(೧) ಬೋಧಕ ವಿಭಾಗಕ್ಕೆ ಸಂದಾಯ ಮಾಡಬೇಕಾದ ವೇತನ ಮತ್ತು ಭತ್ಯೆಗಳು ಯು.ಜಿ.ಸಿ. ವೇತನ ಶ್ರೇಣಿಗೆ ಸರಿಸಮಾನವಾಗಿರತಕ್ಕದ್ದು;
(೨) ಇತರ ನೌಕರರ ವೇತನ ಮತ್ತು ಭತ್ಯೆಗಳು, ತತ್ಸಮಾನ ಶ್ರೇಣಿಯಲ್ಲಿರುವ ಇತರ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾಗಿರತಕ್ಕದ್ದು.
(2) ಬೋಧಕ ಸಿಬ್ಬಂದಿಯ ನೇಮಕಾತಿ ವಿಧಾನವು, ಕಾಲಕಾಲಕ್ಕೆ ಹೊರಡಿಸಿದ ಯುಜಿಸಿ ವಿನಿಯಮಗಳಿಗನುಸಾರವಾಗಿರತಕ್ಕದ್ದು. ಬೋಧಕೇತರ ಸಿಬ್ಬಂದಿಗೆ ಸಂಬಂಧಿಸಿದಂತೆ, ಸಂದರ್ಭಾನುಸಾರವಾಗಿ ಅರ್ಹತೆ ಹಾಗೂ ರಾಜ್ಯ ಸರ್ಕಾರದ ನೇಮಕಾತಿ ಕಾರ್ಯರವೀತಿಗೆ ಅನುಸಾರವಾಗಿರತಕ್ಕದ್ದು.