೪ನೇ ನಿಯಮದ ಉಪಬಂಧಗಳು ವಿಶ್ವವಿದ್ಯಾಲಯದಲ್ಲಿ. ಕೋರ್ಸುಗಳನ್ನು ಹೆಚ್ಚಿಸುವುದಕ್ಕೆ. ಅಥವಾ ಕಡಿತಗೊಳಿಸುವುದಕ್ಕೆ. ಸಂಬಂಧಿಸಿದಂಂತೆಯೂ ಸಕ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು. 2. ಪರಿಶೀಲನೆ ಮಾಡಲು ಮತ್ತು ನಿರ್ದೇಶನಗಳನ್ನು ನೀಡಲು ರಾಜ್ಯ ಸರ್ಕಾರದ ಅಧಿಕಾರಗಳು - (೧) ವಿಶ್ವವಿದ್ಯಾಲಯಕ್ಕೆ. ಸಂಬಂಧಿಸಿದಂತೆ. ಬೋಧನೆಯ ಗುಣಮಟ್ಟ, ಪರೀಕ್ಷೆ. ಮತ್ತು ಸಂಶೋಧನೆ. ಅಥವಾ ಯಾವುದೇ ವಿಷಯಗಳನ್ನು ನಿರ್ದಿಷ್ಟಪಡಿಸುವ ಉದ್ದೇಶಕ್ಕಾ?, ಸರ್ಕಾರವು, ಉಪ-ಕುಲಪತಿಗಳೊೂಂದಿಗೆ ಸಮಾಲೋಚಿಸಿದ ನಂತರ a ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಸರ್ಕಾರದಿಂದ ರಚಿತವಾದ ತಜ್ಞ ಸಮಿತಿಯ ಮೂಲಕ ಮೌಲ್ಯನವಿರ್ಣಯ ಮಾಡತಕ್ಕದ್ದು. ಸದರಿ ಸಮಿತಿಯಲ್ಲಿ ಒಬ್ಬರು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಯಾಗಿರತಕ್ಕದ್ದು. ೨) ತಜ್ಞ ಸಮಿತಿಯಿಂದ ವರದಿಯನ್ನು ಸ್ಟೀಕರಿಸಿದ ತರುವಾಯ, ಸರ್ಕಾರವು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೌಲ್ಯನವಿರ್ಧರಣೆಗೆ ಸಂಬಂಧಿಸಿದ ಫಲಿತಾಂಶದ ಬಗ್ಗೆ ಅದರ ಶಿಫಾರಸ್ಸುಗಳನ್ನು ತಿಳಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯವು, ಶಿಫಾರಸ್ಸುಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಗತ್ಯವಾದಂತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ವಿಶ್ವವಿದ್ಯಾಲಯವು ಯುಕ್ತ ಕಾಲದೊಳಗೆ (2ನೇ ಉಪ-ಪರಕರಣದ ಮೇರೆಗೆ ಮಾಡಿದ ಶಿಫಾರಸ್ಸುಗಳನ್ನು ಪಾಲಿಸಲು ವಿಫಲವಾದರೆ, ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂತಹ ವಿರ್ದೇಶನಗಳನ್ನು ನೀಡಬಹುದು. ವಿಶ್ವವಿದ್ಯಾಲಯವು ಅದಕ್ಕೆ ಬದ್ಧವಾಗಿರತಕ್ಕದ್ದು.
Loading…