(0) ವಿಶ್ವವಿದ್ಯಾಲಯವು, ಹಾಲಿ ಇರುವ ಕೋರ್ಸುಗಳನ್ನು ಅದರ ಸಾಮರ್ಥ್ಯಕ್ಕನುಸಾರವಾಗಿ ಅಥವಾ ಹಣಕಾಸಿನ ಕಾರ್ಯಸಾಧ್ಯತೆ ಅಥವಾ ದಾಖಲಾತಿಯ ಕೊರತೆಯಿಂದಾಗಿ. ಮುಚ್ಚಲು ಉದ್ದೆಶಿಸಿದಲ್ಲಿ. ಅದಕ್ಕೆ ಕಾರಣಗಳನ್ನು ತಿಳಿಸಿ ಉದ್ದೇಶಿತ ಕೋರ್ಸುಗಳನ್ನು ಮುಚ್ಚುವುದಕ್ಕೆ ಮೊದಲು ೩ ತಿಂಗಳುಗಳಿಗೆ ಕಡಿಮೆಯಿಲ್ಲದಂತೆ ರಾಜ್ಯ ಸರ್ಕಾರಕ್ಕೆ ಲಿಖಿತದಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(೨) ರಾಜ್ಯ ಸರ್ಕಾರವು, ಅದನ್ನು ಪರಿಗಣಿಸಿದ ಮೇಲೆ, ಮುಚ್ಚುವ ಅನುಮತಿಯನ್ನು ನೀಡಿ ಅಥವಾ ಮುಚ್ಚುವುದನ್ನು ತಿರಸ್ಕರಿಸಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನಗಳನ್ನು ನೀಡತಕ್ಕದ್ದು.
(2) ವಿಶ್ವವಿದ್ಯಾಲಯವು, BAG ಶೈಕ್ಷಣಿಕ ವರ್ಷದ ಅವಧಿಯಲ್ಲಿ ಮತ್ತು ಸದರಿ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿರುವ ಕೊನೆಯ ಬ್ಯಾಚ್ನ ವಿದ್ಯಾರ್ಥಿಗಳು ತಮ್ಮ ಕೋರ್ಸನ್ನು ಪೂರ್ಣಗೊಳಿಸುವವರೆಗೂ ಮತ್ತು ಅಧ್ಯಯನ ಕೋರ್ಸುಗಳಿಗೆ ಅಥವಾ ಅದಕ್ಕೂ ಖಮಿಗಿಲಾದವುಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ನಡೆಸುವ ವಾರ್ಷಿಕ ಪರೀಕ್ಷೆಗಳು ಮುಗಿಯುವವರೆಗೂ ಸದರಿ ಕೋರ್ಸುಗಳನ್ನು ಮುಕ್ತಾಯ ಮಾಡತಕ್ಕದ್ದಲ್ಲ.