾ ಉಪಾಧ್ಯಾಯನ ಜವಾಬ್ದಾರಿಗಳು : ಮನೆ ಹೌಸ್ಮಾಸ್ಟರ್ ಅಥವಾ ಉಪಾಧ್ಯಾಯ ಮತ್ತು ಅವನ ಸಹಾಯಕನು ಸೂಪರಿಂಟೆಂಡೆಂಟನಿಗೆ ,- (ಕ) ಆ ಗೃಹದ ನೀತಿಮಟ್ಟ ಮತ್ತು ಸಾಮಾನ್ಯ ನಡವಳಿಕೆ ;
(ಖ) ಆ ಗೃಹದ ಪ್ರತಿಯೊಬ್ಬ ನಿವಾಸಿಯ ತರಬೇತಿ ;
(ಗ) ವಾರ್ಡು, ಕೊಠಡಿಗಳು, ಬಟ್ಟೆಬರೆ ಮತ್ತು ಹಾಸಿಗೆಗಳ ಸ್ವಚ್ಛತೆ ಮತ್ತು ಅವುಗಳನ್ನು ಸುಸ್ಥಿತಿ ಮತ್ತು ದುರಸ್ತಿಯಲ್ಲಿ ಇಟ್ಟುಕೊಳ್ಳುವುದು ಮತ್ತು
(ಘ) ನಿವಾಸಿಗಳಲ್ಲಿ ಆಹಾರದ ಸರಿಯಾದ ಹಂಚಿಕೆ ;
- ಇವುಗಳಿಗಾಗಿ ಜವಾಬ್ದಾರನಾಗಿರತಕ್ಕದ್ದು ;
- ಗುಂಪಿನ ಮೇಲ್ವಿಚಾರಕ : (1) ಪ್ರತಿಯೊಂದು ಗೃಹವನ್ನು ಗುಂಪುಗಳಾಗಿ ವಿಭಜಿಸತಕ್ಕದ್ದು, ಒಂದೇ ಗುಂಪಿನಲ್ಲಿ ಅತ್ಯುತ್ತಮ ಅಥವಾ ಅತಿ ಕೆಟ್ಟ ನಿವಾಸಿಗಳು ಕೇಂದ್ರೀಕೃತವಾಗದಂತೆ ನೋಡಿಕೊಳ್ಳಲು ಎಚ್ಚರವಹಿಸಬೇಕು. (2) ಪ್ರತಿಯೊಂದು ಗುಂಪು, ಒಬ್ಬ ಮೇಲ್ವಿಚಾರಕನ ಅಧೀನದಲ್ಲಿ ಇರತಕ್ಕದ್ದು ; ಅವನನ್ನು ಪ್ರತಿ ಗುಂಪಿನವರಿಂದ ಹೌಸ್ ಮಾಸ್ಟರನು ಅಥವಾ ಉಪಾಧ್ಯಾಯನು ಆಯ್ಕೆ ಮಾಡತಕ್ಕದ್ದು. ಮೇಲ್ವಿಚಾರಕನು ಒಂದು ವಿಭಿನ್ನತಾ ಗುರುತನ್ನು ಧರಿಸತಕ್ಕದ್ದು.
- ಮುಖ್ಯ ಮೇಲ್ವಿಚಾರಕ : ಸೂಪರಿಂಟೆಂಡೆಂಟನು, ಪ್ರತಿಯೊಂದು ಗೃಹಕ್ಕಾಗಿ ಮೇಲ್ವಿಚಾರಕರ ಪೈಕಿ ಒಬ್ಬ ಮುಖ್ಯ ಮೇಲ್ವಿಚಾರಕನನ್ನು ಆಯ್ಕೆ ಮಾಡತಕ್ಕದ್ದು, ಮುಖ್ಯ ಮೇಲ್ವಿಚಾರಕನು ಗುಂಪಿನ ಮೇಲ್ವಿಚಾರಕರ ಜೊತೆಗೆ ಅಧಿಕವಾಗಿ ಇರತಕ್ಕದ್ದು ಮತ್ತು ಅವನು ಎದೆಯ ಎಡಭಾಗದಲ್ಲಿ ಒಂದು ವಿಶೇಷ ಬಿಲ್ಲೆಯನ್ನು ಧರಿಸತಕ್ಕದ್ದು.
- ಸಾಮಾನ್ಯ ದರ್ಜೆ : ಪ್ರತಿಯೊಬ್ಬ ನಿವಾಸಿಯು, ಶಾಲೆಯಲ್ಲಿ ಅವನನ್ನು ಸ್ವೀಕರಿಸಿದ ಮೇಲೆ ಅವನನ್ನು ಇಟ್ಟಿರುವಂಥ ಸಾಮಾನ್ಯ ದರ್ಜೆಯಲ್ಲಿ ಕನಿಷ್ಠ ಪಕ್ಷ ಆರು ತಿಂಗಳುಗಳು ಇರತಕ್ಕದ್ದು, ಅವನನ್ನು ಅಂಥ ಅವಧಿಯಲ್ಲಿ ಅವನ ದೈಹಿಕ ಸ್ಥಿತಿಗೆ ಯೋಗ್ಯವಾದ ದೈಹಿಕ ದುಡಿಮೆಯಲ್ಲಿ ನಿಯೋಜಿಸಿಕೊಳ್ಳತಕ್ಕದ್ದು, ಅವನ ಶೀಲ, ಮಾನಸಿಕ ಪ್ರವೃತ್ತಿ ಮತ್ತು ವಿಶೇಷ ತರಬೇತಿಗಾಗಿ ಯೋಗ್ಯತೆ ಇವುಗಳಿಗೆ ವಿಶೇಷವಾಗಿ ಸಂಬಂಧಿಸಿದಂತೆ ಸಿಬ್ಬಂದಿಯು ಅವನನ್ನು ಜಾಗರೂಕತೆಯಿಂದ ಪರೀವೀಕ್ಷಿಸತಕ್ಕದ್ದು. ಒಳ್ಳೆಯ ನಡವಳಿಕೆಗೆ ಒಳಪಟ್ಟು ಅವನಿಗೆ ಆಟಗಳಲ್ಲಿ ಭಾಗವಹಿಸಲು ಅನುಮತಿ ಕೊಡತಕ್ಕದ್ದು.
- ನಕ್ಷತ್ರ ದರ್ಜೆಗೆ ಬಡ್ತಿ : (1) ಸಾಮಾನ್ಯ ದರ್ಜೆಯಲ್ಲಿನ ಪ್ರತಿಯೊಬ್ಬ ನಿವಾಸಿಯ ನಡತೆ ಮತ್ತು ದುಡಿಮೆಯ ಬಗ್ಗೆ ದೈನಿಕ ದಾಖಲೆಯನ್ನಿಡತಕ್ಕದ್ದು. (2) ಈ ಉದ್ದೇಶಕ್ಕಾಗಿ ಒಂದು ರಿಜಿಸ್ಟರನ್ನು ಇಡತಕ್ಕದ್ದು, ಅದರಲ್ಲಿ ಪ್ರತಿಯೊಬ್ಬ ನಿವಾಸಿಗೆ ದಿವಸ, ದಿವಸಕ್ಕೆ ಕೊಟ್ಟ ಅಂಕಗಳ ಸಂಖ್ಯೆಯನ್ನು ದಾಖಲು ಮಾಡತಕ್ಕದ್ದು ಪ್ರತಿಯೊಂದು ದಿನವಸಕ್ಕಾಗಿ ಈ ಕೆಳಕಂಡಂತೆ ಅಂಕಗಳನ್ನು ಕೊಡತಕ್ಕದ್ದು.
ಅಂಕಗಳು ತುಂಬಾ ಉತ್ತಮ 3 ಉತ್ತಮ 2 ಸಾಧಾರಣ 1 ಕೆಟ್ಟ ಇಲ್ಲ ಆ ರಿಜಿಸ್ಟರನ್ನು ಸೂಪರಿಂಟೆಂಡೆಂಟನು ವಾರಕ್ಕೊಂದು ಸಲ ಪರೀಕ್ಷಿಸತಕ್ಕದ್ದು.
(3) 28 ಕೆಲಸದ ದಿವಸಗಳ ತಿಂಗಳಿಗಾಗಿ ಪೂರ್ಣ ಅಂಕಗಳನ್ನು 84ರಂತೆ ಲೆಕ್ಕ ಹಾತಕ್ಕದ್ದು, ಸೂಪರಿಂಟೆಂಡೆಂಟನು ಮಾಸಿಕ ಗರಿಷ್ಟವನ್ನು 100 ಅಂಕಗಳನ್ನಾಗಿ ಮಾಡುವ ಹಾಗೆ ಸದರಿ ಅಂಕಗಳಿಗೆ ಅರ್ಹ ಪ್ರಕರಣಗಳಲ್ಲಿ 16 ಅಂಕಗಳನ್ನು ಸೇರಿಸಲು ಅಧಿಕಾರವನ್ನು ಹೊಂದಿರತಕ್ಕದ್ದು.
(4) ಸಾಮಾನ್ಯ ದರ್ಜೆಯಲ್ಲಿನ ನಿವಾಸಿಯು ನಕ್ಷತ್ರ ದರ್ಜೆಗೆ ಅವನಿಗೆ ಬಡ್ತಿ ಕೊಡುವುದಕ್ಕೆ ಮುಂಚೆ ಕನಿಷ್ಟ ಪಕ್ಷ 500 ಅಂಕಗಳನ್ನು ಗಳಿಸಲು ಅಗತ್ಯವಿರತಕ್ಕದ್ದು, ಸಾಮಾನ್ಯ ದರ್ಜೆಯಲ್ಲಿ ಆರು ತಿಂಗಳುಗಳಿಗಿಂತ ಹೆಚ್ಚು ಇರಲು ಅವನನ್ನು ಅಗತ್ಯಪಡಿಸಿದ್ದರೆ, ಬಡ್ತಿಗಾಗಿ ಅವನು ಪಡೆದುಕೊಳ್ಳಬೇಕಾದ ಅಂಕಗಳ ಸಂಖ್ಯೆಯನ್ನು ಸದರಿ ಅಧಿನಿಯಮದ 24ನೇ ಪ್ರಕರಣದ (5)ನೇ ಉಪಪ್ರಕರಣದ ಉಪಬಂಧಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಸೂಪರಿಂಟೆಂಡೆಂಟನು ಅವಶ್ಯವೆಂದು ಪರ್ಯಾಲೋಚಿಸ ಬಹುದಾದಂಥ ಸಂಖ್ಯೆಯಿಂದ ಹೆಚ್ಚಿಸತಕ್ಕದ್ದು. 15. ನಕ್ಷತ್ರ ದರ್ಜೆ: ನಕ್ಷತ್ರ ದರ್ಜೆಗೆ ಬಡ್ತಿ ಹೊಂದಿದ ನಿವಾಸಿಯನ್ನು ಅವನ ವೈಯಕ್ತಿಕ ಅಭಿರುಚಿ ಮತ್ತು ಸಾಮಥ್ರ್ಯಕ್ಕೆ ಸೂಕ್ತವಾದ ವೃತ್ತಿಯಲ್ಲಿ ಇರಿಸತಕ್ಕದ್ದು. 16. ವಿಶೇಷ ನಕ್ಷತ್ರ ದರ್ಜೆ : ನಕ್ಷತ್ರ ದರ್ಜೆಯಲ್ಲಿನ ನಿವಾಸಿಯನ್ನು ವಿಶೇಷ ನಕ್ಷತ್ರ ದರ್ಜೆಗೆ ನಿವಾಸಿಯ ಸಾಮಾನ್ಯ ನಡವಳಿಕೆ ಮತ್ತು ದಕ್ಷತೆಯನ್ನು ಸೂಕ್ಷ್ಮವಾಗಿ ಪರಿವೀಕ್ಷಣೆಮಾಡಿದ ತರುವಾಯ ಸೂಪರಿಂಟೆಂಡೆಂಟನಿಗೆ ಅವನನ್ನು ವಿಶೇಷ ನಂಬಿಕೆಯ ಸ್ಥಾನದಲ್ಲಿ ನಿರಪಾಯವಾಗಿ ಇಡಬಹುದೆಂದು ಮನದಟ್ಟಾದರೆ ಬಡ್ತಿ ಕೊಡಬಹುದು. ವಿಶೇಷ ನಕ್ಷತ್ರ ದರ್ಜೆಗೆ ಬಡ್ತಿ ಹೊಂದಿದ ನಿವಾಸಿಯನ್ನು ಪೆರೇಡುಗಳಲ್ಲಿ, ಕಾರ್ಯಾಗಾರಗಳಲ್ಲಿ, ಆಟದ ಮೈದಾನಗಳಲ್ಲಿ ಅಥವಾ ವಿವಿಧ ಖಾತೆಗಳಲ್ಲಿ ಆಡಳಿತಕ್ಕೆ ಅವನು ಸಹಾಯ ಮಾಡಬಹುದಾದ ಇತರ ಸನ್ನಿವೇಶಗಳು ಇತರ ನಿವಾಸಿಗಳ ಮೇಲೆ ಅಧಿಕಾರವನ್ನು ಹೊಂದಿರಲು ಇರಿಸಬಹುದು. ಅಂಥ ನಿವಾಸಿಗಳು ವಿವಿಧ ಖಾತೆಗಳಲ್ಲಿ ಮೇಲ್ವಿಚಾರಕರಾಗಿಯೂ ಸಹ ಕಾರ್ಯ ನಿರ್ವಹಿಸಬಹುದು. ವಿಶೇಷ ನಕ್ಷತ್ರ ದರ್ಜೆಯಲ್ಲಿನ ನಿವಾಸಿಗಳು ವಿಭಿನ್ನವಾದ ಉಡುಪನ್ನು ಧರಿಸತಕ್ಕದ್ದು. 17. ಬ್ಯಾಡ್ಜ್ ಹಣ :- (ಕ) ನಕ್ಷತ್ರ ದರ್ಜೆಯಲ್ಲಿನ ನಿವಾಸಿಯು ಪ್ರತಿಯೊಂದು ತ್ರೈಮಾಸಿಕಕ್ಕಾಗಿ ಎರಡು ರೂಪಾಯಿಯಂತೆ ಮತ್ತು ವಿಶೇಷ ನಕ್ಷತ್ರ ದರ್ಜೆಯಲ್ಲಿನ ನಿವಾಸಿಯು ಪ್ರತಿ ತ್ರೈಮಾಸಿಕಕ್ಕಾಗಿ ಆರು ರೂಪಾಯಿಗಳಂತೆ ಆದರ್ಶ ನಡತೆ ಮತ್ತು ಕೆಲಸಕ್ಕಾಗಿ ಬ್ಯಾಡ್ಜ್ ಹಣವನ್ನು ಗಳಿಸಲು ಅರ್ಹನಾಗಿರತಕ್ಕದ್ದು. (ಖ) ಎಲ್ಲ ಬ್ಯಾಡ್ಜ್ ಹಣವು ನಿವಾಸಿಯ ಲೆಕ್ಕಕ್ಕೆ ಪ್ರಾಪ್ತವಾಗಲು ಅವಕಾಶ ಮಾಡಿಕೊಡತಕ್ಕದ್ದು ಮತ್ತು ಅದನ್ನು ಅವನು ಬಿಡುಗಡೆ ಹೊಂದಿದ ಮೇಲೆ ಅವನಿಗೆ ಸಂದಾಯ ಮಾಡತಕ್ಕದ್ದು. ಆ ಮೊಬಲಗನ್ನು ನಿವಾಸಿಯ ಲೆಕ್ಕಕ್ಕೆ ತಿಂಗಳ ಕೊನೆಯಲ್ಲಿ ಜಮೆ ಮಾಡತಕ್ಕದ್ದು ಮತ್ತು ಆ ನಮೂದುಗಳನ್ನು ಸೂಪರಿಂಟೆಂಡೆಂಟನು ದೃಢೀಕರಿಸತಕ್ಕದ್ದು.
(ಗ) ಬ್ಯಾಡ್ಜ್ ಹಣವನ್ನು ನಿವಾಸಿಯು ನಡತೆಯ ಯಾವ ತಿಂಗಳಲ್ಲಿ ಆದರ್ಶವಾಗಿರುವುದು ಮುಂದುವರಿಯುವುದಿಲ್ಲಮೋ ಆ ತಿಂಗಳಿಗಾಗಿ ಕೊಡತಕ್ಕದ್ದಲ್ಲ.
(ಘ) ಬ್ಯಾಡ್ಜ್ ಹಣವು, ಬಡ್ತಿಯ ದಿನಾಂಕದ ನಿಕಟೋತ್ತರದ ತಿಂಗಳಿನ ಒಂದರಂದು ಅದು, ಮೊದಲನೆಯ ದಿವಸವಾಗಿದ್ದ ಹೊರತು ಪ್ರಾಪ್ತವಾಗಲು ಅವಕಾಶ ಮಾಡಿಕೊಡತಕ್ಕದ್ದು.
(ಙ) ಕೆಳಗಿನ ದರ್ಜೆಯಿಂದ ಮೇಲಿನ ದರ್ಜೆಗೆ ಬಡ್ತಿ ಹೊಂದಿದ ನಿವಾಸಗಳಿಗೆ ಬಡ್ತಿಯ ದಿನಾಂಕದ ನಿಕಟೋತ್ತರದ ತಿಂಗಳಿಗೆ ಮೊದಲನೆ ದಿವಸದಿಂದ ಹೆಚ್ಚುವರಿ ಬ್ಯಾಡ್ಜ್ ಹಣವನ್ನು ಗಳಿಸಲು ಅನುಮತಿಸತಕ್ಕದ್ದು.
(ಡಿ) ಬ್ಯಾಡ್ಜ್ ಹಣವನ್ನು ಸೂಪರಿಂಟೆಂಡೆಂಟನು ಅನುಮೋದಿಸಿದ ಉದ್ದೇಶಗಳಿಗೆ ನಿವಾಸಿಯು ವೆಚ್ಚ ಮಾಡಬಹುದು ಅಥವಾ ಅದನ್ನು ಸ್ಥಳೀಯ ಉಳಿತಾಯ ಬ್ಯಾಂಕಿನಲ್ಲಿ ಹೂಡಬಹುದು. 18. ಕ್ರೀಡೆಗಳು ಮೊದಲಾದವುಗಳಲ್ಲಿ ಪಾಲ್ಗೊಳ್ಳಲು ನಿವಾಸಿಗಳಿಗೆ ಅನುಮತಿ: ಸೂಪರಿಂಟೆಂಡೆಂಟನು ಅವನು ಸೂಕ್ತವೆಂದು ಪರ್ಯಾಲೋಚಿಸುವಷ್ಟರ ಮಟ್ಟಿಗೆ ನಕ್ಷತ್ರ ಮತ್ತು ವಿಶೇಷ ನಕ್ಷತ್ರ ದರ್ಜೆಗಳಲ್ಲಿನ ನಿವಾಸಿಗಳಿಗೆ ಬಂದೀಖಾನೆಗಳ ಇನ್ಸ್ಪೆಕ್ಟರ್ ಜನರಲ್ಲನ ಪೂರ್ವ ಮಂಜೂರಾತಿಯೊಂದಿಗೆ ಜಿಲ್ಲೆಯಲ್ಲಿ, ಜಿಲ್ಲೆಯ ಹೊರಗಡೆ ನಡೆಸುವ ಆಟಗಳಲ್ಲಿ ಪಾಲ್ಗೊಳ್ಳಲು ಸ್ಕೌಟ್ ಶಿಬಿರಗಳಿಗೆ ಹೋಗಲು ಮತ್ತು ವ್ಯಾಯಾಮ ಕ್ರೀಡೆಗಳಲ್ಲಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅನುಮತಿಸತಕ್ಕದ್ದು. 19. ನಿವಾಸಿಗಳಿಂದ ಅಭ್ಯಾಸನಡಿಗೆ : ನಕ್ಷತ್ರ ಮತ್ತು ವಿಶೇಷ ನಕ್ಷತ್ರ ದರ್ಜೆಯಲ್ಲಿನ ನಿವಾಸಿಗಳನ್ನು ತಿಂಗಳಿಗೊಮ್ಮೆ ಅಭ್ಯಾಸ ನಡಿಗೆಗಳಲ್ಲಿ ಕರೆದುಕೊಂಡು ಹೋಗತಕ್ಕದ್ದು. 20. ದಂಡನೆ ದರ್ಜೆಯ ಕೆಲಸ : ದಂಡನೆ ದರ್ಜೆಯಲ್ಲಿನ ನಿವಾಸಿಯನ್ನು ಕಠಿಣವಾದ ಕೆಲಸದಲ್ಲಿ ನಿಯೋಜಿಸತಕ್ಕದ್ದು. 21. ದಂಡನೆ ದರ್ಜೆಗೆ ಇಳಿಸುವುದು : ಸೂಪರಿಂಟೆಂಡೆಂಟನು ದುರ್ನಡತೆಗಾಗಿ ಅಥವಾ ಶಾಲೆಯಲ್ಲಿ ಕೆಟ್ಟ ಪ್ರಭಾವವನ್ನು ಬೀರಿದುದಕ್ಕಾಗಿ ಯಾವನೇ ನಿವಾಸಿಯನ್ನು, ಅವನು ಅವಶ್ಯವೆಂದು ಪರ್ಯಾಲೋಚಿಸುವಂಥ ಅವಧಿಗಾಳಿಗಾಗಿ ದಂಡನೆ ದರ್ಜೆಗೆ ಇಳಿಸಬಹುದು, ಆದರೆ ಯಾವನೇ ನಿವಾಸಿಯನ್ನು ಇನ್ಸ್ಪೆಕ್ಟರ್ ಜನರಲ್ಲನ ನಿರ್ದಿಷ್ಟ ಮಂಜೂರಾತಿಯಿಂದಲ್ಲದೆ ಮೂರು ತಿಂಗಳುಗಳಿಗಿಂತ ಹೆಚ್ಚಿನ ಅವಧಿಗಾಗಿ ದಂಡನೆ ದರ್ಜೆಯಲ್ಲಿ ಇಡತಕ್ಕದ್ದಲ್ಲ. ಸೂಪರಿಂಟೆಂಡೆಂಟನು ಅವಶ್ಯವಿದ್ದರೆ ನಿವಾಸಿಯನ್ನು ಅವನ ಮೂಲ ದರ್ಜೆಗೆ ಹಂತ ಹಂತವಾಗಿ ಪುನಃ ತರಬಹುದು, ಸೂಪರಿಂಟೆಂಡೆಂಟನು ಅವನ ರೋಜು ಪುಸ್ತಕದಲ್ಲಿ, ಅವನು ಆದೇಶದ ಮೂಲಕ ದರ್ಜೆಯಲ್ಲಿ ಇಳಿಸುವ ಪ್ರತಿಯೊಂದು ಪ್ರಕರಣದ ವಿವರಗಳು, ಅಂಥ ಆದೇಶಕ್ಕಾಗಿನ ಕಾರಣಗಳು ಮತ್ತು ಆ ಇಳಿಸುವಿಕೆಯು ಜಾರಿಯಲ್ಲಿರಬೇಕಾದಂಥ ಅವಧಿಯನ್ನು ನಮೂದಿಸತಕ್ಕದ್ದು. 22. ವಿಶೇಷಾಧಿಕಾರಗಳು : (1) ನಿವಾಸಿಯು, ಅವನನ್ನು ಸ್ವೀಕರಿಸಿದ ಮೇಲೆ ಸರ್ಕಾರದ ಖರ್ಚಿನಲ್ಲಿ ಅವನ ಕುಟುಂಬದ ಯಾವನೇ ಸದಸ್ಯ ಅಥವಾ ಸ್ನೇಹಿತನಿಗೆ ಒಂದು ಪತ್ರವನ್ನು ಬರೆಯಲು ಅನುಮತಿಸತಕ್ಕದ್ದು. (2) ಆ ತರುವಾಯ, ಶಾಲೆಯಲ್ಲಿ ಅವನ ಬಂಧನದ ಪ್ರತಿ ಹದಿನೈದು ದಿವಸಗಳ ಅವಧಿಯಲ್ಲಿ, ಸರ್ಕಾರದ ಖರ್ಚಿನಲ್ಲಿ ಒಂದು ಅವನ ಖರ್ಚಿನಲ್ಲಿ ಒಂದು ಎರಡು ಪತ್ರಗಳನ್ನು ಬರೆಯಲು ಅನುಮತಿಸತಕ್ಕದ್ದು.
(3) ನಿವಾಸಿಯನ್ನು ಅವನ ಬಂಧುಗಳು ಅಥವಾ ಸ್ನೇಹಿತರೊಂದಿಗೆ ಪ್ರತಿ ಹದಿನೈದು ದಿವಸಗಳಲ್ಲಿ ಸಂದರ್ಶಿಸಲು ಅನುಮತಿಸತಕ್ಕದ್ದು. 23. ಪತ್ರ ವ್ಯವಹಾರ ಮತ್ತು ಸಂದರ್ಶನಗಳ ಬಗ್ಗೆ ವ್ಯವಸ್ಥೆ : (1) ಸೂಪರಿಂಟೆಂಡೆಂಟನು, ಅವನ ವಿವೇಚಾನುಸಾರ ವಿಶೇಷ ಭೇಟಿಗಳಿಗೆ ಅವಕಾಶ ಕೊಡಬಹುದು, ಬಂಧನದ ಆದೇಶದ ವಿರುದ್ಧ ಯಾವುದೇ ಅಪೀಲಿಗೆ ಸಂಬಂಧಿಸಿದಂತೆ ಸಂದರ್ಶನಕ್ಕಾಗಿ ಅಧಿಪ್ರೇರಿತ ಕಾನೂನು ಸಲಹೆಗಾರರಿಗೆ ಪ್ರತಿಯೊಂದು ಸೌಲಭ್ಯವನ್ನು ಕೊಡತಕ್ಕದ್ದು. (2) ಸೂಪರಿಂಟೆಂಡೆಂಟನು ಪತ್ರದ ರವಾನೆಯು ಆಕ್ಷೇಪಣೀಯವೆಂದು ಅವನು ಮನದಟ್ಟು ಮಾಡಿಕೊಂಡ ಹೊರತು ಯಾವುದೇ ಪತ್ರವನ್ನು ನಿವಾಸಿಗೆ ಕೊಡತಕ್ಕದ್ದಲ್ಲ ಅಥವಾ ಅವನು ಕಳುಹಿಸತಕ್ಕದ್ದಲ್ಲ.
(3) ನಿವಾಸಿಗಳ ಮರಣ ಅಥವಾ ತೀವ್ರ ಕಾಯಿಲೆಯ ಬಗ್ಗೆ ತಿಳುವಳಿಕೆಯನ್ನು ತಂದೆ / ತಾಯಿಗೆ, ಅವರ ವಿಳಾಸವು ತಿಳಿಸಿದ್ದರೆ, ಅಥವಾ ತಿಳಿದಿಲ್ಲದಿದ್ದರೆ ವಿಳಾಸ ತಿಳಿದಿರುವ ಅವನ ಅತಿ ಸಮೀಪ ಸಂಬಂಧಿಗಳು ಅಥವಾ ಸ್ನೇಹಿತನಿಗೆ ತಿಳಿಸತಕ್ಕದ್ದು. ಸೂಪರಿಂಟೆಂಡೆಂಟನು ನಿವಾಸಿಗಳ ಆರೋಗ್ಯಕ್ಕೆ ಕ್ಷೇಮಾಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ನಿವಾಸಿಗಳ ತಂದೆ / ತಾಯಿ / ಅಥವಾ ಅತಿ ಸಮೀಪದ ಸಂಬಂಧಿಗಳು ಅಥವಾ ಸ್ನೇಹಿತನು ಮಾಡಿದ ಯಾವುದೇ ವಿಚಾರಣೆಗಳಿಗೆ ಉತ್ತರ ಕೊಡತಕ್ಕದ್ದು.
(4) ಸೇರಿಸಿಕೊಂಡ ಮೇಲೆ ನಿವಾಸಿಗಳ ಕುಟುಂಬಕ್ಕೆ ಸರ್ಕಾರದ ಖರ್ಚಿನಲ್ಲಿ ಒಂದು ಮುದ್ರಿತ ಕಾರ್ಡನ್ನು ಕಳುಹಿಸತಕ್ಕದ್ದು. ಈ ಕಾರ್ಡನ್ನು ;
(i) ನಿವಾಸಿಯ ಆ ಸಂಸ್ಥೆಯಲ್ಲಿನ ಸಂಖ್ಯೆ ಮತ್ತು ವಿಳಾಸ ;
(ii) ನಿವಾಸಿಗಳ ವಿಶೇಷ ಅಧಿಕಾರಗಳ ಬಗೆಗಿನ ನಿಯಮಗಳ ಸಂಕ್ಷಪ್ತ ಸಾರಾಂಶ.
- ಇವುಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರತಕ್ಕದ್ದು.
- ಮೊದಲು ಸೇರಿದ ಮೇಲೆ, ನಿವಾಸಿಯನ್ನು, ಅವನನ್ನು ಸಂದರ್ಶಿಸಲು ಬರುವ ಸಂಭವವಿರುವ ವ್ಯಕ್ತಿಗಳ ಪಟ್ಟಿಯನ್ನು ಮತ್ತು ಅವನ ಅವಧಿಯಲ್ಲಿ ಯಾರೊಂದಿಗೆ ಅವನು ಪತ್ರ ವ್ಯವಹಾರವನ್ನು ಮಾಡುವ ಸಂಭವವಿರಬಹುದೋ ಆ ವ್ಯಕ್ತಿಗಳ ಪಟ್ಟಿಯನ್ನು ಕೊಡಲು ಕೇಳಬಹುದು.
- ಸಂದರ್ಶನದ ಅವಧಿಯು ಸಾಮಾನ್ಯವಾಗಿ ಇಪ್ಪತ್ತು ನಿಮಿಷಗಳವರೆಗೆ ಇರಬಹುದು ಅದನ್ನು ಸೂಪರಿಂಟೆಂಡೆಂಟನ ವಿವೇಚನಾನುಸಾರ ವಿಸ್ತರಿಸಬಹುದು.
- ಭಾನುವಾರಗಳಂದು ಮತ್ತು ಶಾಲೆಯ ರಜಾ ದಿವಸಗಳಂದು ಸಂದರ್ಶನವನ್ನು ಮಂಜೂರು ಮಾಡತಕ್ಕದ್ದಲ್ಲ. ಆದರೆ ಸೂಪರಿಂಟೆಂಡೆಂಟನು ಅವನ ವಿವೇಚನಾನುಸಾರ ಸಮುಚಿತ ರಿಜಿಸ್ಟರಿನಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅತಿ ವಿಶೇಷ ಸಂದರ್ಭಗಳಲ್ಲಿ ಭಾನುವಾರಗಳು ಮತ್ತು ಶಾಲಾ ರಜಾ ದಿವಸಗಳಂದು ಸಂದರ್ಶನಗಳಿಗೆ ಅವಕಾಶಕೊಡಬಹುದು. ಸಂದರ್ಶನದ ವೇಳೆಗಳನ್ನು ಶಾಲೆಯ ಮುಂದಿನ ಗೇಟಿನ ಮೇಲೆ ತಿಳಿಸತಕ್ಕದ್ದು.
- ಸಂದರ್ಶನಗಳನ್ನು ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಶಾಲಾ ಪ್ರಾಧಿಕಾರಿಗಳಿಗೆ ಕೇಳಿಸುವ ಮತ್ತು ಕಾಣಿಸುವಷ್ಟು ಸಮೀಪದಲ್ಲಿ ನಡೆಸತಕ್ಕದ್ದು. ಕರ್ತವ್ಯದ ಮೇಲಿರುವ ಅಧಿಕಾರಿಗೆ ಆಕ್ಷೇಪಣೀಯವಾದ ವಿಷಯಗಳನ್ನು ಚರ್ಚಿಸಿದರೆ ಸಂದರ್ಶನವನ್ನು ನಿಲ್ಲಿಸುವ ಹಕ್ಕು ಇರುತ್ತದೆ.
- ನಿವಾಸಿಗಳ ಶರೀರವನ್ನು ಸಂದರ್ಶನಕ್ಕೆ ಮುಂದೆ ಮತ್ತು ಆ ತರುವಾಯ ಆದ್ಯಂತ ಶೋಧಿಸತಕ್ಕದ್ದು.
- ಶಿಸ್ತು ಖುದ್ದು ಮೇಲ್ವಿಚಾರಣೆ ಇವುಗಳ ಬಗ್ಗೆ ಉಪಬಂಧಗಳು : (1) ಸೂಪರಿಂಟೆಂಡೆಂಟನು ಶಾಲೆಯ ಮೇಲೆ ನಿಕಟ ಮತ್ತು ನಿರಂತರ ಖುದ್ಧು ಮೇಲ್ವಿಚಾರಣೆಯನ್ನು ನಡೆಸತಕ್ಕದ್ದು. ಅವನು ನಿವಾಸಿಗಳು ಕೆಲಸ ಮಾಡುವ ಅಥವಾ ವಾಸಿಸುವ ಶಾಲೆಯ ಎಲ್ಲಾ ಭಾಗಗಳಿಗೆ ಪ್ರತಿ ದಿವಸ ಭೇಟಿ ಕೊಡತಕ್ಕದ್ದು ಮತ್ತು ಅವುಗಳನ್ನು ಪರಿಶೀಲಿಸತಕ್ಕದ್ದು ಮತ್ತು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಪ್ರತಿಯೊಬ್ಬ ನಿವಾಸಿಯ ಬಗ್ಗೆ ವಿಶೇಷ ಗಮನವನ್ನು ಕೊಡತಕ್ಕದ್ದು.
(2) ಸೂಪರಿಂಟೆಂಡೆಂಟನು ಕನಿಷ್ಠ ಪಕ್ಷ ಹದಿನೈದು ದಿವಸಗಳಿಗೊಮ್ಮೆ ರಾತ್ರಿಯಲ್ಲಿ ಶಾಲೆಗೆ ಭೇಟಿ ಕೋಡತಕ್ಕದ್ದು ಮತ್ತು ಪ್ರತಿಯೊಂದು ಸರಿಯಾಗಿದೆ ಎಂದು ಅವನು ಮನದಟ್ಟು ಮಾಡಿಕೊಳ್ಳತಕ್ಕದ್ದು. 25. ನಿವಾಸಿಯ ಮೇಲೆ ಬಲಪ್ರಯೋಗದ ಪರಿಬಂಧ.- (1) ನಿವಾಸಿಯೊಂದಿಗೆ ವ್ಯವಹರಿಸುವಲ್ಲಿ, ಯಾವನೇ ಅಧಿಕಾರಿಯು ಅವಶ್ಯವಾದುದಕ್ಕಿಂತ ಹೆಚ್ಚಿನ ಬಲವನ್ನು ಪ್ರಯೋಗಿಸತಕ್ಕದ್ದಲ್ಲ, ಯಾವನೇ ಅಧಿಕಾರಿಯು ನಿವಾಸಿಯನ್ನು ಪ್ರಚೋದಿಸುವ ಅಥವಾ ಕಿರುಕುಳ ಕೊಡುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. (2) ಸೂಪರಿಂಟೆಂಡೆಂಟನಿಗೆ ನಿವಾಸಿಯ ನಡವಳಿಕೆಯು, ಅವನ ಸ್ವಂತ ತರಬೇತಿಯ ಹಿತದಲ್ಲಿ ಅಥವಾ ಇತರ ನಿವಾಸಿಗಳ ಒಳಿತಿಗಾಗಿ ಅವನನ್ನು ಸಾಮಾನ್ಯ ಸಮುದಾಯ ಜೀವನದಿಂದ ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕೆಂದು ಮನದಟ್ಟಾದರೆ ಅವನು ಸೀಮಿತ ಅವಧಿಗಾಗಿ ನಿವಾಸಿಯನ್ನು ಅವನ ಗೃಹದಿಂದ ಸ್ಥಳಾಂತರಿಸಲು ಆದೇಶ ಮಾಡಬಹುದು. ಹಾಗೆ ಸ್ಥಳಾಂತರಿತನಾದ ನಿವಾಸಿಗೆ, ಸಹವಾಸ ಮತ್ತು ವಿಶೇಷ ಅಧಿಕಾರಗಳ ಬಗ್ಗೆ ಸೂಪರಿಂಟೆಂಡೆಂಟನು ಅವಶ್ಯವೆಂದು ಪರ್ಯಾಲೋಚಿಸಬಹುದಾದಂಥ ಪರಿಬಂಧಗಳ ಮೇರೆಗೆ ಪ್ರತ್ಯೇಕ ಕೋಣೆಯಲ್ಲಿ ಸ್ಥಳಾವಕಾಶವನ್ನು ಮಾಡಿಕೊಡಬಹುದು. 26. ಅಪರಾಧಗಳ ಬಗ್ಗೆ ತನಿಖೆ.- ಶಿಸ್ತಿನ ಬಗೆಗಿನ ಪ್ರತಿಯೊಂದು ಅಪರಾಧವನ್ನು ಸೂಪರಿಂಟೆಂಡೆಂಟನಿಗೆ ವರದಿ ಮಾಡತಕ್ಕದ್ದು. ಅವನು ಅದನ್ನು ಸಾಧ್ಯವಾದಷ್ಟು ಬೇಗ ತನಿಖೆ ಮಾಡತಕ್ಕದ್ದು. 27. ತಿದ್ದಲಾಗದ ನಿವಾಸಿಯ ಬಗ್ಗೆ ವರದಿ.- ಸೂಪರಿಂಟೆಂಡೆಂಟನು ನಿವಾಸಿಯು ತಿದ್ದಲಾಗದವನು ಅಥವಾ ಆ ಶಾಲೆಯ ಇತರ ನಿವಾಸಿಗಳ ಮೇಲೆ ಕೆಟ್ಟ ಪ್ರಭಾವನ್ನು ಬೀರುವ ಸಂಭವವಿದೆ ಎಂದು, ಅಥವಾ ತಪ್ಪಿಸಿಕೊಂಡ ಬಗ್ಗೆ ಅಪರಾಧಿಯೆಂದು ನಿರ್ಣೀತನಾಗಿದ್ದಾನೆಂದು ಅಥವಾ ಯಾವುದೇ ಅಪರಾಧವನ್ನು ಮಾಡಿದ್ದಾನೆಂದು ಅಭಿಪ್ರಾಯ ಪಟ್ಟರೆ, ಅವನು ಆ ಪ್ರಕರಣವನ್ನು ಇನ್ಸ್ಪೆಕ್ಟರ್ ಜನರಲ್ಲನಿಗೆ ವರದಿ ಮಾಡತಕ್ಕದ್ದು. 28. ದೈನಿಕ ಕಾರ್ಯಕ್ರಮ ಮತ್ತು ಕೆಲಸದ ವೇಳೆಗಳು.- (1) ಎಲ್ಲಾ ನಿವಾಸಿಗಳು, ವೈದ್ಯಕೀಯವಾಗಿ ಅವರು ಅರ್ಹರಾಗಿದ್ದರೆ ಪ್ರತಿಯೊಂದು ಕೆಲಸದ ದಿವಸದಲ್ಲಿ ಎಂಟು ಗಂಟೆಗಳವರೆಗೆ ಡ್ರಿಲ್ಲು, ಅಧ್ಯಯನ ಮತ್ತು ಕೆಲಸದಲ್ಲಿ ತೊಡಗುವಂತೆ ಅಗತ್ಯಪಡಿಸತಕ್ಕದ್ದು ; (2) ಶಾಲೆಯಲ್ಲಿ ಈ ಕೆಳಕಂಡ ದೈನಂದಿನ ಕಾರ್ಯಕ್ರಮವನ್ನು ಪಾಲಿಸತಕ್ಕದ್ದು ;
ಪೂರ್ವಾಹ್ನ 5-30 ರಿಂದ ಪೂರ್ವಾಹ್ನ 6ರವರೆಗೆ ಉಡುಪು ಧರಿಸುವುದು, ಧ್ಯಾನ, ಬೀಗ ತೆಗೆಯುವುದು, ಎಣಿಸುವುದು, ಶೋಧನೆ ಮತ್ತು ಬೆರಾಕುಗಳನ್ನು ಬಿಡುವುದು ಇವುಗಳಿಗಾಗಿನ ತಯಾರಿ ಪೂರ್ವಾಹ್ನ 6 ರಿಂದ 6-30 ರವರೆಗೆ ಪಾಯಿಖಾನೆಗೆ ಹೋಗುವುದು, ಸ್ನಾನ, ಬೆಳಗಿನ ಪ್ರಾರ್ಥನೆ ಪೂರ್ವಹ್ನ 6-30 ರಿಂದ 7-30 ರವರೆಗೆ ಕವಾಯತು ಮತ್ತು ದೈಹಿಕ ತರಬೇತಿ ಪೂರ್ವಾಹ್ನ 7-30 ರಿಂದ 8 ರವರೆಗೆ ಬೆಳಗಿನ ಲಘು ಉಪಹಾರ (ಗಂಜಿ) ಪೂರ್ವಾಹ್ನ 8 ರಿಂದ 11-30 ರವರೆಗೆ ಕಾರ್ಯಾಗಾರಗಳು, ಕೃಷಿ ತರಬೇತಿ, ಶೈಕ್ಷಣಿಕ ತರಗತಿಗಳು ಪೂರ್ವಾಹ್ನ 11-30 ರಿಂದ ಅಪರಾಹ್ನ 1 ರವರೆಗೆ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ಅಪರಾಹ್ನ 1 ರಿಂದ 3-30 ರವರೆಗೆ ಕಾರ್ಯಾಗಾರಗಳು, ಕೃಷಿ ಮತ್ತು ಇತರ ತರಬೇತಿ ಅಪರಾಹ್ನ 3-30 ರಿಂದ 4-30 ರವರೆಗೆ ಮನರಂಜನೆ ಮತ್ತು ಆಟಗಳು ಅಪರಾಹ್ನ 4-30 ರಿಂದ 5-30 ರವರೆಗೆ ತೊಳೆದುಕೊಳ್ಳುವುದು, ಸಾಮಾಜಿಕ ಶಿಕ್ಷಣ ಅಪರಾಹ್ನ 5-30 ರಿಂದ 6 ರವರೆಗೆ ಸಂಜೆ ಊಟ ಅಪರಾಹ್ನ 6 ರಿಂದ 9-30 ರವರೆಗೆ ವೃತ್ತ ಪತ್ರಿಕೆಗಳು, ಪುಸ್ತಕಗಳು, ರೇಡಿಯೋ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಲಾಕಪ್ ಶೋಧ, ಧ್ಯಾನ ಅಪರಾಹ್ನ 9-30 ಕ್ಕೆ ನಿದ್ರೆ ಸೂಪರಿಂಟೆಂಡೆಂಟನು, ಋತುಮಾನ ಪರಿಸ್ಥಿತಿಗಳಿಗನುಗುಣವಾಗಿ, ಅವನು ಅವಶ್ಯವೆಂದು ಪರ್ಯಾಲೋಚಿಸುವಷ್ಟರ ಮಟ್ಟಿಗೆ ಅಪರಾಹ್ನ 3-30ರ ತರುವಾಯ ಸಂಜೆಯ ಕಾರ್ಯಕ್ರಮಗಳನ್ನು ಮಾರ್ಪಾಟು ಮಾಡಬಹುದು. 29. ವಿದ್ಯಾಭ್ಯಾಸ. ನಿವಾಸಿಗೆ, ಅವನದೇ ಆದ ಭಾಷೆಯಲ್ಲಿ ವಿದ್ಯಾಭ್ಯಾಸವನ್ನು ಕೊಡತಕ್ಕದ್ದು ಮತ್ತು ಅದು ಸಾಮಾನ್ಯವಾಗಿ ಓದುವುದು, ಬರೆಯುವುದು ಲೆಕ್ಕ ಮತ್ತು ಸಾಮಾನ್ಯ ಜ್ಞಾನ ಇವುಗಳಿಗೆ ಸೀಮಿತವಾಗಿರತಕ್ಕದ್ದು. (2) ನಿವಾಸಿಯು ಅವನು ಸೇರಿಕೊಂಡ ದಿನಾಂಕದಿಂದ ಸೂಪರಿಂಟೆಂಡೆಂಟನು ನಿಗದಿಪಡಿಸಿದ ಅವಧಿಗಳಲ್ಲಿ ಶಾಲೆಗೆ ಹಾಜರಾಗತಕ್ಕದ್ದು
(3) ನಿವಾಸಿಯು ಪಬ್ಲಿಕ್ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿರುವ ವಿಶೇಷ ಸಂದರ್ಭಗಳಲ್ಲಿ ಅವನಿಗೆ ದಿವಸಕ್ಕೆ ಗರಿಷ್ಟ ಐದು ಗಂಟೆಗಳವರೆಗೆ ಶಾಲೆಗೆ ಹಾಜರಾಗಲು ಅಮುಮತಿಸಬಹುದು.
ಪ್ರತಿಯೊಬ್ಬ ನಿವಾಸಿಯನ್ನು ಪ್ರತಿ ಆರು ತಿಂಗಳುಗಳು ಕೊನೆಗೊಳ್ಳುವಾಗ ಹೌಸ್ ಮಾಸ್ಟರ್ ಅಥವಾ ಉಪಾಧ್ಯಾಯನು ಪರೀಕ್ಚಿಸತಕ್ಕದ್ದು ಮತ್ತು ಪಡೆದುಕೊಂಡ ಅಂಕಗಳನ್ನು ಮತ್ತು ತರಗತಿಯಲ್ಲಿ ಅವನ ಸ್ಥಾನವನ್ನು ಶಾಲೆಯ ವೈಯಕ್ತಿಕ ದಾಖಲೆಯಲ್ಲಿ ದಾಖಲು ಮಾಡತಕ್ಕದ್ದು.
(4) ಬೋಸ್ರ್ಟಲ್ ಮಟ್ಟದ ಶಿಕ್ಷಣವನ್ನು ತೃಪ್ತಿಕರವಾಗಿ ಮುಗಿಸಿರುವ ಅಥವಾ ಸೇರುವುದಕ್ಕೆ ಮುಂಚೆ ಮಾಧ್ಯಮಿಕ ಅಥವಾ ಪ್ರೌಢಶಾಲಾ ತರಗತಿಗಳಲ್ಲಿ ಅಧ್ಯಯನ ಮಾಡಿರುವ ಬುದ್ಧಿವಂತ ನಿವಾಸಿಗಳಿಗೆ, ಲಭ್ಯವಿರುವ ಸಿಬ್ಬಂದಿಯ ನೆರವಿನೊಂದಿಗೆ ಅವರ ಶಿಕ್ಷಣವನ್ನು ಅಭಿವೃದ್ಧಿಗೊಳಿಸಲು ಸೌಲಭ್ಯಗಳನ್ನು ಕೊಡಬಹುದು.
(5) ಶೈಕ್ಷಣಿಕ ತರಗತಿಗಳನ್ನು, ಶಿಕ್ಷಣ ಇಲಾಖೆಯ ಅಧಿಕಾರಿಯು ವಾರ್ಷಿಕವಾಗಿ ಪರಿಶೀಲಿಸತಕ್ಕದ್ದು.
(6) ಶಾಲೆಯಿಂದ ಬಿಡುಗಡೆಯಾದ ನಿವಾಸಿಗೆ ಅವನು ಸೂಕ್ತ ಉದ್ಯೋಗವನ್ನು ಕಂಡುಕೊಳ್ಳಲು ಅವನಿಗೆ ನೆರವಾಗಲು ನಮೂನೆ - IIರಲ್ಲಿ ಪ್ರಮಾಣಪತ್ರವನ್ನು ಕೊಡತಕ್ಕದ್ದು.
(7) ಸೂಪರಿಂಟೆಂಡೆಂಟನ ಅಭಿಪ್ರಾಯದಲ್ಲಿ ಆ ಉದ್ದೇಶಕ್ಕಾಗಿ ಸಾಕಷ್ಟು ಶಿಕ್ಷಣ ಪಡೆದಿರುವ ಮೇಲ್ವಿಚಾರಕರನ್ನು ಆ ಉಪಾಧ್ಯಾಯರಿಗೆ ನೆರವಾಗಲು ಆ ತರಗತಿಗಳಲ್ಲಿ ನಿಯೋಜಿಸಿಕೊಳ್ಳಬಹುದು. 30. ಸಾಕ್ಷರತೆಯನ್ನು ಪಡೆಯಲು ವಿಫಲವಾಗುವುದು.- ನಿವಾಸಿಯು ಶಿಕ್ಷಣದಲ್ಲಿನ ಬೋಧನೆಯಿಂದ ಪ್ರಯೋಜನವನ್ನು ಪಡೆಯಲು, ವಿಫಲವಾದಾಗ ಸೂಪರಿಂಟೆಂಡೆಂಟನು ತರಗತಿಗಳಿಗೆ ಹಾಜರಾಗುವುದರಿಂದ ಅಂಥ ನಿವಾಸಿಗೆ ವಿನಾಯಿತಿ ಕೊಡಬಹುದು ಮತ್ತು ಅವನ ವೇಳೆಯನ್ನು ಇತರ ಸೂಕ್ತ ಕೆಲಸದಲ್ಲಿ ಸೂಕ್ತವಾಗಿ ಉಪಯೋಗಿಸಿಕೊಳ್ಳಬಹುದು. 31. ಗ್ರಂಥಾಲಯ.- (1) ಪ್ರತಿಯೊಂದು ಶಾಲೆಯಲ್ಲಿ, ನಿವಾಸಿಗಳ ಉಪಯೋಗಕ್ಕಾಗಿ, ಇನ್ಸ್ಪೆಕ್ಟರ್ ಜನರಲ್ಲನು ಅನುಮೋದಿಸಿದ ಇಂಗ್ಲೀಷ್ ಮತ್ತು ದೇಶ ಭಾಷೆಯ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಒದಗಿಸತಕ್ಕದ್ದು. (2) ನಿವಾಸಿಗಳಿಗೆ ತಿಳಿದಿರುವ ಭಾಷೆಗಳಲ್ಲಿನ ವೃತ್ತಪತ್ರಿಕೆಗಳು, ಸಾಪ್ತಾಯಿಕ ಮತ್ತು ಮಾಸಿಕ ನಿಯತಕಾಲಿಕೆಗಳನ್ನು ಸಹ ಒದಗಿಸುವುದು. 32. ಶಿಕ್ಷಣ ಮಟ್ಟ.- 10ನೇ ತರಗತಿಯವರೆಗೆ (ಎಸ್.ಎಸ್.ಎಲ್.ಸಿ.) ಮತ್ತು ಅದನ್ನು ಒಳಗೊಂಡಂತೆ ಶಿಕ್ಷಣ ಇಲಾಖೆಯು ಕಾಲಕಾಲಕ್ಕೆ ಅನುಮೋದಿಸುವ ಪಠ್ಯಕ್ರಮದ ಪ್ರಕಾರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿನ ಕನಿಷ್ಠ ಮಟ್ಟಗಳು ಇರತಕ್ಕದ್ದು. 33. ವೃತ್ತಿ ತರಬೇತಿ : ನಿವಾಸಿಗಳು ಬಹಳ ವಿಶೇಷ ಕಾರಣಗಳಿಗಾಗಿ ಹೊರತು ಅವರ ಕೆಲಸವನ್ನು ಬದಲಾಯಿಸಲು ಅವಕಾಶ ಕೊಡತಕ್ಕದ್ದಲ್ಲ. ಒಂದು ರೀತಿಯ ತರಬೇತಿಯಿಂದ ಇನ್ನೊಂದು ರೀತಿಯ ತರಬೇತಿಗಾಗಿನ ಯಾವುದೇ ವರ್ಗಾವಣೆಯನ್ನು ಸೂಪರಿಂಟೆಂಡೆಂಟನು ಅನುಮೋದಿಸತಕ್ಕದ್ದು. 34. ವೃತ್ತಿ ಶಿಕ್ಷಣ : ಪ್ರತಿಯೊಬ್ಬ ನಿವಾಸಿಗೆ ಪ್ರತಿ ದಿವಸ ಐದು ಗಂಟೆಗಳಷ್ಟು ವೃತ್ತಿ ಶಿಕ್ಷಣವನ್ನು ಕೊಡತಕ್ಕದ್ದು. ಅದು ಆ ವಿಷಯದ ತತ್ವದಲ್ಲಿ ಪ್ರತಿ ವಾರ ಕನಿಷ್ಟ ಪಕ್ಷ ಎರಡು ಗಂಟೆಗಳ ಶಿಕ್ಷಣವನ್ನು, ಒಳಗೊಂಡಿರತಕ್ಕದ್ದು. ಪ್ರತಿಯೊಬ್ಬ ಶಿಕ್ಷಕನು ಆರು ತಿಂಗಳಿಗೊಮ್ಮೆ ಶಾಲೆಯ ವೈಯಕ್ತಿಕ ಪ್ರಗತಿ ದಾಖಲೆಯಲ್ಲಿ ಅಂಕಗಳನ್ನು ಕೊಡುವ ಮೂಲಕ ಅವನ ಪ್ರಭಾರದಲ್ಲಿರುವ ಪ್ರತಿಯೊಬ್ಬ ನಿವಾಸಿಯ ಪ್ರಗತಿಯನ್ನು ದಾಖಲು ಮಾಡತಕ್ಕದ್ದು. 35. ಪ್ರಥಮ ಚಿಕಿತ್ಸೆ ಇತ್ಯಾದಿಗಳಲ್ಲಿ ತರಬೇತಿ.- (1) ವೃತ್ತಿ ತರಬೇತಿ ಮತ್ತು ವಿದ್ಯಾಭ್ಯಾಸಕ್ಕಾಗಿ ಹಂಚಿಕೆ ಮಾಡಿದ ಅವಧಿಗಳ ಪೈಕಿ ಆಂಬ್ಯುಲೆನ್ಸ್ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಯನ್ನು ಕೊಡುವುದಕ್ಕಾಗಿ ವಾರಕ್ಕೆ ಎರಡು ಗಂಟೆಗಳನ್ನು ಉಪಯೋಗಿಸಿಕೊಳ್ಳತಕ್ಕದ್ದು ಮತ್ತು ಪ್ರಥಮ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್ನಲ್ಲಿನ ಸ್ಕೌಟಿಂಗ್ ಶಿಕ್ಷಣವನ್ನು ಶಾಲೆಯ ವೈದ್ಯಕೀಯ ಪ್ರಾಧಿಕಾರಿಗಳು ಕೊಡತಕ್ಕದ್ದು. (2) ಸ್ಕೌಟ್ ತರಬೇತಿಗಾಗಿ ಆಯ್ಕೆ ಮಾಡಿದ ನಿವಾಸಿಗಳಿಗೆ ಸರ್ಕಾರದ ಖರ್ಚಿನಲ್ಲಿ ಸ್ಕೌಟ್ ಸಮವಸ್ತ್ರವನ್ನು ಒದಗಿಸತಕ್ಕದ್ದು.
(3) ಸೂಪರಿಂಟೆಂಡೆಂಟನು, ಉಪಾಧ್ಯಾಯರು ಮತ್ತು ಶಿಕ್ಷಕರ ಪೈಕಿ ನಿವಾಸಿಗಳಿಗೆ ದಕ್ಷತೆಯಿಂದ ತರಬೇತಿಯನ್ನು ಕೊಡಲು ಅವರಿಗೆ ಸಾಧ್ಯವಾಗುವಂತೆ ಸ್ಕೌಟಿಂಗ್ನಲ್ಲಿ ತರಬೇತಿಯ ಕ್ರಮವನ್ನು ಪಡೆಯಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡತಕ್ಕದ್ದು. ಹಾಗೆ ಆಯ್ಕೆಗೊಂಡ ಉಪಾಧ್ಯಾಯರು ಅಥವಾ ಶಿಕ್ಷಕರಿಗೆ ಸರ್ಕಾರದ ಖರ್ಚಿನಲ್ಲಿ ಸ್ಕೌಟ್ ಸಮವಸ್ತ್ರವನ್ನು ಒದಗಿಸತಕ್ಕದ್ದು.
(4) ಶಾಲೆಯ ಹೊರಗಡೆ ಶಿಬಿರಗಳಲ್ಲಿ ಮತ್ತು ಸ್ಕೌಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆದ ನಿವಾಸಿಗಳಿಗೆ ಆ ಉದ್ದೇಶಕ್ಕಾಗಿ ಒಂದು ವರ್ಷದಲ್ಲಿ ಹತ್ತು ದಿವಸಗಳನ್ನು ಮೀರದ ರಜೆಯನ್ನು ಮಂಜೂರು ಮಾಡಬಹುದು.
(5) ನಿವಾಸಿಗಳಿಗೆ, ಸೂಪರಿಂಟೆಂಡೆಂಟನು ನಿಗದಿಪಡಿಸಬಹುದಾದಂಥ ಕಾಲದಲ್ಲಿ ಅಗ್ನಿ ಶಾಮಕ ಇಲಾಖೆ, ರಾಷ್ಟ್ರೀಯ ಕೇಡೆಟ್ ಕೋರ್ ಮತ್ತು ಗೃಹ ರಕ್ಷಕದಳ ಇವುಗಳಿಂದ ತರಬೇತಿ ಪಡೆದ ಸಿಬ್ಬಂದಿಯು ವಾರಕ್ಕೆ ಒಂದು ಸಲ ಅಗ್ನಿಶಾಮಕ, ರಕ್ಷಣಾ ಕೆಲಸ, ರಾಷ್ಟ್ರೀಯ ಕೇಡೆಟ್ ಕೋರ್ ಮತ್ತು ಗೃಹ ರಕ್ಷಣಾ ದಳದಲ್ಲಿನ ತರಬೇತಿಯನ್ನು ಕೊಡಬಹುದು. (ಅಧಿಸೂಚನೆ ಸಂಖ್ಯೆ 14-6-71ರ ಮೇರೆಗೆ ತಿದ್ದುಪಡಿ ಮಾಡಲಾಗಿದೆ). 36. ಕ್ರೀಡೆಗಳು ಮತ್ತು ಆಟಗಳು.- (1) ಸೂಪರಿಂಟೆಂಡೆಂಟನು, ವಾರ್ಷಿಕ ಕ್ರೀಡೆಗಳನ್ನು ನಡೆಸುವುದಕ್ಕಾಗಿ ಮತ್ತು ಬಹುಮಾನಗಳ ವಿತರಣೆಗಾಗಿ ವ್ಯವಸ್ಥೆ ಮಾಡತಕ್ಕದ್ದು. (2) ನಿವಾಸಿಗಳಿಗೆ ಹೊರಗಿನ ಸ್ಥಳಗಳ ಪಂಗಡಗಳ ವಿರುದ್ಧ ಪಂದ್ಯಗಳನ್ನು ಆಡಲು ಮತ್ತು ಜಿಲ್ಲಾ ಕ್ರೀಡೆಗಳು ಮತ್ತು ಟೂರ್ನಮೆಂಟುಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಹುದು. ಪಾಲ್ಗೊಳ್ಳುವವರಿಗಾಗಿ ಸಮವಸ್ತ್ರವನ್ನು ಸರ್ಕಾರದ ಖರ್ಚಿನಲ್ಲಿ ಒದಗಿಸಬಹುದು. 37. ನೈತಿಕ ಶಿಕ್ಷಣ.- ಇನ್ಸ್ಪೆಕ್ಟರ್ ಜನರಲ್ಲನು ನೇಮಕ ಮಾಡಿದ ಶಿಕ್ಷಕನು ನಿವಾಸಿಗಳಿಗೆ ಸಾಮಾನ್ಯ ನೀತಿ ಮತ್ತು ಸಾಮಾಜಿಕ ಆರೋಗ್ಯದ ಬಗ್ಗೆ ನೈತಿಕ ಶಿಕ್ಷಣವನ್ನು ಕೊಡಬಹುದು. 38. ಸಾಂಸ್ಕೃತಿಕ ಚಟುವಟಿಕೆಗಳು.- ಶೈಕ್ಷಣಿಕ ಮೌಲ್ಯದ ಮತ್ತು ನೀತಿಗಳನ್ನು ಬೋಧಿಸುವ ಚಲನಚಿತ್ರಗಳನ್ನು ಶಾಲೆಯಲ್ಲಿ ಪ್ರದರ್ಶಿಸಬಹುದು. ನಿವಾಸಿಗಳ ಮನಸ್ಸಿಗೆ ಹತ್ತುವಂತೆ ಒಳ್ಳೆಯ ನೀತಿಯನ್ನು ಒತ್ತಿ ಹೇಳಲು ಉದ್ದೇಶಿಸಿದ ನಾಟಕಗಳನ್ನು ಅವರಿಂದ ಆಡಿಸಬಹುದು. ಅವಶ್ಯ ಸೌಲಭ್ಯಗಳನ್ನು ಕೊಡುವುದರ ಮೂಲಕ ವರ್ಣಚಿತ್ರ, ರೇಖಾ ಚಿತ್ರ, ಮರದ ಕೆತ್ತನೆ, ಚಿತ್ತಾರದ ಕೆಲಸ ಮುಂತಾದವುಗಳಂಥ ಆಟದ ಸಹಜ ಕಲಾ ಪ್ರತಿಭೆಯನ್ನು ನಿವಾಸಿಗಳು ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶ ಕೊಡಬಹುದು. (ಅಧಿಸೂಚನೆ ದಿನಾಂಕ 4-6-71 ಇದರ ಮೂಲಕ ತಿದ್ದುಪಡಿ ಮಾಡಲಾಗಿದೆ). 39. ನ್ಯಾಯಾಲಯಗಳು ತೀರ್ಪಿನ ಪ್ರತಿಗಳು ಇತ್ಯಾದಿಗಳನ್ನು ಸೂಪರಿಂಟೆಂಡೆಂಟನಿಗೆ ಕಳುಹಿಸತಕ್ಕದ್ದು.- ಅಧಿನಿಯಮದ 5ನೇ ಪ್ರಕರಣದ ಮೇರೆಗೆ ಬಂಧನದ ಆದೇಶಗಳನ್ನು ಮಾಡಲು ಅಧಿಕೃತಗೊಳಿಸಿದ ನ್ಯಾಯಾಲಯಗಳು, ಶಾಲಾ ಸೂಪರಿಟೆಂಡೆಂಟನಿಗೆ, ಸಾಧ್ಯವಾದಷ್ಟು ಬೇಗ, ತೀರ್ಪಿನ ಒಂದು ಪ್ರತಿಯನ್ನು ಮತ್ತು ನಮೂನೆ IIIರಲ್ಲಿ ಅಪರಾಧಿಯ ಹುಟ್ಟು, ಪೂರ್ವ ವೃತ್ತಾಂತ, ವೃತ್ತಿ, ವಯಸ್ಸು ಇವುಗಳ ಬಗ್ಗೆ ಪರಿವೀಕ್ಷಣಾ ಅಧಿಕಾರಿಯಿಂದ ಪಡೆದ ಸವಿವರ ಮಾಹಿತಿಯನ್ನು ಕಳುಹಿಸತಕ್ಕದ್ದು. 40. ಸಭೆಯ ಅಧ್ಯಕ್ಷ ಮತ್ತು ಕೋರಂ.- ಸೆಷನ್ಸ್ ನ್ಯಾಯಾಧೀಶನು ಸಂದರ್ಶನ ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು ಮತ್ತು ಅವನು ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ಅವರ ಪೈಕಿ ಒಬ್ಬನನ್ನು ಆ ಸಭೆಯ ಅಧ್ಯಕ್ಷನೆಂದು ಕಾರ್ಯನಿರ್ವಹಿಸಲು ಆಯ್ಕೆ ಮಾಡತಕ್ಕದ್ದು. ಸಂದರ್ಶಕ ಸಮಿತಿಯ ಪ್ರತಿಯೊಂದು ಸಭೆಗಾಗಿ ಕೋಂ ಮೂರು ಆಗಿರತಕ್ಕದ್ದು. (ಅಧಿಸೂಚನೆ ದಿನಾಂಕ 4-6-71ರ ಮೂಲಕ ತಿದ್ದುಪಡಿ ಮಾಡಲಾಗಿದೆ). 40-ಕ. ಸಂದರ್ಶಕ ಸಮಿತಿಯ ಅಧಿಕಾರೇತರ ಸದಸ್ಯರು.- ಸಮಾಜ ಸೇವಾ ಕ್ಷೇತ್ರದಲ್ಲಿ ಇರುವಂಥ ಮತ್ತು ಬೋಸ್ರ್ಟಲ್ ಶಾಲೆಗಳ ಸ್ಥಾಪನೆ ಮತ್ತು ಆಡಳಿತದಲ್ಲಿ ಮತ್ತು ಬೋಸ್ರ್ಟಲ್ ಶಾಲೆಯಿಂದ ಬಿಡುಗಡೆ ಮಾಡಿದ ಯುವಾಪರಾಧಿಗಳ ಪುನರ್ವಸತಿಯಲ್ಲಿ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಗಳನ್ನು ಸಂದರ್ಶಕ ಸಮಿತಿಯ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಬಹುದು. 41. ಸಂದರ್ಶಕ ಸಮಿತಿಯ ವ್ಯವಹರಣೆಗಳು.- ಸಂದರ್ಶಕ ಸಮಿತಿಯ ಪ್ರತಿಯೊಂದು ಸಭೆಯ ವ್ಯವಹರಣೆಗಳು ಮತ್ತು ಅವರು ಸಂದರ್ಶಿಸಿದ ಕಾಲದಲ್ಲಿ ಸಂದರ್ಶಕ ಸಮಿತಿಯ ಸದಸ್ಯರು ದಾಖಲು ಮಾಡಿದ ಷರಾಗಳನ್ನು ಒಳಗೊಂಡು ಒಂದು ಪ್ರತಿಯನ್ನು ಸೂಪರಿಂಟೆಂಡೆಂಟನು ಯಾವುದೇ ವಿವರಣೆಯನ್ನು ಕೊಡಲು ಅಥವಾ ಅನ್ಯಥಾ ಇಚ್ಛಸಬಹುದಾದಂಥ ಷರಾಗಳೊಡನೆ ಇನ್ಸ್ಪೆಕ್ಟರ್ ಜನರಲ್ಲನಿಗೆ ಕಳುಹಿಸತಕ್ಕದ್ದು. 42. ಸೂಪರಿಂಟೆಂಡೆಂಟನ ಕರ್ತವ್ಯಗಳು.- (1) ಸೂಪರಿಂಟೆಂಡೆಂಟನು, ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅನುಸಾರವಾಗಿರುವಂಥ ಸಂದರ್ಶಕ ಸಮಿತಿಯ ಪ್ರತಿಯೊಂದು ನಿರ್ಣಯವನ್ನು ಜಾರಿಗೊಳಿಸತಕ್ಕದ್ದು. ಸೂಪರಿಂಟೆಂಡೆಂಟನ ಅಭಿಪ್ರಾಯದಲ್ಲಿ ಯಾವುದೇ ನಿರ್ಣಯವು ಅಧಿನಿಯಮ ಅಥವಾ ಈ ನಿಯಮಗಳಿಗೆ ಅಸಂಗತವಾಗಿದ್ದರೆ ಅಥವಾ ಯಾವುದೇ ಅಂಥ ನಿರ್ಣಯವನ್ನು ಜಾರಿಗೊಳಿಸುವುದು ವಿಹಿತವಾಗಿಲ್ಲದಿದ್ದರೆ, ಅವನು ಅಂಥ ನಿರ್ಣಯದ ಬಗ್ಗೆ ಇನ್ಸ್ಪೆಕ್ಟರ್ ಜನರಲ್ಲನ ಆದೇಶಗಳನ್ನು ಪಡೆಯತಕ್ಕದ್ದು. ಇನ್ಸ್ಪೆಕ್ಟರ್ ಜನರಲ್ಲನು ಅವನೊಡನೆ ಒಪ್ಪಿಕೊಂಡರೆ ಸೂಪರಿಂಟೆಂಡೆಂಟನು ಇನ್ಸ್ಪೆಕ್ಟರ್ ಜನರಲ್ಲನ ಆದೇಶಗಳೊಂದಿಗೆ ಅವನ ಅಭಿಪ್ರಾಯಗಳನ್ನು ಸಂದರ್ಶಕ ಸಮಿತಿಯ ಅಧ್ಯಕ್ಷನಿಗೆ ತಿಳಿಸತಕ್ಕದ್ದು. ಇನ್ಸ್ಪೆಕ್ಟರ್ ಜನರಲ್ಲನು ಭಿನ್ನಾಭಿಪ್ರಾಯವನ್ನು ತಳೆದರೆ ಮತ್ತು ಆ ನಿರ್ಣಯವನ್ನು ಜಾರಿಗೊಳಿಸಲು ಅವನಿಗೆ ನಿರ್ದೇಶಿಸಿದರೆ, ಅವನು ಹಾಗೆ ಮಾಡತಕ್ಕದ್ದು. (2) ಸೂಪರಿಂಟೆಂಡೆಂಟನು.-
(ಕ) (i) ಅಧಿನಿಯಮದ 15ನೇ ಪ್ರಕರಣದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿವಾಸಿಗಳ ಪ್ರಕರಣಗಳನ್ನು ;
(ii) ಮಾನಸಿಕ ನ್ಯೂನತೆಯಿಂದಾಗಿ ಬೋಸ್ರ್ಟಲ್ ತರಬೇತಿಗಾಗಿ ಅನರ್ಹರಾಗಿರುವ ಎಲ್ಲಾ ನಿವಾಸಿಗಳ ಪ್ರಕರಣಗಳನ್ನು ;
- ಸಂದರ್ಶಕ ಸಮಿತಿಯ ಗಮನಕ್ಕೆ ತರತಕ್ಕದ್ದು, ಮತ್ತು (ಖ) ಅವನು ಪ್ರತಿಯೊಂದು ಪ್ರಕರಣದ ಗುಣಾವಗುಣಗಳ ಬಗ್ಗೆ ಸಂದರ್ಶಕ ಸಮಿತಿಗೆ ಸಲಹೆ ಮಾಡತಕ್ಕದ್ದು.
- ಬಿಟ್ಟುಬಿಡಲಾಗಿದೆ.
- ತಂದೆ/ ತಾಯಿ ಅಥವಾ ಪಾಲಕ ಅಥವಾ ಸ್ನೇಹಿತನಿಗೆ ನಿವಾಸಿಯ ಬಿಡುಗಡೆಯ ಬಗ್ಗೆ ನೋಟೀಸು:- ಶಾಲೆಯ ನಿವಾಸಿಯನ್ನು ಅಧಿನಿಯಮದ 15ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಲೈಸೆನ್ಸಿನ ಮೇಲೆ ಬಿಡುಗಡೆ ಮಾಡಲು ಉದ್ದೇಶಿಸಿದಾಗ ಅಥವಾ ಅಂಥ ಶಾಲೆಯಿಂದ ವಿಮೋಚನೆಗೊಳಿಸಲು ಉದ್ದೇಶಿಸಿದಾಗಲೆಲ್ಲ ಸೂಪರಿಂಟೆಂಡೆಂಟನು, ಅಂಥ ಬಿಡುಗಡೆ ಅಥವಾ ವಿಮೋಚನೆಯ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ, ಅಂಥ ನಿವಾಸಿಯನ್ನು ಅಂಥ ಬಿಡುಗಡೆ ಅಥವಾ ವಿಮೋಚನೆಯ ದಿನಾಂಕದಂದು ಶಾಲೆಯ ಆವರಣದಲ್ಲಿ ಸ್ವೀಕರಿಸಲು ನಿವಾಸಿಯ ತಂದೆ / ತಾಯಿ ಅಥವಾ ಪಾಲಕ ಅಥವಾ ಸ್ನೇಹಿತನಿಗೆ ನೋಟೀಸನ್ನು ಕಳುಹಿಸತಕ್ಕದ್ದು: ಪರಂತು, ನಿವಾಸಿಯನ್ನು ಸ್ವೀಕರಿಸಲು ಆ ಶಾಲೆಯ ಆವರಣದಲ್ಲಿ ಅಂಥ ತಂದೆ / ತಾಯಿ, ಪಾಲಕ ಅಥವಾ ಸ್ನೇಹಿತನು ಹಾಜರಾಗಲು ತಪ್ಪಿದಾಗ ನಿವಾಸಿಯ ಗಮ್ಯ ಸ್ಥಾನಕ್ಕೆ ಹೋಗಲು ಶಾಲೆಯ ಸದಸ್ಯರು ಇರತಕ್ಕದ್ದು.
- 15ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಲೈಸೆನ್ಸಿನ ನಮೂನೆ : ಕರ್ನಾಟಕ ಬೋಸ್ರ್ಟಲ್ ಶಾಲೆಗಳ ಅಧಿನಿಯಮ, 1963ರ 15ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಮಂಜೂರು ಮಾಡಿದ ಲೈಸೆನ್ಸು ನಮೂನೆ IV ರಲ್ಲಿ ಇರತಕ್ಕದ್ದು.
- ಪ್ರಾರಂಭಿಕ ವಿಚಾರಣೆ.- ಅಧಿನಿಯಮದ 15ನೇ ಪ್ರಕರಣದ (1ನೇ ಉಪಪ್ರಕರಣದ ಮೇರೆಗೆ ಲೈಸೆನ್ಸಿನ ಮೇಲೆ ಬಿಡುಗಡೆಗಾಗಿ ಸಂದರ್ಶಕ ಸಮಿತಿಯು ಶಿಫಾರಸ್ಸು ಮಾಡಲು ಉದ್ದೇಶಿಸಿದ ನಿವಾಸಿಯ ಪ್ರಕರಣದಲ್ಲಿ, ಸೂಪರಿಂಟೆಂಡೆಂಟನು ಸಂದರ್ಶಕ ಸಮಿತಿಯ ಪ್ರತಿಯೊಂದು ಸಭೆಗೆ ಮುಂಚೆ ಆರು ವಾರಗಳಿಗೆ ಕಡಿಮೆ ಇಲ್ಲದಂತೆ ಆ ಜಿಲ್ಲೆಯ ಜಿಲ್ಲಾ ಪರಿವೀಕ್ಷಣಾ ಅಧಿಕಾರಿಗೆ ಆ ಪರಿವೀಕ್ಷಣಾಧಿಕಾರಿಯು ಅವಶ್ಯವಾದ ವಿಚಾರಣೆಗಳನ್ನು ಮಾಡಲು ಸಾಧ್ಯವಾಗುವಂತೆ ಅಂಥ ನಿವಾಸಿಗಳು ಹೆಸರುಗಳು, ಅವರು ಪಡೆದ ವೃತ್ತಿ, ತರಬೇತಿಯ ವಿವರಗಳು ಮತ್ತು ಅವರಿಗೆ ಸೂಕ್ತವಾದ ಕೆಲಸದ ಬಗೆಯನ್ನು ಕಳುಹಿಸತಕ್ಕದ್ದು ಮತ್ತು ಹಾಗೆ ಪಡೆದುಕೊಂಡ ಮಾಹಿತಿಯನ್ನು ಸಂದರ್ಶಕ ಸಮಿತಿಯ ಮುಂದೆ ಇಡತಕ್ಕದ್ದು.
- ಪರಿವೀಕ್ಷಣಾ ಅಧಿಕಾರಿಯಿಂದ ವರದಿ: ಲೈಸೆನ್ಸಿನ ಅವಧಿಯಲ್ಲಿ ಯಾವುದೇ ಕಾಲದಲ್ಲಿ ಯಾರ ರಕ್ಷಣೆಯಲ್ಲಿ ನಿವಾಸಿಯನ್ನು ಇಡಲಾಗಿದೆಯೋ ಆ ಪರಿವೀಕ್ಷಣಾ ಅಧಿಕಾರಿಯು, ನಿವಾಸಿಯು ಅವನ ಕೆಲಸದಲ್ಲಿ ಪ್ರಗತಿಯನ್ನು ತೋರಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲವೆಂದು ಅಭಿಪ್ರಾಯಪಟ್ಟರೆ ಅಥವಾ ಅವನ ವರ್ತನೆಯು ತೃಪ್ತಿಕರವಾಗಿಲ್ಲವೆಂದು ನಿರ್ಧರಿಸಿದರೆ ಅವನು ಆ ವಿಷಯವನ್ನು ಸೂಪರಿಂಟೆಂಡೆಂಟನಿಗೆ ವರದಿ ಮಾಡತಕ್ಕದ್ದು, ಅವನು ತರುವಾಯ ಕೂಡಲೇ ಇನ್ಸ್ಪೆಕ್ಟರ್ ಜನರಲ್ಲನಿಗೆ ಅವನ ಆದೇಶಗಳಿಗಾಗಿ ವರದಿ ಮಾಡತಕ್ಕದ್ದು.
- ನಿವಾಸಿಯ ಅನರ್ಹತೆ ಅಥವಾ ಅಸಮಾಥ್ರ್ಯದ ಸಂದರ್ಭದಲ್ಲಿ ಲೈಸೆನ್ಸಿನ ರದ್ಧಿಯಾತಿ:- ಲೈಸೆನ್ಸನ್ನು ಮಂಜೂರು ಮಾಡಲಾಗಿರುವ ಅಪರಾಧಿಯು ಕಾಯಿಲೆಯ ಕಾರಣದಿಂದಾಗಿಯೇ ಆಗಲಿ ಅಥವಾ ಅನ್ಯಥಾ ಆಗಲಿ ಶಾಲೆಯನ್ನು ಬಿಡಲು ಅನರ್ಹನಾದರೆ ಅಥವಾ ಅಸಮರ್ಥಗೊಂಡರೆ ಅವನ ಲೈಸೆನ್ಸನ್ನು ಇನ್ಸ್ಪೆಕ್ಟರ್ ಜನರಲ್ಲನು ರದ್ದುಗೊಳಿಸತಕ್ಕದ್ದು. ಪರಂತು, ಅಂಥ ಲೈಸೆನ್ಸನ್ನು ಸಂದರ್ಶಕ ಸಮಿತಿಯು ಅಂಥ ಅನರ್ಹತೆ ಅಥವಾ ಸಮರ್ಥತೆಯು ತಾತ್ಕಾಲಿಕ ಅವಧಿಯದೆಂದು ಅಭಿಪ್ರಾಯಪಟ್ಟರೆ, ಸೂಪರಿಂಟೆಂಡೆಂಟನು ಅದನ್ನು ಜಾರಿಯಲ್ಲಿ ಇಟ್ಟಿರತಕ್ಕದ್ದು.
- ವಿಶೇಷವಾಗಿ ಶಿಫಾರಸ್ಸು ಮಾಡಿದ ಹೊರತು ತಪ್ಪಿಸಿಕೊಂಡವನಿಗೆ ಲೆಸೆನ್ಸನ್ನು ಕೊಡತಕ್ಕದ್ದಲ್ಲ.- ಸಂದರ್ಶಕ ಸಮಿತಿಯು ವಿಶೇಷವಾಗಿ ಶಿಫಾರಸ್ಸು ಮಾಡಿದ ಹೊರತು ಶಾಲೆಯಿಂದ ಅಥವಾ ಮೇಲ್ವಿಚಾರಣೆಯಿಂದ ತಪ್ಪಿಸಿಕೊಂಡ ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯಾವನೇ ನಿವಾಸಿಗೆ ಲೈಸೆನ್ಸನ್ನು ಕೊಡತಕ್ಕದ್ದಲ್ಲ.
- ನಿವಾಸಿಯ ಬಿಡುಗಡೆಯ ನಿರೀಕ್ಷೆಯಲ್ಲಿ ಪರಿವೀಕ್ಷಣಾ ಅಧಿಕಾರಿಗೆ ಸೂಪರಿಂಟೆಂಡೆಂಟನ ವರದಿ:- ಬಂಧನದ ಅವಧಿಯು ಮುಕ್ತಾಯವಾದ ಮೇಲೆ ಬಿಡುಗಡೆಯಾಗಬೇಕಾದ ನಿವಾಸಿಯ ಪ್ರಕರಣದಲ್ಲಿ ಸೂಪರಿಂಟೆಂಡೆಂಟನು, ಬಿಡುಗಡೆಯ ನಿರೀಕ್ಷಿತ ದಿನಾಂಕಕ್ಕೆ ಆರು ತಿಂಗಳುಗಳಿಗೆ ಮುಂಚೆ ನಿವಾಸಿಯ ಹೆಸರು, ಅವನು ಪಡೆದಿರುವ ವೃತ್ತಿ ತರಬೇತಿಯ ವಿವರಗಳು, ಅವನಿಗೆ ಸೂಕ್ತವಾದ ಕೆಲಸದ ಬಗ್ಗೆ ಇವುಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ಪರಿವಿಕ್ಷಣಾ ಅಧಿಕಾರಿಗೆ ಕಳುಹಿಸತಕ್ಕದ್ದು. ಬಿಡುಗಡೆಯಾದ ಮೇಲೆ ನಿವಾಸಿಗೆ ಅವನು ಅವನ ಸ್ವಸ್ಥಳವನ್ನು ತಲುಪಿದಾಗ ಸಹಾಯ, ಮಾರ್ಗದರ್ಶನಕ್ಕಾಗಿ ಅವನಲ್ಲಿಗೆ ಹೋಗುವ ನಿರ್ದೇಶನದೊಂದಿಗೆ ಪರಿವೀಕ್ಷಣಾ ಅಧಿಕಾರಿಗೆ ಬರೆದ ಪತ್ರವನ್ನು ಒದಗಿಸತಕ್ಕದ್ದು.
- ಜಿಲ್ಲಾ ಪರಿವೀಕ್ಷಣಾಧಿಕಾರಿಯ ಕರ್ತವ್ಯಗಳು:- ಜಿಲ್ಲಾ ಪರಿವೀಕ್ಷಣಾಧಿಕಾರಿಯು – (i) ಬೋಸ್ರ್ಟಲ್ ಶಾಲೆಯಿಂದ ವಿಮೋಚನೆಗೊಂಡ ಪ್ರತಿಯೊಬ್ಬ ನಿವಾಸಿಯ ಬಗ್ಗೆ ಒಂದು ವರ್ಷದ ಅವಧಿಯವರೆಗೆ ಮೇಲ್ವಿಚಾರಣೆ ನಡೆಸತಕ್ಕದ್ದು.
(ii) ಬೋಸ್ರ್ಟಲ್ ಶಾಲೆಯಿಂದ ವಿಮೋಚನೆಗೊಂಡ ಪ್ರತಿಯೊಬ್ಬ ನಿವಾಸಿಯನ್ನು ಸಂದರ್ಶಿಸತಕ್ಕದ್ದು ಮತ್ತು ಅಂಥ ನಿವಾಸಿಗೆ ಸಲಹೆ ನೀಡಲು ಮತ್ತು ನೆರವಾಗಲು ಮುಕ್ತ ಮಧ್ಯಂತರಗಳಲ್ಲಿ ಅವನನ್ನು ಬರಮಾಡಿಕೊಳ್ಳತಕ್ಕದ್ದು.
(iii) ಬೋಸ್ರ್ಟಲ್ ಶಾಲೆಯಿಂದ ವಿಮೋಚನೆಗೊಂಡ ಪ್ರತಿಯೊಬ್ಬ ನಿವಾಸಿಗೆ ಶಾಲೆಯಲ್ಲಿ ಅವನಿಗೆ ಕೊಟ್ಟ ತರಬೇತಿಯ ಒಳ್ಳೆಯ ಉಪಯೋಗವನ್ನು ಮಾಡಿಕೊಳ್ಳಲು ಸಹಾಯ ಮಾಡತಕ್ಕದ್ದು ಮತ್ತು ಅವಶ್ಯವಿದ್ದಾಗಲೆಲ್ಲ ಅವನಿಗೆ ಸೂಕ್ತ ಉದ್ಯೋಗವನ್ನು ದೊರಕಿಸಿಕೊಡಲು ಪ್ರಯತ್ನಿಸತಕ್ಕದ್ದು.
(iv) ಬೋಸ್ರ್ಟಲ್ ಶಾಲೆಯಿಂದ ವಿಮೋಚನೆಗೊಂಡ ತರುವಾಯ ಒಂದು ವರ್ಷದ ಅವಧಿಯಲ್ಲಿ ಅಂಥ ನಿವಾಸಿಯ ಪ್ರಗತಿ ಮತ್ತು ನಡವಳಿಕೆಯ ಬಗ್ಗೆ ಶಾಲೆಯ ಸೂಪರಿಂಟೆಂಡೆಂಟನಿಗೆ ಮತ್ತು ಇನ್ಸ್ಪೆಕ್ಟರ್ ಜನರಲ್ಲನಿಗೆ ತ್ರೈಮಾಸಿಕ ವರದಿಗಳನ್ನು ಕಳುಹಿಸತಕ್ಕದ್ದು.
(v) ಶಾಲೆಯ ಸೂಪರಿಂಟೆಂಡೆಂಟನಿಗೆ ಮತ್ತು ಇನ್ಸ್ಪೆಕ್ಟರ್ ಜನರಲ್ಲನಿಗೆ ಲೈಸೆನ್ಸ್ನ ಅವಧಿಯ ಮುಕ್ತಾಯವಾಗುವವರೆಗೆ ಲೈಸೆನ್ಸಿನ ಮೇಲೆ ಬಿಡುಗಡೆ ಮಾಡಿದ ನಿವಾಸಿಗಳ ಬಗ್ಗೆ ಮಾಸಿಕ ವರದಿಯನ್ನು ಮತ್ತು ಆ ತರುವಾಯ, ಬೋಸ್ರ್ಟಲ್ ಶಾಲೆಯಿಂದ ವಿಮೋಚನೆಗೊಂಡ ನಿವಾಸಿಗಳ ಸಂದರ್ಭದಲ್ಲಿದ್ದಂತೆ ಒಂದೇ ವರ್ಷಕ್ಕಾಗಿ ತ್ರೈಮಾಸಿಕ ವರದಿಗಳನ್ನು ಕಳುಹಿಸತಕ್ಕದ್ದು. 52. ಲೈಸೆನ್ಸುಗಳ ರಿಜಿಸ್ಟರು: ಸೂಪರಿಂಟೆಂಡೆಂಟನು ಲೈಸೆನ್ಸುಗಳ ರಿಜಿಸ್ಟರನ್ನು ಇಟ್ಟುಕೊಂಡು ಬರತಕ್ಕದ್ದು ಮತ್ತು ಅವುಗಳನ್ನು ಕನಿಷ್ಠಪಕ್ಷ ಪ್ರತಿ ಮೂರು ತಿಂಗಳಿಗೊಮ್ಮೆ ಸಂದರ್ಶಕ ಸಮಿತಿಯ ಮುಂದೆ ಇಡತಕ್ಕದ್ದು. 53. ಬಟ್ಟೆಬರೆ ಮತ್ತು ಹಾಸಿಗೆ : (1) ಶಾಲೆಗೆ ಸೇರಿಕೊಂಡ ಮೇಲೆ ಪ್ರತಿಯೊಬ್ಬ ನಿವಾಸಿಗೆ ಎರಡು ಸೂಟುಗಳನ್ನು ಒಂದು ಹೊಸದು ಮತ್ತು ಲಭ್ಯವಿದ್ದರೆ ಇನ್ನೊಂದು ಭಾಗಶಃ ಉಪಯೋಗಿಸಿದ್ದು ಒದಗಿಸತಕ್ಕದ್ದು. ಒಬ್ಬ ನಿವಾಸಿಯು ಧರಿಸಲಾಗಿರುವಂಥ ಬಟ್ಟೆಬರೆಯ ಯಾವುದೇ ವಸ್ತುವನ್ನು ಅದನ್ನು ಸ್ವಚ್ಛಗೊಳಿಸಲಾಗಿದ್ದು ಮತ್ತು ಸೋಂಕು ನಾಶಗೊಳಿಸಲಾಗಿದ್ದ ಹೊರತು ಇನ್ನೊಬ್ಬನಿಗೆ ಕೊಡತಕ್ಕದ್ದಲ್ಲ. (2) ಮೇಲೆ ಹೇಳಿರುವುದರ ಜೊತೆಗೆ ಸೇರಿಸಿಕೊಂಡ ಮೇಲೆ ಪ್ರತಿಯೊಬ್ಬ ನಿವಾಸಿಗೆ ಹೊಸದಾದುದೇ ಆಗಲಿ ಅಥವಾ ಭಾಗಶಃ ಧರಿಸಿದ್ದುದ್ದೇ ಆಗಿರುವಂಥ ಬಣ್ಣದ ಕ್ರೀಡಾ ಉಡುಪನ್ನು ಒದಗಿಸತಕ್ಕದ್ದು. ಅಂಥ ಸೂಟನ್ನು ಧರಿಸುವ ಅವಧಿಯು ಎರಡು ವರ್ಷಗಳಾಗಿರುತ್ತದೆ.
(3) ಶಾಲೆಯ ಬ್ಯಾಂಡ್ಸೆಟ್ಟಿನಲ್ಲಿರುವ ಪ್ರತಿಯೊಬ್ಬ ನಿವಾಸಿಗೆ ಈ ಕೆಳಕಂಡ ಸಮವಸ್ತ್ರವನ್ನು ಒದಗಿಸತಕ್ಕದ್ದು, ಎಂದರೆ :
(i) ಬಿಳಿ ಕೋಟು,
(ii) ಉದ್ದವಾದ ಷರಾಯಿ,
(iii) ಬಣ್ಣದ ಪಟ್ಟಿಗಳು ಮತ್ತು ಅಲಂಕಾರಗಳೊಂದಿಗೆ ಟೋಪಿ ಮತ್ತು ಹಸಿರು ಕಾಲರ್ ಮತ್ತು
(iv) ಪಾದ ರಕ್ಷೆ ಅಂಥ ಸಮವಸ್ತ್ರವನ್ನು ಧರಿಸಬೇಕಾದ ಅವಧಿಯು ಎರಡು ವರ್ಷಗಳಾಗಿರತಕ್ಕದ್ದು.
(4) ಸಾಮಾನ್ಯ ದರ್ಜೆಯಲ್ಲಿ ಮತ್ತು ನಕ್ಷತ್ರ ದರ್ಜೆಯಲ್ಲಿನ ನಿವಾಸಿಗಳ ಬಟ್ಟೆಬರೆಗಳನ್ನು ಜೈಲಿನಲ್ಲಿ ತಯಾರಿಸಿದ ಬಿಳಿಯ ಬಟ್ಟೆಯಿಂದ ಮಾಡಿರತಕ್ಕದ್ದು, ವಿಶೇಷ ನಕ್ಷತ್ರ ದರ್ಜೆಯಲ್ಲಿನ ನಿವಾಸಿಗಳದ್ದು ಖಾಕಿ ಡ್ರಿಲ್ ಬಟ್ಟೆಯಿಂದ ಹೊಲಿಸತಕ್ಕದ್ದು. 54. ಬಟ್ಟೆಬರೆಗಳ ಮತ್ತು ಹಾಸಿಗೆಯ ಶ್ರೇಣಿ : ನಿವಾಸಿಗಳ ಬಟ್ಟೆಬರೆಗಳು ಮತ್ತು ಹಾಸಿಗೆಯು ಈ ಕೆಳಕಂಡ ಕೋಷ್ಠಕದಲ್ಲಿ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು, ನವೀಕರಣದ ಅವಧಿಯನ್ನೂ ಸಹ ಕೊನೆಯ ಅಂಕಣದಲ್ಲಿ ಕೊಡಲಾಗಿದೆ.
| ಕ್ರಮ | |||
| ವಸ್ತುವಿನ ಹೆಸರು | ಸಂಖ್ಯೆ | ನವೀಕರಣದ ಅವಧಿ | |
| ಸಂಖ್ಯೆ | |||
| 1. | ಬಿಳಿಯ ಅಬ್ಲಾಂಗ್ ಟೋಪಿಗಳು | 2 | |
| 2. | ತೆರೆದ ಕಾಲರು ಮತ್ತು ಮುಂಭಾಗದಲ್ಲಿ ಮೂರು | 2 | |
| ಗುಂಡಿಗಳನ್ನು ಮತ್ತು ಎದೆಯ ಎಡಭಾಗದಲ್ಲಿ | |||
| ಒಂದು ಜೇಬನ್ನು ಹೊಂದಿರುವ ತಿಳಿ ಆಕಾಶನೀಲಿ |
(ii) ಗಣರಾಜ್ಯ ದಿನ
(iii) ಮಹಾ ಶಿವರಾತ್ರಿ
(iv) ಚಂದ್ರಮಾನ ಹೊಸ ವರ್ಷದ ದಿನ
(v) ಸ್ವಾತಂತ್ರ್ಯ ದಿನ
(vi) ಗಣೇಶ ಚತುರ್ಥಿ
(vii) ಗಾಂಧಿ ಜಯಂತಿ
(viii) ಮಹಾಲಯ ಅಮಾವಾಸ್ಯೆ
(ix) ಆಯುಧ ಪೂಜೆ
(x) ಮೊಹರಂ ಕಡೆ ದಿನ
(xi) ಕ್ರಿಸ್ಮಸ್
(xii) ದೀಪಾವಳಿ
(xiii) ಗೋಕುಲಾಷ್ಟಮಿ
(xiv) ರಂಜಾನ್ ಈದ್
(xv) ಬಕ್ರೀದ್ 56. ಕ್ಯಾಂಟೀನ್ : ಪ್ರತಿಯೊಂದು ಶಾಲೆಯು ನಿವಾಸಿಗಳ ಪ್ರಯೋಜನಕ್ಕಾಗಿ ಸೂಪರಿಂಟೆಂಡೆಂಟನ ಸಾಮಾನ್ಯ ಮೇಲ್ವಿಚಾರಣೆಯಲ್ಲಿ ಒಂದು ಕ್ಯಾಂಟೀನನ್ನು ಹೊಂದಿರತಕ್ಕದ್ದು. ಅದನ್ನು ಸೂಪರಿಂಟೆಂಡೆಂಟನು ನಿರ್ದೇಶಿಸಬಹುದಾದಂಥ ವೇಳೆಗಳಲ್ಲಿ ತೆರೆದಿರತಕ್ಕದ್ದು. ಕ್ಯಾಂಟೀನು ನಿವಾಸಿಗಳು ಸಾಮಾನ್ಯವಾಗಿ ಬೇಡುವ ಲೇಖನ ಸಾಮಗ್ರಿ ಮತ್ತು ಪ್ರಸಾಧನ ವಸ್ತುಗಳಲ್ಲಿ ವ್ಯವಹರಿಸತಕ್ಕದ್ದು. 57. ಅಂಕಿಅಂಶಗಳು ಮತ್ತು ವಿವರ ಪಟ್ಟಿಕೆಗಳು.- (1) ಸೂಪರಿಂಟೆಂಡೆಂಟನು ದಾಖಲೆಗಳು ಮತ್ತು ರಿಜಿಸ್ಟರುಗಳನ್ನು ಇಟ್ಟುಕೊಂಡು ಬರುವುದು ಮತ್ತು ಇನ್ಸ್ಪೆಕ್ಟರ್ ಜನರಲ್ಲನು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ವರದಿಗಳು ಮತ್ತು ವಿವರ ಪಟ್ಟಿಕೆಗಳನ್ನು ಸಿದ್ಧಪಡಿಸುವುದು ಮತ್ತು ಸಲ್ಲಿಸುವುದು ಇವುಗಳಿಗಾಗಿ ಜವಾಬ್ದಾರನಾಗಿರತಕ್ಕದ್ದು. (2) ಅವನು ಇನ್ಸ್ಪೆಕ್ಟರ್ ಜನರಲ್ಲನು ನಿರ್ದೇಶಿಸಬಹುದಾದಂಥ ನಮೂನೆಯಲ್ಲಿ, ಪ್ರತಿವರ್ಷ ಜುಲೈ 31ನ್ನು ಮೀರದ ಹಾಗೆ, ಹಿಂದಿನ ವರ್ಷದ ಶಾಲೆಯ ಆಡಳಿತದ ಬಗ್ಗೆ ವರದಿಯನ್ನು ಅವನಿಗೆ ಸಲ್ಲಿಸತಕ್ಕದ್ದು. 58. ನಿವಾಸಿಯ ಮರಣ/ ಕಾಯಿಲೆಯ ಬಗ್ಗೆ ವರದಿ ಮತ್ತು ದಾಖಲೆಗಳನ್ನು ಇಟ್ಟುಕೊಂಡು ಬರತಕ್ಕದ್ದು.- (1) ಶಾಲೆಯ ವೈದ್ಯಾಧಿಕಾರಿಯು, ಯಾವನೇ ನಿವಾಸಿಯ ಮರಣದ ದಾಖಲೆಯನ್ನು ಇಡತಕ್ಕದ್ದು; ಅದು ಮೃತನಿಗೆ ಕಾಯಿಲೆ ಹಿಡಿದ ಕಾಲ, ಅವನ ಕಾಯಿಲೆಯನ್ನು ಯಾವಾಗ ಮೊದಲು ಗುರುತಿಸಿದ್ದು, ಆ ಕಾಯಿಲೆಯ ಸ್ವರೂಪ, ಮರಣದ ಕಾಲ ಮತ್ತು ಮೃತನಿಗೆ ನೀಡಲಾದ ಶುಶ್ರೂಷೆ ಇವುಗಳಿಗೆ ಸಂಬಂಧಪಟ್ಟಂತೆ ವಿವರಗಳನ್ನು ಒಳಗೊಂಡಿರತಕ್ಕದ್ದು. 2) ಸೂಪರಿಂಟೆಂಡೆಂಟನು, ಯಾವನೇ ನಿವಾಸಿಯ ಮರಣದ ಬಗೆಗಿನ ವರದಿಯನ್ನು ಕೂಡಲೇ ಇನ್ಸ್ಪೆಕ್ಟರ್ ಜನರಲ್ಲನಿಗೆ ಕಳುಹಿಸಿಕೊಡತಕ್ಕದ್ದು. 59. ನಿವಾಸಿಗಳ ಆಹಾರ.- ಈ ಕೆಳಕಂಡ ಶ್ರೇಣಿ ಮತ್ತು ಸೂಚನೆಗಳಿಗೆ ಅನುಸಾರವಾಗಿ ನಿವಾಸಿಗಳು ಆಹಾರವನ್ನು ಹೊಂದಿರತಕ್ಕದ್ದು.
| ವಸ್ತುಗಳ ಹೆಸರು | ಸಸ್ಯಹಾರಿಗೆ | ಪ್ರತಿ ದಿವಸಕ್ಕೆ | ಮಾಂಸಾಹಾರಿಗೆ | ಪ್ರತಿ ದಿವಸಕ್ಕೆ | |
| ಅಕ್ಕಿ | 12 ಔನ್ಸ್ | 340 | 12 ಔನ್ಸ್ | 340 | |
| ಗ್ರಾಂಗಳು | ಗ್ರಾಂಗಳು | ||||
| ಗೋಧಿ ಅಥವಾ ಜೋಳ ಅಥವಾ | ರಾಗಿ | 12 ,, | 340 ,, | 12 ,, | 340 ,, |
| ಅಥವಾ ಕ್ಲಾಂಬು | |||||
| ಬೇಳೆ | 3 ,, | 85 ,, | 3 ,, | 85 ,, | |
| * ಕಡಲೇಕಾಯಿ | 1 ,, | 28 ,, | 1 ,, | 28 ,, | |
| * ಬೆಲ್ಲ | 1/2 ,, | 14 ,, | 1/2 ,, | 14 ,, | |
| ** ಮಾಂಸ | - | - | 12 ,, | 340 ,, | |
| ತುಪ್ಪ | 1/2 ,, | 14 ,, | 1/2 ,, | 14 ,, | |
| ಈರುಳ್ಳಿ | 1/2 ,, | 14 ,, | 1/2 ,, | 14 ,, |
| ಹುಣಸೆ ಹಣ್ಣು | 1/2 ,, | 14 ,, | 1/2 ,, | 14 ,, |
| ಸಾಂಬಾರು ಪುಡಿ | 1/2 ,, | 7 ,, | 1/2 ,, | 7 ,, |
| ಉಪ್ಪು | 1 ,, | 28 ,, | 1 ,, | 28 ,, |
| ತರಕಾರಿ | 8 ,, | 228 ,, | 8 ,, | 228 ,, |
| ಬೆಳ್ಳುಳ್ಳಿ |
ಬೆಳೆಯ ಅರ್ಧದಷ್ಟು ಪ್ರಮಾಣವನ್ನು ಪ್ರತಿದಿನವೂ ತೊಗರಿ ಬೇಳೆಯ ರೂಪದಲ್ಲಿ ಕೊಡಬಹುದು ಮತ್ತು ಇತರ ಅರ್ಧ ಭಾಗವನ್ನು ಸರದಿಯ ಮೇಲೆ ಹೆಸರು ಬೇಳೆ ಅಥವಾ ಕಡಲೆಬೇಳೆ ಅಥವಾ ಹಲಸಂದೆ ಅಥವಾ ಅವರೆ ಬೇಳೆಯ ರೂಪದಲ್ಲಿ ಕೊಡಬಹುದು. ಚನ್ನಂಗಿ ಬೇಳೆ ಅಥವಾ ಮಸೂರು ಬೇಳೆಯ ಬಳಕೆಯನ್ನು ನಿಷೇಧಿಸಲಾಗಿದೆ.
-
ಋತುಮಾನಕ್ಕನುಸಾರವಾದ ತರಕಾರಿಗಳನ್ನು ಕೊಡಬಹುದು ಮತ್ತು ಕನಿಷ್ಠ ಪಕ್ಷ ಶೇಕಡಾ ಇಪ್ಪತ್ತೈದರಷ್ಟು ಪ್ರಮಾಣದ ಸೊಪ್ಪು ತರಕಾರಿಯನ್ನು ಕೊಡತಕ್ಕದ್ದು. ವಾರಕ್ಕೊಮ್ಮೆ ತರಕಾರಿಯ ಅರ್ಧದಷ್ಟು ಪ್ರಮಾಣವನ್ನು ಆಲೂಗಡ್ಡೆಯ ರೂಪದಲ್ಲಿ ಕೊಡಬಹುದು.
-
ಮೊಸರು ತಯಾರಿಸುವುದಕ್ಕಾಗಿ ಮತ್ತು ರಾತ್ರಿಯ ಊಟದೊಂದಿಗೆ ಮಜ್ಜಿಗೆಯನ್ನು ಕೊಡುವುದಕ್ಕಾಗಿ ಹಾಲನ್ನು ಉಪಯೋಗಿಸತಕ್ಕದ್ದು.
-
ನಿವಾಸಿಗಳಿಗೆ ತಲೆಗೆ ಹಚ್ಚಿಕೊಳ್ಳುವುದಕ್ಕಾಗಿ ವಾರಕ್ಕೊಮ್ಮೆ ಎರಡು ಔನ್ಸ್ ಅಥವಾ 57 ಗ್ರಾಂ ಕೊಬ್ಬರಿ ಎಣ್ಣೆಯನ್ನು ಮತ್ತು ಬಟ್ಟೆ ಒಗೆಯುವುದಕ್ಕಾಗಿ 2 ಔನ್ಸ್ ಅಥವಾ 57 ಗ್ರಾಂ ಸಾಬೂನನ್ನು ಕೊಡತಕ್ಕದ್ದು.
-
ನಿವಾಸಿಗಳಿಗೆ ವಾರಕ್ಕೊಮ್ಮೆ ಸ್ನಾನಕ್ಕಾಗಿ ಬಿಸಿ ನೀರನ್ನು ಒದಗಿಸಲು ಪ್ರತಿಯೊಬ್ಬ ನಿವಾಸಿಗೆ 908 ಗ್ರಾಂಗಳಷ್ಟು ಇಂಧನವನ್ನು ಕೊಡಬಹುದು.
- ಲೈಸೆನ್ಸಿನ ನಮೂನೆ.- 15ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ಬರಹದಲ್ಲಿನ ಲೈಸೆನ್ಸು ಅದರ ಷರತ್ತುಗಳೊಂದಿಗೆ ನಮೂನೆ V ರಲ್ಲಿರತಕ್ಕದ್ದು.
- ನಿರಸನ ಮತ್ತು ಉಳಿಸುವಿಕೆಗಳು.- 32ನೇ ಪ್ರಕರಣದ ಮೂಲಕ ನಿರಸಿತವಾದ ಯಾವುದೇ ಅಧಿನಿಯಮಿತಿಯ ಮೇರೆಗೆ ರಚಿಸಿದ ಹಿಂದೆ ಹೇಳಿದ ನಿಯಮಗಳಿಗೆ ಸಂವಾದಿಯಾದ ಎಲ್ಲಾ ನಿಯಮಗಳನ್ನು ಈ ಮೂಲಕ ನಿರಸನಗೊಳಿಸಿದೆ. ಪರಂತು, ಆ ನಿರಸನವು.-
(ಕ) ಹಾಗೆ ನಿರಸಿತವಾದ ನಿಯಮಗಳ ಪೂರ್ವಪ್ರವರ್ತನೆ ಅಥವಾ ಅದರ ಮೇರೆಗೆ ಕ್ರಮಬದ್ಧವಾಗಿ ಮಾಡಲಾದ ಅಥವಾ ಮಾಡಲು ಎಡೆಗೊಟ್ಟ ಯಾವುದೇ ಕಾರ್ಯ;
(ಖ) ಹಾಗೆ ನಿರಸಿತವಾದ ಯಾವುದೇ ನಿಯಮಗಳ ಮೇರೆಗೆ ಆರ್ಜಿಸಿದ, ಒದಗಿಬಂದ ಅಥವಾ ಗುರಿಯಾದ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾದ್ಯತೆ ಅಥವಾ ಹೊಣೆಗಾರಿಕೆ ; ಅಥವಾ
(ಗ) ಹಾಗೆ ನಿರಸಿತವಾದ ಯಾವುದೇ ನಿಯಮದ ವಿರುದ್ಧ ಮಾಡಿದ ಯಾವುವೇ ಅಪರಾಧಗಳಿಗೆ ಸಂಬಂಧಪಟ್ಟಂತೆ ಗುರಿಯಾದ ಯಾವುದೇ ದಂಡ, ಮುಟ್ಟುಗೋಲು ಅಥವಾ ದಂಡನೆ, ಅಥವಾ
(ಘ) ಹಿಂದೆ ಹೇಳಿದ ಯಾವುದೇ ಅಂಥ ಹಕ್ಕು, ವಿಶೇಷಾಧಿಕಾರಿ, ಬಾಧ್ಯತೆ, ಹೊಣೆಗಾರಿಕೆ, ದಂಡ, ಮುಟ್ಟುಗೋಲು ಅಥವಾ ದಂಡನೆಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಅಥವಾ ಕಾನೂನು ವ್ಯವಹರಣೆಗಳು ಅಥವಾ ಪರಿಹಾರೋಪಾಯ ಮತ್ತು ಅಂಥ ನಿಯಮಗಳನ್ನು ನಿರಸನಗೊಳಿಸದಿದ್ದರೆ ಹೇಗೋ ಹಾಗೆ ಯಾವುದೇ ಅಂಥ ತನಿಖೆ, ಕಾನೂನು ವ್ಯವಹರಣೆಗಳು ಅಥವಾ ಪರಿಹಾರೋಪಾಯವನ್ನು ಹೂಡಬಹುದು, ಮುಂದುವರೆಸಬಹುದು ಅಥವಾ ಜಾರಿಗೊಳಿಸಬಹುದು ಮತ್ತು ಯಾವುದೇ ಅಂಥ ದಂಡ ಮುಟ್ಟುಗೋಲು ಅಥವಾ ದಂಡನೆಯನ್ನು ವಿಧಿಸಬಹುದು:
ಮತ್ತೂ ಪರಂತೂ, ಹಿಂದಿನ ಪರಂತುಕಕ್ಕೆ ಒಳಪಟ್ಟು ಅಂಥ ಯಾವುದೇ ನಿಯಮದ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವನ್ನು (ಯಾವುದೇ ನೇಮಕಾತಿ ಅಥವಾ ಮಾಡಿದ ಪ್ರತ್ಯಾಯೋಜನೆ, ಹೊರಡಿಸಿದ ಅಧಿಸೂಚನೆ, ಆದೇಶ, ಅನುದೇಶಗಳನ್ನು ಅಥವಾ ನಿರ್ದೇಶನಗಳು ಪಡೆದುಕೊಂಡ ನಮೂನೆಗಳು, ಪ್ರಮಾಣಪತ್ರಗಳು, ಮಂಜೂರು ಮಾಡಿದ ಪರ್ಮಿಟ್ಟು ಅಥವಾ ಪಾಸು ಅಥವಾ ಲೈಸೆನ್ಸ್ ಅಥವಾ ಮಾಡಿದ ನೋಂದಣಿ ಇವುಗಳನ್ನು ಒಳಗೊಂಡು ಈ ನಿಯಮಗಳ ಸಂವಾದಿ ಉಪಬಂಧಗಳ ಮೇರೆಗೆ ಮಾಡಲಾದುದು ಅಥವಾ ಕೈಗೊಳ್ಳಲಾದುದು ಎಂದು ಭಾವಿಸತಕ್ಕದ್ದು ಮತ್ತು ಅವುಗಳನ್ನು ಸಂದರ್ಭಾನುಸಾರ ಅಧಿನಿಯಮ ಅಥವಾ ಈ ನಿಯಮಗಳ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಳ್ಳಲಾದ ಯಾವುದೇ ಕ್ರಮದ ಮೂಲಕ ರದ್ದುಗೊಳಿಸುವವರೆಗೆ ತದನುಸಾರವಾಗಿ ಜಾರಿಯಲ್ಲಿರುವುದು ಮುಂದುವರೆಯತಕ್ಕದ್ದು.
ನಮೂನೆ - I ಬೋಸ್ರ್ಟಲ್ ಶಾಲೆಯ ವೈಯಕ್ತಿಕ ದಾಖಲೆ ಮತ್ತು ತನಿಖಾ ನಮೂನೆ (7ನೇ ನಿಯಮವನ್ನು ನೋಡಿ) 1. ವೈಯಕ್ತಿಕ ವಿವರಗಳು
(ಕ) ಎರಡನೇ ಹೆಸರಿನೊಂದಿಗೆ ಹೆಸರು
(ಖ) ವಯಸ್ಸು, ಲಿಂಗ, ರಾಷ್ಟ್ರೀಯತೆ
(ಗ) ವಾಸಸ್ಥಳ
(ಘ) ನೋಂದಣಿ ಸಂಖ್ಯೆ 2. ಶಿಕ್ಷೆ
(ಕ) ಅಪರಾಧ
(ಖ) ತೀರ್ಪಿನ ದಿನಾಂಕ
(ಗ) ಬಂಧನದ ಅವಧಿ
(ಘ) ಬಂಧಿಸಿರುವ ನ್ಯಾಯಾಲಯದ ಹೆಸರು 3. ವಾರೆಂಟ್ನ ಪ್ರಕಾರ ವಯಸ್ಸು 4. ಹಿಂದಿನ ದಾಖಲೆ
(ಕ) ಹಿಂದಿನ ನಿರ್ಣೀತ ಅಪರಾಧ ಯಾವುದಾದರೂ ಇದ್ದರೆ ಅದರ ಸಂಖ್ಯೆ
(ಖ) ಹಿಂದಿನ ಸಾಂಸ್ಥಿಕ ಶುಶ್ರೂಷೆಯ ವಿವರಗಳು
(ಗ) ಯಾವ ಅವಧಿಯವರೆಗೆ ಪಡೆದದ್ದು
(ಘ) ಬಿಡುಗಡೆಯ ದಿನಾಂಕ 5. ಕುಟುಂಬದ ಸ್ಥಿತಿಗತಿಗಳು
(ಕ) ಪಾಲಕನ ಹೆಸರು ಮತ್ತು ವಿಳಾಸ
(ಖ) ಸ್ವಸ್ಥಳವನ್ನು ಬಿಡಲು ಕಾರಣ ಮತ್ತು ಅದರ ದಿನಾಂಕ
(ಗ) ವಿವಾಹಿತನಾಗಿದ್ದರೆ ಹೆಸರು, ವಯಸ್ಸು, ವಿಳಾಸದ ಗುರುತು, 6. ಹೌಸ್ ಮಾಸ್ಟರನ ವರದಿ (ಬೋಧಕ ಮತ್ತು ಶಿಕ್ಷಕನ ಸಮಾಲೋಚನೆಯೊಡನೆ)
(ಕ) ನಡತೆ ಮತ್ತು ವರ್ತನೆಯ ಯಾವುದೇ ವಿಶೇಷ ಲಕ್ಷಣ
(ಖ) ಶಾಲಾ ಮಟ್ಟದಲ್ಲಿ ಪಡೆದ ಪ್ರಾವೀಣ್ಯತೆ
(ಗ) ವೃತ್ತಿಯಲ್ಲಿನ ಪ್ರಾವೀಣ್ಯತೆ
(ಘ) ಆಟಗಳಲ್ಲಿನ ಪ್ರಾವೀಣ್ಯತೆ ದಿನಾಂಕ ರುಜು 7. ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯಾಧಿಕಾರಿಯ ವರದಿ ದಿನಾಂಕ ರುಜು 8. ಸಂದರ್ಶಕ ಸಮಿತಿಯ ಅಭಿಪ್ರಾಯ ರುಜು ದಿನಾಂಕ ರುಜು ನಮೂನೆ - II (29 (6)ನೇ ನಿಯಮವನ್ನು ನೋಡಿ) ಬಿಡುಗಡೆಯ ಸಂದರ್ಭದಲ್ಲಿ ಪ್ರಮಾಣ ಪತ್ರ ......................................................................................................... ನಿವಾಸಿ ಸಂಖ್ಯೆಯನ್ನು ಹೊಂದಿದ್ದ ...................... ............................ ಎಂಬ ಹೆಸರಿನವನನ್ನು ................................. ಶಿಕ್ಷಣ ಮಟ್ಟದ ತರುವಾಯ ....................................... .................... ರಂದು ಈ ಶಾಲೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ಪಡೆದ ದೈಹಿಕ ಅಥವಾ ಇತರ ತರಬೇತಿ ನಡತೆಯ ಬಗ್ಗೆ ಸೂಪರಿಂಟೆಂಡೆಂಟನ ಅಭಿಪ್ರಾಯ ಉದ್ಯೋಗಶೀಲತೆ ಮತ್ತು ಸಾಮಥ್ರ್ಯ .......................................................... ಬೋಸ್ರ್ಟಲ್ ಶಾಲೆ.
ಸೂಪರಿಂಟೆಂಡೆಂಟ್ ನಮೂನೆ - III (39ನೇ ನಿಯಮವನ್ನು ನೋಡಿ) ಬೋಸ್ರ್ಟಲ್ ಶಾಲೆಯಲ್ಲಿನ ಬಂಧನಾದೇಶದ ನಮೂನೆ ....................................................................................................... ನ್ಯಾಯಾಲಯದಲ್ಲಿ ......................................... ರ ಪ್ರಕರಣ ಸಂಖ್ಯೆ ..............................................
ಸೂಪರಿಂಟೆಂಡೆಂಟ್ ಬೋಸ್ರ್ಟಲ್ ಶಾಲೆ, ................................................ ಇವರಿಗೆ ...................................................... ರ ................................... ಪ್ರಕರಣ ಸಂಖ್ಯೆಯ ಅಪರಾಧಿಯಾದ ............................ ...................................... ಮಗ / ಮಗಳು / ಹೆಂಡತಿಯಾದ .......................................... ವರ್ಷ ವಯಸ್ಸಿನ ................. ................................... ಎಂಬುವವನು / ಳು ................................................ ರಂದು ................................................. ಮ್ಯಾಜಿಸ್ಟ್ರೇಟನಾದ ........................................................... ಅಪರಾಧದ ಬಗ್ಗೆ ಅಪರಾಧ ನಿರ್ಣೀತನಾಗಿರುವುದರಿಂದ ಮತ್ತು ಕ್ರಮಬದ್ಧ ವಾದವಿಚಾರಣೆಯ ತರುವಾಯ ಅವನನ್ನು / ಅವಳನ್ನು ಬೋಸ್ರ್ಟಲ್ ಶಾಲೆಗೆ ಕಳುಹಿಸುವುದು ವಿಹಿತವೆಂದು ನನಗೆ ಮನದಟ್ಟಾಗಿರುವುದರಿಂದ ಸದರಿ ................................................... ಅನ್ನು ಬೋಸ್ರ್ಟಲ್ ಶಾಲೆಯಲ್ಲಿ ಸೇರಿಸಿಕೊಳ್ಳಲು ಮತ್ತು ಅವನನ್ನು / ಅವಳನ್ನು ................................................. ವರ್ಷಗಳವರೆಗೆ ಅಥವಾ ಅವನು / ಅವಳು 23 ವರ್ಷಗಳ ವಯಸ್ಸನ್ನು ತಲುಪುವವರೆಗೆ ಅಲ್ಲಿಯೇ ಇರಿಸಿಕೊಳ್ಳಲು ಸದರಿ ಸೂಪರಿಂಟೆಂಡೆಂಟನಾದ ನಿಮ್ಮನ್ನು ಅಧಿಕೃತಗೊಳಿಸಲಾಗಿದೆ ಮತ್ತು ಅಗತ್ಯಪಡಿಸಲಾಗಿದೆ.
- ಅಪರಾಧಿಯ ಸ್ವಸ್ಥಳದಿಂದ ಅತಿ ಸಮೀಪದ ರೈಲ್ವೆ ಸ್ಟೇಷನ್ನಿಗೆ ಇರುವ ದೂರ ................................... ಕಿ.ಲೋ. ಮೀಟರುಗಳು.
- ಅಪರಾಧಿಯ ಮೈ ಮೇಲಿರುವ ಸ್ವತ್ತಿನ ವಿವರಗಳು :
- ಅಪರಾಧಿಯ ವರ್ಣನಾತ್ಮಕ ವಿವರಗಳು ಕ) ಹೆಸರು ಖ) ತಂದೆಯ / ಗಂಡನ ಹೆಸರು ಗ) ಲಿಂಗ, ವಿವಾಹಿತ ಅಥವಾ ಅವಿವಾಹಿತ ಘ) ಜನಾಂಗ, ಧರ್ಮ, ರಾಷ್ಟ್ರೀಯತೆ ಙ) ಹಿಂದಿನ ಉದ್ಯೋಗ, ಯಾವುದಾದರೂ ಇದ್ದರೆ ಚ) ವಯಸ್ಸು ಛ) ವರ್ಣನಾತ್ಮಕ ಗುರುತುಗಳು ............................................... ಇಂದು ನನ್ನ ರುಜು ಮತ್ತು ನ್ಯಾಯಾಲಯದ ಮೊಹರಿನೊಡನೆ ಕೊಡಲಾಗಿದೆ. ಮೊಹರು ಮ್ಯಾಜಿಸ್ಟ್ರೇಟ್/ ನ್ಯಾಯಾಧೀಶ
ನಮೂನೆ - IV
(45ನೇ ನಿಯಮವನ್ನು ನೋಡಿ) ಲೈಸೆನ್ಸಿನ ಮೇಲೆ ಬಿಡುಗಡೆ ಆದೇಶ ಬೆಂಗಳೂರಿನ ಬಂದೀಖಾನೆಗಳ ಇನ್ಸ್ಪೆಕ್ಟರ್ ಜನರಲ್ಲನಾದ ......................................................
ನಾನು ಈ ಲೈಸೆನ್ಸಿನ ಮೂಲಕ ....................................... ಪ್ರಕರಣದ ಮೇರೆಗೆ ................................................................................ ನ್ಯಾಯಾಲಯದ ಮೂಲಕ (ನ್ಯಾಯಾಲಯವನ್ನು ಸೂಚಿಸಿ) ಅಪರಾಧ ನಿರ್ಣೀತನಾದ ಬೋಸ್ರ್ಟಲ್ ಶಾಲೆಯಲ್ಲಿ ಬಂಧನದಲ್ಲಿಡಬೇಕೆಂದು ಆದೇಶಿಸಲಾಗಿದ್ದ ಮತ್ತು 20 ........... ರ............................. ತಿಂಗಳ .................................... ದಿವಸದಂದು .......................................... ಗಾಗಿ ಬೋಸ್ರ್ಟಲ್ ಶಾಲೆಯಲ್ಲಿ ಬಂಧನದಲ್ಲಿಡಬೇಕೆಂದು ಶಿಕ್ಷಗೆ ಗುರಿಯಾಗಿದ್ದ ಮತ್ತು ಹಿಂದೆ ಹೇಳಿದ ಬಂಧನದ ಅವಧಿಯ ಉಳಿದ ಭಾಗದ ಅವಧಿಯಲ್ಲಿ ............................................. ರಕ್ಷಣೆ, ಮೇಲ್ವಿಚಾರಣೆ ಮತ್ತು ಪ್ರಾಧಿಕಾರದಲ್ಲಿ ಇಡಲು ಈಗ ................................... ಬೋಸ್ರ್ಟಲ್ ಶಾಲೆಯಲ್ಲಿ ಬಂಧನದಲ್ಲಿಟ್ಟಿರುವ ................................... ಜಿಲ್ಲೆಯ .................................................... ತಾಲ್ಲೂಕಿನ ........................................................... ಗ್ರಾಮದ ನಿವಾಸಿ ಮತ್ತು ..................... ವರ್ಷ ............................ ತಿಂಗಳ ವಯಸ್ಸಿನ ............................. ರವರ ಮಗ / ಮಗಳು / ಹೆಂಡತಿಯಾದ .............................................................. ಅವರನ್ನು ಅನುಮತಿಸಿದ್ದೇನೆ.
ಈ ಲೈಸೆನ್ಸನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಕೊಡಲಾಗಿದೆ. ಇವುಗಳಲ್ಲಿ ಯಾವುದನ್ನಾದರೂ ಉಲ್ಲಂಘಿಸಿದರೆ ಇದನ್ನು ರದ್ದುಗೊಳಿಸಲಾಗುವುದು.
ಬಂದೀಖಾನೆಗಳ ಇನ್ಸ್ಪೆಕ್ಟರ್ ಜನರಲ್ ಬೆಂಗಳೂರು
ಷರತ್ತುಗಳು 1. ಲೈಸೆನ್ಸನ್ನು ಕೂಡಲೇ ರದ್ದುಗೊಳಿಸಿದ ಹೊರತು, ಬೋಸ್ರ್ಟಲ್ ಶಾಲೆಯಲ್ಲಿ ಅವನನ್ನು / ಅವಳನ್ನು ಯಾವ ಅವಧಿಯವರೆಗೆ ಬಂಧನದಲ್ಲಿಡಬೇಕೆಂದು ಆದೇಶಿಸಲಾಗಿದೆಯೋ ಆ ಅವಧಿಯು ಮುಕ್ತಾಯವಾಗುವವರೆಗೆ ಆ ಲೈಸೆನ್ಸುದಾರನು ........................................................... ಗೆ ಹೋಗತಕ್ಕದ್ದು ಮತ್ತು ..................................................... ನ (ಇಲ್ಲಿ ಪರಿವೀಕ್ಷಣಾಧಿಕಾರಿಯನ್ನು ನಮೂದಿಸಿ) ರಕ್ಷಣೆ, ಮೇಲ್ವಿಚಾರಣೆ ಮತ್ತು ಪ್ರಾಧಿಕಾರದಲ್ಲಿ ಇಡತಕ್ಕದ್ದು. 2. ಹಿಂದೆ ಹೇಳಿದ ಅವಧಿಯಲ್ಲಿ ಲೈಸೆನ್ಸುದಾರನು - (ಕ) ಸದರಿ ಪರಿವೀಕ್ಷಣಾಧಿಕಾರಿಯ ಅನುಮತಿಯನ್ನು ಪಡೆದ ಹೊರತು ಅವನ / ಅವಳ ವಿಳಾಸವನ್ನು ಬದಲಾಯಿಸತಕ್ಕದ್ದಲ್ಲ ;
(ಖ) ಉದ್ಯೋಗದ ಸ್ಥಳದಲ್ಲಿ ಅಥವಾ ಅನ್ಯಥಾ ಕಾಲನಿಷ್ಠೆಯುಳ್ಳ ಮತ್ತು ನಿಯತವಾಗಿ ಹಾಜರಾಗುವ ಬಗ್ಗೆ ಅವನು/ ಅವಳು ಸ್ವೀಕರಿಸಬಹುದಾದಂಥ ಸೂಚನೆಗಳನ್ನು ಅವನು / ಅವಳು ಪಾಲಿಸತಕ್ಕದ್ದು.
(ಗ) ಅವನು / ಅವಳು ಯಾವುದೇ ಕಾನೂನನ್ನು ಉಲ್ಲಂಘಿಸತಕ್ಕದ್ದಲ್ಲ ಮತ್ತು ಸದರಿ ಪರಿವೀಕ್ಷಣಾಧಿಕಾರಿಗೆ ಮನದಟ್ಟಾಗುವಂತೆ ಗಂಭೀರ ಮತ್ತು ಉದ್ಯೋಗಶೀಲ ಜೀವನವನ್ನು ನಡೆಸತಕ್ಕದ್ದು.
(ಘ) ಅವನು / ಅವಳು ಕೆಟ್ಟ ನಡತೆಯ ವ್ಯಕ್ತಿಗಳ ಸಹವಾಸ ಮಾಡತಕ್ಕದ್ದಲ್ಲ.
(ಙ) ಅವನು / ಅವಳು ಒಳ್ಳೆಯ ವರ್ತನೆಯವನಾ / ಳಾಗಿರತಕ್ಕದ್ದು.
ಈ ಮೇಲ್ಕಂಡ ಷರತ್ತುಗಳಿಗೆ ಬದ್ಧನಾಗಿರಲು ನಾನು ಈ ಮೂಲಕ ಒಪ್ಪಿಕೊಂಡಿದ್ದೇನೆ ಮತ್ತು ಅವುಗಳಲ್ಲಿ ಯಾವುದೇ ಷರತ್ತನ್ನು ಉಲ್ಲಂಘಿಸಿದರೆ : ಇನ್ಸ್ಪೆಕ್ಟರ್ ಜನರಲ್ಲನು ಅಧಿನಿಯಮದ ......................... ಪ್ರಕರಣದ ಮೇರೆಗೆ ಅವನ ಸ್ವಇಚ್ಛೆಯ ಮೇರೆಗೆ ಆಗಲಿ ಅಥವಾ ಸದರಿ ಪರಿವೀಕ್ಷಣಾಧಿಕಾರಿಯ ಕೋರಿಕೆಯ ಮೇರೆಗೆ ಆಗಲಿ ಲೈಸೆನ್ಸನ್ನು ರದ್ದುಗೊಳಿಸಬಹುದು ಮತ್ತು ಆ ಲೈಸೆನ್ಸನ್ನು ರದ್ದುಗೊಳಿಸಿದ ಮೇಲೆ ನನ್ನನ್ನು ಯಾವ ಅವಧಿಯವರೆಗೆ ಬಂಧನದಲ್ಲಿಡಲು ಆದೇಶಿಸಲಾಗಿತ್ತೋ ಆ ಅವಧಿಯು ಮುಕ್ತಾಯವಾಗುವವರೆಗೆ ........................................................ ಇಲ್ಲಿ ಇರುವ ಶಾಲೆಗೆ ಹಿಂದಿರುಗಿ ಕಳುಹಿಸಲ್ಪಡಲು ನಾನು ಬದ್ಧನಾಗಿದ್ದೇನೆ. ನನಗೆ ವಿವರಿಸಲಾದ ಈ ಮೇಲ್ಕಂಡ ಷರತ್ತುಗಳ ಬಗ್ಗೆ ನನಗೆ ಮಾಹಿತಿ ಇದೆ ಎಂದು ನಾನು ಈ ಮೂಲಕ ತಿಳಿಸುತ್ತೇನೆ.
ನಿವಾಸಿಯ ರುಜು ಈ ಮೇಲ್ಕಂಡ ಷರತ್ತುಗಳನ್ನು ನಿವಾಸಿಗೆ ವಿವರಿಸಲಾಗಿದೆ ಮತ್ತು ಅವನು ಅದನ್ನು ನನ್ನ ಸಮಕ್ಷಮದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪ್ರಮಾಣೀಕರಿಸಲಾಗಿದೆ.
ಸಾಕ್ಷಿ 1.
ಸೂಪರಿಂಟೆಂಡೆಂಟನ ರುಜು ಲೈಸೆನ್ಸಿನ ಮೇಲೆ ಬಿಡುಗಡೆಗಾಗಿ ಮೇಲೆ ಆದೇಶಿಸಲಾದ ಹೆಸರಿನ ನಿವಾಸಿಯನ್ನು .................................... ರಂದು ಬಿಡುಗಡೆ ಮಾಡಲಾಗಿದೆ ಎಂದು ಪ್ರಮಾಣೀಕರಿಸಲಾಗಿದೆ.
ಸೂಪರಿಂಟೆಂಡೆಂಟ್ ನಮೂನೆ - V
(70ನೇ ನಿಯಮವನ್ನು ನೋಡಿ) ಇನ್ಸ್ಪೆಕ್ಟರ್ ಜನರಲ್ಲನಿಗೆ ವಿವರಗಳನ್ನು ಒದಗಿಸಬೇಕಾಗಿರುವ ............................................. ಬೋಸ್ರ್ಟಲ್ ಶಾಲೆಯಲ್ಲಿ ಬಂಧನದಲ್ಲಿಡಲಾದ ನಿವಾಸಿಗಳ ಹೆಸರಿನ ಪಟ್ಟಿ.
| ಶಿಕ್ಷೆಯ | ||||||
| .................. | ||||||
| ಯಾರ | ದಿನಾಂಕ | |||||
| ನೋಂದಣಿ | ರ್ಗಾವಣೆ | ರಿಂದ | ||||
| ಸಂಖ್ಯೆ | ಹೆಸರು | ವ | ವಾಸಸ್ಥಳ | ಪಾಲಕತ್ವ | ಮತ್ತು | |
| ದಿನಾಂಕ | ಸೇರಿಸಿಕೊಳ್ಳ | |||||
| ದಲ್ಲಿ ವಾಸ | ಬಂಧನದ | |||||
| ಲಾಗಿದೆ | ||||||
| ಅವಧಿ | ||||||
| 1 | 2 | 3 | 4 | 5 | 6 | 7 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಕೆ. ಶ್ರೀನಿವಾಸ್ ಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಗೃಹ ಇಲಾಖೆ.