ಸದರಿ ನಿಯಮಗಳ ಅನುಸೂಚಿ XXVII| ರ ನಂತರ, ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-
“ಅನುಸೂಚಿ XXIX ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಇಲಾಖೆ
ಎ. ಕಲ್ಯಾಣ ಕರ್ನಾಟಕ 1. ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ಹಂಚಿಕೆಯಾದ ವಿಷಯಗಳನ್ನು ಹೊರತುಪಡಿಸಿ, ಭಾರತ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು. 2. ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು. 3. ಆಯವ್ಯಯ ಒಳಗೊಂಡಂ೦ತೆ ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆದೇಶ, 2013 ರ ವಿವಿಧ ಉಪಬಂಧಗಳನ್ನು ಒಳಗೊಂಡ ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಹಣೆಯ ಯೋಜನೆ ಮತ್ತು ಉಸ್ತುವಾರಿ. ಬಿ. ಸಂಹಿತೆಗಳು ಮತ್ತು ಕೈಪಿಡಿಗಳು ತನ್ನ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಗಳಿಗೆ ಸಂಬಂಧಿಸಿದ ಸಂಹಿತೆಗಳನ್ನು ಮತ್ತು ಕೃಪಿಡಿಗಳನ್ನು ಸಿದ್ಧಪಡಿಸುವುದು.
ಸಿ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಗಳು 1. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಒಳಪಡುವ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿ ಭರ್ತಿ ನಿಯಮಗಳು. 2. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ, ಈ ಇಲಾಖೆಯ ಆಡಳಿತ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ನೇಮಕಗಳು, ಸ್ಥಳ ವಿಯುಕ್ತಿಗಳು, ವರ್ಗಾವಣೆಗಳು, ರಜೆ, ಮೊದಲಾದವುಗಳು. ಸಹಿ/-
(ಥಾವರ್ಚಂದ್ ಗೆಹ್ಲೋಟ್) ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.
(ನಾಗರತ್ನ ವಿ.ಪಾಟಿಲ್)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-2)