ತಹಶೀಲ್ದಾರರ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಕಂದಾಯ ಇಲಾಖೆಯ ಯಾರೇ ಅಧಿಕಾರಿಯು ಮತ್ತು ಪೋಲೀಸ್ ಸಬ್ ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಪೊಲೀಸ್ ಇಲಾಖೆಯ ಯಾರೇ ಅಧಿಕಾರಿಯು, ಯಾವುದೇ ರೂಪಕವನ್ನು, ಮೂಕಾಭಿನಯವನ್ನು ಅಥವಾ ಇತರ ನಾಟಕವನ್ನು ಪ್ರದರ್ಶಿಸುವಂಥ ಯಾವುದೇ ಸಾರ್ವಜನಿಕ ಸ್ಥಳಕ್ಕೆ ಪ್ರದರ್ಶನದ ಸ್ವರೂಪವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಅದನ್ನು ನೋಡಲು ಪ್ರವೇಶ ಮಾಡತಕ್ಕದ್ದು.
ಅನುಬಂಧ (4ನೇ ನಿಯಮ ನೋಡಿ) 1. ಕ್ರಮಸಂಖ್ಯೆ 2. ಪೊಲೀಸರಿಂದ ಮೊದಲ ಮಾಹಿತಿ ವರದಿಯನ್ನು ಸ್ವೀಕರಿಸಿದ ದಿನಾಂಕ 3. ಪ್ರದರ್ಶನದ ಹೆಸರು 4. ಕರ್ತೃವಿನ ಹೆಸರು 5. ಈ ಅಧಿನಿಯಮದ 4ನೇ ಪ್ರಕರಣದ ಮೇರೆಗೆ ಆದೇಶ ಹೊರಡಿಸಲು ಕಾರಣಗಳು 6. ಆದೇಶ ಹೊರಡಿಸಿದ ದಿನಾಂಕ 7. ಆದೇಶವನ್ನು ಯಾರಿಗೆ ಜಾರಿಗೊಳಿಸಬೇಕಾಗಿದೆಯೋ ಆ ಸಂಘಟಕರು ಅಥವಾ ಪ್ರಮುಖ ವ್ಯಕ್ತಿಗಳು, ಮುಂತಾದವರ ಹೆಸರುಗಳು 8. ಆದೇಶವನ್ನು ಜಾರಿಗೊಳಿಸಿದ ವಾಸ್ತವಿಕ ದಿನಾಂಕ 9. ಜಾರಿಯ ವಿಧಾನ 10. ಪ್ರದರ್ಶನವನ್ನು ನಿಷೇಧಿಸಲಾದ ಸ್ಥಳ 11. ಪ್ರದರ್ಶನವನ್ನು ನಿಷೇಧಿಸಲಾದ ಅವಧಿ 12. ಷರಾ.
The above translation of the Karnataka Dramatic Performances Act, 1964 (39 of 1964) and the Karnataka Dramatic Performances Rules 1965 shall be the authoritative text in the Kannada Language under section 5A of the Karnataka official Language Act, 1963 (Karnataka Act No.26 of 1963).
GOVERNOR OF KARNATAKA
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ.ಆರ್. 320
ಜಿ.ಕೆ. ಬೋರೆಗೌಡ
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.