(1) ಈ ನಿಯಮಗಳನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವಿಯಮಗಳು, 2024 ಎಂದು ಕರೆಯತಕ್ಕದ್ದು
(2) ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು
The Kaginele Development Authority Rules, 2024., Revenue Department
2024 · PDF page 1
Hover any section to copy its link or text, ask Copilot about it, or bookmark it.
ಪ್ರಾಧಿಕಾರದ ಪರವಾಗಿ ಅಥವಾ ಪ್ರಾಧಿಕಾರದ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವುದು ಅಥವಾ ಸಾಮಗ್ರಿಗಳನ್ನು ಸರಕುಗಳನ್ನು ಸರಬರಾಜು ಮಾಡುವ ಅಥವಾ ಸೇವೆಯನ್ನು ಸಲ್ಲಿಸುವ ಸಲುವಾಗಿ ಸರ್ಕಾರವು ಕಾಲ-ಕಾಲಕ್ಕೆ ರಚಿಸಿದ ಯಾವುದೇ ನಿಯಮಗಳು ಅಥವಾ ನಮೂನೆಗಳು ಇದ್ದರೆ, ಸಾಧ್ಯವಾದಷ್ಟು ಮಟ್ಟೆಗೆ ಮತ್ತು ಅಧಿನಿಯಮ ಮತ್ತು ಈ ವಿಯಮಗಳ ಉಪಬಂಧಗಳಿಗೆ ಅಸಂ೦ಗತವಾಗದಿರುವಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಸತಕ್ಕದ್ದು ಮತ್ತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಆಯುಕ್ತರು ಅದನ್ನು ಸಭೆಯ ಮುಂದೆ ಮಂಡಿಸತಕ್ಕದ್ದು, ಪ್ರಾಧಿಕಾರದ ಆಯುಕ್ತರ ಅಂತಹ ನಡವಳಿಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಅಥವಾ ರದ್ದುಪಡಿಸಲು ಪ್ರಾಧಿಕಾರವು ತೀರ್ಮಾನಿಸಿದ ದಿನಾಂಕದಿಂದ ನಡವಳಿಗಳು ಹಾಗೆ ಮಾರ್ಪಾಡಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದುಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ.
(1) ಪ್ರಾಧಿಕಾರದ ಆಯುಕ್ತರು ಮತ್ತುಇತರ ನೌಕರರ ಅರ್ಹತೆಗಳು, ನೇಮಕ ವಿಧಾನ ಮತ್ತು ಸೇವಾ ಷರತ್ತುಗಳು ಕರ್ನಾಟಕ ಸರ್ಕಾರಿ ನೌಕರರಿಗೆ ಸಮಾನವಾಗಿರತಕ್ಕದ್ದು.
(2 ಪ್ರಾಧಿಕಾರ ಸೃಜಿಸುವ ಪ್ರತಿಯೊಂದು ಹುದ್ದೆಯು, ಸರ್ಕಾರದ ಅಧೀನದಲ್ಲಿರುವ ಹುದ್ದೆಗೆ ಸಮಾನವಾಗಿರತಕ್ಕದ್ದು, ಪ್ರಾಧಿಕಾರವು ಪ್ರತಿಯೊಂದು ಹುದ್ದೆಯನ್ನು ಸರ್ಕಾರದ ಅನುಮೋದನೆ ಪಡೆದು ಸೃಜಿಸತಕ್ಕದ್ದು.
(3) ಪ್ರಾಧಿಕಾರದ ಪ್ರತಿಯೊಂದು ಹುದ್ದೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಸರ್ಕಾರ ಅಥವಾ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದವರ ನೌಕರರನ್ನುಅಥವಾ ಭಾರತದ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿನಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು (4)ಪ್ರಾಧಿಕಾರದ ನೌಕರರಿಗೆ ಅನ್ವಯವಾಗುವ ವೇತನ ಶ್ರೇಣಿಗಳು, ಕರ್ನಾಟಕ ಸರ್ಕಾರದಲ್ಲಿರುವ ಸಮಾನ ಹುದ್ದೆಗಳಿಗೆ ಅನ್ವಯವಾಗುವ ವೇತನ ಶ್ರೇಣಿಗಳಾಗಿರತಕ್ಕದ್ದು
(5) ಪ್ರಾಧಿಕಾರದ ನೌಕರರು, ಈ ನಿಯಮಗಳಿಗೆ ಅಸಂಗತವಾಗಿರದಷ್ಟರ ಮಟ್ಟೆಗೆ ಕರ್ನಾಟಕ ಸಿವಿಲ್ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು,
(6) ಪ್ರಾಧಿಕಾರದ ನೌಕರರು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, 2021ರ ಮತ್ತು ಪ್ರಾಧಿಕಾರವು ಕಾಲ-ಕಾಲಕ್ಕೆ ಅಧಿಸೂಚಸಬಹುದಾದಂತಹ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕ ಇತರ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು.
(1) 16 ನೇ ಪ್ರಕರಣದ 1ನೇ ಉಪ ಪ್ರಕರಣದ ಮೇರೆಗೆ ಸುತ್ತೋಲೆ ಮೂಲಕ ಕಳುಹಿಸಬೇಕಾಗಿರುವ ಪ್ರಾಧಿಕಾರದ ಟಿಪ್ಪಣಿಯಲ್ಲಿ ವಿಷಯದ ವಾಸ್ತವಾಂಶಗಳನ್ನುತೀರ್ಮಾನದ ಅಂಶಗಳನ್ನು ಯಾವುದೇ ಪಕ್ಷಕಾರರೊಡನೆ ಸಮಾಲೋಚಿಸಿದ್ದರೆ ಪಕ್ಷಕಾರರ ಅಭಿಪ್ರಾಯಗಳನ್ನು ಮತ್ತು ಆಯುಕ್ತರ ಅಂತಿಮ ಶಿಫಾರಸ್ಸುಗಳನ್ನು ತಿಳಿಯಪಡಿಸತಕ್ಕದ್ದು
(2) ಪ್ರಾಧಿಕಾರದ ಇಂತಹ ಪ್ರತಿಯೊಂದು ಟಿಪ್ಪಣಿಗೂ ಆಯುಕ್ತರು ಸಹಿ ಮಾಡತಕ್ಕದ್ದು.
(1) ಪ್ರಾಧಿಕಾರದ ಯಾವುದೇ ಸ್ಮಿರಾಸ್ತಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚರಾಸ್ಥಿಗಳನ್ನು ಸರ್ಕಾರದ ಪೂರ್ವನುಮತಿ ಇಲ್ಲದೆ ಪರಭಾರೆ ಮಾಡತಕ್ಕದ್ದಲ್ಲ.
(2) ನಿರುಪಯುಕ್ತ ವಸ್ತುಗಳನ್ನು ಕರ್ನಾಟಕ ಸರ್ಕಾರದ ಆರ್ಥಿಕ ಸಂಹಿತೆ ನಿಯಮಗಳ ಅನುಸಾರ ಪ್ರಾಧಿಕಾರದ ಪೂರ್ವಾನುಮತಿಯೊಂ೦ದಿಗೆ ಮಾಡತಕ್ಕದ್ದು.