ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಗಳು, 2013ರ ನಿಯಮ 4ರಲ್ಲಿನ ಉಪ ನಿಯಮ (3)ರ ಬದಲಾಗಿ ಈ ಕೆಳಕಂಡಂತೆ ಪ್ರತಿಸ್ಥಾಪಿಸತಕ್ಕದ್ದು :–
“(3) ಪ್ರತಿಯೊಬ್ಬ ಅರ್ಹ ದಿನಗೂಲಿ ನೌಕರನಿಗೆ ಉಪಧನ ಪಾವತಿ ಕಾಯ್ದೆ 1972 (1972ರ ಕೇಂದ್ರ ಅಧಿನಿಯಮ ಸಂಖ್ಯೆ 39) ಸೆಕ್ಷನ್ 4ರಡಿಯಲ್ಲಿ ಅನುಮತಿಸಲ್ಪಟ್ಟಿರುವ ಮೊತ್ತವನ್ನು ಉಪಧನವೆಂದು ಪಾವತಿಸತಕ್ಕದ್ದು”.