(1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ) (ತಿದ್ದುಪಡಿ) ನಿಯಮಗಳು, 2021 ಎಂದು ಕರೆಯತಕ್ಕದ್ದು.
i. ಸದರಿ ನಿಯಮಗಳ ಉಪ ನಿಯಮ 3(1) ಉಪಬಂಧದಲ್ಲಿ ಮುಂದಿನ ವಾಕ್ಯವನ್ನು ಸೇರಿಸುವುದು. 'ನೋಟೀಸ್ ನಲ್ಲಿ ಸಹಿ ಮಾಡಿರುವ ಎಲ್ಲಾ ಸದಸ್ಯರುಗಳ ಸಹಿಗಳನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದೃಢೀಕರಿಸಬೇಕು'.
ii. ಸದರಿ ನಿಯಮಗಳ ಉಪ ನಿಯಮ 3(2)ರಲ್ಲಿ ಹದಿನೈದು ದಿನಗಳಿಗೆ ಮೀರದಂತೆ ಎಂದಿರುವುದನ್ನು “ಮೂವತ್ತು ದಿನಗಳಿಗೆ ಮೀರದಂತೆ” ಎಂದು ಓದಿಕೊಳ್ಳತಕ್ಕದ್ದು.
iii. ಉಪ ನಿಯಮ 11ರ ಉಪಬಂಧದ ಪ್ರಾರಂಭದಲ್ಲಿ ಈ ಕೆಳಗಿನ ವಾಕ್ಯವನ್ನು ಸೇರಿಸುವುದು–“ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರುಗಳ ಹುದ್ದೆಯು ತೆರವಾಗಿರುವ ಬಗ್ಗೆ ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ) ನಿಯಮಗಳು 1994ರ ಉಪ ನಿಯಮ 5ರ ಪ್ರಕಾರ ಕ್ರಮ ವಹಿಸತಕ್ಕದ್ದು”.