Annexure 6. All Assistant Directors/Deputy Directors of WCD, 7. Spare Copies, 8. Sections Guard file. KA/ BG - GPO/ 2515 WPP-47/ 2006 - 2008 ಸುವರ್ಣ ಕರ್ನಾಟಕ ಕರ್ನಾಟಕರಾಜ್ಕಪತ್ರ ಅಧಿಕತವಾಗಿ ಪ್ರಕಟಿಸಲಾದುದು ಬಿ ವಿಶೇಷ ಪತ್ರಿಕೆ ಭಾಗ - IVA iegaOapa’, ya°daZAOpa, Aé°O 5, 2006 (ABouOU 15, yada ನಂ.491 AalaE 1928) ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಸಚಿವಾಲಯ ಅದಿಸೂಚನೆ ಸಂಖ್ಯೆ : ಮಮಇ.278.ಮಮಅ.200%, ಬೆಂಗಳೂರು, ದಿನಾಂಕ:18-04-2006 ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪ ಬಂಧಗಳು) ನಿಯಮಗಳು 2004ರ ಕರಡು ನಿಯಮಗಳನ್ನು ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪಬಂಧ ಗಳು) ಕಾಯ್ದೆ 1976ರ ಪ್ರಕರಣ 30ರ ಉಪ ಪ್ರಕರಣ (1)ರಲ್ಲಿ ಅಪೇಕ್ಬಿಸಿರುವಂತೆ ಸದರಿ ಕರಡು ನಿಯಮದಿಂದ ಭಾದಿತರಾಗಲ್ಪಡುವ ವ್ಯಕ್ತಿಗಳ ಮಾಹಿತಿಗಾಗಿ ಅದಿಸೂಚನೆ ಸಂಖ್ಯೆ:ಮಮಇ.278.ಮಮಅ.200%ನ್ನು ದಿನಾಂಕ:1ನೇ ಏಪ್ರಿಲ್ 2004ರಂದು ಸಂಖ್ಯೆ:452ರ ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ-/((ಎ) ರಲ್ಲಿ ಪ್ರಕಟಿಸಲಾಗಿತ್ತು. ಸದರಿ ಕರಡು ನಿಯಮಗಳನ್ನು ಅಂತಿಮ ಗೊಳಿಸಲು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಳಿಸಲಾದ ದಿನಾಂಕದಿಂದ 30 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಲಾಗಿತ್ತು. ಪರಂತು ಸದರಿ ರಾಜ್ಯಪತ್ರ ಸಾರ್ವಜನಿಕರಿಗೆ ದಿನಾಂಕ:01-04-2004ರಂದು ಲಭ್ಯಣೊಳಿಸಲಾಗಿದೆ. ಪರಂತು, ಕರಡು ನಿಯಮಗಳಿಗೆ ರಾಜ್ಯ ಸರ್ಕಾರಕ್ಕೆ ಬಂದ ಆಕ್ಟೇಪಣೆ ಮತ್ತು ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈಗ, ಆದುದರಿಂದ, ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪ ಬಂಧಗಳು) ಕಾಯ್ದೆ 1976ರ ಪ್ರಕರಣ 30ರ ಉಪ ಪ್ರಕರಣ() ರಲ್ಲಿ ಪ್ರದತ್ತವಾದ ಅದಿಕಾರ ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನಂತೆ ನಿಯಮಗಳನ್ನು ರಚಿಸಿರುತ್ತದೆ. ನಿಯಮಗಳು 1. ಹೆಸರು ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪ ಬಂಧಗಳು) ನಿಯಮಗಳು 2006 ಎಂದು ಕರೆಯತಕ್ಕದ್ದು; (2) ಇದು ರಾಜ್ಯ ಪತ್ರದಲ್ಲಿ ಅದಿಕೃತವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. ಅಧ್ಯಾಯ-1 2. ಪರಿಭಾಷೆಗಳು (1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು- ಅ, ಕಾಯ್ದೆ‘‘ ಅಂದರೆ ‘ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪಬಂಧಗಳು) ಕಾಯ್ದೆ 1976. (1984ರ ಕರ್ನಾಟಕ ಕಾಯ್ದೆ 2)” ಬ. ‘‘ನಮೂನೆ‘‘ ಎಂದರೆ ಈ ನಿಯಮಗಳ ಜೊತೆಯಲ್ಲಿ ಲಗತ್ತಿಸಿದ ನಮೂನೆ; ಕ... ‘ವಿವಾಹ ನೋಂದಣಾ ಪ್ರಾದಿಕಾರ" ಎಂದರೆ ಕಂದಾಯ ಇಲಾಖೆಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಉಪ ನೋಂದಣಾದಿಕಾರಿಗಳವರ ಕಾರ್ಯವ್ಯಾಪ್ತಿಯ Bes BO, ವಿವಾಹ ನೋಂದಣಾ ಪ್ರಾದಿಕಾರ; ಣ J ಡ. ಈ ನಿಯಮದಡಿಯಲ್ಲಿ ಉಪಯೋಗಿಸಿದ ಇತರೆ ಶಬ್ದಗಳು ಮತ್ತು ವಾಕ್ಯಗಳನ್ನು ಇಲ್ಲಿ ವ್ಯಾಖ್ಯಾನಿಸದೆ ಇದ್ದಲ್ಲಿ ಅವುಗಳು ಕಾಯ್ದೆಯಲ್ಲಿ ನೀಡಿದ ಅರ್ಥವನ್ನೇ ಹೊಂದತಕ್ಕದ್ದು. ಅಧ್ಯಾಯ-11 ನೋಂದಣಾದಿಕಾರಿಯ ಅದಿಕಾರಗಳು 3. ನೋಂದಣಾದಿಕಾರಿಯ ಅದಿಕಾರ ಹಾಗೂ ಕರ್ತವ್ಯಗಳು - ನೋಂದಣಾದಿಕಾರಿಯು, ಅ, ತನ್ನ ಕಾರ್ಯವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಾಹಗಳ ಬಗ್ಗೆ. ಅಗತ್ಯವಾದ ಮಾಹಿತಿಯನ್ನು ಸಂಗಹಿಸತಕ್ಕದ್ದು; J ಕ್ ಆ, ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ವಿವಾಹ ನಡೆಯುವ ಸ್ಥಳಕ್ಕೆ ಪ್ರವೇಶಾವಕಾಶ; 8 ಕಾಯ್ದೆಯಡಿಯಲ್ಲಿ ತಿಳಿಸಿದಂತೆ ವಿವಾಹ ಪ್ರಮಾಣಪತ್ರವನ್ನು ನೀಡುವುದು; ಈ, ಈ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾದಲ್ಲಿ ಕಾನೂನಿನನ್ವಯ ಕ್ರಮ ಕೈಗೊಳ್ಳುವುದು; ಉ. ಈ ಕಾಯ್ದೆಯ ಉಪಬಂಧಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು ಮತ್ತು ಈ ಕಾಯ್ದೆಯ ಅನುಷ್ಠಾನಕ್ಕಾಗಿ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು. 4, ಪಾರ್ಟಿಗಳಿಗೆ ನೋಟೀಸ್ ನೀಡುವುದು-ವಿವಾಹಕ್ಕೆ ಸಂಬಂದಿಸಿದಂತೆ ನೋಂದಣಾದಿಕಾರಿಯು ಪಾರ್ಟಿಗಳಿಗೆ ನೀಡುವ ನೋಟೀಸ್ (ಸೂಚನಾ ಪತ್ರ) ಸೆಕ್ಟನ್(6)ರ ಉಪಸೆಕ್ಟನ್(1)ರ ಪ್ರಕಾರ, ನಮೂನೆ(3)ರಲ್ಲಿ ಇರತಕ್ಕದ್ದು. 5. ಕಲ್ಯಾಣ ಮಂಟಪದ ವ್ಯವಸ್ಥಾಪಕರ ಕರ್ತವ್ಯಗಳು: (1) ಕಲ್ಯಾಣ ಮಂಟಪದ ವ್ಯವಸ್ಥಾಪಕರು, ದೇವಾಲಯದ ಮುಖ್ಯ ಅರ್ಚಕರು ಅಥವಾ ಪ್ರಾರ್ಥನೆ ಅಥವಾ ವಿವಾಹಗಳಂತಹ ಯಾವುದೇ ಧಾರ್ಮಿಕ ಕಾರ್ಯ ನಡೆಯುವ ಸ್ಥಳಕ್ಕೆ ಸಂಬಂದಿಸಿದ ವ್ಯಕ್ತಿಗಳು ನಮೂನೆ-2ರಂತೆ ನೋಂದಣಿ ಪುಸ್ತಕವನ್ನು ನಿರ್ವಹಿಸತಕ್ಕದ್ದು ಹಾಗೂ ಅಲ್ಲಿ ನಡೆಯುವ ವಿವಾಹದ ಪೂರ್ಣ ಹಾಗೂ ಸತ್ಯವಾದ ಮಾಹಿತಿಯನ್ನು ಅದರಲ್ಲಿ ತುಂಬತಕ್ಕದ್ದು ಮತ್ತು ಪಾರ್ಟಿಗಳ ಹಾಗೂ ವಿವಾಹವನ್ನು ನಡೆಸುವ ವ್ಯಕ್ತಿಯ ಸಹಿಯನ್ನು ತೆಗೆದುಕೊಳ್ಳತಕ್ಕದ್ದು. (2) ಉಪ ನಿಯಮ(1)ರಲ್ಲಿ ತಿಳಿಸಿದ ವ್ಯಕ್ತಿಯು ಈ ಹೇಳಿಕೆಯನ್ನು ಅಥವಾ ಮಾಹಿತಿಯನ್ನು ನೋಂದಣಾದಿ ಕಾರಿಗಳು ಯಾವಾಗ ಕೇಳುತ್ತಾರೋ ಆಗ ನೋಂದಣಾದಿಕಾರಿಗಳಿಗೆ ಕಳುಹಿಸತಕ್ಕದ್ದು. 6. ವಿವಾಹದ ನಿವೇದನಾ ಪತ್ರ: (1) ವಿವಾಹದ ನಿವೇದನಾ ಪತ್ರವನ್ನು ರೂ.10/-ರ ಶುಲ್ಕದೊಡನೆ ಸಂಬಂದಿಸಿದ ನೋಂದಣಾದಿಕಾರಿಗಳಿಗೆ ಸಲ್ಲಿಸತಕ್ಕದ್ದು. ಈ ನಿವೇದನಾ ಪತ್ರವು ಇವುಗಳನ್ನು ಒಳಗೊಂಡಿರತಕ್ಕದ್ದು. (1) ವಧು ಮತ್ತು ವರರ ಪಾಸ್ ಪೋರ್ಟ್ ಅಳತೆಯ ಘೋಟೋ, ಜನ್ಮ ದಿನಾಂಕದ ಪ್ರಮಾಣ ಪತ್ರ, ಅಥವಾ ವಯಸ್ಸಿನ ರುಜುವಾತಿಗಾಗಿ ಶಾಲೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಅಥವಾ ವೈದ್ಯಕೀಯ ಪ್ರಮಾಣ ಪತ್ರ. (ii) ವಿಳಾಸದ ರುಜುವಾತಿಗಾಗಿ ಆಹಾರ ಪಡಿತರ ಚೀಟಿ ಅಥವಾ ಸಂಬಂದಿಸಿದ ಇತರ ಯಾವುದೇ ದಾಖಲೆಗಳು. (11) ವಿವಾಹದ ಸಂದರ್ಭದಲ್ಲಿ ಸ್ವೀಕರಿಸಿದ ರೂ.2,000/-ಕ್ಕಿಂತಲೂ ಹೆಚ್ಚಿನ ಬೆಲೆಯ ಉಡುಗೊರೆಗಳ ಪಟ್ಟಿಯನ್ನು ಡಿಜಿಟಲ್ ಫಾರಂನಲ್ಲಿ ಸಲ್ಲಿಸುವುದು ಮತ್ತು ಈ ಉಡುಗೊರೆಗಳು ಬಟ್ಟ, ವಡವೆಗಳ ರೂಪದಲ್ಲಿರಬಹುದು ಅಥವಾ ವಿವಾಹದ ಸಂದರ್ಭದಲ್ಲಿ ನೀಡಬಹುದಾದ ವಸ್ತುವಾಗಿರಬಹುದು. (2) ಉಪ ನಿಯಮ (1) ರಡಿಯಲ್ಲಿ ವಿವಾಹದ ನಿವೇದನಾ ಪತ್ರವನ್ನು ಸ್ವೀಕರಿಸಿದ ನೋಂದಣಾದಿಕಾರಿಗಳು ವಧು ಮತ್ತು ವರನ ವಯಸ್ಸಿನ ಮತ್ತು ವಿಳಾಸ ದಾಖಲೆಗಳನ್ನು ಪರಿಶೀಲಿಸಿ ಅವರ ಘೋಟೋದೊಂದಿಗೆ ಗುರುತಿಸಬೇಕು. ಅನಂತರ ಅವರು ನಮೂನೆ-3ರಲ್ಲಿ ಸಹಿ ಮಾಡಿ ಪ್ರಮಾಣ ಪತ್ರವನ್ನು ವಿತರಿಸಬೇಕು, ಮತ್ತು ನಕಲು ಪ್ರತಿಯನ್ನು ವಿವಾಹ ನೋಂದಣಾವಹಿಯಲ್ಲಿ ಅಂಟಿಸಬೇಕು. (3) ನೋಂದಾಣಾದಿಿಕಾರಿ ನೀಡುವ ವಿವಾಹ ಪ್ರಮಾಣ ಪತ್ರವು ನಿಯಮ 6ರ ಉಪ ನಿಯಮ (1) ಕಲಂ(11)ರಡಿ ನೀಡುವ ಉಡುಗೊರೆಗಳ ಪಟ್ಟಿಯ ಪ್ರತಿಯನ್ನು ಒಳಗೊಂಡಿರತಕ್ಕದ್ದು. 7. ವಿವಾಹ ಪ್ರಮಾಣ ಪತ್ರ: (1) ನೋಂದಣಾದಿಕಾರಿಗಳು ವಿವಾಹ ನೋಂದಣಿ ಬಗ್ಗೆ ವಹಿ ಒಂದನ್ನು ನಿರ್ವಹಿಸತಕ್ಕದ್ದು. ಹಾಗೂ ಇದರಲ್ಲಿ ವಿವಾಹ ನಿವೇದನಾ ಪತ್ರ ಮತ್ತು ವಿವಾಹ ನಕಲು ಪ್ರಮಾಣ ಪತ್ರವನ್ನು ಒಂದರ ಕೆಳಗೊಂದರಂತೆ ಅಂಟಿಸತಕ್ಕದ್ದು. (2) ವಿವಾಹ ನಿವೇದನಾ ಪತ್ರವನ್ನು ಸಲ್ಲಿಸಿದ Sto ವಿವಾಹ ಪ್ರಮಾಣ ಪತ್ರವನ್ನು ನೀಡತಕ್ಕದ್ದು. ಈ ವಿವಾಹ ಪ್ರಮಾಣ ಪತ್ರವು ಸಹ ಕೌಂಟರ್ ಫೈಲ್ (ರಶೀದಿ) ರೀತಿಯಲ್ಲಿ ಇರತಕ್ಕದ್ದು. (3) ನೋಂದಣಾದಿಕಾರಿಗಳು ವಿವಾಹ ಪ್ರಮಾಣ ಪತ್ರವನ್ನು ತ್ರಿಪ್ರತಿಯಲ್ಲಿ ಸಹಿಮಾಡಿ ಮೂಲ ಪ್ರತಿಯನ್ನು ಅರ್ಜಿದಾರರಿಗೆ ನೀಡತಕ್ಕದ್ದು. ಏರಡನೇ ಪ್ರತಿಯನ್ನು ವಿವಾಹ ನೋಂದಣಿವಹಿಯಲ್ಲಿ ಅಂಟಿಸಬೇಕು. ಹಾಗೂ ಮೂರನೇ ಪ್ರತಿಯನ್ನು ತಾಲ್ಲೂಕು ಕಛೇರಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅದಿಕಾರಿಗಳಿಗೆ ದಾಖಲೆಗಾಗಿ ನೀಡತಕ್ಕದ್ದು. ಈ ವಿವಾಹ ಪ್ರಮಾಣ ಪತ್ರವನ್ನು ಬೇರೆಯವರು ಬೇಡಿದ್ದಲ್ಲಿ ರೂ.50/-ರ ಶುಲ್ಕದೊಂದಿಗೆ ನೀಡಬಹುದಾಗಿದೆ.
| ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್.ಎಂ.ಚಂದ್ರಮ್ಮ ಸರ್ಕಾರದ ಅದೀನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, |