೪ನೇ ನಿಯಮದ ಉಪಬಂಧಗಳು ವಿಶ್ವವಿದ್ಯಾಲಯದಲ್ಲಿ. ಕೋರ್ಸುಗಳನ್ನು ಹೆಚ್ಚಿಸುವುದಕ್ಕೆ. ಅಥವಾ ಕಡಿತಗೊಳಿಸುವುದಕ್ಕೆ. ಸಂಬಂಧಿಸಿದಂಂತೆಯೂ ಸಕ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು. 2. ಪರಿಶೀಲನೆ ಮಾಡಲು ಮತ್ತು ನಿರ್ದೇಶನಗಳನ್ನು ನೀಡಲು ರಾಜ್ಯ ಸರ್ಕಾರದ ಅಧಿಕಾರಗಳು - (೧) ವಿಶ್ವವಿದ್ಯಾಲಯಕ್ಕೆ. ಸಂಬಂಧಿಸಿದಂಂತೆ ಬೋಧನೆಯ ಗುಣಮಟ್ಟ, ಪರೀಕ್ಷೆ. ಮತ್ತು ಸಂಶೋಧನೆ. ಅಥವಾ ಯಾವುದೇ ವಿಷಯಗಳನ್ನು ನಿರ್ದಿಷ್ಟಪಡಿಸುವ ಉದ್ದೇಶಕ್ಕಾ?, ಸರ್ಕಾರವು, ಉಪ-ಕುಲಪತಿಗಳೂಂದಿಗೆ ಸಮಾಲೋಚಿಸಿದ ನಂತರ a ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಸರ್ಕಾರದಿಂದ ರಚಿತವಾದ ತಜ್ಞ ಸಮಿತಿಯ ಮೂಲಕ ಮೌಲ್ಯವಿರ್ಣಯ ಮಾಡತಕ್ಕದ್ದು. ಸದರಿ ಸಮಿತಿಯಲ್ಲಿ ಒಬ್ಬರು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಯಾಗಿರತಕ್ಕದ್ದು. ೨) 3%, ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೌಲ್ಯನಿರ್ಧರಣೆಗೆ ಸಂಬಂಧಿಸಿದ ಪಫಲಿತಾಂಶದ ಬಗ್ಗೆ ಅದರ ಶಿಫಾರಸ್ಸುಗಳನ್ನು ತಿಳಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯವು, ಶಿಫಾರಸ್ಸುಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು. ಅಗತ್ಯವಾದಂತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ವಿಶ್ವವಿದ್ಯಾಲಯವು ಯುಕ್ತ ಕಾಲದೊಳಗೆ (2ನೇ ಉಪ-ಪರಕರಣದ ಮೇರೆಗೆ ಮಾಡಿದ ಶಿಫಾರಸ್ಸುಗಳನ್ನು ಪಾಲಿಸಲು ವಿಫಲವಾದರೆ, ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂತಹ ವಿರ್ದೇಶನಗಳನ್ನು ನೀಡಬಹುದು. ವಿಶ್ವವಿದ್ಯಾಲಯವು ಅದಕ್ಕೆ ಬದ್ಧವಾಗಿರತಕ್ಕದ್ದು. 8. ಶಾಶ್ಚತ ಶಾಸನಬದ್ದ ದತ್ತಿ ನಿಧಿ. (1) ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು, ನಿರ್ದೇಶಕರು, ಕಾಲೇಜು ಶಿಕ್ಷಣ, ಕರ್ನಾಟಕ ಇವರ ಹೆಸರಿನಲ್ಲಿ ಇಡತಕ್ಕದ್ದು, ಅವರು ಶಾಶ್ವತ ಶಾಸನಬದ್ಧ ದತ್ತಿ ನಿಧಿಗೆ ಸಂಬಂಧಿಸಿದ ಎಲ್ಲ ದಸ್ತಾವೇಜುಗಳು ಮತ್ತು ಲಿಖಿತ ಪತ್ರಗಳಿಗೆ ಮತ್ತು ಅಧಿನಿಯಮದ ಉಪಬಂಧಗಳಿಗನುಸಾರವಾಗಿ ರಾಷ್ಟ್ರೀಕೃತ ಬ್ಯಾಲಕಿನಲ್ಲಿ ಅದರ ಹೂಡಿಕೆಗಳಿಗೆ ಅಭಿರಕ್ಷಕರಾಗಿರತಕ್ಕದ್ದು. (ಐ) ವಿಶ್ವವಿದ್ಯಾಲಯ ಅಥವಾ ಪ್ರಾಯೋಜಕ AOA, ಯಾವುದೇ ಅಧಿವಿಯಮ, ಪರಿನಿಯಮಗಳು, ಅಧ್ಯಾದೇಶ, ವಿನಿಯಮಗಳು ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಯಾವುದೇ ಉಪಬಂಧಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ದತ್ತಿ ನಿಧಿಯ ಒಂದು ಭಾಗ ಅಥವಾ ಸಂಪೂರ್ಣ ನಿಧಿಯನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವ ಮೊದಲು, ಸರ್ಕಾರವು, ಸಂದರ್ಭಾನುಸಾರ ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯಕ್ಕೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡತಕ್ಕದ್ದು;
(3) ಸರ್ಕಾರವು, ಇತರೆ. ವಿಷಯಗಳಲ್ಲಿ ಪ್ರಾಯೋಜಕ AOA, ಅಥವಾ ವಿಶ್ವವಿದ್ಯಾಲಯವು ನೀಡಿದ ಉತ್ತರವನ್ನು ಕ್ರಮಬದ್ಧವಾಗಿ ಪರಿಗಣಿಸತಕ್ಕದ್ದು.
(4) ಪ್ರಾಯೋಜಕ AOA, ಅಥವಾ ವಿಶ್ವವಿದ್ಯಾಲಯವು (ಐ)ನೇ ಉಪ-ನಿಯಮದ ಮೇರೆಗೆ ನೀಡಲಾದ ಕಾರಣ ಕೇಳುವ ನೋಟೀಸಿಗೆ, ನೋಟೀಸನ್ನು ನೀಡಿದ 45 ದಿನಗಳೊಳಗಾಗಿ ಉತ್ತರವನ್ನು ನೀಡದಿದ್ದ ಸಂದರ್ಭದಲ್ಲಿ, ಸರ್ಕಾರವು, ಅಂಥ ಉತ್ತರಕ್ಕಾಗಿ ಕಾಯದೇ ಪ್ರಕರಣವನ್ನು ತೀರ್ಮಾನಿಸಬಹುದು.
(5) ಮುಟ್ಟುಗೋಲು ಹಾಕಿಕೂೊಂಡ ಶಾಶ್ವತ ದತ್ತಿ ನಿಧಿಯ ಮೊತ್ತವನ್ನು, ಸರ್ಕಾರದಲ್ಲಿ ನಿಹಿತಗೊಳಿಸತಕ್ಕದ್ದು ಮತ್ತು ಅದನ್ನು, ಮುಟ್ಟುಗೋಲು ಹಾಕಿಕೊಳ್ಳುವ ಸಮಯದಲ್ಲಿ ಸರ್ಕಾರವು ನಿರ್ಧಿಷ್ಟಪಡಿಸಬಹುದಾದ ರೀತಿಯಲ್ಲಿ ಬಳಸಿಕೊಳ್ಳತಕ್ಕದ್ದು.
(6) 49ನೇ ಪ್ರಕರಣದ ಮೇರೆಗೆ ಸಾಮಾನ್ಯ ನಿಧಿ ಮತ್ತು 50ನೇ ಪ್ರಕರಣದ ಮೇರೆಗೆ ಅಭಿವೃದ್ಧಿ ನಿಧಿಯೆಂದು ಕರೆಯಲಾಗುವ ಎಲ್ಲ ಇತರೆ ವಿಧಿಗಳನ್ನು ದ್ವಿಗುಣ ನಮೂದು ಲೆಕ್ಕವನ್ನು ಇಡುವ ವಿಧಾನದಲ್ಲಿ (Double entry book keeping method) ವಿರ್ವಹಿಸತಕ್ಕದ್ದು ಮತ್ತು ರಾಷ್ಟ್ರೀಕೃತ ಅಥವಾ ಅನುಸೂಚಿತ ಬ್ಯಾಂಕ್ನಲ್ಲಿ ಇಡತಕ್ಕದ್ದು.
(7). ಶಾಶ್ವತ ಶಾಸನಬದ್ಧ ನಿಧಿ, ಸಾಮಾನ್ಯ ವಿಧಿ ಮತ್ತು ಅಭಿವೃದ್ಧಿ ವಿಧಿಯನ್ನು, ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು ಮತ್ತು ಲೆಕ್ಕಪರಿಶೋಧನಾ ವರದಿಯೊಂ೦ಧಿಗೆ ಲೆಕ್ಕಪತ್ರಗಳ ವಾರ್ಷಿಕ ವಿವರಣೆಪಟ್ಟೆ ಮತ್ತು ಅದರ ಅನುಸರಣೆಯನ್ನು ವಾರ್ಷಿಕವಾಗಿ ಕಾಲೇಜು ಶಿಕ್ಷಣ ನಿರ್ದೇಶಕರ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.