(1) ತಾಲ್ಲೂಕು ಪಂಚಾಯತಿಯ ಚುನಾಯಿತ ಒಟ್ಟು ಸದಸ್ಯರ ಪೈಕಿ ಅರ್ಧದಷ್ಟು ಕಡಿಮೆಯಿಲ್ಲದಷ್ಟು ಸದಸ್ಯರು ಸಹಿ ಮಾಡಿರುವ ನೋಟೇಸನ್ನು ಪ್ರಕರಣ 140ರ ಉಪಪ್ರಕರಣ (3)ರ ಪರಂತುಕದಡಿಯಲ್ಲಿ ಮಂಡಿ ವ ಉದ್ದೇಶದ ನೋಟೀಸನ್ನು ಬರಹದಲ್ಲಿ ನಮೂನೆ-1ರಲ್ಲಿ ಉದ್ದೇಶಿತ ಸೂಚನೆಯ ಒಂದು ಪ್ರತಿಯೊಂದಿಗೆ ಆ ನೋಟೇಸಿಗೆ ಸಹಿ ಹಾಕಿರುವ ಯಾರಾದರೂ ಇಬ್ಬರು ಸದಸ್ಯರು ಸಂಂಬಂಧಪಟ್ಟಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಸಲ್ಲಿಸತಕ್ಕದ್ದು.
(2) ಆ ತರುವಾಯ ಜಿಲ್ಲಾಧಿಕಾರಿ, (1) ನೇ ಉಪ-ನಿಯಮದಡಿಯಲ್ಲಿ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳಿಗೆ ಮೀರದಂತೆ ಅವನು ವಿರ್ಧರಿಸಿದ ದಿನಾಂಕದಂದು ತಾಲ್ಲೂಕು ಪಂಚಾಯತಿಯ ಕಚೇರಿಯಲ್ಲಿ ಅವಿಶ್ವಾಸ ಸೂಚನೆಯ ಪರ್ಯಾಲೋಚನೆಗಾಗಿ ಸಭೆಯನ್ನು ಕರೆಯತಕ್ಕದ್ದು. ಅವನು ಅಂತಹ ಸಭೆಯ ಬಗ್ಗೆ ಉಪ- ನಿಯಮ (3) ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂಕದ ನೋಟೀಸನ್ನು ನಮೂನೆ-2ರಲ್ಲಿ ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಕೊಡತಕ್ಕದ್ದು;
ಪರಂತು, ಅಂತಹ ಸಭೆ ನಡೆಸುವುದನ್ನು ಒಂದು ವೇಳೆ ನ್ಯಾಯಾಲಯದ ಆದೇಶದ ಮೂಲಕ ತಡಿಹಿಡಿದಲ್ಲಿ ಅದನ್ನು ಮುಂದೆ ಹಾಕತಕ್ಕದ್ದು ಮತ್ತು ಸದರಿ ಅಧಿಕಾರಿಯೂ ತಡೆಯಾಜ್ಞೆಯನ್ನು ತೆರವು ಮಾಡಿದ ಬಗ್ಗೆ ಅವನು ಮಾಹಿತಿಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ಮೀರಿದ ದಿನಾಂಕದಂದು ಮುಂದಕ್ಕೆ ಹಾಕಲಾದ ಅಂತಹ ಸಭೆಯ ಬಗ್ಗೆ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂದ ನೋಟೀಸನ್ನು ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಉಪ ವಿಯಮ (13ರಲ್ಲಿ ತಿಳಿಸಿರುವ ಕ್ರಮದಲ್ಲಿ ಕೊಟ್ಟಿ ತರುವಾಯ ಮುಂದೆ ಹಾಕಿದ ಆ ಸಭೆಯನ್ನು ನಡೆಸತಕ್ಕದ್ದು.
ಮತ್ತು ಪರಂತು, ಮೇಲೆ ತಿಳಿಸಿದ ರೀತಿಯಲ್ಲಿ ನಿಗಧಿಗೊಳಿಸಿದ ದಿನಾಂಕದಂದು ಅನಿರೀಕ್ಷಿತ ಕಾರಣಗಳಿಂದಾಗಿ ಸಾರ್ವಜನಿಕ ರಜೆ ಘೋಷಿಸದ್ದರೆ, ನಿಗಧಿಗೊಳಿಸಿದ ದಿನಾಂಕದ ಮಾರನೆಯ ಕರ್ತವ್ಯ ದಿನಾಂಂಕದಂದು ಸಭೆಯನ್ನು ಏರ್ಪಡಿಸುವುದು.
(3) ನಮೂನೆ-॥ ರಲ್ಲಿ ನೋಟೀಸನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷನು ಸೇರಿದಂತೆ ಪ್ರತಿಯೊಬ್ಬ ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯನಿಗೆ ಈ ಕೆಳಕಂಡ ವಿಧಾನವನ್ನು ಅನುಸರಿಸಿ ನೀಡತಕ್ಕದ್ದು. ಅಂದರೆ,-
(i) ಸದರಿ ನೋಟೀಸನ್ನು, ಅಂತಹ ಸದಸ್ಯವಿಗೆ ನೇರವಾಗಿ ಕೊಡುವುದರ ಮೂಲಕ; ಅಥವಾ
(ii) ಅಂತಹ ಸದಸ್ಯನು ಸಿಗದಿದ್ದರೆ ಅಂತಹ ನೋಟೀಸನ್ನು ತಾಲ್ಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿ ಅವನು ವಾಸಿಸುತ್ತಿದ್ದಾನೆಂದು ತಿಳಿದು ಬಂದ ಕೊನೆಯ ವಾಸಸ್ಮಳ ಅಥವಾ ವ್ಯವಹಾರದ ಸ್ಥಳದಲ್ಲಿ ಇರುವ ಅವನ ಕುಟುಂಬದ ಯಾರಾದರೊಬ್ಬ ವಯಸ್ಕ ಸದಸ್ಯರಿಗೆ ಅಥವಾ ನೌಕರನಿಗೆ ಕೊಡುವುದರ ಮೂಲಕ ಅಥವಾ ಕೊಡ ಮಾಡುವುದರ ಮೂಲಕ; ಅಥವಾ
(iii) ನೊಂದಾಯಿತ ಅಂಚೆಯ ಮೂಲ ೯; ಅಥವಾ ಇ-ಮೇಲ್
(iv) ಮೇಲೆ ಹೇಳಿದ ಯಾವುದೇ ವಿಧಾನವು ಲಭ್ಯವಾಗದಿದ್ದಲ್ಲಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗೆ ಆ ಸದಸ್ಯನು ಹಿಂದೆ ವಾಸವಾಗಿದ್ದನೆಂದು ಅಥವಾ ವ್ಯವಹಾರವನ್ನು ನಡೆಸುತ್ತಿದ್ದನೆಂದು ತಿಳಿದು ಬಂದ ಮನೆ ಅಥವಾ ವ್ಯವಹಾರ ಸ್ಮಳ ಯಾವುದಾದರೂ ಇದ್ದರೆ ಆ ಮನೆಯ ಇಎದ್ದುಕಾಣುವ ಭಾಗದಲ್ಲಿ ಅಂತಕ ನೋಟೀಸನ್ನು ಅಂಟಿಸುವ ಮೂಲಕ ಕೊಡತಕ್ಕದ್ದು.
(4) ಜಿಲ್ಲಾಧಿಕಾರಿ ಅಂತಹ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು, ಅಂತಹ ಸಭೆಗೆ ಕೋರಂ, ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯ ಅರ್ಥದಷ್ಟುಇರತಕ್ಕದ್ದು.
ವಿವರಣೆ.- ಈ ಉಪ-ನಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಅರ್ಧದಷ್ಟು ನಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಶವನ್ನು ಒಂದು ಎಂದು ಅರ್ಥೈಸತಕ್ಕದ್ದು.
(5) ಅಧಿನಿಯಮದಲ್ಲಿ ಅಥವಾ ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತು. ಪಡಿಸಿ. ಉಪ-ನಿಯಮ (2ರಡಿಯಲ್ಲಿ ಆವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸುವ ಉದ್ದೇಶಕ್ಕಾಗಿ. ಕರೆಯಲಾದ ಸಭೆಯನ್ನು ನಿಯಮ3(2) ಪರಂತುಕಗಳನ್ನಯ ಹೊರತುಪಡಿಸಿ ಯಾವುದೇ ಕಾರಣಕ್ಕಾಗಿ ಮುಂದಕ್ಕೆ ಹಾಕತಕ್ಕದ್ದಲ್ಲ.
(6) ಸಭೆಗಾಗಿ ಗೊತ್ತುಪಡಿಸಲಾದ ಕಾಲ ಮುಗಿದ ತರುವಾಯ ಅರ್ಥ ಘಫಂಟೆಯೊಳಗೆ ಕೋರಂ ಇಲ್ಲದಿದ್ದರೆ ಆ ಸಭೆಯನ್ನು ಮುಂದೂಡುವುದು.
(7 ಏಳು ದಿನಕ್ಕೆ ಮೀರದ ಒಂದು ದಿನಾಂಕಕ್ಕೆ (ರಜಾ ದಿನ ಹೊರತುಪಡಿಸಿ) ಸಭೆಯನ್ನು ನಿಗಧಿಗೊಳಿಸತಕ್ಕದ್ದು. ಇದು ಸಭಾ ನಡವಳಿಯ ಭಾಗವಾಗತಕ್ಕದ್ದು.
(8) ಮುಂದೂಡಿದ ABR ಪ್ರತ್ಯೇಕ DorSserrds, ಸಿದ್ದಪಡಿಸಿ ಕಳುಹಿಸುವ ಅಗತ್ಯವಿರುವುದಿಲ್ಲ. ಸಭಾ ನಡವಳಿಯನ್ನು ತಾಲ್ಲೂಕು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸತಕ್ಕದ್ದು. ಸಭಾ ನಡವಳಿಯೇ ಸಭಾ ಸೂಚನೆಯೆಂದು ಭಾವಿಸತಕ್ಕದ್ದು.
(9) ಒಂದು ವೇಳೆ ಮುಂದೂಡಲ್ಪಟ್ಟ ಸಭೆಯ ಕೋರಂ ಅಭಾವದಿಂದ ನಡೆಯದಿದ್ದರೆ, ಅಧಿನಿಯಮದ ಪ್ರಕರಣ 140) ರ ಎರಡನೇ ಪರಂತುಕದಡಿ ತಾಲ್ಲೂಕು ಪಂಚಾಯಿತಿಯು ಅವಿಶ್ವಾಸ ವಿರ್ಣಯವನ್ನು ಅಂಗೀಕರಿಸಿರುವುದಿಲ್ಲವೆಂದು ಭಾವಿಸತಕ್ಕದ್ದು.
(10 ಸಭೆಯ ಸೇರಿದ ನಂತರ, ಜಿಲ್ಲಾಧಿಕಾರಿಗಳು ಯಾವ ಅವಿಶ್ವಾಸ ಸೂಚನೆಯ ಪರ್ಯಾಲೋಚನೆಗೆ ಸಭೆಯನ್ನು ಕರೆಯಲಾಗಿದೆಯೋ ಆ ಸೂಚನೆಯನ್ನು ಸಭೆಗೆ ಓದಿ ಹೇಳತಕ್ಕದ್ದು ಮತ್ತು ಯಾವುದೇ ಚರ್ಚೆ ಇಲ್ಲದೇ ಅದನ್ನು ಮತಕ್ಕೆ ಹಾಕತಕ್ಕದ್ದು.
(11) ಜಿಲ್ಲಾಧಿಕಾರಿಗಳು ಈ ಸೂಚನೆಯ ಗುಣಾವಗುಣಗಳ ಬಗ್ಗೆ ಮಾತನಾಡತಕ್ಕದ್ದಲ್ಲ ಮತ್ತು ಅವನು ಮತ ಕೂಡಲು ಹಕ್ಕುಳ್ಳವನಾಗತಕ್ಕದ್ದಲ್ಲ.
(12) ಮಂಡಿಸಲಾದ ಸೂಚನೆಯ ತಾಲ್ಲೂಕು ಪಂಚಾಯತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಮೂರನೇ ಎರಡು ಭಾಗಕ್ಕಿಂತಲೂ ಕಡಿಮೆ ಇಲ್ಲದ ಸದಸ್ಯರ ಬೆಂಬಲದೊಡಣೆ ಅಂ೦ಗೀಕೃತವಾದರೆ ಸಂದರ್ಭಾನುಸಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷನು ತಕ್ಷಣ ಹುದ್ದೆಯನ್ನು ತೆರವು ಮಾಡಿರುವುದಾಗಿ ಭಾವಿಸತ್ಕದ್ದು ಮತ್ತು ಜಿಲ್ಲಾಧಿಕಾರಿಗಗಳು ಸಭೆಯ ನಿರ್ಣಯವನ್ನು ಸಭಾ ನಡವಳಿಯ ಪುಸಕದಲ್ಲಿ ದಾಖಲಿಸತಕ್ಕದ್ದು.
ವಿವರಣೆ: ಈ ಉಪ-ವನಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಎರಡು ಭಾಗವನ್ನು ನಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಂಶವನ್ನು ಒಂದು ಎಂದು ಅರ್ಥೈಸತಕ್ಕದ್ದು.
(13) (9) ನೇ ಉಪ-ನಿಯಮದ ಮೇರೆಗೆ ಅಧ್ಯಕ್ಷ ಅತವಾ ಉಪಾಧ್ಯಕ್ಷನ ಸ್ಥಾನವು ವಿಂತು ಹೋದ ಮೇಲೆ ಸಂದರ್ಭಾನುಸಾರ ಅಧ್ಯಕ್ಷ, ಉಪಾಧ್ಯಕ್ಷನು ಅವನ ಅಭಿರಕ್ಷೆಯಲ್ಲಿರುವ ತಾಲ್ಲೂಕು ಪಂಚಾಯಿತಿಯ ಎಲ್ಲಾ ದಸ್ತಾವೇಜುಗಳು, ಹಣ ಅಥವಾ ಇತರ ಸ್ವತ್ತುಗಳನ್ನು ಕೂಡಲೇ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಒಪ್ಪಿಸತಕ್ಕದ್ದು.
(14) ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯು ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಹುದ್ದೆಯ ಖಾಲಿ ಇರುವ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ (ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ) ನಿಯಮಗಳು 1994ರನ್ವಯ ಉಪನಿಯಮ 5ರಡಿಯಲ್ಲಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳಿಗೆ ತಿಳಿಸುವುದು.
ನಮೂನೆ-I (ನಿಯಮ 3ರ ಉಪನಿಯಮ (1)ನ್ನು ನೋಡಿ) ಗೆ, ಜಿಲ್ಲಾಧಿಕಾರಿಗಳು, ಅಥವಾ ಮಾನ್ಯರೆ, ವಿಷಯ: ----------- ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ/ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ಸೂಚನೆ.
ಈ ಕೆಳಗೆ ಸಹಿಮಾಡಿರುವ --------------- ತಾಲ್ಲೂಕು ಪಂಚಾಯಿತಿಯ ಚುನಾಯಿತ ಸದಸ್ಯರುಗಳಾದ ನಾವುಗಳು, ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 140(3)ರಡಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟೀಸ್ ನೀಡುತ್ತಿದ್ದೇವೆ.
ತಮ್ಮ ವಿಶ್ವಾಸಿ,
| ಕ್ರ.ಸಂ | ಸದಸ್ಯರ ಹೆಸರು | ಕ್ಷೇತ್ರದ ಹೆಸರು | ಸಹಿ |
ಎಡ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ/ಉಪಾಧ್ಯಕ್ಷರಾದ ಶ್ರೀ --------- ರವರ ವಿರುದ್ದ ಅವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸಲು ---------- ದಿನಾಂಕ ------- ವಾರದ ------- ಸಮಯದಂದು ಸದರಿ ತಾಲ್ಲೂಕು ಪಂಚಾಯತಿಯ ------------ ಕಛೇರಿಯಲ್ಲಿ ಸಭೆಯನ್ನು ನಡೆಸಲಾಗುವುದು.
ಆದುದರಿಂದ, ನೀವು ಮೇಲೆ ತಿಳಿಸಲಾದ ದಿನಾಂಕದಂದು ಮತ್ತು ಸ್ಥಳದಲ್ಲಿ ಹಾಗೂ ಆ ಸಮಯಕ್ಕೆ ಸದರಿ ಸಭೆಗೆ ಹಾಜರಾಗಿ ಭಾಗವಹಿಸಲು ಕೋರಿದೆ.
ಜಿಲ್ಲಾಧಿಕಾರಿಗಳು ಗೆ, ಶ್ರೀ/ಶೀಮತಿ --------- ಇವರಿಗೆ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಬಿ. ನವೀನ್ ಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ (ಜಿ.ಪಂ) (ಪ್ರ)
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ