ಅನುಸೂಚಿ
| ಸಂಸ್ಥೆಗಳ ವಿವರಣೆ | ಸದರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಪ್ರದೇಶಗಳು |
| (1) | (2) |
| ರಾಜ್ಯ ಸರ್ಕಾರದ ವತಿಯಿಂದ ನಡೆಸಲಾಗುವ ಮತ್ತು ಅಲ್ಲಿ ಹತ್ತು ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಅಥವಾ ಎರಡರ ಆಧಾರದ ಮೇಲೆ ನೇಮಕ ಹೊಂದಿರುವಂತಹ ಅಥವಾ ಹಿಂದಿನ ಹನ್ನೆರಡು ತಿಂಗಳುಗಳ ಅವಧಿಯಲ್ಲಿ ಯಾವುದೇ ದಿನದಂದು ನೇಮಕವಾಗಿರುವಂತಹ ನಗರಸಭೆಗಳು (ನಗರ ನಿಗಮ), ಪುರಸಭೆಗಳು, ನಗರಪಾಲಿಕೆಗಳು, ಮತ್ತಿತರ ನಗರ ಸ್ಥಳೀಯ ಸಂಸ್ಥೆಗಳು ಒಳಗೊಂಡಂ೦ತೆ ಸ್ಥಳೀಯ ಸಂಸ್ಥೆಗಳು | ಅಧಿನಿಯಮದ ಪ್ರಕರಣ 1ರ ಉಪಪ್ರಕರಣ (3) ರಡಿಯಲ್ಲಿ ನೌಕರರ ರಾಜ್ಯ ವಿಮಾ ಅಧಿನಿಯಮ, 1948ರ ಉಪಬಂಧಗಳನ್ನು ಈಗಾಗಲೇ ಯಾವ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆಯೋ ಆ ಎಲ್ಲಾ ಪ್ರದೇಶಗಳಲ್ಲಿ. |