(1) ಗ್ರಾಮ ಪಂಚಾಯತಿಯ ಸದಸ್ಯನು ತಾನು ಮತ್ತು ತನ್ನ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ಎರಡು ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯನ್ನು ಮತ್ತು ಹೊಣೆಗಾರಿಕೆಗಳನ್ನು ಹೊಂದಿರುವುದರ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಂದೆ ಘೋಷಣೆಯನ್ನು ನಮೂನೆ-1 ರಲ್ಲಿ ತನ್ನ ಪದಾವಧಿಯು ಪ್ರಾರಂಭವಾದ ದಿನಾಂಕದಿಂದ ಮೂರು ತಿಂಗಳೊಳಗೆ ಮತ್ತು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಅವನ ಅಧಿಕಾರಾವಧಿ ಮುಗಿಯುವ ತನಕ ಮತ್ತು ಪ್ರತಿ ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳೊಳಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೂಲಕ ದಾಖಲು ಮಾಡತಕ್ಕದ್ದು;
(2) ಪ್ರತಿಯೊಬ್ಬ ತಾಲ್ಲೂಕು ಪಂಚಾಯತಿಯ ಸದಸ್ಯನು ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಯ ಮೂಲಕ ರಾಜ್ಯ ಚುನಾವಣಾ ಮುಂದೆ ನಮೂನೆ-1 ರಲ್ಲಿ ತಾನು ಹೊಂದಿರುವ ಮತ್ತು ತನ್ನ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ಹೊಂದಿರುವ ಎರಡು ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯ ಮತ್ತು ಹೊಣೆಗಾರಿಕೆಯ ಘೋಷಣೆ ಮಾಡತಕ್ಕದ್ದು;
(3) ಜಿಲ್ಲಾ ಪಂಚಾಯತಿಯ ಪ್ರತಿಯೊಬ್ಬ ಸದಸ್ಯನು ಸಂಬಂಧಪಟ್ಟ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮೂಲಕ ರಾಜ್ಯ ಚುನಾವಣಾ ಆಯೋಗದ ಮುಂದೆ ನಮೂನೆ-1 ರಲ್ಲಿ ತಾನು ಹೊಂದಿರುವ ಮತ್ತು ತನ್ನ ಕುಟುಂಬದ ಎಲ್ಲಾ ಸದಸ್ಯರು ಹೊಂದಿರುವ ಎರಡು ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯ ಮತ್ತು ಹೊಣೆಗಾರಿಕೆಯ ಘೋಷಣೆ ಮಾಡತಕ್ಕದ್ದು;