ಸದರಿ ನಿಯಮಗಳ 10ನೇ ನಿಯಮದಲ್ಲಿ,-
(1) ಉಪ-ನಿಯಮ5)ಕ್ಕೆ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-
“RAJ ಕರ್ನಾಟಕ ರಾಜ್ಯಪತ್ರ, ಗುರುವಾರ, 29, ಅಕ್ಟೋಬರ್, 2020 3409 “ (5) (ಎ) ಉಪನಿಯಮ 163ಕ್ಕೆ ಒಳಪಟ್ಟು ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ 1988 (1988ರ ಕೇಂದ್ರ ಅಧಿನಿಯಮ ಸಂಖ್ಯೆ: 49) ಅಥವಾ ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 (1985ರ ಕರ್ನಾಟಿಕ ಅಧಿನಿಯಮ 4) ರ ಉಪಬಂಧಗಳ ಮೇರೆಗೆ ಸರ್ಕಾರಿ ನೌಕರರ ವಿರುದ್ಧ ಪ್ರಕರಣಗಳನ್ನು ತನಿಖೆ ಮಾಡುವುದಕ್ಕೆ ಅಧಿಕೃತಗೊಂಡ ಸಂಸ್ಥೆಯಲ್ಲಿನ ಸಕ್ಷಮ ಪ್ರಾಧಿಕಾರವು ತನಿಖೆ ಮಾಡುವಾಗ ಒಬ್ಬ ಸರ್ಕಾರಿ ನೌಕರನ ವಿರುದ್ದ ಮೇಲ್ಕೋಟದ ಸಾಕ್ಷ್ಯವಿದೆ ಎಂದು ಕಂಡುಬಂದಲ್ಲಿ ಹಾಗೂ ಆತನನ್ನು ಅಮಾನತ್ತಿನಲ್ಲಿ ಇಡಬಹುದು ಎಂದು ಶಿಫಾರಸ್ಸು ಮಾಡಿದ್ದಲ್ಲಿ ಅಂತಹ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡಲು ಸಕ್ಷಮವಾದ ಪಾಧಿಕಾರವು ಅಂತಹ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಬಹುದು.”
(ಬಿ) ,. ಅಮಾನತ್ತುಗೊಂಡ ಆರು ತಿಂಗಳ ಅವಧಿಯೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದಿದ್ದಲ್ಲಿ. ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತ್ತನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರವು. ತೀರ್ಮಾನಿಸತಕ್ಕದ್ದು ಹಾಗೂ ಈ ಅವಧಿಯೊಳಗೆ ತೀರ್ಮಾನಿಸಿ ಮುಂದುವರೆಸಲು ಆದೇಶಿಸದಿದ್ದಲ್ಲಿ ಅಮಾನತ್ತು ಭಾವಿತ (Deemed) ಆಧಾರದ ಮೇಲೆ ಅಂದರೆ ಅಮಾನತ್ತಿನ ದಿನಾಂಕದಿಂದ ಆರು ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುವುದು. ಈ ರೀತಿ ಅಮಾನತ್ತು ಆದೇಶವು ರದ್ದುಗೊಂಡ ನಂತರ, ನೇಮಕಾತಿ ಪ್ರಾಧಿಕಾರದಿಂದ ಸ್ಥಳನಿಯುಕ್ತಿ ಆದೇಶವನ್ನು ತಕ್ಷಣವೇ ಕೋರುವುದು ಸರ್ಕಾರಿ ನೌಕರನ ಕರ್ತವ್ಯವಾಗಿರುತ್ತದೆ ಹಾಗೂ ಅವನು ಆ ರೀತಿ ಕೋರಲು ವಿಫಲನಾದಲ್ಲಿ ಆತನ ಅಮಾನತ್ತಿನ ಆದೇಶವು ರದ್ದಾದ ದಿನಾಂಕದಿಂದ ಆತನು ಅನಧಿಕೃತವಾಗಿ ಗೈರುಹಾಜರಾಗಿರುವನೆಂದು ಭಾವಿಸತಕ್ಕದ್ದು;
BOOS), ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡಲು ಸಕ್ಷಮವಾದ ಪಾಧಿಕಾರವು ಸದರಿ ಅವಧಿಯೊಳಗೆ HOT (ಎ) ರಲ್ಲಿ ಉಲ್ಲೇಖಿಸಿರುವ ಪಾಧಿಕಾರದೊಂದಿಗೆ ಸಮಾಲೋಚಿಸಿದ ನಂತರವೇ ಮತ್ತು ಅಂತಹ ಪ್ರಾಧಿಕಾರವು ಸದರಿ ಅವಧಿಯೊಳಗಾಗಿ ವಿಸ್ತರಿಸಲು ಶಿಫಾರಸ್ಸನ್ನು ಮಾಡಿದಾಗ ಮಾತ್ರ ಈ ಖಂಡದ ಮೇರೆಗೆ ನಿರ್ದಿಷ್ಟಪಡಿಸಿರುವ ಅಮಾನತ್ತಿನ ಅವಧಿಯನ್ನು ಮೀರಿ ವಿಸ್ತರಿಸಬಹುದು. ಇಲ್ಲವಾದಲ್ಲಿ ಈ ಖಂಡದ ಮೇರೆಗೆ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡುವ ಆದೇಶವು ಸ್ವಯಂಚಾಲಿತವಾಗಿ ರದ್ದಾಗುವುದು.
(ii) ಉಪ ನಿಯಮ (6ನ್ನು ಕೈಬಿಡತಕ್ಕದ್ದು.