ಸಂವಿಧಾನದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ, ಆಯೋಗದ ಪ್ರಕಾರ್ಯಗಳ ನೆರವೇರಿಕೆಗೆ ಈ ಅಧ್ಯಾಯದ ಉಪಬಂಧಗಳು ಅನ್ವಯವಾಗತಕ್ಕದ್ದು.
ಅಧ್ಯಕ್ಷನಿಗೆ ಆಯೋಗದ ಸಭೆಯಲ್ಲಿ ಹಾಜರಿರಲು ಸಾಧ್ಯವಾಗದಿದ್ದರೆ, ಹಾಜರಿರುವ ಅತ್ಯಂತ ಹಿರಿಯ ಸದಸ್ಯನು ಅವನ ಪರವಾಗಿ ಕಾರ್ಯನಿರ್ವಹಿಸತಕ್ಕದ್ದು:
ಪರಂತು, ಅಧ್ಯಕ್ಷನು ನಿರ್ದಿಷ್ಟಪಡಿಸಬಹುದಾದಂಥ ಯಾವುದೇ ಪ್ರಕರಣದ ಸಂಬಂಧದಲ್ಲಿ ಅಂಥ ಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಅವನಿಗೆ ತಿಳಿಸತಕ್ಕದ್ದು; ಮತ್ತು ಹಾಗೆ ಅವನಿಗೆ ತಿಳಿಸಿದ ಮೇಲೆ, ಅಧ್ಯಕ್ಷನು, ತಾನು ಹಾಜರಿರುವ ಆಯೋಗದ ಸಭೆಯಲ್ಲಿ ಯಾವುದೇ ಅಂಥ ನಿರ್ಣಯವನ್ನು ಪುನರ್ಪರಿಶೀಲನೆ ಮಾಡಬೇಕೆಂದು ಅಭಿಪ್ರಾಯಪಟ್ಟರೆ, ಅಂಥ ನಿರ್ಣಯವನ್ನು ತದನುಸಾರವಾಗಿ ಪುನರ್ಪರಿಶೀಲನೆ ಮಾಡತಕ್ಕದ್ದು ಮತ್ತು ಅಂತಹ ಪುನರ್ಪರಿಶೀಲನೆ ಆಗುವವರೆಗೆ, ಅಂತಹ ನಿರ್ಣಯದ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳತಕ್ಕದ್ದಲ್ಲ.
ಆಯೋಗದಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳನ್ನು ಆಯೋಗದ ಸದಸ್ಯರ ಸಭೆಯಲ್ಲಾಗಲಿ ಅಥವಾ ಆಯೋಗದ ಸದಸ್ಯರಿಗೆ ಸುತ್ತೋಲೆ ಕಳುಹಿಸುವ ಮೂಲಕವಾಗಲಿ ನಿರ್ಣಯಿಸತಕ್ಕದ್ದು:
ಪರಂತು, ಯಾರೇ ಸದಸ್ಯನು, ಪ್ರಶ್ನೆಯನ್ನು ಸಭೆಯಲ್ಲಿ ನಿರ್ಣಯಿಸಬೇಕೆಂದು ಅಪೇಕ್ಷಿಸಿದರೆ, ಅಂಥ ಪ್ರಶ್ನೆಯನ್ನು ಆಯೋಗದ ಸಭೆಯಲ್ಲಿ ಪರಿಶೀಲಿಸತಕ್ಕದ್ದು ಮತ್ತು ನಿರ್ಣಯಿಸತಕ್ಕದ್ದು:
ಮತ್ತೂ ಪರಂತು, ಸಾಂದರ್ಭಿಕ ರಜೆಯ ಹೊರತಾಗಿ ಇತರ ರಜೆಯಲ್ಲಿರುವ ಸದಸ್ಯನಿಗೆ ಯಾವುದೇ ಪ್ರಶ್ನೆಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕಳುಹಿಸಿಕೊಡುವುದು ಅಗತ್ಯವಾಗತಕ್ಕದ್ದಲ್ಲ.
ಆಯೋಗದ ವ್ಯವಹರಣೆಗಳು, ಯಾವುದೇ ಖಾಲಿಸ್ಥಾನದ ಮೂಲಕವಾಗಲಿ ಅಥವಾ ಸದಸ್ಯರ ಗೈರುಹಾಜರಿಯ ಮೂಲಕವಾಗಲಿ ಅಸಿಂಧುವಾಗತಕ್ಕದ್ದಲ್ಲ.
1 9. ಕೋರಂ.-ಆಯೋಗದ ಸಭೆಗೆ1 ಕೋರಂ ಆಗಿರತಕ್ಕದ್ದು. ಆದರೆ, ಯಾವುದೇ ಸಭೆಯ [ನಾಲ್ಕು] ಕಾರ್ಯಕಲಾಪವನ್ನು ಯಾರೇ ಸದಸ್ಯನ ಗೈರುಹಾಜರಿಯ ಕಾರಣ ಸುಗಮವಾಗಿ ನಡೆಸಲು ಸಾಧ್ಯವಿಲ್ಲವೆಂದು ಪ್ರಿಸೈಡಿಂಗ್ ಅಧಿಕಾರಿಯು ಅಭಿಪ್ರಾಯಪಟ್ಟರೆ, ಅವನು ಆ ಕಾರ್ಯಕಲಾಪವನ್ನು ಮುಂದೂಡಬಹುದು.