(1) ಸರ್ಕಾರವು, ಆಯೋಗದೊಂದಿಗೆ ಸಮಾಲೋಚಿಸಿ, ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.
(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರಗಳ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಈ ಮುಂದಿನ ವಿಷಯಗಳ ಸಲುವಾಗಿ ಅಂಥ ನಿಯಮಗಳನ್ನು ಮಾಡಬಹುದು, ಎಂದರೆ:-
(i) ಆಯೋಗವು, 17ನೇ ಪ್ರಕರಣದ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಹುದ್ದೆಗಳ ಬಗ್ಗೆ ಜಾಹೀರಾತು ನೀಡುವುದು, ಅರ್ಜಿಗಳನ್ನು ಆಹ್ವಾನಿಸುವುದು, ಅವುಗಳನ್ನು ಪರಿಶೀಲಿಸುವುದು, ಪರೀಕ್ಷೆಗಳನ್ನು ನಡೆಸುವುದು ಮತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು- ಇವುಗಳಿಗಾಗಿ ಅನುಸರಿಸಬೇಕಾದ ಕಾರ್ಯವಿಧಾನ;
(ii) ಆಯೋಗದೊಂದಿಗೆ ಸಮಾಲೋಚಿಸಲು ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಇತರ ಸಕ್ಷಮ ಪ್ರಾಧಿಕಾರವು ಅನುಸರಿಸಬೇಕಾದ ಕಾರ್ಯವಿಧಾನ;
(iii) ಆಯೋಗದೊಂದಿಗೆ ಸಮಾಲೋಚಿಸುವ ಉದ್ದೇಶಕ್ಕಾಗಿ ಪ್ರಾಸಂಗಿಕವಾಗಿರುವ ಅಥವಾ ಅವಶ್ಯವಿರುವ ಯಾವುದೇ ವಿಷಯ;
(iv) ಈ ಅಧಿನಿಯಮದ ಮೇರೆಗೆ ಯಾವ ವಿಷಯದ ಬಗ್ಗೆ ನಿಯಮಗಳನ್ನು ರಚಿಸಬೇಕಾಗಿದೆಯೋ ಆ ಯಾವುದೇ ವಿಷಯ.
(3) ಈ ಅಧಿನಿಯಮದ ಮೇರೆಗೆ ರಚಿಸಿದ ಎಲ್ಲ ನಿಯಮಗಳನ್ನು, ಅವುಗಳನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚಿನ ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಮೂವತ್ತು ದಿನಗಳ ಒಟ್ಟು ಅವಧಿಯವರೆಗೆ ಇಡತಕ್ಕದ್ದು ಮತ್ತು ಆ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ, ಆ ಯಾವುದೇ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಒಂದು ಸದನವು ಮಾಡಿದರೆ ಅಥವಾ ಆ ಯಾವುದೇ ನಿಯಮವು ಪರಿಣಾಮ ಹೊಂದಿರತಕ್ಕದ್ದಲ್ಲವೆಂದು ನಿರ್ದೇಶಿಸಿದರೆ ಮತ್ತು ಆ ಮಾರ್ಪಾಟನ್ನು ಅಥವಾ ನಿರ್ದೇಶನವನ್ನು ಮತ್ತೊಂದು ಸದನವು ಒಪ್ಪಿದರೆ, ಸದರಿ ನಿಯಮವು ಆ ತರುವಾಯ ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ; ಆದಾಗ್ಯೂ, ಯಾವುದೇ ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ ಮೇರೆಗೆ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.
ಅಧಿಸೂಚನೆ
ಬೆಂಗಳೂರು, ದಿನಾಂಕ 30ನೇ ಆಗಸ್ಟ್, 1960[ಸಂಖ್ಯೆ ಜಿಎಡಿ 15 ಓಎಸ್ಆರ್ 60] ಮೈಸೂರು ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಮೈಸೂರು ಅಧಿನಿಯಮ 20) ರ 1ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೈಸೂರು ಸರ್ಕಾರವು, 1ನೇ ಅಕ್ಟೋಬರ್, 1960ನ್ನು ಸದರಿ ಅಧಿನಿಯಮದIIIನೇ ಅಧ್ಯಾಯವು ಜಾರಿಗೆ ಬರತಕ್ಕ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಆರ್. ವರ್ಮ ಸರ್ಕಾರದ ಅಧೀನ ಕಾರ್ಯದರ್ಶಿ, ಸಾಮಾನ್ಯ ಆಡಳಿತ ಇಲಾಖೆ, (ಸಂಘಟನೆ ಮತ್ತು ಕ್ರಮ).
ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965 ನಿಯಮಗಳ ಅನುಕ್ರಮಣಿಕೆ ನಿಯಮಗಳು:
- ಶೀರ್ಷಿಕೆ 2. ಪರಿಭಾಷೆಗಳು 3. ಪರೀಕ್ಷೆಗಳ ಪಠ್ಯಕ್ರಮಗಳು 4. ಪರೀಕ್ಷೆಗಳನ್ನು ನಡೆಸುವುದು 5. ಅರ್ಜಿಗಳು 6. ಪರೀಕ್ಷೆಗಳಿಗಾಗಿ ಸಂದಾಯ ಮಾಡತಕ್ಕ ಶುಲ್ಕಗಳು 7. ಫೀಜುಗಳ ಮರುಪಾವತಿ 8. ಪುಸ್ತಕಗಳ ಸಂಬಂಧದಲ್ಲಿ ಉಲ್ಲೇಖ 8ಎ. ಉಕ್ತಲೇಖನ ನೇಮಕಾತಿ 9. ಉತ್ತೀರ್ಣರಾಗಲು ಅಂಕಗಳು 10. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿ 11. ಅಂಕಪಟ್ಟಿಗಳನ್ನು ಒದಗಿಸುವುದು 12. ಅಂಕಗಳ ಮರುಎಣಿಕೆ 13. ಪರೀಕ್ಷಕರಿಗೆ ಪರಿಶ್ರಮಧನ 14. ದುರ್ನಡತೆ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965 (ಜನವರಿ 2004ರಂದು ತಿದ್ದುಪಡಿಯಾದಂತೆ) ಅಧಿಸೂಚನೆ ಸಂಖ್ಯೆ: ಜಿಎಡಿ 61 ಎಸ್ಎಸ್ಆರ್ 1964, ಬೆಂಗಳೂರು, ದಿನಾಂಕ 5ನೇ ನವೆಂಬರ್, 1965 ಜಿ.ಎಸ್.ಆರ್.735.-ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 20) ಇದರ 16 ಮತ್ತು 18ನೇ ಪ್ರಕರಣಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
- ಶೀರ್ಷಿಕೆ.-ಈ ನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965 ಎಂದು ಕರೆಯತಕ್ಕದ್ದು.
- ಪರಿಭಾಷೆಗಳು.-ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ, ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 20);
(ಬಿ) ‘‘ಪರೀಕ್ಷೆ'' ಅಥವಾ ‘‘ಸೇವಾ ಪರೀಕ್ಷೆ'' ಎಂದರೆ, ರಾಜ್ಯ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಈ ಅಧಿನಿಯಮದ 16ನೇ ಪ್ರಕರಣದ ಅಡಿಯಲ್ಲಿ ಸರ್ಕಾರದಿಂದ ಅಧಿಸೂಚಿತವಾದ ಮತ್ತು ಅವರಿಗೆ ಅನ್ವಯವಾಗುವ ನೇಮಕಾತಿಯ ಸೇವಾ ಷರತ್ತುಗಳಡಿಯಲ್ಲಿ ಉತ್ತೀರ್ಣರಾಗಬೇಕೆಂದು ಅಗತ್ಯಪಡಿಸಲಾದ ಪರೀಕ್ಷೆ.
3. ಪರೀಕ್ಷೆಗಳ ಪಠ್ಯಕ್ರಮಗಳು.- ಆಯೋಗವು ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಪಠ್ಯಕ್ರಮಗಳಿಗೆ ಅನುಸಾರವಾಗಿ ಸೇವಾ ಪರೀಕ್ಷೆಗಳನ್ನು ನಡೆಸತಕ್ಕದ್ದು.
4. ಪರೀಕ್ಷೆಗಳನ್ನು ನಡೆಸುವುದು.- (1) ಆಯೋಗವು ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೊಳಪಟ್ಟು, ಪ್ರತಿ ವರ್ಷಕ್ಕೆ ಎರಡು ಬಾರಿ ಆಯೋಗವು ನಿರ್ಧರಿಸಬಹುದಾದಂಥ ತಿಂಗಳುಗಳು ಮತ್ತು ಅಂಥ ದಿನಾಂಕಗಳಲ್ಲಿ ಸೇವಾ ಪರೀಕ್ಷೆಗಳನ್ನು ನಡೆಸತಕ್ಕದ್ದು.
(2) 1 [(ಎ) ಆಯೋಗವು ನೀಡಬಹುದಾದಂಥ ನಿದೇಶನಗಳಿಗೊಳಪಟ್ಟು, ಲಿಖಿತ ಪರೀಕ್ಷೆಗಳನ್ನು ಸಂಬಂಧಪಟ್ಟ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ [ಮತ್ತು ನಿಯಂತ್ರಣದಡಿಯಲ್ಲಿ ಪ್ರತಿಯೊಂದು ಜಿಲ್ಲೆಯ ಕೇಂದ್ರ ಕಾರ್ಯಸ್ಥಾನಗಳಲ್ಲಿ 2 ನವದೆಹಲಿಯಲ್ಲಿರುವ ಸಹಾಯಕ ವಿಶೇಷ ಆಯುಕ್ತರು ಹಾಗೂ ವ್ಯವಸ್ಥಾಪಕರು, ಕರ್ನಾಟಕ ವಿಶೇಷ ಆಯುಕ್ತರ ಕಛೇರಿ, ಕರ್ನಾಟಕ ಭವನ, ಇವರ ನಿಯಂತ್ರಣದಡಿಯಲ್ಲಿ ನವದೆಹಲಿಯಲ್ಲಿ 3 [ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡಮಿ, ಮಸ್ಸೂರಿ, ಇಲ್ಲಿ ತರಬೇತಿ ಪಡೆಯುತ್ತಿರುವ ಭಾ.ಆ.ಸೇ. ಪ್ರೋಬೇಷನರ್ಗಳಿಗಾಗಿ ಅಕಾಡಮಿಯ ಪರೀಕ್ಷೆಗಳ ನಿಯಂತ್ರಕರ [ಬೆಂಗಳೂರಲ್ಲಿ, ನಿಯಂತ್ರಣದಡಿಯಲ್ಲಿ ಮಸ್ಸೂರಿಯಲ್ಲಿ ನಡೆಸತಕ್ಕದ್ದು. ಮೌಖಿಕ ಪರೀಕ್ಷೆಗಳನ್ನು 3 ನವದೆಹಲಿಯಲ್ಲಿ ಮತ್ತು ಮಸ್ಸೂರಿಯಲ್ಲಿ ನಡೆಸತಕ್ಕದ್ದು:]3
ಪರಂತು, ಬೆಂಗಳೂರು ಜಿಲ್ಲೆಯ ಸಂದರ್ಭದಲ್ಲಿ, ಲಿಖಿತ ಪರೀಕ್ಷೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಬೆಂಗಳೂರು ದಕ್ಷಿಣ ಇವರ ನಿಯಂತ್ರಣದಡಿಯಲ್ಲಿ ನಡೆಸತಕ್ಕದ್ದು.
- ಅಧಿಸೂಚನೆ ಸಂಖ್ಯೆ: ಜಿಎಡಿ 17 ಎಸ್ಎಸ್ಸಿ 1976, ದಿನಾಂಕ:12.10.1976ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ: ಡಿಪಿಎಆರ್ 69 ಎಸ್ಎಸ್ಆರ್ 1976, ದಿನಾಂಕ:16.07.1977ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ: ಡಿಪಿಎಆರ್ 3 ಎಸ್ಎಸ್ಸಿ 1983, ದಿನಾಂಕ:12.10.1983ರ ಮೂಲಕ ಸೇರಿಸಲಾಗಿದೆ ಮತ್ತು ಪ್ರತಿಯೋಜಿಸಲಾಗಿದೆ.
(ಎಎ) ಯಾವುದೇ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯು ತತ್ಕಾಲದಲ್ಲಿ ಅವನು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಕೇಂದ್ರ ಕಾರ್ಯಸ್ಥಾನಗಳಲ್ಲಿ ಪರೀಕ್ಷೆ ಬರೆಯತಕ್ಕದ್ದು:
ಪರಂತು, ಅಭ್ಯರ್ಥಿಗೆ ಆಯೋಗವು ಯಾವುದೇ ಇತರ ಸ್ಥಳದಲ್ಲಿ ಪರೀಕ್ಷೆ ಬರೆಯಲು ಅನುಮತಿಸಬಹುದು.
- ಅ.ಸೂ.ಸಂ. ಜಿಎಡಿ 19 ಎಸ್ಎಸ್ಆರ್ 1966, ದಿನಾಂಕ:19.01.1967ರ ಮೂಲಕ ಸೇರಿಸಲಾಗಿದೆ.
(ಬಿ) (ಎ) ಖಂಡದಲ್ಲಿ ಏನೇ ಅಡಕವಾಗಿದ್ದರೂ, ಆಯೋಗವು, 1 [ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ನಿಯಂತ್ರಣದ ಅಡಿಯಲ್ಲಿ ವಿಭಾಗೀಯ ಕೇಂದ್ರ 1 ಅದು ಸೂಕ್ತವೆಂದು ಭಾವಿಸಬಹುದಾದಂಥ ಪರೀಕ್ಷೆಗಳನ್ನು ಕಾರ್ಯಸ್ಥಾನಗಳಲ್ಲಿ ಮಾತ್ರ] ನಡೆಸಬಹುದು.
- ಅಧಿಸೂಚನೆ ಸಂಖ್ಯೆ: ಡಿಪಿಎಆರ್ 57 ಎಸ್ಎಸ್ಸಿ 1982, ದಿನಾಂಕ:18.11.1982ರ ಮೂಲಕ ಪ್ರತಿಯೋಜಿಸಲಾಗಿದೆ.
(3) ಅಂಥ ಪರೀಕ್ಷೆಗಳಲ್ಲಿ, Iನೇ ವರ್ಗದ ಗೆಜೆಟೆಡ್ ಅಧಿಕಾರಿಯನ್ನು ಹೊರತುಪಡಿಸಿ, ಯಾವನೇ ವ್ಯಕ್ತಿಯನ್ನು ಮೇಲ್ವಿಚಾರಕನ್ನಾಗಿ ನೇಮಿಸತಕ್ಕದ್ದಲ್ಲ ಮತ್ತು IIನೇ ವರ್ಗದ ಗೆಜೆಟೆಡ್ ಅಧಿಕಾರಿಯನ್ನು ಹೊರತುಪಡಿಸಿ ಯಾರೇ ವ್ಯಕ್ತಿಯನ್ನು ಪರಿವೀಕ್ಷಕರನ್ನಾಗಿ ನೇಮಿಸತಕ್ಕದ್ದಲ್ಲ:
ಪರಂತು, ಅಂಥ ಪರೀಕ್ಷೆಗಳನ್ನು ಬೆಂಗಳೂರು ನಗರದಲ್ಲಿ ನಡೆಸಿದ ಸಂದರ್ಭಗಳಲ್ಲಿ ಕಛೇರಿ 1 ಅಧೀಕ್ಷಕರುಗಳನ್ನು ಸಹ ಪರಿವೀಕ್ಷಕರನ್ನಾಗಿ ನೇಮಕ ಮಾಡಬಹುದು.] 1. ಅಧಿಸೂಚನೆ ಸಂಖ್ಯೆ: ಜಿಎಡಿ 19 ಎಸ್ಎಸ್ಆರ್ 1966, ದಿನಾಂಕ:26.07.1967ರ ಮೂಲಕ ಸೇರಿಸಲಾಗಿದೆ.
5. ಅರ್ಜಿಗಳು.- 1 [(1) ಆಯೋಗವು, ಯಾವುದೇ ಪರೀಕ್ಷೆಯನ್ನು ನಡೆಸುವ ದಿನಾಂಕಕ್ಕೆ ಎರಡು ತಿಂಗಳುಗಳಿಗಿಂತ ಕಡಿಮೆಯಿರದಷ್ಟು ಮುಂಚಿತವಾಗಿ ಅದರ ಕಚೇರಿಯ ಸೂಚನಾ ಫಲಕದ ಮೇಲೆ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು ಮತ್ತು ಫಲಿತಾಂಶದ ಪ್ರಕಟಣೆ, ಮುಂದಿನ ಪರೀಕ್ಷೆಯ ದಿನಾಂಕ, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಆಯೋಗವು ಸೂಕ್ತವೆಂದು ಭಾವಿಸುವಂಥ ಇತರ ವಿವರಗಳನ್ನು ಸೂಚಿಸುವ ಸುದ್ದಿಯನ್ನು, 1 ರಾಜ್ಯದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡು ಪ್ರಮುಖ ದೈನಿಕ ವೃತ್ತ ಪತ್ರಿಕೆಗಳಲ್ಲಿ ಪ್ರಕಟಿಸತಕ್ಕದ್ದು.] 1. (1)ನೇ ಉಪನಿಯಮವನ್ನು ಅಧಿಸೂಚನೆ ಸಂಖ್ಯೆ. ಡಿಪಿಎಆರ್ 19 ಎಸ್ಎಸ್ಸಿ 95, ದಿನಾಂಕ 28.10.1995ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಯಾವುದೇ ಸೇವಾ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯು, ಆಯೋಗವು ಗೊತ್ತುಪಡಿಸಿದ ನಮೂನೆಯಲ್ಲಿ ತನ್ನ ಅರ್ಜಿಯನ್ನು ಕಳುಹಿಸತಕ್ಕದ್ದು. ಅರ್ಜಿಯನ್ನು, ಕಾರ್ಯದರ್ಶಿ ಮತ್ತು ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ-ಇವರ ವಿಳಾಸಕ್ಕೆ ಪರೀಕ್ಷೆಗಾಗಿ ಅರ್ಜಿಗಳನ್ನು ಆಹ್ವಾನಿಸುವಾಗ ಆಯೋಗವು ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಂದು ಅಥವಾ ಅದಕ್ಕೆ ಮುಂಚಿತವಾಗಿ ತಲುಪುವಂತೆ ಕಳುಹಿಸತಕ್ಕದ್ದು.
(3) ಅರ್ಜಿಗಳ ಸ್ವೀಕೃತಿಗಾಗಿ ನಿಗದಿಪಡಿಸಿದ ದಿನಾಂಕದ ನಂತರ ಸ್ವೀಕೃತವಾದ ಅಥವಾ ಈ ನಿಯಮದ ಉಪಬಂಧಗಳಿಗನುಸಾರವಾಗಿಲ್ಲದ ಯಾವುದೇ ಅರ್ಜಿಯನ್ನು ತಿರಸ್ಕರಿಸತಕ್ಕದ್ದು.
6. ಪರೀಕ್ಷೆಗಳಿಗಾಗಿ ಸಂದಾಯ ಮಾಡತಕ್ಕ ಶುಲ್ಕಗಳು.- (1) ಯಾವುದೇ ಪರೀಕ್ಷೆಗೆ ಅಭ್ಯರ್ಥಿಯ ಪ್ರವೇಶಕ್ಕಾಗಿ ಸಂದಾಯ ಮಾಡುವ ಶುಲ್ಕಗಳು, ಯಾವುದೇ ಪರೀಕ್ಷೆ ಶುಲ್ಕವು ಹದಿನೈದು ರೂಪಾಯಿಗಳಿಗಿಂತ ಹೆಚ್ಚಾಗಿರತಕ್ಕದ್ದಲ್ಲ ಎಂಬ ಷರತ್ತಿಗೊಳಪಟ್ಟು, ಆಯೋಗವು ಸರ್ಕಾರದ ಅನುಮೋದನೆಯೊಂದಿಗೆ ನಿರ್ಧರಿಸಬಹುದಾದಂತೆ ಇರತಕ್ಕದ್ದು.
(2) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಸರ್ಕಾರಿ ನೌಕರನ ಪರಿವೀಕ್ಷಣಾವಧಿ ಅಥವಾ ತರಬೇತಿಯ ಕಾಲಾವಧಿಯಲ್ಲಿ ಅಥವಾ ವೇತನ ಬಡ್ತಿ ಪಡೆಯುವುದಕ್ಕೆ ಅರ್ಹನಾಗುವ ಉದ್ದೇಶಕ್ಕಾಗಿ ಅಥವಾ ಯಾವುದೇ ಹುದ್ದೆಯಲ್ಲಿ ಖಾಯಂಗೊಳ್ಳುವುದಕ್ಕಾಗಿ ಅಥವಾ ಮೇಲಿನ ಹುದ್ದೆಗೆ ಪದೋನ್ನತಿ ಪಡೆಯಲು ಅರ್ಹನಾಗುವುದಕ್ಕಾಗಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದನ್ನು ಅಗತ್ಯಪಡಿಸಿದ್ದರೆ, ಅಂಥ ಪರೀಕ್ಷೆಗೆ ಪ್ರವೇಶ ಪಡೆಯುವುದಕ್ಕೆ ಸಂಬಂಧಪಟ್ಟ ಸರ್ಕಾರಿ ನೌಕರನು ಮೊದಲನೇ ಅಥವಾ ಎರಡನೇ ಬಾರಿಗೆ ಅರ್ಜಿಹಾಕಿದಾಗ ಪರೀಕ್ಷೆಗೆ ಪ್ರವೇಶ ಪಡೆಯುವುದಕ್ಕಾಗಿ ಶುಲ್ಕವನ್ನು ಸಂದಾಯ ಮಾಡತಕ್ಕದ್ದಲ್ಲ:
ಪರಂತು, ಅಭ್ಯರ್ಥಿಯು, ಈ ಉಪನಿಯಮದ ಮೇರೆಗೆ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆದಿದ್ದು ಪರೀಕ್ಷೆಗೆ ಗೈರುಹಾಜರಾದರೆ, ಅವನು, ಅಂಥ ಗೈರುಹಾಜರಾತಿಯು ಅನಾರೋಗ್ಯದ ಕಾರಣದಿಂದ ಆಗಿದ್ದರೆ, ಜಿಲ್ಲಾ ವೈದ್ಯಾಧಿಕಾರಿ ಅಥವಾ ಅಧಿಕೃತ ವೈದ್ಯಕೀಯ ಸಹಾಯಕರಿಂದ ಪ್ರಮಾಣ ಪತ್ರವನ್ನು ಅಥವಾ ಅವನು ಮಾಡಬೇಕೆಂದು ಅಗತ್ಯಪಡಿಸಿದ ಕಚೇರಿ ಕೆಲಸದ ಕಾರಣದಿಂದ ಪರೀಕ್ಷೆಗೆ ಹಾಜರಾಗುವುದಕ್ಕೆ ಸಾಧ್ಯವಾಗದ ಕಾರಣದಿಂದ ಆಗಿದ್ದರೆ, ಅವನು ಸೇವೆ ಸಲ್ಲಿಸುತ್ತಿರುವ ಇಲಾಖಾ ಮುಖ್ಯಸ್ಥರಿಂದ ಹಾಗೆಂದು ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಿದ ಹೊರತು, ಯಾವುದೇ ನಂತರದ ಪರೀಕ್ಷೆಯ ಸಂಬಂಧದಲ್ಲಿ ಈ ಉಪನಿಯಮದ ಮೇರೆಗಿನ ವಿನಾಯಿತಿಗೆ ಹಕ್ಕುಳ್ಳವನಾಗಿರತಕ್ಕದ್ದಲ್ಲ:
ಮತ್ತೂ ಪರಂತು, ಯಾವ ಸರ್ಕಾರಿ ನೌಕರನಿಗೆ ಈ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯವಾಗಿಲ್ಲಮೋ, ಅವನ ಸಂಬಂಧದಲ್ಲಿ ಈ ಉಪನಿಯಮವು ಅನ್ವಯಿಸತಕ್ಕದ್ದಲ್ಲ.
(3) ಸೇವಾ ಪರೀಕ್ಷೆಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯನ್ನು ಈ ಪರೀಕ್ಷೆ ಕಡ್ಡಾಯವೇ ಅಲ್ಲವೇ ಎಂಬುದನ್ನು ನಿರ್ದಿಷ್ಟಪಡಿಸುವ ಮತ್ತು ಅವನು ಸಂಬಂಧಪಟ್ಟ ಪರೀಕ್ಷೆಗೆ ಎಷ್ಟು ಬಾರಿ ಹಾಜರಾಗಿದ್ದಾನೆಂಬುದನ್ನು ಸಹ ನಿರ್ದಿಷ್ಟಪಡಿಸುವ ಘೋಷಣೆಯನ್ನು ಮಾಡುವಂತೆ ಅಗತ್ಯಪಡಿಸತಕ್ಕದ್ದು. ಅಂಥ ಘೋಷಣಾ ಪತ್ರವನ್ನು ಅಭ್ಯರ್ಥಿಯು ಸೇವೆ ಸಲ್ಲಿಸುತ್ತಿರುವ ಕಚೇರಿ ಮುಖ್ಯಸ್ಥನು ಪರಿಶೀಲಿಸತಕ್ಕದ್ದು ಮತ್ತು ದೃಢೀಕರಿಸತಕ್ಕದ್ದು.
ವಿವರಣೆ.- ಕಾನೂನಿನ ಮೂಲಕ ರಚಿಸಲಾದ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ಒಂದು ನಿಗಮಿತ ನಿಕಾಯದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಸಂದರ್ಭದಲ್ಲಿ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರವು ಅಥವಾ ನಿಗಮಿತ ನಿಕಾಯವು ಆಯೋಗಕ್ಕೆ ತಿಳಿಸಿ ಆ ಉದ್ದೇಶಕ್ಕಾಗಿ ನಾಮ 1 ನಿರ್ದೇಶಿಸಿದ ‘‘ಕಛೇರಿ ಮುಖ್ಯಸ್ಥನು'' ಒಬ್ಬ ಅಧಿಕಾರಿಯಾಗಿರತಕ್ಕದ್ದು.] 1. ಅಧಿಸೂಚನೆ ಸಂಖ್ಯೆ: ಜಿಎಡಿ 56 ಎಸ್ಎಸ್ಆರ್ 1974, ದಿನಾಂಕ:03.10.1974ರ ಮೂಲಕ ಸೇರಿಸಲಾಗಿದೆ.
7. ಫೀಜುಗಳ ಮರುಪಾವತಿ.- (1) ಯಾರೇ ಅಭ್ಯರ್ಥಿಯಿಂದ ಸಂದಾಯವಾದ ಫೀಜನ್ನು ಈ ಮುಂದಿನ ಸಂದರ್ಭಗಳಲ್ಲಿ ಮರುಸಂದಾಯ ಮಾಡತಕ್ಕದ್ದು, ಎಂದರೆ,-
(i) ಅರ್ಜಿಗಳನ್ನು ಕರೆದ ನಂತರ ಪರೀಕ್ಷೆಯು ರದ್ದುಗೊಂಡಾಗ;
(ii) ಅರ್ಜಿಗಳ ಸ್ವೀಕೃತಿಗೆ ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿಯನ್ನು ಕಳುಹಿಸಲಾಗಿದೆ ಎಂಬ ಕಾರಣದ ಮೇಲೆ ಅರ್ಜಿಯನ್ನು ತಿರಸ್ಕರಿಸಿದಾಗ;
(iii) ಅಭ್ಯರ್ಥಿಗೆ ಪರೀಕ್ಷೆಗೆ ಪ್ರವೇಶ ನೀಡದಿದ್ದಾಗ;
(iv) ಪರೀಕ್ಷೆ ನಡೆಯುವುದಕ್ಕೂ ಮುನ್ನ ತನ್ನ ಅಭ್ಯರ್ಥಿಕೆಯನ್ನು ಹಿಂದಕ್ಕೆ ಪಡೆಯಲು ಅಭ್ಯರ್ಥಿಗೆ ಅನುಮತಿ ನೀಡಿದಾಗ;
(v) ಅಭ್ಯರ್ಥಿಯು ಶುಲ್ಕಗಳನ್ನು ಸಂದಾಯ ಮಾಡುವುದಕ್ಕೆ ಬದ್ಧನಾಗದೆ ಇರುವಾಗ;
(vi) ತಪ್ಪಿನಿಂದ ಅರ್ಜಿಯನ್ನು ಸಲ್ಲಿಸಿ, ಶುಲ್ಕವನ್ನು ಸಂದಾಯ ಮಾಡಿದಾಗ;
(vii) ಅಭ್ಯರ್ಥಿಯು, ಯಾವುದೇ ಪರೀಕ್ಷೆಗೆ ಗೈರುಹಾಜರಾಗಿದ್ದು ಮತ್ತು ಆ ಗೈರುಹಾಜರಿಯು ಅನಿವಾರ್ಯವಾಗಿತ್ತೆಂದು ಮತ್ತು ಅವನ ನಿಯಂತ್ರಣಕ್ಕೆ ಮೀರಿದ ಕಾರಣಗಳಿಗಾಗಿ ಗೈರುಹಾಜರಾಗಿದ್ದನೆಂದು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಾಗ;
(viii) ಅಭ್ಯರ್ಥಿಯು, ಫೀಜನ್ನು ಸಂದಾಯ ಮಾಡಿದ ನಂತರ ತನ್ನ ಅರ್ಜಿಯನ್ನು ಆಯೋಗಕ್ಕೆ ಕಳುಹಿಸಲು ತಪ್ಪಿದಾಗ;
(ix) ಅಭ್ಯರ್ಥಿಯು, ಪರೀಕ್ಷೆಗೂ ಮುನ್ನ ಮೃತನಾದಾಗ.
(2) (1)ನೇ ಉಪ ನಿಯಮದ (v), (vi), (vii), ಮತ್ತು (viii)ನೇ ಖಂಡಗಳ ಅಡಿಯಲ್ಲಿ ಬರುವ ಸಂದರ್ಭಗಳಲ್ಲಿ ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ಹೊರತು ಮತ್ತು (1)ನೇ ಉಪ ನಿಯಮದ (ix)ನೇ ಖಂಡದ ಅಡಿಯಲ್ಲಿ ಬರುವ ಸಂದರ್ಭಗಳಲ್ಲಿ ಸಂಬಂಧಪಟ್ಟ ಪರೀಕ್ಷೆಗಾಗಿ ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಅರವತ್ತು ದಿವಸಗಳೊಳಗೆ, ಅಭ್ಯರ್ಥಿಯ ಕಾನೂನುಸಮ್ಮತ ವಾರಸುದಾರನು ಅರ್ಜಿ ಸಲ್ಲಿಸಿದ ಹೊರತು ಯಾವುವೇ ಫೀಜುಗಳನ್ನು ಮರು 1 ಪಾವತಿ ಮಾಡತಕ್ಕದ್ದಲ್ಲ.] 1. ಅಧಿಸೂಚನೆ ಸಂಖ್ಯೆ: ಜಿಎಡಿ 10 ಎಸ್ಎಸ್ಆರ್ 1967, ದಿನಾಂಕ:12.04.1967ರ ಮೂಲಕ ಪ್ರತಿಯೋಜಿಸಲಾಗಿದೆ.
(3) ಯಾವುದೇ ಪರೀಕ್ಷೆಗೆ ಸಂದಾಯ ಮಾಡಿದ ಫೀಜನ್ನು, ಅಭ್ಯರ್ಥಿಯು ಪರೀಕ್ಷೆಗಾಗಿ ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಅರವತ್ತು ದಿನಗಳೊಳಗಾಗಿ ಸಂದಾಯ ಮಾಡಿದ ಆ ಫೀಜುಗಳನ್ನು ನಂತರ ಬರುವ ಪರೀಕ್ಷೆಗೆ ವಿನಿಯೋಗಿಸಿಕೊಳ್ಳಬಹುದೆಂದು ಲಿಖಿತದಲ್ಲಿ ಅರ್ಜಿ ಬರೆದು ಕೋರಿದ್ದ ಹೊರತು ಅದನ್ನು ಇತರ ಯಾವುದೇ ಪರೀಕ್ಷೆಗೆ ಜಮೆ ಮಾಡಿಕೊಳ್ಳತಕ್ಕದ್ದಲ್ಲ.
8. ಪುಸ್ತಕಗಳ ಸಂಬಂಧದಲ್ಲಿ ಉಲ್ಲೇಖ.- ಸರ್ಕಾರದಿಂದ ಮಾಡಲಾದ ಸಾಮಾನ್ಯ ಅಥವಾ ವಿಶೇಷ ಆದೇಶದಿಂದ ಉಪಬಂಧಿಸಿರುವುದನ್ನುಳಿದು, ಪರೀಕ್ಷೆಗೆ ಗೊತ್ತುಪಡಿಸಿದಂಥ ಸಂಕ್ಷೇಪಿಸಿಲ್ಲದ ಮತ್ತು ಟಿಪ್ಪಣಿಗಳಿಲ್ಲದ ಪುಸ್ತಕಗಳ ಆವೃತ್ತಿಗಳನ್ನು ಅಭ್ಯರ್ಥಿಗಳು ಪರೀಕ್ಷೆಯ ಕೊಠಡಿಗೆ ಒಯ್ಯಬಹುದು. ಆದರೆ, ಯಾರೇ ಅಭ್ಯರ್ಥಿಯೂ ಪರೀಕ್ಷೆಯ ಕೊಠಡಿಯೊಳಗೆ ಯಾವುದೇ ಟಿಪ್ಪಣಿಗಳು ಅಥವಾ ಗೈಡ್ಗಳು ಅಥವಾ ಇತರ ಯಾವುದೇ ಪುಸ್ತಕಗಳನ್ನು ತರತಕ್ಕದ್ದಲ್ಲ ಅಥವಾ ಇಟ್ಟುಕೊಳ್ಳತಕ್ಕದ್ದಲ್ಲ.
1[8ಎ. ಉಕ್ತಲೇಖನ ನೇಮಕಾತಿ.- ಅಂಧನಾಗಿರುವ ಅಥವಾ ಸ್ವತಃ ಕೈಯಿಂದ ಬರೆಯಲು ಅಶಕ್ತನಾಗಿರುವ ಒಬ್ಬ ಅಭ್ಯರ್ಥಿಯು ಅರ್ಜಿ ಸಲ್ಲಿಸಿದಲ್ಲಿ, ಇಲಾಖಾ ಪರೀಕ್ಷೆಗಳ ಕಾರ್ಯದರ್ಶಿ ಮತ್ತು ನಿಯಂತ್ರಕನು, ಈ ಮುಂದಿನ ಷರತ್ತುಗಳಿಗೆ ಒಳಪಟ್ಟು, ಒಬ್ಬ ಉಕ್ತಲೇಖಕನ ನೆರವನ್ನು ಪಡೆಯಲು ಸದರಿ ಅಭ್ಯರ್ಥಿಗೆ ಅನುಮತಿ ನೀಡಬಹುದು, ಎಂದರೆ: -
(1) ಉಕ್ತಲೇಖನ ನೆರವನ್ನು ಕೋರುವ ಅಭ್ಯರ್ಥಿಯು, ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಪ್ರಮಾಣ ಪತ್ರದೊಂದಿಗೆ ತನ್ನ ಅರ್ಜಿಯನ್ನು ತನ್ನ ಕಛೇರಿಯ ನಿಕಟ ವರಿಷ್ಠಾಧಿಕಾರಿಯ ಮುಖಾಂತರ ಕಳುಹಿಸತಕ್ಕದ್ದು;
(2) ಕಛೇರಿಯ ಆ ವರಿಷ್ಠಾಧಿಕಾರಿಯು ಆಯೋಗಕ್ಕೆ ಅರ್ಜಿಯನ್ನು ಕಳುಹಿಸುವುದಕ್ಕೆ ಮುಂಚೆ ಆ ಅಭ್ಯರ್ಥಿಯು ವಾಸ್ತವವಾಗಿ ಅಶಕ್ತನಾಗಿರುವನೆಂದು ಮತ್ತು ಉಕ್ತಲೇಖಕನ ನೆರವು ಅವನಿಗೆ ಅಗತ್ಯವಿದೆಯೆಂದು ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕದ್ದು.
(3) ಉಕ್ತಲೇಖಕನ ನೆರವನ್ನು ಪಡೆಯಲು ಮಂಜೂರಾತಿ ದೊರೆತಾಗ, ಸಂಬಂಧಪಟ್ಟ ಕೇಂದ್ರದ ಮೇಲ್ವಿಚಾರಕನು ಆ ಅಭ್ಯರ್ಥಿಗಾಗಿ ಒಬ್ಬ ಉಕ್ತಲೇಖಕನನ್ನು ನೇಮಿಸತಕ್ಕದ್ದು. ಮತ್ತು ಕಾರ್ಯದರ್ಶಿ ಮತ್ತು ಇಲಾಖಾ ಪರೀಕ್ಷೆಗಳ ನಿಯಂತ್ರಕನಿಗೆ ಅದನ್ನು ತಿಳಿಸತಕ್ಕದ್ದು.
(4) ಹಾಗೆ ನೇಮಕಗೊಂಡ ಉಕ್ತಲೇಖಕನು ಆ ಅಭ್ಯರ್ಥಿಗಿಂತ ಕಡಿಮೆ ಶ್ರೇಣಿಯವನು ಅಥವಾ ಕಡಿಮೆ ಶಿಕ್ಷಣ ಪಡೆದವನಾಗಿರತಕ್ಕದ್ದು; ಮತ್ತು ಅವನು ಅಭ್ಯರ್ಥಿಗೆ ಸಂಬಂಧಿಯಾಗಿರತಕ್ಕದ್ದಲ್ಲ.
(5) ಮೇಲ್ವಿಚಾರಕನು ಅಭ್ಯರ್ಥಿಗೆ ಒಂದು ಸೂಕ್ತ ಕೊಠಡಿಯನ್ನು ವ್ಯವಸ್ಥೆ ಮಾಡತಕ್ಕದ್ದು ಮತ್ತು ಅವನಿಗಾಗಿ ಒಬ್ಬ ಪರಿವೀಕ್ಷಕನನ್ನು ನೇಮಿಸತಕ್ಕದ್ದು. ಹಾಗೆ ನೇಮಕಗೊಂಡ ಪರಿವೀಕ್ಷಕನ ಪ್ರತಿಯೊಂದು ಪರೀಕ್ಷಾ ಕಾಲಾವಧಿಯಲ್ಲಿ ಬದಲಾಯಿಸತಕ್ಕದ್ದು.
(6) ಅಭ್ಯರ್ಥಿಯು, ಪರೀಕ್ಷೆಯ ಪ್ರತಿಯೊಂದು ಪತ್ರಿಕೆಗಾಗಿ 5 ರೂ.ಗಳ ಮೊತ್ತವನ್ನು ಮುಂಗಡವಾಗಿ ಸಂದಾಯ ಮಾಡತಕ್ಕದ್ದು, ಮತ್ತು ಸದರಿ ಮೊಬಲಗನ್ನು ಪರೀಕ್ಷೆಯು ಮುಕ್ತಾಯವಾದ ನಂತರ ಕೂಡಲೇ ಉಕ್ತಲೇಖಕನಿಗೆ ಸಂದಾಯ ಮಾಡತಕ್ಕದ್ದು.
(7) ಉಕ್ತಲೇಖಕನನ್ನು ನೇಮಕ ಮಾಡಲಾಗಿರುವಲ್ಲಿ, ಅಭ್ಯರ್ಥಿಗೆ ಹದಿನೈದು 1 ನಿಮಿಷಗಳ ಹೆಚ್ಚಿನ ಕಾಲಾವಕಾಶವನ್ನು ನೀಡಬಹುದು.] 1. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 19 ಎಸ್ಎಸ್ಸಿ 1975, ದಿನಾಂಕ:05.07.1978ರ ಮೂಲಕ ಸೇರಿಸಲಾಗಿದೆ.
9. ಉತ್ತೀರ್ಣರಾಗಲು ಅಂಕಗಳು.- (1) ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಉಪಬಂಧಿಸಿರುವುದನ್ನುಳಿದು, ಯಾವುದೇ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತ್ಯೇಕವಾಗಿ ಪ್ರತಿಯೊಂದು ವಿಷಯ ಪತ್ರಿಕೆಯಲ್ಲಿ ಶೇ. ಮೂವತ್ತೈದು ಮತ್ತು ಆ ಪರೀಕ್ಷೆಗಾಗಿ ಗೊತ್ತುಪಡಿಸಿದ ಸರಾಸರಿ ಶೇ. ನಲವತ್ತು ಕನಿಷ್ಠ ಅಂಕಗಳನ್ನು ಪಡೆದಿರಬೇಕು.
(2) ಯಾವುದೇ ಪರೀಕ್ಷೆಯಲ್ಲಿರುವ ಯಾವುದೇ ಪತ್ರಿಕೆ ಅಥವಾ ಪತ್ರಿಕೆಗಳಲ್ಲಿ ಗರಿಷ್ಠ ಅಂಕಗಳ ಶೇ. ಅರವತ್ತು ಕಡಿಮೆಯಿಲ್ಲದಷ್ಟು ಅಂಕಗಳನ್ನು ಗಳಿಸಿರುವ ಅಭ್ಯರ್ಥಿಯನ್ನು, ಪ್ರಥಮ ದರ್ಜೆಯಲ್ಲಿಡತಕ್ಕದ್ದು ಮತ್ತು ಗರಿಷ್ಠ ಅಂಕಗಳ ಶೇ. ಅರವತ್ತಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಯನ್ನು ಪಾಸ್ ದರ್ಜೆಯಲ್ಲಿಡತಕ್ಕದ್ದು.
(3) ಪರೀಕ್ಷೆಯು, ಒಂದಕ್ಕಿಂತ ಹೆಚ್ಚಿನ ಪತ್ರಿಕೆಗಳನ್ನು ಅಥವಾ ಒಂದು ಪತ್ರಿಕೆಯನ್ನು ಅಥವಾ ಹೆಚ್ಚು ಪತ್ರಿಕೆಗಳನ್ನು ಮತ್ತು ಮೌಖಿಕ ಪರೀಕ್ಷೆಯನ್ನು ಒಳಗೊಂಡಿದ್ದರೆ, ಮತ್ತು ಯಾವುದೇ ಪತ್ರಿಕೆಯಲ್ಲಿ ಅಭ್ಯರ್ಥಿಯು ಆ ಪತ್ರಿಕೆಗಾಗಿ ಗೊತ್ತುಪಡಿಸಿದ ಗರಿಷ್ಠ ಅಂಕಗಳ ಶೇಕಡಾ ಅರವತ್ತಕ್ಕಿಂತ ಕಡಿಮೆ ಇಲ್ಲದಷ್ಟು ಅಂಕಗಳನ್ನು ಗಳಿಸಿರುವಲ್ಲಿ, ಯಾವ ಪರೀಕ್ಷೆಯಲ್ಲಿ ಅವನು ಆ ಪತ್ರಿಕೆಯಲ್ಲಿ ಗರಿಷ್ಠ ಅಂಕಗಳ ಪೈಕಿ ಶೇ.ಅರವತ್ತಕ್ಕಿಂತ ಕಡಿಮೆ ಇಲ್ಲದಷ್ಟು ಅಂಕಗಳನ್ನು ಪಡೆದಿರುವನೋ ಆ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದ ದಿನಾಂಕದಿಂದ ಎರಡು ವರ್ಷಗಳೊಳಗೆ ಅವನು ಆ ಪರೀಕ್ಷೆಯ ಇತರ ಪತ್ರಿಕೆಗಳಲ್ಲಿ ಮತ್ತು ಮೌಖಿಕ ಪರೀಕ್ಷೆಯಲ್ಲಿ ಅಗತ್ಯಪಡಿಸಲಾದ ತೇರ್ಗಡೆ ಅಂಕಗಳನ್ನು ಪಡೆಯುವ ಮೂಲಕ ಆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ, ಆ ಪರೀಕ್ಷೆಯ ಆ 1 ಪತ್ರಿಕೆಯಲ್ಲಿ ಅವನು ತೇರ್ಗಡೆಯಾಗಿದ್ದಾನೆಂದು ಭಾವಿಸತಕ್ಕದ್ದು.] 1. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 60 ಎಸ್ಎಸ್ಆರ್ 1976, ದಿನಾಂಕ:26.10.1977ರ ಮೂಲಕ ಪ್ರತಿಯೋಜಿಸಲಾಗಿದೆ. [ಆಯೋಗವು ಸೂಕ್ತವೆಂದು 10. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿ.- (1) 1 ನಿರ್ದಿಷ್ಟಪಡಿಸಬಹುದಾದಂತೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳು ಹೆಸರುಗಳು ಮತ್ತು ಅಂಥ ಇತರ ವಿವರಗಳನ್ನು] ನಿರ್ದಿಷ್ಟಪಡಿಸಿ ಪ್ರತಿಯೊಂದು ಪರೀಕ್ಷೆಯ ಫಲಿತಾಂಶವನ್ನು ಮತ್ತು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ [ಪ್ರತಿಯೊಬ್ಬರು 1 ಅಂಥ ಪರೀಕ್ಷೆಯಲ್ಲಿ ಪಡೆದ ದರ್ಜೆಯನ್ನು] ಆಯೋಗವು ಕರ್ನಾಟಕ ರಾಜ್ಯಪತ್ರದಲ್ಲಿ 1 ಪ್ರಕಟಿಸತಕ್ಕದ್ದು.] 1. ಅಧಿಸೂಚನೆ ಸಂಖ್ಯೆ: ಜಿಎಡಿ 115 ಎಸ್ಎಸ್ಆರ್ 66, ದಿನಾಂಕ:20.01.1967ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಅಭ್ಯರ್ಥಿಯು ಪ್ರತಿಯೊಂದು ಪ್ರಮಾಣ ಪತ್ರಕ್ಕಾಗಿ, ಆಯೋಗವು ಫಲಿತಾಂಶವನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಐವತ್ತು ಪೈಸೆ ಶುಲ್ಕದೊಂದಿಗೆ ಮತ್ತು ಮೂವತ್ತು ದಿನಗಳ ಮುಕ್ತಾಯದ ತರುವಾಯ ಎಪ್ಪತ್ತೈದು ಪೈಸೆ ಶುಲ್ಕದೊಂದಿಗೆ ಅರ್ಜಿಯನ್ನು 1 ಸಲ್ಲಿಸಿದ ತರುವಾಯ,] ಆಯೋಗವು, ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಪ್ರತಿಯೊಬ್ಬ ಅಭ್ಯರ್ಥಿಗೆ, ಅವನು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಬಗ್ಗೆ ಮತ್ತು ಅವನಿಗೆ ನೀಡಲಾಗಿರುವ ದರ್ಜೆಯ ಬಗ್ಗೆ ನಮೂದಿಸಿ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು ಸಹಿ ಮಾಡಿದ ಪ್ರಮಾಣಪತ್ರವನ್ನು ನೀಡತಕ್ಕದ್ದು.
- ಅಧಿಸೂಚನೆ ಸಂಖ್ಯೆ: ಜಿಎಡಿ 115 ಎಸ್ಎಸ್ಆರ್ 66, ದಿನಾಂಕ:20.01.1967ರ ಮೂಲಕ ಪ್ರತಿಯೋಜಿಸಲಾಗಿದೆ.
(3) ಒಬ್ಬ ಅಭ್ಯರ್ಥಿಯು ಪ್ರಮಾಣ ಪತ್ರದ ನಕಲು ಪ್ರತಿಯನ್ನು ಪಡೆಯಲು ಆ ಬಗೆಗಿನ ಕಾರಣಗಳನ್ನು ಸೂಚಿಸುವ ಶಪಥ ಪತ್ರವನ್ನು ಲಗತ್ತಿಸಿದ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆ ಅರ್ಜಿಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಫಲಿತಾಂಶಗಳು ಪ್ರಕಟವಾದ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸಿದ್ದರೆ ಹದಿನೈದು ರೂಪಾಯಿ ಫೀಜನ್ನು ಹಾಗೂ ಒಂದು ವರ್ಷದ ತರುವಾಯ ಸಲ್ಲಿಸಿದ್ದರೆ ಇಪ್ಪತ್ತೈದು ರೂಪಾಯಿ ಫೀಜನ್ನು ಸಂದಾಯ ಮಾಡತಕ್ಕದ್ದು. ಪ್ರಮಾಣ ಪತ್ರದ ನಕಲು ಪ್ರತಿಯನ್ನು ಕೋರಿ ಸಲ್ಲಿಸಿದ ಅರ್ಜಿಯು, ಪರೀಕ್ಷೆಯಲ್ಲಿ ತೇರ್ಗಡೆಯಾದ ತಿಂಗಳು ಮತ್ತು ವರ್ಷವನ್ನು ಕುರಿತ ವಿವರಗಳನ್ನೂ ಸಹ ಒಳಗೊಂಡಿರತಕ್ಕದ್ದು ಮತ್ತು ಮೂಲ ಪ್ರಮಾಣ ಪತ್ರವನ್ನು ಯಾವ ವ್ಯಕ್ತಿಗೆ ನೀಡಲಾಗಿತ್ತೋ ಆ ವ್ಯಕ್ತಿಯೇ ಈ ಅರ್ಜಿದಾರ ಎಂಬುದನ್ನು ಸ್ಥಾಪಿಸಲು ಪರ್ಯಾಪ್ತ ಮಾಹಿತಿಯನ್ನು ಒದಗಿಸತಕ್ಕದ್ದು. ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು-ಇವರ ಹೆಸರಿಗೆ ಬರೆದ ನಿಗದಿಪಡಿಸಲಾದ ಫೀಜಿನ ಮೊತ್ತದಷ್ಟು ಪೋಸ್ಟಲ್ 1 ಆರ್ಡರನ್ನು ಅಥವಾ ಡಿಮ್ಯಾಂಡ್ ಡ್ರಾಫ್ಟನ್ನು ಅಂಥ ಅರ್ಜಿಗೆ ಲಗತ್ತಿಸಿರತಕ್ಕದ್ದು.] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 26 ಎಸ್ಎಸ್ಸಿ 95, ದಿನಾಂಕ 22.03.99ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಂಕಪಟ್ಟಿಗಳನ್ನು ಒದಗಿಸುವುದು.- ಆಯೋಗವು ಕರ್ನಾಟಕ ರಾಜ್ಯಪತ್ರದಲ್ಲಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ ತರುವಾಯ, ಒಂದು ತಿಂಗಳೊಳಗಾಗಿ ಅಂಕಪಟ್ಟಿಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಯಾವುದೇ ಪರೀಕ್ಷೆಯಲ್ಲಿ ಒಳಗೊಂಡ ಯಾವುದೇ ವಿಷಯ ಅಥವಾ 1 ಫೀಜು ಸಂದಾಯವಾದ ತರುವಾಯ ವಿಷಯಗಳ ಸಂಬಂಧದಲ್ಲಿ1 [ಹತ್ತು ರೂಪಾಯಿ] [ಕಾರ್ಯದರ್ಶಿ, ಅಂಕಪಟ್ಟಿಯನ್ನು ಒದಗಿಸತಕ್ಕದ್ದು. ಸಂದಾಯವಾದ ಫೀಜಿಗೆ ಸಾಕ್ಷ್ಯವಾಗಿ1 ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು- ಇವರ ಹೆಸರಿಗೆ ಬರೆದ ಪೋಸ್ಟಲ್ ಆರ್ಡರ್ 1 ಅನ್ನು ಅರ್ಜಿಗೆ ಲಗತ್ತಿಸಿರತಕ್ಕದ್ದು: ಅಥವಾ ಡಿಮ್ಯಾಂಡ್ ಡ್ರಾಫ್ಟ್] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 26 ಎಸ್ಎಸ್ಸಿ 95, ದಿನಾಂಕ 22.03.99ರ ಮೂಲಕ ಪ್ರತಿಯೋಜಿಸಲಾಗಿದೆ.
ಪರಂತು, ಅಕೌಂಟ್ಸ್ (ಹೈಯರ್) ಪರೀಕ್ಷೆಯ ಪತ್ರಿಕೆ-1 ಮತ್ತು ಸಮುದಾಯ ಅಭಿವೃದ್ಧಿ ಪರೀಕ್ಷೆಯ ಭಾಗ-1, ಪತ್ರಿಕೆ-1 ಇವುಗಳ ಸಂಬಂಧದಲ್ಲಿ ಅಭ್ಯರ್ಥಿಗಳು ಶೇ.40ಕ್ಕಿಂತ ಕಡಿಮೆ ಇಲ್ಲದಷ್ಟು ಅಂಕಗಳನ್ನು ಪಡೆದಿದ್ದರೆ ಅಂಥ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಭ್ಯರ್ಥಿಗಳನ್ನು ಶುಲ್ಕ ಸಂದಾಯ ಮಾಡುವಂತೆ ಮತ್ತು ಅರ್ಜಿಯನ್ನು ಸಲ್ಲಿಸುವಂತೆ 1 ಒತ್ತಾಯಪಡಿಸದೆ ಅವರಿಗೆ ಅಂಕಪಟ್ಟಿಗಳನ್ನು ಆಯೋಗವು ನೀಡಬಹುದು.] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 42, ಎಸ್ಎಸ್ಸಿ 77, ದಿನಾಂಕ:22.09.1977ರ ಮೂಲಕ ಸೇರಿಸಲಾಗಿದೆ.
- ಅಂಕಗಳ ಮರು ಎಣಿಕೆ.-(1) ಯಾವುದೇ ಪರೀಕ್ಷೆಯಲ್ಲಿ ಅನುತ್ತೀರ್ಣನೆಂದು 1 ದಲ್ಲಿ ಫಲಿತಾಂಶ ಪ್ರಕಟವಾದ ಘೋಷಿಸಲಾಗಿರುವ ಯಾರೇ ಅಭ್ಯರ್ಥಿಯು1 [ಕರ್ನಾಟಕ ರಾಜ್ಯಪತ್ರ] ನಂತರ ಮೂವತ್ತು ದಿವಸಗಳೊಳಗಾಗಿ, ಸದರಿ ಪರೀಕ್ಷೆಯ ಎಲ್ಲ ಪತ್ರಿಕೆಗಳಲ್ಲಿ ಅಥವಾ ಯಾವುದೇ ಪತ್ರಿಕೆಯಲ್ಲಿ ತಾನು ಪಡೆದ ಅಂಕಗಳ ಮರು ಎಣಿಕೆಗಾಗಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು. 2 ಅಂಥ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು,2 ಮೊತ್ತವನ್ನು [ಇಪ್ಪತ್ತೈದು ರೂಪಾಯಿ] ಠೇವಣಿಯಾಗಿ ಸಂದಾಯ ಮಾಡತಕ್ಕದ್ದು ಮತ್ತು ಅಂಥ ಮೊತ್ತವನ್ನು ಸಂದಾಯ ಮಾಡಿದುದಕ್ಕೆ [ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು-ಇವರ ಹೆಸರಿಗೆ ಸಾಕ್ಷ್ಯವಾಗಿ 1 1 ಅನ್ನು ಅರ್ಜಿಯ ಜೊತೆಗೆ ಬರೆದ ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್] ಒದಗಿಸತಕ್ಕದ್ದು.
- ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 26 ಎಸ್ಎಸ್ಸಿ 95, ದಿನಾಂಕ 22.03.99ರ ಮೂಲಕ ಪ್ರತಿಯೋಜಿಸಲಾಗಿದೆ.
(2) (1)ನೇ ಉಪನಿಯಮದ ಮೇರೆಗಿನ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಆಯೋಗವು ಅಂಕಗಳ ಮರು ಎಣಿಕೆ ಮಾಡುವುದಕ್ಕೆ ವ್ಯವಸ್ಥೆ ಮಾಡತಕ್ಕದ್ದು ಮತ್ತು ಅಭ್ಯರ್ಥಿಯು ಗಳಿಸಿದ ಅಂಕಗಳ ಮರು ಎಣಿಕೆಯ ಸಂಬಂಧದಲ್ಲಿ ಆಯೋಗದ ನಿರ್ಣಯವೇ ಅಂತಿಮವಾಗಿರತಕ್ಕದ್ದು.
(3) ಅಂಕಗಳ ಮರು ಎಣಿಕೆಯ ಪರಿಣಾಮವಾಗಿ ಫಲಿತಾಂಶದಲ್ಲಿ ಮಾರ್ಪಾಟಾದರೆ, (1)ನೇ ಉಪನಿಯಮದ ಮೇರೆಗೆ ಅಭ್ಯರ್ಥಿಯು ಇಟ್ಟ ಠೇವಣಿಯನ್ನು ಅವನಿಗೆ ಹಿಂದಿರುಗಿಸತಕ್ಕದ್ದು. ಇತರ ಸಂದರ್ಭಗಳಲ್ಲಿ ಠೇವಣಿಯನ್ನು ಹಿಂದಿರುಗಿಸತಕ್ಕದ್ದಲ್ಲ.
13. ಪರೀಕ್ಷಕರಿಗೆ ಪರಿಶ್ರಮ ಧನ.- (1) ಈ ಮುಂದಿನ ಕೋಷ್ಟಕದ (1)ನೇ ಅಂಕಣದ ನಮೂದಿನಲ್ಲಿ ನಿರ್ದಿಷ್ಟಪಡಿಸಿದ ಕರ್ತವ್ಯಗಳನ್ನು ನಿರ್ವಹಿಸಿದ್ದಕ್ಕಾಗಿ ಪರೀಕ್ಷಕರಿಗೆ ಸದರಿ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಸಂಭಾವನೆಯನ್ನು ಸಂದಾಯ ಮಾಡತಕ್ಕದ್ದು, ಎಂದರೆ:-
1 [ಕೋಷ್ಟಕ
(ಎ) ಪ್ರಶ್ನೆ ಪತ್ರಿಕೆ ಉತ್ತರಿಸಲು ಅನುಮತಿಸಲಾದ ಕಾಲಾವಧಿಯ ಆಧಾರದ ಮೇಲೆ ಅದನ್ನು ಸಿದ್ಧಪಡಿಸಲು ಈ ಕೆಳಕಂಡಂತೆ ಸಂಭಾವನೆಯನ್ನು ಗೊತ್ತುಪಡಿಸಲಾಗಿದೆ: -
(i) ಮೂರು ಗಂಟೆಗಳ ಮತ್ತು ಅದಕ್ಕೂ ಹೆಚ್ಚಿನ ಕಾಲಾವಧಿಯದ್ದಾಗಿದ್ದರೆ - ಎಪ್ಪತ್ತೈದು ರೂಪಾಯಿಗಳು
(ii) ಎರಡು ಗಂಟೆಗಳ ಮತ್ತು ಅದಕ್ಕೂ ಹೆಚ್ಚು, ಆದರೆ ಮೂರು ಗಂಟೆಗಳಿಗಿಂತ ಕಡಿಮೆ ಕಾಲಾವಧಿಯದ್ದಾಗಿದ್ದರೆ - ಅರವತ್ತು ರೂಪಾಯಿಗಳು
(iii) ಎರಡು ಗಂಟೆಗಳಿಗಿಂತ ಕಡಿಮೆ ಕಾಲಾವಧಿಯದ್ದಾಗಿದ್ದರೆ - ಐವತ್ತು ರೂಪಾಯಿಗಳು
(ಬಿ) ಒಂದು ಪ್ರಶ್ನೆ ಪತ್ರಿಕೆಯ ಉತ್ತರ ಪುಸ್ತಕವನ್ನು ಮೌಲ್ಯ ಮಾಪನ ಮಾಡಲು, ಉತ್ತರಿಸಲು ಅನುಮತಿಸಲಾದ ಕಾಲಾವಧಿಯನ್ನು ಆಧರಿಸಿ ಈ ಕೆಳಕಂಡಂತೆ ಸಂಭಾವನೆಯನ್ನು ಗೊತ್ತುಪಡಿಸಲಾಗಿದೆ:-
(i) ಮೂರು ಗಂಟೆಗಳ ಮತ್ತು ಅದಕ್ಕೂ ಹೆಚ್ಚಿನ ಕಾಲಾವಧಿಯದ್ದಾಗಿದ್ದರೆ - ಮೂರು ರೂಪಾಯಿಗಳು
(ii) ಎರಡು ಗಂಟೆಗಳ ಮತ್ತು ಅದಕ್ಕೂ ಹೆಚ್ಚು, ಆದರೆ - ಎರಡು ರೂಪಾಯಿ ಮೂರು ಗಂಟೆಗಳಿಗಿಂತ ಕಡಿಮೆ ಕಾಲಾವಧಿಯದ್ದಾಗಿದ್ದರೆ ಐವತ್ತು ಪೈಸೆ
(iii) ಎರಡು ಗಂಟೆಗಳಿಗಿಂತ ಕಡಿಮೆ ಕಾಲಾವಧಿಯದ್ದಾಗಿದ್ದರೆ - ಎರಡು 1 ರೂಪಾಯಿಗಳು.] 1. ಅಧಿಸೂಚನೆ ಸಂಖ್ಯೆ ಡಿಪಿಎಆರ್ 10 ಎಸ್ಎಸ್ಸಿ 80, ದಿನಾಂಕ: 14.02.1983ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿರುವ ಮತ್ತು ಈ ಕೆಳಕಂಡ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಮೇಲ್ವಿಚಾರಕರು, ಪರಿವೀಕ್ಷಕರು ಮತ್ತು ಇತರ ಸಿಬ್ಬಂದಿಗೆ ಆ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಸಂಭಾವನೆಯನ್ನು ಸಂದಾಯ ಮಾಡತಕ್ಕದ್ದು:
- ಅಧಿಸೂಚನೆ ಸಂಖ್ಯೆ: ಡಿಪಿಎಆರ್ 19 ಎಸ್ಎಸ್ಸಿ 95, ದಿನಾಂಕ:28.10.1995ರ ಮೂಲಕ ಪ್ರತಿಯೋಜಿಸಲಾಗಿದೆ.
[ಕೋಷ್ಟಕ] 1
| ಕ್ರ. ಸಂ. | ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರವರ್ಗ | ಸಂದಾಯವಾಗುವ ಸಂಭಾವನೆ |
| 1. | ಮುಖ್ಯ ಮೇಲ್ವಿಚಾರಕರು ಅಥವಾ ಸಮನ್ವಯ ಮೇಲ್ವಿಚಾರಕರು ಮತ್ತು ಹೆಚ್ಚುವರಿ ಸಮನ್ವಯ ಮೇಲ್ವಿಚಾರಕರು | ದಿನಕ್ಕೆ 120 ರೂ. ಅರ್ಧ ದಿನಕ್ಕೆ 60 ರೂ. |
| 2. | ಉಪಕೇಂದ್ರಗಳ ಮೇಲ್ವಿಚಾರಕರು ಅಥವಾ ಹೆಚ್ಚುವರಿ ಮೇಲ್ವಿಚಾರಕರು | ದಿನಕ್ಕೆ 90 ರೂ. ಅರ್ಧ ದಿನಕ್ಕೆ 45 ರೂ. |
| 3. | ಪರಿವೀಕ್ಷರು | ದಿನಕ್ಕೆ 75 ರೂ. ಅರ್ಧ ದಿನಕ್ಕೆ 40 ರೂ. |
| 4. | ಗುಮಾಸ್ತ | ದಿನಕ್ಕೆ 60 ರೂ. ಅರ್ಧ ದಿನಕ್ಕೆ 30 ರೂ. |
| 5. | ಚಾಲಕ | ದಿನಕ್ಕೆ 21 ರೂ. |
| 6. | ಪರಿಚಾರಕ, ಜವಾನ, ನೀರು ಕೊಡುವವನು, ಕೆಲಸಗಾರ, ಕಾವಲುಗಾರ ಅಥವಾ ಕಸ ಗುಡಿಸುವವನು. | ದಿನಕ್ಕೆ 21 ರೂ. |
(3) ಆಂಗ್ಲ ಭಾಷೆಯಲ್ಲಿರುವ ಒಂದು ಪ್ರಶ್ನೆಪತ್ರಿಕೆಯನ್ನು ಕನ್ನಡಕ್ಕೆ ಭಾಷಾಂತರಿಸುವುದಕ್ಕಾಗಿ, ಸಂಭಾವನೆಯು ಆಂಗ್ಲ ಭಾಷೆಯಲ್ಲಿನ ಆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವುದಕ್ಕಾಗಿ ಸಂದಾಯ ಮಾಡಲಾದ ಸಂಭಾವನೆಯ ನಾಲ್ಕನೆ ಒಂದು ಭಾಗದಷ್ಟಿರತಕ್ಕದ್ದು. ಆದರೆ, ಆ ಪತ್ರಿಕೆಯನ್ನು ಸಿದ್ಧಪಡಿಸಿದ ಪರೀಕ್ಷಕನನ್ನು ಹೊರತುಪಡಿಸಿ ಬೇರೊಬ್ಬ ವ್ಯಕ್ತಿಯಿಂದ ಅದನ್ನು ಮಾಡಿಸತಕ್ಕದ್ದು.
(4) ಕನ್ನಡ ಮೌಖಿಕ ಪರೀಕ್ಷಾ ಮಂಡಲಿಯ ಒಬ್ಬ ಸದಸ್ಯನಿಗೆ ಸಂದಾಯ ಮಾಡಲಾಗುವ ಉಪವೇಶನ ಶುಲ್ಕವು ದಿನಕ್ಕೆ ಐದು ರೂಪಾಯಿಗಳಾಗಿರತಕ್ಕದ್ದು.
(5) ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುವುದಕ್ಕಾಗಿ ಹಿರಿಯ ಉಪ ನಿರ್ದೇಶಕರು, ಸರ್ಕಾರಿ [1984 ಮೇ 1ನೇ ದಿನದ ತರುವಾಯ ನಡೆಸಲಾದ ಮುದ್ರಣಾಲಯ, ಬೆಂಗಳೂರು ಇವರಿಗೆ 2 2 ಸಂಭಾವನೆಯನ್ನು ಸಂದಾಯ ಪ್ರತಿಯೊಂದು ಪರೀಕ್ಷೆಗಾಗಿ ಮುನ್ನೂರು ರೂಪಾಯಿಗಳ] ಮಾಡತಕ್ಕದ್ದು.
(6) ಅಂಕಗಳ ಮರು ಎಣಿಕೆಗಾಗಿ 3 [ಕಾರ್ಯದರ್ಶಿ ಮತ್ತು ಇಲಾಖಾ ಪರೀಕ್ಷೆಗಳ 3 ನಿಯಂತ್ರಕರಿಗೆ] ಪ್ರತಿಯೊಂದು ಉತ್ತರ ಪತ್ರಿಕೆಗೆ ಒಂದು ರೂಪಾಯಿ ಶುಲ್ಕವನ್ನು ಸಂದಾಯ ಮಾಡತಕ್ಕದ್ದು. ]1 1. ಅಧಿಸೂಚನೆ ಸಂಖ್ಯೆ: ಜಿಎಡಿ 19 ಎಸ್ಎಸ್ಆರ್ 66, ದಿನಾಂಕ: 19.01.1967ರ ಮೂಲಕ ಸೇರಿಸಲಾಗಿದೆ.
2. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 78 ಎಸ್ಎಸ್ಸಿ 83, ದಿನಾಂಕ:20.06.1984ರ ಮೂಲಕ ಪ್ರತಿಯೋಜಿಸಲಾಗಿದೆ.
3. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 33 ಎಸ್ಎಸ್ಸಿ 78, ದಿನಾಂಕ:06.07.1978ರ ಮೂಲಕ ಪ್ರತಿಯೋಜಿಸಲಾಗಿದೆ.
14. ದುರ್ನಡತೆ.-ಯಾವುದೇ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ, ಮತ್ತೊಬ್ಬರಿಂದ ಉತ್ತರ ಬರೆಸಿದ, ಸೃಷ್ಟನೆ ಮಾಡಿದ ಅಥವಾ ಅಕ್ರಮವಾಗಿ ತಿದ್ದಿದ ದಸ್ತಾವೇಜು ಅಥವಾ ದಸ್ತಾವೇಜುಗಳನ್ನು ಸಲ್ಲಿಸಿದ ಅಥವಾ ಸರಿಯಲ್ಲದ ಅಥವಾ ಸುಳ್ಳು ಹೇಳಿಕೆಗಳನ್ನು ನೀಡಿದ ಅಥವಾ ಮುಖ್ಯ ಮಾಹಿತಿಯನ್ನು ಅಡಗಿಸಿಟ್ಟ ಅಥವಾ ಪರೀಕ್ಷಾ ಕೊಠಡಿಯಲ್ಲಿ ಅನ್ಯಾಯದ ಮಾರ್ಗವನ್ನು ಬಳಸಲು ಪ್ರಯತ್ನಿಸಿದ ಅಥವಾ ಅನ್ಯಥಾ ಯಾವುದೇ ಇತರ ಅಕ್ರಮ ಹಾಗೂ ಅನುಚಿತ ಮಾರ್ಗವನ್ನು ಬಳಸಿದ ತಪ್ಪಿತಸ್ಥನೆಂದು ಆಯೋಗಕ್ಕೆ ಕಂಡುಬಂದ ಒಬ್ಬ ಅಭ್ಯರ್ಥಿಯು ಸ್ವತಃ ತಾನು ಕ್ರಿಮಿನಲ್ ಪ್ರಾಸಿಕ್ಯೂಷನ್ಗೆ ಗುರಿಯಾಗುವುದರ ಜೊತೆಗೆ,-
(ಎ) ಅಭ್ಯರ್ಥಿಗಳ ಆಯ್ಕೆಗಾಗಿ ಆಯೋಗವು ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶಿಸದಂತೆ ಅಥವಾ ಯಾವುದೇ ಸಂದರ್ಶನಗಳಿಗೆ ಪ್ರವೇಶ ಪಡೆಯದಂತೆ ಖಾಯಂ ಆಗಿಯಾಗಲಿ ಅಥವಾ ಆಯೋಗವು ನಿರ್ದಿಷ್ಟಪಡಿಸುವ ಅವಧಿಯವರೆಗೆ ಬಹಿಷ್ಕೃತನಾಗತಕ್ಕದ್ದು; ಮತ್ತು
(ಬಿ) ಶಿಸ್ತು ಕ್ರಮಗಳಿಗೆ ಒಳಪಡತಕ್ಕದ್ದು.
ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಯನ್ನು ನಡೆಸುವಿಕೆ) (ತಿದ್ದುಪಡಿ) ನಿಯಮಗಳು, 1995 ಅಧಿಸೂಚನೆ
ಡಿಪಿಎಆರ್ 19 ಎಸ್ಎಸ್ಸಿ 95, ದಿನಾಂಕ 28.10.1995 ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959, (1959ರ ಕರ್ನಾಟಕ ಅಧಿನಿಯಮ, 20) ಇದರ 16 ಮತ್ತು 18ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1966 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಿ ಮುಂದಿನ ನಿಯಮಗಳನ್ನು ರಚಿಸಿದೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) (ತಿದ್ದುಪಡಿ) ನಿಯಮಗಳು, 1995 ಎಂದು ಕರೆಯತಕ್ಕದ್ದು.
(2) ಅವು, ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 5ನೇ ನಿಯಮದ ತಿದ್ದುಪಡಿ.- ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965ರ 5ನೇ ನಿಯಮದ (1)ನೇ ಉಪನಿಯಮಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(1) ಆಯೋಗವು, ಯಾವುದೇ ಪರೀಕ್ಷೆಯನ್ನು ನಡೆಸುವ ದಿನಾಂಕಕ್ಕೆ ಎರಡು ತಿಂಗಳುಗಳಿಗಿಂತ ಕಡಿಮೆಯಿರದಷ್ಟು ಮುಂಚಿತವಾಗಿ ಅದರ ಕಚೇರಿಯ ಸೂಚನಾ ಫಲಕದ ಮೇಲೆ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು ಮತ್ತು ಫಲಿತಾಂಶದ ಪ್ರಕಟಣೆ, ಮುಂದಿನ ಪರೀಕ್ಷೆಯ ದಿನಾಂಕ, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಆಯೋಗವು ಸೂಕ್ತವೆಂದು ಭಾವಿಸುವಂಥ ಇತರ ವಿವರಗಳನ್ನು ಸೂಚಿಸುವ ಸುದ್ದಿಯನ್ನು ರಾಜ್ಯದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡು ಪ್ರಮುಖ ದೈನಿಕ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸತಕ್ಕದ್ದು.'' 3. 13ನೇ ನಿಯಮದ ತಿದ್ದುಪಡಿ.- ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965ರ 13ನೇ ನಿಯಮದ (2)ನೇ ಉಪನಿಯಮಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(2) ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿರುವ ಮತ್ತು ಈ ಕೆಳಕಂಡ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಮೇಲ್ವಿಚಾರಕರು, ಪರಿವೀಕ್ಷಕರು ಮತ್ತು ಇತರ ಸಿಬ್ಬಂದಿಗೆ ಆ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಸಂಭಾವನೆಯನ್ನು ಸಂದಾಯ ಮಾಡತಕ್ಕದ್ದು.
ಕೋಷ್ಟಕ
| ಕ್ರ. ಸಂ. | ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರವರ್ಗ | ಸಂದಾಯವಾಗುವ ಸಂಭಾವನೆ |
| 1. | ಮುಖ್ಯ ಮೇಲ್ವಿಚಾರಕರು ಅಥವಾ ಸಮನ್ವಯ ಮೇಲ್ವಿಚಾರಕರು ಮತ್ತು ಹೆಚ್ಚುವರಿ ಸಮನ್ವಯ ಮೇಲ್ವಿಚಾರಕರು | ದಿನಕ್ಕೆ 120 ರೂ. ಅರ್ಧ ದಿನಕ್ಕೆ 60 ರೂ. |
| 2. | ಉಪಕೇಂದ್ರಗಳ ಮೇಲ್ವಿಚಾರಕರು ಅಥವಾ ಹೆಚ್ಚುವರಿ ಮೇಲ್ವಿಚಾರಕರು | ದಿನಕ್ಕೆ 90 ರೂ. ಅರ್ಧ ದಿನಕ್ಕೆ 45 ರೂ. |
| 3. | ಪರಿವೀಕ್ಷರು | ದಿನಕ್ಕೆ 75 ರೂ. ಅರ್ಧ ದಿನಕ್ಕೆ 40 ರೂ. |
| 4. | ಗುಮಾಸ್ತ | ದಿನಕ್ಕೆ 60 ರೂ. ಅರ್ಧ ದಿನಕ್ಕೆ 30 ರೂ. |
| 5. | ಚಾಲಕ | ದಿನಕ್ಕೆ 21 ರೂ. |
| 6. | ಪರಿಚಾರಕ, ಜವಾನ, ನೀರು ಕೊಡುವವನು, ಕೆಲಸಗಾರ, ಕಾವಲುಗಾರ ಅಥವಾ ಕಸ ಗುಡಿಸುವವನು. | ದಿನಕ್ಕೆ 21 ರೂ. |
ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) (ತಿದ್ದುಪಡಿ) ನಿಯಮಗಳು, 1999 ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್ಎಸ್ಸಿ 95,
ದಿನಾಂಕ 22.03.1999 ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 20) ಇದರ 15ನೇ ಮತ್ತು 18ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965. ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಿ ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) (ತಿದ್ದುಪಡಿ) ನಿಯಮಗಳು, 1999 ಎಂದು ಕರೆಯತಕ್ಕದ್ದು.
(2) ಅವು, ರಾಜಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 10ನೇ ನಿಯಮದ ತಿದ್ದುಪಡಿ.- ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳನ್ನು ನಡೆಸುವಿಕೆ) ನಿಯಮಗಳು, 1965 (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ಇದರ 10ನೇ ನಿಯಮದ (3)ನೇ ಉಪನಿಯಮಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
‘‘(3) ಒಬ್ಬ ಅಭ್ಯರ್ಥಿಯು, ಪ್ರಮಾಣ ಪತ್ರದ ನಕಲು ಪ್ರತಿಯನ್ನು ಪಡೆಯಲು ಆ ಬಗೆಗಿನ ಕಾರಣಗಳನ್ನು ಸೂಚಿಸುವ ಶಪಥ ಪತ್ರವನ್ನು ಲಗತ್ತಿಸಿದ ಅರ್ಜಿಯನ್ನು ಸಲ್ಲಿಸಿ ಅದನ್ನು ಪಡೆಯಬಹುದು ಮತ್ತು ಆ ಅರ್ಜಿಯನ್ನು ಕರ್ನಾಟಕ ರಾಜಪತ್ರದಲ್ಲಿ ಫಲಿತಾಂಶಗಳು ಪ್ರಕಟವಾದ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸಿದ್ದರೆ ಹದಿನೈದು ರೂಪಾಯಿ ಫೀಜನ್ನು ಹಾಗೂ ಒಂದು ವರ್ಷದ ತರುವಾಯ ಸಲ್ಲಿಸಿದ್ದರೆ ಇಪ್ಪತ್ತೈದು ರೂಪಾಯಿ ಫೀಜನ್ನು ಸಂದಾಯ ಮಾಡತಕ್ಕದ್ದು, ಪ್ರಮಾಣ ಪತ್ರದ ನಕಲು ಪ್ರತಿಯನ್ನು ಕೋರಿ ಸಲ್ಲಿಸಿದ ಅರ್ಜಿಯು, ಪರೀಕ್ಷೆಯಲ್ಲಿ ತೇರ್ಗಡೆಯಾದ ತಿಂಗಳು ಮತ್ತು ವರ್ಷವನ್ನು ಕುರಿತ ವಿವರಗಳನ್ನೂ ಸಹ ಒಳಗೊಂಡಿರತಕ್ಕದ್ದು ಮತ್ತು ಮೂಲ ಪ್ರಮಾಣ ಪತ್ರವನ್ನು ಯಾವ ವ್ಯಕ್ತಿಗೆ ನೀಡಲಾಗಿತ್ತೋ ಆ ವ್ಯಕ್ತಿಯೇ ಈ ಅರ್ಜಿದಾರ ಎಂಬುದನ್ನು ಸ್ಥಾಪಿಸಲು ಪರ್ಯಾಪ್ತ ಮಾಹಿತಿಯನ್ನು ಒದಗಿಸತಕ್ಕದ್ದು ಮತ್ತು ಅಂಥ ಅರ್ಜಿಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು- ಇವರ ಹೆಸರಿಗೆ ಬರೆದ, ನಿಗದಿಪಡಿಸಲಾದ ಫೀಜಿನ ಮೊತ್ತದಷ್ಟು ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ನ್ನು ಲಗತ್ತಿಸಿರತಕ್ಕದ್ದು.'' 3. 11ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 11ನೇ ನಿಯಮದಲ್ಲಿ,-
(i) ‘‘ಎರಡು ರೂಪಾಯಿ'' ಎಂಬ ಪದಗಳಿಗೆ ‘‘ಹತ್ತು ರೂಪಾಯಿ'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು ;
(ii) ‘‘ಖಜಾನೆ ರಸೀದಿ'' ಎಂಬ ಪದಗಳಿಗೆ ‘‘ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರ ಹೆಸರಿಗೆ ಬರೆದ ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
4. 12ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 12ನೇ ನಿಯಮದ (1)ನೇ ಉಪನಿಯಮದಲ್ಲಿ,-
(i) ‘‘ಹತ್ತು ರೂಪಾಯಿ'' ಎಂಬ ಪದಗಳಿಗೆ ‘‘ಇಪ್ಪತ್ತೈದು ರೂಪಾಯಿ'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು ;
(ii) ‘‘ಖಜಾನೆ ರಸೀದಿ'' ಎಂಬ ಪದಗಳಿಗೆ ‘‘ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರ ಹೆಸರಿಗೆ ಬರೆದ ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
ಕರ್ನಾಟಕ ಲೋಕಸೇವಾ ಆಯೋಗ (ಪ್ರಕಾರ್ಯಗಳು) ನಿಯಮಗಳು, 1973 ನಿಯಮಗಳ ಅನುಕ್ರಮಣಿಕೆ ನಿಯಮಗಳು:
- ಶೀರ್ಷಿಕೆ ಮತ್ತು ಪ್ರಾರಂಭ 2. ಪರಿಭಾಷೆಗಳು 3. ನೇಮಕಾತಿ ನಿಯಮಗಳು 4. ಪರೀಕ್ಷೆ ಮೂಲಕ ನೇರ ನೇಮಕಾತಿ 5. ಆಯ್ಕೆ ಮೂಲಕ ನೇರ ನೇಮಕಾತಿ 6. ಬಡ್ತಿ ಮೂಲಕ ನೇಮಕಾತಿ 7. ಸಂದರ್ಶನಗಳಿಗಾಗಿ ನೆರವು 8. ವರ್ಗಾವಣೆ ಮೂಲಕ ನೇಮಕಾತಿ 9. ನಿವೃತ್ತಿಯ ನಂತರ ಮರುನಿಯೋಜನೆ 10. ಕೆಲವು ಸಂದರ್ಭಗಳಲ್ಲಿ ವಿಶೇಷ ಕಾರ್ಯವಿಧಾನ 11. ಸಂಕೀರ್ಣ 12. ನಿರಸನ ಮತ್ತು ಉಳಿಸುವಿಕೆಗಳು ಕರ್ನಾಟಕ ಲೋಕಸೇವಾ ಆಯೋಗ (ಪ್ರಕಾರ್ಯಗಳು) ನಿಯಮಗಳು, 1973 (ಜಿಎಸ್ಆರ್ 222, ದಿನಾಂಕ 21.07.1977 ಮತ್ತು ಜಿಎಸ್ಆರ್ 297, ದಿನಾಂಕ 12.10.78 ಮತ್ತು ಜಿಎಸ್ಆರ್ 215 ಕೆಜಿಡಿ 21.08.86ರ ಮೂಲಕ ತಿದ್ದುಪಡಿಯಾದಂತೆ.) ಅಧಿಸೂಚನೆ ಬೆಂಗಳೂರು, ದಿನಾಂಕ 7ನೇ ಏಪ್ರಿಲ್, 1973 ಜಿ.ಎಸ್.ಆರ್. 140.-ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 20) ಇದರ 15 ಮತ್ತು 18ನೇ ಪ್ರಕರಣಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸಿದ ತರುವಾಯ ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸಿದೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.-(1) ಈ ನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಪ್ರಕಾರ್ಯಗಳು) ನಿಯಮಗಳು, 1973 ಎಂದು ಕರೆಯತಕ್ಕದ್ದು.
(2) ಅವು ಕೂಡಲೇ ಜಾರಿಗೆ ಬರತಕ್ಕದ್ದು.
- ಪರಿಭಾಷೆಗಳು.-ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) ‘‘ಅಧಿನಿಯಮ'' ಎಂದರೆ, ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ ಕರ್ನಾಟಕ ಅಧಿನಿಯಮ 20);
(2) ‘‘ನೇಮಕಾತಿ ಪ್ರಾಧಿಕಾರ'' ಎಂದರೆ, ಸರ್ಕಾರ ಅಥವಾ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957 ಇದರ ಅನುಸೂಚಿIIರ ಅಂಕಣ 2 ರಲ್ಲಿ ನಮೂದಿಸಿದ ಪ್ರಾಧಿಕಾರ;
(3) ‘‘ಸೇವೆ'' ಎಂದರೆ, ರಾಜ್ಯದ ಸೇವೆಯಲ್ಲಿನ ಒಂದು ಸೇವೆ ಅಥವಾ ಹುದ್ದೆಗಳ ಒಂದು ಪ್ರವರ್ಗ ಮತ್ತು ಇದರಲ್ಲಿ ಸಿವಿಲ್ ಹುದ್ದೆಯೂ ಸೇರುತ್ತದೆ.
3. ನೇಮಕಾತಿ ನಿಯಮಗಳು.- ಯಾವುದೇ ಸೇವೆಗೆ ಸಂಬಂಧಿಸಿದಂತೆ ನೇಮಕಾತಿ ನಿಯಮಗಳನ್ನು ಮಾಡುವುದಕ್ಕೆ ಸಂಬಂಧಿಸಿ ಆಯೋಗದೊಡನೆ ಸಮಾಲೋಚಿಸಿದಾಗ, ಆಯೋಗವು ನೇಮಕಾತಿಗೆ ಸಂಬಂಧಿಸಿದ ನೇಮಕಾತಿ ವಿಧಾನಗಳು, ಕನಿಷ್ಠ ವಿದ್ಯಾರ್ಹತೆ, ಲಿಖಿತ ಪರೀಕ್ಷೆಯಿದ್ದರೆ ಅದರ ಪಠ್ಯಕ್ರಮ, ನೇಮಕಾತಿ ಸಮಯದಲ್ಲಿ ಅನುಸರಿಸಬೇಕಾದ ತತ್ವಗಳು ಮತ್ತು ಅಂಥ ಇತರ ವಿಷಯಗಳನ್ನು ಒಳಗೊಂಡಂತೆ ನೇಮಕಾತಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಸಲಹೆ ನೀಡತಕ್ಕದ್ದು.
4. ಪರೀಕ್ಷೆ ಮೂಲಕ ನೇರ ನೇಮಕಾತಿ.- (1) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಯಾವುದೇ ಸೇವೆಗೆ ನೇರ ನೇಮಕಾತಿ ಮಾಡುವ ಸಲುವಾಗಿ ನೇಮಕಾತಿ ಪ್ರಾಧಿಕಾರದಿಂದ ವಿಧ್ಯುಕ್ತ ಕೋರಿಕೆಯನ್ನು ಸ್ವೀಕರಿಸಿದ ಮೇಲೆ ಆಯೋಗವು,-
(ಎ) ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ಮತ್ತು ತಾನು ಸೂಕ್ತವೆಂದು ಭಾವಿಸುವಂಥ ಇತರ ವಿಧಾನದ ಮೂಲಕ ಬಹಿರಂಗ ಜಾಹೀರಾತನ್ನು ನೀಡಿ ಅದರಲ್ಲಿ ಅರ್ಹತೆಯ ಷರತ್ತುಗಳು, ಸ್ಪರ್ಧೆಯ ಸ್ವರೂಪ, ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ, ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳ ತಾತ್ಕಾಲಿಕ ಸಂಖ್ಯೆ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಸಲುವಾಗಿ ಇರುವ ಮೀಸಲಾತಿ ಮತ್ತು ಸಂಬಂಧಪಟ್ಟ ಇತರ ಎಲ್ಲ ವಿವರಗಳನ್ನು ನಿರ್ದಿಷ್ಟಪಡಿಸಿ ಮತ್ತು ಆಯೋಗವು ನಿರ್ದಿಷ್ಟಪಡಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ದಿನಾಂಕಕ್ಕೆ ಮುಂಚೆ ಹಾಗೂ ಅಂಥ ಫೀಜನ್ನು ಸಂದಾಯ ಮಾಡಿ ಅರ್ಜಿ ಸಲ್ಲಿಸುವಂತೆ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರುವ ಮತ್ತು ಪರೀಕ್ಷೆಯನ್ನು ತೆಗೆದುಕೊಳ್ಳಲಿಚ್ಫಿಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು ;
(ಬಿ) ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸತಕ್ಕದ್ದು ಮತ್ತು ಕ್ರಮಬದ್ಧವಾಗಿರುವ ಅರ್ಜಿಗಳನ್ನು ಸಲ್ಲಿಸಿರುವ ಮತ್ತು ಅಗತ್ಯಪಡಿಸಿದ ಷರತ್ತುಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದು ;
(ಸಿ) ಸಂಬಂಧಪಟ್ಟ ನೇಮಕಾತಿ ನಿಯಮಗಳ ಉಪಬಂಧಗಳಿಗೆ ಒಳಪಟ್ಟು,-
(i) ಆಯೋಗವು ನಿರ್ಣಯಿಸಬಹುದಾದಂಥ ಯಾವುದೇ ಕೇಂದ್ರ ಅಥವಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಿದ್ದಲ್ಲಿ ಅದನ್ನು ನಡೆಸುವುದಕ್ಕಾಗಿ ಎಲ್ಲ ವ್ಯವಸ್ಥೆ ಮಾಡತಕ್ಕದ್ದು; ಮತ್ತು
(ii) ಲಿಖಿತ ಪರೀಕ್ಷೆಯಲ್ಲಿ ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆ ಇದ್ದರೆ ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಸಂಬಂಧಪಟ್ಟಂತೆ ಜಾರಿಯಲ್ಲಿರುವ ಆದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಯೋಗ್ಯತಾ ಕ್ರಮದಲ್ಲಿ ಸಿದ್ಧಪಡಿಸತಕ್ಕದ್ದು.
(1ಎ) ಆಯೋಗವು, ತನ್ನ ಸೂಚನಾ ಫಲಕದ ಮೇಲೆ,-
(ಎ) ಲಿಖಿತ ಪರೀಕ್ಷೆಯ ಮೌಲ್ಯಮಾಪನ ಮುಗಿದ ನಂತರ ಕೂಡಲೇ ಸದರಿ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳನ್ನು ತೋರಿಸುವ ಮತ್ತು ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳನ್ನು ಸೂಚಿಸುವ ಒಂದು ಪಟ್ಟಿಯನ್ನು; ಮತ್ತು
(ಬಿ) ಸಂದರ್ಶನ ಅಥವಾ ಮೌಖಿಕ ಪರೀಕ್ಷೆ ನಡೆಸಿದ ಪ್ರತಿ ದಿನ ಅಥವಾ ಮರುದಿನ ಆ ದಿನದ ಸಂದರ್ಶನ ಅಥವಾ ಮೌಖಿಕ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುನ್ನ, ಸದರಿ ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಪಡೆದ ಅಂಕಪಟ್ಟಿಯನ್ನು -ಪ್ರಕಟಿಸತಕ್ಕದ್ದು:
ಪರಂತು, ಬೆಂಗಳೂರನ್ನು ಹೊರತುಪಡಿಸಿ ಇತರ ಯಾವುದೇ ಸ್ಥಳದಲ್ಲಿ ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯನ್ನು ನಡೆಸಿದ್ದರೆ, ಅಂಥ ಇತರ ಸ್ಥಳದಲ್ಲಿ ಸದರಿ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
- ಜಿ.ಎಸ್.ಆರ್. 297 ಕೆಜಿಡಿ 12.10.1978 (ಅಧಿಸೂಚನೆ ಸಂಖ್ಯೆ ಡಿಪಿಎಆರ್ 35 ಎಸ್ಎಸ್ಸಿ 77 (1) ದಿನಾಂಕ 26.09.1978)ರ ಮೂಲಕ ಸೇರಿಸಲಾಗಿದೆ.
(2) ಆಯೋಗವು, ಕರ್ನಾಟಕ ರಾಜ್ಯಪತ್ರದಲ್ಲಿ ಮತ್ತು ಆಯೋಗದ ಕಚೇರಿಯ ಸೂಚನಾ ಫಲಕದ ಮೇಲೆ ಸಹ (1)ನೇ ಉಪ ನಿಯಮದ (ಸಿ) ಖಂಡದ ಮೇರೆಗೆ ಸಿದ್ಧಪಡಿಸಿದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸತಕ್ಕದ್ದು ಮತ್ತು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಅವರು ಅಂಚೆ ವೆಚ್ಚದೊಂದಿಗೆ ಅರ್ಜಿಯನ್ನು ಹಾಕಿಕೊಂಡಿದ್ದರೆ ಫಲಿತಾಂಶವನ್ನು ತಿಳಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿಗಳೊಂದಿಗೆ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಿಕೊಡತಕ್ಕದ್ದು.
(3) ಆಯೋಗವು,1 [ಸೂಚನಾ ಫಲಕದ ಮೇಲೆ (1ಎ) ಉಪನಿಯಮದ (ಎ) ಬಾಬಿನ 1 ಅಥವಾ ಮೇರೆಗೆ ಅರ್ಹತಾ ಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದ ಅರವತ್ತು ದಿನಗಳ ಒಳಗಾಗಿ] ಆಯೋಗವು ಅಂಕಪಟ್ಟಿಯನ್ನು ರವಾನೆ ಮಾಡಿದ ದಿನಾಂಕದಿಂದ ನಲವತ್ತೈದು ದಿನಗಳ ಒಳಗಾಗಿ, ಇವುಗಳಲ್ಲಿ ಯಾವುದು ನಂತರಮೋ ಆ ದಿನದೊಳಗೆ ಸಲ್ಲಿಸಲಾದ ಅಭ್ಯರ್ಥಿಯ ಅರ್ಜಿಯ ಮೇಲೆ ಯಾರೇ ಅಭ್ಯರ್ಥಿಯು ಗಳಿಸಿದ ಅಂಕಗಳ ಮರುಎಣಿಕೆಗಾಗಿ ಅಗತ್ಯ ವ್ಯವಸ್ಥೆ ಮಾಡತಕ್ಕದ್ದು ಮತ್ತು ಆ ಬಗೆಗಿನ ಫಲಿತಾಂಶವನ್ನು ಅಂಥ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಅಭ್ಯರ್ಥಿಗೆ ತಿಳಿಸತಕ್ಕದ್ದು. ಪ್ರತಿ ಪತ್ರಿಕೆಯ ಅಂಕಗಳ ಮರುಎಣಿಕೆ ಫೀಜು ಹತ್ತು ರೂಪಾಯಿ ಅಥವಾ ಹತ್ತು ರೂಪಾಯಿಗೆ ಮೀರದಂತೆ ಆಯೋಗವು ನಿಗದಿಪಡಿಸಬಹುದಾದ ಇತರ ಮೊತ್ತವಾಗಿರತಕ್ಕದ್ದು.
- ಜಿ.ಎಸ್.ಆರ್. 215 ಕೆಜಿಡಿ 21.8.1986 (ಅಧಿಸೂಚನೆ ಸಂಖ್ಯೆ ಡಿಪಿಎಆರ್ 47 ಎಸ್ಎಸ್ಸಿ 84 ದಿನಾಂಕ 8.08.1986)ರ ಮೂಲಕ ಪ್ರತಿಯೋಜಿಸಲಾಗಿದೆ.
ಅಂಕಗಳ ಮರುಎಣಿಕೆಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಮತ್ತು ಇಲಾಖಾ ಪರೀಕ್ಷೆಗಳ ನಿಯಂತ್ರಕನಿಗೆ ಪ್ರತಿಯೊಂದು ಉತ್ತರ ಪುಸ್ತಕಕ್ಕೆ ಒಂದು ರೂಪಾಯಿ ಫೀಜು ಸಂದಾಯವಾಗತಕ್ಕದ್ದು.
(4) ಆಯೋಗವು, ಪ್ರತಿಯೊಬ್ಬ ಅಭ್ಯರ್ಥಿಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಪಟ್ಟಿಯನ್ನು ಅವನಿಗೆ ಒದಗಿಸತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಯಿಂದ ಅರ್ಜಿಯ ಫೀಜಿನೊಂದಿಗೆ ಎರಡು ರೂಪಾಯಿಗಳ ಫೀಜನ್ನು ಸಂಗ್ರಹಿಸತಕ್ಕದ್ದು.
(5) ಆಯೋಗವು, ಫಲಿತಾಂಶಗಳು ಪ್ರಕಟವಾದ ದಿನಾಂಕದಿಂದ ಒಂದು ವರ್ಷದೊಳಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಿದಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಇತರ ಯಾರೇ ಅಭ್ಯರ್ಥಿಯು ಪಡೆದ ಅಂಕಗಳ ಪಟ್ಟಿಯನ್ನು ಅವನಿಗೆ ಒದಗಿಸತಕ್ಕದ್ದು. ಪ್ರತಿಯೊಬ್ಬ ಅಭ್ಯರ್ಥಿಯ ಅಂಕಗಳ ಪಟ್ಟಿಗಾಗಿ ಫೀಜು ಎರಡು ರೂಪಾಯಿ ಅಥವಾ ಎರಡು ರೂಪಾಯಿಯನ್ನು ಮೀರದಂತೆ ಆಯೋಗವು ನಿಗದಿಪಡಿಸಬಹುದಾದಂಥ ಇತರ 1 ಮೊತ್ತವಾಗಿರತಕ್ಕದ್ದು.] 1. ಜಿಎಸ್ಆರ್ 222 ಕೆಜಿಡಿ 21.07.1977 (ಅಧಿಸೂಚನೆ ಸಂಖ್ಯೆ ಡಿಪಿಎಆರ್ 8 ಎಸ್ಎಸ್ಸಿ 77 ದಿನಾಂಕ 23.05.1977)ರ ಮೂಲಕ ಪ್ರತಿಯೋಜಿಸಲಾಗಿದೆ.
5. ಆಯ್ಕೆ ಮೂಲಕ ನೇರ ನೇಮಕಾತಿ.- (1) ಆಯ್ಕೆ ಮೂಲಕ ಯಾವುದೇ ಸೇವೆಗೆ ನೇರ ನೇಮಕಾತಿಗಾಗಿ ನೇಮಕಾತಿ ಪ್ರಾಧಿಕಾರದಿಂದ ವಿಧ್ಯುಕ್ತ ಕೋರಿಕೆಯನ್ನು ಸ್ವೀಕರಿಸಿದ ತರುವಾಯ ಆಯೋಗವು,-
(ಎ) ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ಮತ್ತು ತಾನು ಸೂಕ್ತವೆಂದು ಭಾವಿಸುವಂಥ ಇತರ ವಿಧಾನದ ಮೂಲಕ ಬಹಿರಂಗ ಜಾಹೀರಾತನ್ನು ನೀಡಿ ಅದರಲ್ಲಿ ಅರ್ಹತೆಯ ಷರತ್ತುಗಳು, ಸ್ಪರ್ಧೆಯ ಸ್ವರೂಪ, ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ, ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳ ತಾತ್ಕಾಲಿಕ ಸಂಖ್ಯೆ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಸಲುವಾಗಿ ಇರುವ ಮೀಸಲಾತಿ ಮತ್ತು ಸಂಬಂಧಪಟ್ಟ ಇತರ ಎಲ್ಲ ವಿವರಗಳನ್ನು ನಿರ್ದಿಷ್ಟಪಡಿಸಿ, ಆಯೋಗವು ನಿರ್ದಿಷ್ಟಪಡಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ದಿನಾಂಕಕ್ಕೆ ಮುಂಚೆ ಹಾಗೂ ಅಂಥ ಫೀಜನ್ನು ಸಂದಾಯ ಮಾಡಿ ಅರ್ಜಿ ಸಲ್ಲಿಸುವಂತೆ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರುವ ಮತ್ತು ಪರೀಕ್ಷೆಯನ್ನು ತೆಗೆದುಕೊಳ್ಳಲಿಚ್ಫಿಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು;
(ಬಿ) ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಕರ್ನಾಟಕ ಸಿವಿಲ್ ಸೇವೆಗಳ (ಆಯ್ಕೆ ಮೂಲಕ ನೇರ ನೇಮಕಾತಿ) ನಿಯಮಗಳು, 1973ರ ಅನುಸಾರವಾಗಿ ಆಯ್ಕೆ ಮಾಡತಕ್ಕದ್ದು.
(1ಎ) ಆಯೋಗವು, ತನ್ನ ಸೂಚನಾ ಫಲಕದ ಮೇಲೆ,-
(ಎ) ಲಿಖಿತ ಪರೀಕ್ಷೆಯ ಮೌಲ್ಯಮಾಪನ ಮುಗಿದ ನಂತರ, ಕೂಡಲೇ ಸದರಿ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳನ್ನು ತೋರಿಸುವ ಮತ್ತು ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳನ್ನು ಸೂಚಿಸುವ ಒಂದು ಪಟ್ಟಿಯನ್ನು ; ಮತ್ತು (ಬಿ) ಸಂದರ್ಶನ ಅಥವಾ ಮೌಖಿಕ ಪರೀಕ್ಷೆ ನಡೆಸಿದ ಪ್ರತಿ ದಿನ ಅಥವಾ ಮರುದಿನ ಆ ದಿನದ ಸಂದರ್ಶನ ಅಥವಾ ಮೌಖಿಕ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುನ್ನ, ಸದರಿ ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಪಡೆದ ಅಂಕಗಳ ಪಟ್ಟಿಯನ್ನು ಪ್ರಕಟಿಸತಕ್ಕದ್ದು:
ಪರಂತು, ಬೆಂಗಳೂರನ್ನು ಹೊರತುಪಡಿಸಿ ಇತರ ಯಾವುದೇ ಸ್ಥಳದಲ್ಲಿ ಸಂದರ್ಶನ ಅಥವಾ 1 ಮೌಖಿಕ ಪರೀಕ್ಷೆಯನ್ನು ನಡೆಸಿದ್ದರೆ ಸದರಿ ಪಟ್ಟಿಯನ್ನು ಅಂಥ ಇತರ ಸ್ಥಳದಲ್ಲಿ ಪ್ರಕಟಿಸತಕ್ಕದ್ದು.] 1. ಜಿ.ಎಸ್.ಆರ್. 297 ಕೆಜಿಡಿ 12.10.1978 (ಅಧಿಸೂಚನೆ ಸಂಖ್ಯೆ ಡಿಪಿಎಆರ್ 35 ಎಸ್ಎಸ್ಸಿ 77(1) ದಿನಾಂಕ 26.09.1978)ರ ಮೂಲಕ ಸೇರಿಸಲಾಗಿದೆ.
(2) ಆಯೋಗವು ಕರ್ನಾಟಕ ರಾಜ್ಯಪತ್ರದಲ್ಲಿ ಮತ್ತು ಆಯೋಗದ ಕಚೇರಿಯ ಸೂಚನಾ ಫಲಕದ ಮೇಲೆ ಸಹ (1)ನೇ ಉಪನಿಯಮದ (ಸಿ) ಖಂಡದ ಮೇರೆಗೆ ಸಿದ್ಧಪಡಿಸಿದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸತಕ್ಕದ್ದು ಮತ್ತು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಅವರು ಅಂಚೆ ವೆಚ್ಚದೊಂದಿಗೆ ಅರ್ಜಿಯನ್ನು ಹಾಕಿಕೊಂಡಿದ್ದರೆ, ಫಲಿತಾಂಶವನ್ನು ತಿಳಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿಗಳೊಂದಿಗೆ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಿಕೊಡತಕ್ಕದ್ದು.
(3) ಆಯೋಗವು ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಪಡೆದ ಅಂಕಗಳ ಪಟ್ಟಿಯನ್ನು ಅವನಿಗೆ ಒದಗಿಸತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ ಪ್ರತಿ ಅಭ್ಯರ್ಥಿಯಿಂದ ಅರ್ಜಿ ಫೀಜಿನೊಂದಿಗೆ ಎರಡು ರೂಪಾಯಿ ಫೀಜನ್ನು ಸಂಗ್ರಹಿಸತಕ್ಕದ್ದು.
(4) ಆಯೋಗವು ಫಲಿತಾಂಶಗಳು ಪ್ರಕಟವಾದ ದಿನಾಂಕದಿಂದ ಒಂದು ವರ್ಷದೊಳಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಿದಲ್ಲಿ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ ಇತರ ಯಾರೇ ಅಭ್ಯರ್ಥಿಯು ಪಡೆದ ಅಂಕಗಳ ಪಟ್ಟಿಯನ್ನು ಅವನಿಗೆ ಒದಗಿಸತಕ್ಕದ್ದು. ಪ್ರತಿಯೊಬ್ಬ ಅಭ್ಯರ್ಥಿಯ ಅಂಕಪಟ್ಟಿಗಾಗಿ ಫೀಜು ಎರಡು ರೂಪಾಯಿ ಅಥವಾ ಎರಡು ರೂಪಾಯಿಯನ್ನು ಮೀರದಂತೆ ಆಯೋಗವು ನಿಗದಿಪಡಿಸಬಹುದಾದಂಥ ಇತರ ಮೊತ್ತವಾಗಿರತಕ್ಕದ್ದು.
ವಿವರಣೆ:- (3) ಮತ್ತು (4)ನೇ ಉಪನಿಯಮಗಳ ಉದ್ದೇಶಗಳಿಗಾಗಿ ‘‘ಅರ್ಹತಾ ಪರೀಕ್ಷೆ'' ಎಂಬ ಪದಾವಳಿಯು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಆಯ್ಕೆ ಮೂಲಕ ನೇರನೇಮಕಾತಿ) 1 ನಿಯಮಗಳು, 1973 ರಲ್ಲಿ ಅದಕ್ಕೆ ಕೊಡಲಾದ ಅರ್ಥವನ್ನೇ ಹೊಂದಿರತಕ್ಕದ್ದು.] 1. ಜಿಎಸ್ಆರ್ 222 ಕೆಜಿಡಿ 21.07.1977 (ಅಧಿಸೂಚನೆ ಸಂಖ್ಯೆ ಡಿಪಿಎಆರ್ 8 ಎಸ್ಎಸ್ಸಿ 77 ದಿನಾಂಕ 23.05.1977)ರ ಮೂಲಕ ಪ್ರತಿಯೋಜಿಸಲಾಗಿದೆ.
6. ಬಡ್ತಿ ಮೂಲಕ ನೇಮಕಾತಿ.- (1) ಯಾರೇ ಒಬ್ಬ ಅಭ್ಯರ್ಥಿ ಅಥವಾ ಅಭ್ಯರ್ಥಿಗಳ ಬಡ್ತಿಯ ಸಂಬಂಧವಾಗಿ ಅವರ ಸೂಕ್ತತೆಗೆ ಸಂಬಂಧಪಟ್ಟಂತೆ ಆಯೋಗದೊಡನೆ ಸಮಾಲೋಚಿಸಿದಾಗ, ಆಯೋಗವು,-
(i) ಆಯ್ಕೆಯ ಮೂಲಕ ಬಡ್ತಿಯನ್ನು ನೀಡುವುದಾಗಿದ್ದರೆ, ಎಲ್ಲ ಅರ್ಹ ಅಭ್ಯರ್ಥಿಗಳ ಸೂಕ್ತತೆಯನ್ನು ಎಲ್ಲ ವಿಧದಲ್ಲಿ ಪರಿಗಣಿಸತಕ್ಕದ್ದು ಮತ್ತು ಅಂಥ ಪ್ರತಿಯೊಬ್ಬ ಅಭ್ಯರ್ಥಿಯು ಅವನನ್ನು ನೇಮಕ ಮಾಡಲು ಪ್ರಸ್ತಾವಿಸಿರುವ ಸೇವೆಯ ಸಂಬಂಧದಲ್ಲಿನ ಕರ್ತವ್ಯಗಳನ್ನು ನಿರ್ವಹಿಸಲು ಅರ್ಹನೇ ಅಥವಾ ಸೂಕ್ತ ವ್ಯಕ್ತಿಯೇ ಎಂಬುದರ ಬಗ್ಗೆ ಸಲಹೆ ನೀಡತಕ್ಕದ್ದು ಮತ್ತು ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರುವಷ್ಟು ಸಂಖ್ಯೆಯ ಅಂಥ ಅಭ್ಯರ್ಥಿಗಳ ಪಟ್ಟಿಯನ್ನು ಯೋಗ್ಯತಾ ಕ್ರಮದಲ್ಲಿ ಸಿದ್ಧಪಡಿಸತಕ್ಕದ್ದು;
(ii) ಜ್ಯೇಷ್ಠತಾ ಹಾಗೂ ಯೋಗ್ಯತೆಯ ಆಧಾರದ ಮೇಲೆ ಬಡ್ತಿಯನ್ನು ನೀಡುವುದಾಗಿದ್ದರೆ ಆಯೋಗವು ನೇಮಕ ಮಾಡಲು ಪ್ರಸ್ತಾವಿಸಿದ ಸೇವೆಯ ಸಂಬಂಧದಲ್ಲಿನ ಕರ್ತವ್ಯಗಳನ್ನು ನಿರ್ವಹಿಸಲು ಅವನ ಸಾಮಥ್ರ್ಯಕ್ಕೊಳಪಟ್ಟು ಜ್ಯೇಷ್ಠತಾ ಕ್ರಮದಲ್ಲಿ ಬಡ್ತಿಗೆ ಅರ್ಹರಾದ ಅಭ್ಯರ್ಥಿಗಳನ್ನು ಪರಿಗಣಿಸತಕ್ಕದ್ದು ಮತ್ತು ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರುವಷ್ಟು ಸಂಖ್ಯೆಯ ಅಂಥ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದರ ಒಂದು ಪ್ರತಿಯನ್ನು ನೇಮಕಾತಿ ಪ್ರಾಧಿಕಾರಕ್ಕೆ ರವಾನಿಸತಕ್ಕದ್ದು.
(2) (1)ನೇ ಉಪನಿಯಮದ ಮೇರೆಗೆ ಅಭ್ಯರ್ಥಿಗಳ ಸೂಕ್ತತೆಯನ್ನು ನಿರ್ಣಯಿಸುವ ಉದ್ದೇಶಕ್ಕಾಗಿ, ಆಯೋಗವು ಅಭ್ಯರ್ಥಿಗಳನ್ನು ಕರೆಸಿಕೊಂಡು ಅವರನ್ನು ಸಂದರ್ಶಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.
7. ಸಂದರ್ಶನಗಳಿಗಾಗಿ ನೆರವು.- ಈ ನಿಯಮಗಳ ಮೇರೆಗೆ ಸಂದರ್ಶನಗಳ ಉದ್ದೇಶಕ್ಕಾಗಿ ಆಯೋಗವು ತಾನು ಅಗತ್ಯವೆಂದು ಭಾವಿಸಬಹುದಾದಂಥ ರಾಜ್ಯ ಸರ್ಕಾರದ ಅಧಿಕಾರಿಯ ಅಥವಾ ಇತರ ತಜ್ಞರ ನೆರವನ್ನು ಪಡೆಯಬಹುದು.
8. ವರ್ಗಾವಣೆ ಮೂಲಕ ನೇಮಕಾತಿ.- ಒಂದು ವರ್ಗದ ಸೇವೆಯಿಂದ ಇನ್ನೊಂದು ವರ್ಗದ ಸೇವೆಗೆ ವರ್ಗಾವಣೆ ಮಾಡುವುದಕ್ಕಾಗಿ ಯಾರೇ ಒಬ್ಬ ಅಭ್ಯರ್ಥಿ ಅಥವಾ ಅಭ್ಯರ್ಥಿಗಳ ಸೂಕ್ತತೆಯ ಬಗ್ಗೆ ಆಯೋಗದೊಡನೆ ಸಮಾಲೋಚಿಸಿದಾಗ, ಆಯೋಗವು ಅಂಥ ಅಭ್ಯರ್ಥಿಯ ಸೂಕ್ತತೆಯನ್ನು ಪರ್ಯಾಲೋಚಿಸತಕ್ಕದ್ದು ಮತ್ತು ಅವನ ವಿದ್ಯಾರ್ಹತೆಗಳು ಸಾಕಷ್ಟಾಗಿವೆಯೋ ಮತ್ತು ಅವನನ್ನು ವರ್ಗಾವಣೆ ಮಾಡಲು ಪ್ರಸ್ತಾವಿತ ಸೇವೆಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆಗೆ ಅವನು ಸೂಕ್ತನೇ ಹೇಗೆ ಎಂದು ಅವನ ದಾಖಲೆಗಳಿಂದ ದೃಢಪಡುತ್ತವೆಯೇ ಹೇಗೆ ಎಂಬ ಬಗ್ಗೆ ಸಲಹೆ ನೀಡತಕ್ಕದ್ದು.
9. ನಿವೃತ್ತಿಯ ನಂತರ ಮರು ನಿಯೋಜನೆ.- ಸಿವಿಲ್ ಪಿಂಚಣಿ ಮೇಲೆ ನಿವೃತ್ತನಾದ ಯಾರೇ ವ್ಯಕ್ತಿಯ ಮರು ನಿಯೋಜನೆಗೆ ಸಂಬಂಧಿಸಿದಂತೆ ಆಯೋಗದೊಡನೆ ಸಮಾಲೋಚಿಸಿದಾಗ, ಆಯೋಗವು, ಪ್ರಸ್ತಾವಿತ ವ್ಯಕ್ತಿಯು ಎಲ್ಲ ವಿಧದಲ್ಲೂ ಸೂಕ್ತನೇ ಹೇಗೆ ಎಂಬುದನ್ನು ಪರ್ಯಾಲೋಚಿಸತಕ್ಕದ್ದು ಮತ್ತು ಅವನ ವಿದ್ಯಾರ್ಹತೆ ಸಾಕಷ್ಟಾಗಿದೆಯೋ ಮತ್ತು ಅವನನ್ನು ನಿಯೋಜಿಸಲು ಪ್ರಸ್ತಾವಿಸಿದ ಸೇವೆಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆಗೆ ಅವನು ಸೂಕ್ತನೇ ಹೇಗೆ ಎಂಬುದನ್ನು ಅವನ ದಾಖಲೆಗಳಿಂದ ದೃಢಪಡುತ್ತವೆಯೇ ಹೇಗೆ ಎಂಬ ಬಗ್ಗೆ ಸಲಹೆ ನೀಡತಕ್ಕದ್ದು.
10. ಕೆಲವು ಸಂದರ್ಭಗಳಲ್ಲಿ ವಿಶೇಷ ಕಾರ್ಯವಿಧಾನ.- 3, 4, 5, 6, 7 ಮತ್ತು 8ನೇ ನಿಯಮಗಳಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು ಯಾವುದೇ ವಿಶಿಷ್ಟ ಸೇವೆಗೆ ನೇಮಕಮಾಡುವ ಸಂಬಂಧದಲ್ಲಿ ಆಯೋಗದೊಂದಿಗೆ ಸಮಾಲೋಚಿಸಿ ಆದೇಶದ ಮೂಲಕ ವಿಶೇಷ ಕಾರ್ಯವಿಧಾನವನ್ನು ಗೊತ್ತುಪಡಿಸಬಹುದು.
11. ಸಂಕೀರ್ಣ.- (1) ಯಾವುದೇ ನೇಮಕಾತಿ ಪ್ರಾಧಿಕಾರವು ಸಂಬಂಧಪಟ್ಟ ನೇಮಕಾತಿ ನಿಯಮಗಳು ಮತ್ತು ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು, 1958 ಇವುಗಳನ್ನು ಉಲ್ಲಂಘಿಸಿ ಮಾಡಿದ ಯಾವುವೇ ನೇಮಕಾತಿಗಳು, ಬಡ್ತಿಗಳು ಮತ್ತು ವರ್ಗಾವಣೆಗಳ ಬಗ್ಗೆ ಆಯೋಗವು ಸರ್ಕಾರಕ್ಕೆ ವರದಿ ಮಾಡತಕ್ಕದ್ದು.
(2) ಆಯೋಗದ ಸಮಾಲೋಚನೆಗಾಗಿ ಒಪ್ಪಿಸಿದ ಯಾವುದೇ ವಿಷಯದ ಪರ್ಯಾಲೋಚನೆಗಾಗಿ, ಆಯೋಗವು ಅಗತ್ಯವೆಂದು ಪರಿಗಣಿಸುವ ಯಾವುದೇ ಮಾಹಿತಿಯನ್ನು ಅನುಚಿತ ಕ್ರಮವಿಲ್ಲದೆ ಒದಗಿಸಲು ಸಾಧ್ಯವಿಲ್ಲವೆಂದು ಅಥವಾ ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ತಡೆಹಿಡಿಯಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯು ಪ್ರಮಾಣೀಕರಿಸಿದ ಹೊರತು ಅದನ್ನು ಸರ್ಕಾರವು ಆಯೋಗಕ್ಕೆ ಒದಗಿಸತಕ್ಕದ್ದು.
12. ನಿರಸನ ಮತ್ತು ಉಳಿಸುವಿಕೆಗಳು.- ಕರ್ನಾಟಕ ಲೋಕಸೇವಾ ಆಯೋಗ (ಪ್ರಕಾರ್ಯಗಳು) ನಿಯಮಗಳು, 1957 ಇದನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
The above translation of the Karnataka Public Service Commission (Conduct of Business and Additional Functions) Act, 1959 (20 of 1959) & Karnataka Public Service Commission (Conduct of Service Examination) Rules 1965 & Karnataka Public Service Commission (Functions) Rules, 1973 shall be authoritative text in the Kannada Language under section 5A of the Karnataka Official Language Act, 1963 Governor of Karnataka ಭಾರತದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಪಿ.ಆರ್. 1339 ಜಿ.ಕೆ. ಬೋರೇಗೌಡ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ.
ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು - 01.