(1)ಉಪವಿಧಿ 8ರ ಉಪಬಂಧ(ಅವಕಾಶ)ಗಳ ಅನ್ವಯ ಬಿಬಿಎಂಪಿಯ ಎಲ್ಲಾ ವಾರ್ಡ್ಗಳಲ್ಲೂ ಕೂಡ ಎಲ್ಲಾ ಮತ್ತು/ಅಥವಾ ಕೆಲವು ವಿಧದ ವಿಂಗಡಿಸಿದ ಘನತ್ಯಾಜ್ಯವನ್ನು ಮನೆ ಬಾಗಿಲಿನಿಂದ ಸಂಗ್ರಹಿಸುವುದನ್ನು ಜಾರಿಗೊಳಿಸತಕ್ಕದ್ದು.
(ಎ) ಮನೆಗಳ ಬಾಗಿಲಿನಿಂದ ಅಂಗಡಿಗಳು, ಸಣ್ಣ ವಾಣಿಜ್ಯ ಸಂಸ್ಥೆಗಳು ಹಾಗೂ ಕಛೇರಿಗಳ ಬಾಗಿಲಿನಿಂದ;
(ಬಿ) ಉಪವಿಧಿ 6(1)(ಎ)ರಲ್ಲಿ ನಿರ್ದಿಷ್ಟಪಡಿಸಿದ ಆವರಣದ ಅಡಿಯಲ್ಲಿ ಬಾರದ ವಸತಿ ಸಂಘಗಳು, ಬಹುಮಹಡಿ ಕಟ್ಟಡಗಳು/ಸಮುಚ್ಛಯಗಳು, ವಸತಿ, ವಾಣಿಜ್ಯ, ಸಾಂಸ್ಥಿಕ-ಸಂಕೀರ್ಣಗಳು/ಆವರಣಗಳು ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರಲ್ಲದವರು, ಹಾಗೂ/ಅಥವಾ
(ಸಿ) ಕೊಳಗೇರಿ ಮತ್ತು ಅನೌಪಚಾರಿಕ ವಾಸಸ್ಥಳಗಳಲ್ಲಿನ ಪ್ರವೇಶದ್ವಾರ ಅಥವಾ ನಿರ್ದಿಷ್ಟಪಡಿಸಿದ ಸ್ಥಳ.
(2) ಈ ಉಪವಿಧಿಯ ಕಲಂ 13ರ ನಿಬಂಧನೆಗಳಿಗೆ ಒಳಪಟ್ಟಿರುವಂತೆ ಅನುಸೂಚಿಗಿ ಗಿIರ ಭಾಗ II ರಲ್ಲಿ ನಿರ್ದಿಷ್ಟಪಡಿಸಲಾಗಿರುವ ಪ್ರಕಾರ ಸೇವಾ ಶುಲ್ಕ ಪಾವತಿಸಿದ ನಂತರ ಬಿಬಿಎಂಪಿಯು ಮನೆ ಸಂಗ್ರಹಣೆಯ ಮೂಲಕ ಎಲ್ಲರಿಗೂ/ಅಥವಾ ಕೆಲವು ವಿಧದ ವಿಂಗಡಿಸದ ಘನತ್ಯಾಜ್ಯವನ್ನು ಉತ್ಪಾದಕರ ಪ್ರವೇಶದ್ವಾರದಿಂದ ಅಥವಾ ನೆಲಮಹಡಿಯಲ್ಲಿನ ನಿಗದಿತ ಸ್ಥಳದಿಂದ ತಮ್ಮ ತ್ಯಾಜ್ಯಗಳನ್ನು ಎಷ್ಟು ಸಂಸ್ಕರಿಸಲು ಸಾಧ್ಯವಿದೆಯೋ ಅದನ್ನು ಹೊರತುಪಡಿಸಿ ಉಳಿಕೆ ತ್ಯಾಜ್ಯವನ್ನು ಹಾಗೂ/ಅಥವಾ ನೋಂದಾಯಿತ ಸೇವಾದಾರರ ಸೇವೆ ಬಳಸದೇ ಹೋದಲ್ಲಿ ಎಲ್ಲರಿಗೂ ಸಂಗ್ರಹಣೆಯನ್ನು ಬಿ.ಬಿ.ಎಂ.ಪಿ. ಅನುಷ್ಠಾನಗೊಳಿಸತಕ್ಕದ್ದು.
(3) ಉಪವಿಧಿ 6ರ ಅಡಿಯಲ್ಲಿ ಘನತ್ಯಾಜ್ಯವನ್ನು ಮನೆ ಮನೆ ಸಂಗ್ರಹಣೆ ಹೊರತಾಗಿಯೂ ಬಿ.ಬಿ.ಎಂ.ಪಿ. ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಯಾರೇ ಆಗಲಿ ಘನತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಾದ ಉದ್ಯಾನವನಗಳು, ಮಾರುಕಟ್ಟೆಗಳು,ರಸ್ತೆಗಳು, ಬೀದಿಗಳು. ಹೂತೋಟಗಳು ಮತ್ತು ಅದೇ ಮಾದರಿಯ ಪ್ರದೇಶಗಳಿಂದ ನಿರ್ದಿಷ್ಟಪಡಿಸಿದ ಸಮಯ ಮತ್ತು ದಿನಗಳಲ್ಲಿ ಸಂಗ್ರಹಿಸತಕ್ಕದ್ದು.
(4) ಉಪವಿಧಿ 6(1)ರಲ್ಲಿ ನಿರ್ದಿಷ್ಟಪಡಿಸಿರುವಂತೆ ಮನೆ ಮನೆ ಸಂಗ್ರಹಣೆಯನ್ನು ನಿರ್ವಹಿಸಲು ಪ್ರದೇಶವಾರು ವಿವಿಧ ರೀತಿಯ ಘನ ತ್ಯಾಜ್ಯಗಳ ಸಂಗ್ರಹಣೆಗೆ ವಾರದ ಪ್ರಸಕ್ತ ದಿನ ಮತ್ತು ನಿರ್ದಿಷ್ಟ ಸಮಯವನ್ನು ಬಿ.ಬಿ.ಎಂ.ಪಿ. ಸೂಚಿಸಿ ಆಯಾ ಪ್ರದೇಶದಲ್ಲಿ ಪ್ರಮುಖವಾಗಿ ಕಾಣುವಂತೆ ಬಿ.ಬಿ.ಎಂ.ಪಿ. ವೆಬ್ಸೈಟ್ನಲ್ಲಿ (ಜಾಲತಾಣ) ಪ್ರಕಟಿಸತಕ್ಕದ್ದು. ಇದಲ್ಲದೆ ಸಂಗ್ರಹಣೆಗಾಗಿ ನಿಲುಗಡೆ ಪ್ರಾರಂಭಿಕ ಮತ್ತು ಮುಕ್ತಾಯಗೊಳ್ಳುವ ಸಮಯಗಳು ಸೇರಿದಂತೆಮಾರ್ಗ ನಕ್ಷೆಗಳನ್ನು ಮತ್ತಿತರ ವಿವರಗಳೊಂದಿಗೆ ನಿಗದಿತ ವೇಳೆಯ ವಿವರಗಳನ್ನು ಒದಗಿಸತಕ್ಕದ್ದು. ಬಿ.ಬಿ.ಎಂ.ಪಿ.ಯು ವಿಘಟನೀಯ ತ್ಯಾಜ್ಯ ಮತ್ತು ಸ್ಯಾನಿಟರಿ ತ್ಯಾಜ್ಯವನ್ನು ಪ್ರತಿದಿನ ಸಂಗ್ರಹಿಸತಕ್ಕದ್ದು. ಮತ್ತು ವಿಘಟನೆಗೊಳ್ಳದ ತ್ಯಾಜ್ಯವನ್ನು ಅವಶ್ಯಕತೆಗೆ ಅನುಗುಣವಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಅಥವಾ ಬಿ.ಬಿ.ಎಂ.ಪಿ. ಸೂಚಿಸಿದಂತೆ ಕಾಲ ಕಾಲಕ್ಕೆ ಸಂಗ್ರಹಿಸತಕ್ಕದ್ದು.
(5) ಬಿ.ಬಿ.ಎಂ.ಪಿ.ಯು ಪ್ರಸ್ತುತ ಇರುವ ಮಾನದಂಡಗಳ ಆಧಾರದ ಮೈಕ್ರೋ ಪ್ಲಾನ್ನಂತೆ ಮೇಲೆ ಪ್ರಾಥಮಿಕ ಸಂಗ್ರಹಣೆ ವಾಹನಗಳು, ತಳ್ಳುವ ಗಾಡಿಗಳು, ದ್ವಿತೀಯ ಹಂತದ ಸಾಗಾಣೆ ವಾಹನಗಳು ಮತ್ತು ಪ್ರತೀ ವಾರ್ಡ್ಗೆ ಒದಗಿಸಬೇಕಾದ ಮಾನವ ಸಂಪನ್ಮೂಲಗಳ ಅವಶ್ಯಕತೆಯನ್ನು ನಿಗದಿ ಮಾಡತಕ್ಕದ್ದು. ಸಮರ್ಥವಾದ ಪ್ರಾಥಮಿಕ ಸಂಗ್ರಹಣೆ ಮತ್ತು ವಿಂಗಡಿತ ತ್ಯಾಜ್ಯದ ಸಾಗಣೆ ಮತ್ತು ವಿಂಗಡಿತ ಘನ ತ್ಯಾಜ್ಯ ಎಲ್ಲೂ ಮಿಶ್ರಣಗೊಳ್ಳದಂತೆ ಖಾತರಿಪಡಿಸಿಕೊಳ್ಳಬೇಕು. ಅಗತ್ಯ ಮಾನವ ಸಂಪನ್ಮೂಲದ ಸಂಖ್ಯೆ ಮತ್ತು ವಾಹನಗಳ ಸರಾಸರಿ ಅಗತ್ಯತೆಯನ್ನು ತ್ಯಾಜ್ಯ ಉತ್ಪಾದಕರಿಗೆ ಸಂಬಂಧಿಸಿದಂತೆ ಮೈಕ್ರೋ ಪ್ಲಾನ್ ಪ್ರಕಾರ ಕಾಲಕಾಲಕ್ಕೆ ಲೆಕ್ಕಾಚಾರ ಮಾಡಬೇಕು. ಎಲ್ಲ ವಾಹನಗಳನ್ನು ಜಿಪಿಎಸ್ನೊಂದಿಗೆ ಸಂಯೋಜಿಸುವುದು ಮತ್ತು ಎಲ್ಲಾ ತ್ಯಾಜ್ಯ ಸಂಗ್ರಾಹಕರು/ತ್ಯಾಜ್ಯ ನಿರ್ವಹಣೆಯಲ್ಲಿ ಒಳಗೊಂಡ ಎಲ್ಲ ಕೆಲಸಗಾರರಿಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ಬಿ.ಬಿ.ಎಂ.ಪಿ.ಯ ಸೆಂಟ್ರಲ್ ಸ್ಮಾರ್ಟ್ ಡೇಟಾ ಸೆಂಟರ್ ಮೂಲಕ ಮೇಲ್ವಿಚಾರಣೆ ನಡೆಸಬೇಕು.
(6) ಬಿ.ಬಿ.ಎಂ.ಪಿ. ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಘನತ್ಯಾಜ್ಯದ ಸಂಗ್ರಹಕ್ಕೆ ತಮ್ಮ ಆಗಮನವನ್ನು ಸೀಟಿ (ವಿಷಲ್) ಊದುವ ಮುಖಾಂತರ ಮತ್ತು ಮೊದಲೇ ಧ್ವನಿ ಮುದ್ರಿಸಿದ ಸಂದೇಶವನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುವ ಮೂಲಕ ಅಥವಾ ಇನ್ನಾವುದೇ ಅಂತಹ ವಿಧಾನದ ಮೂಲಕ ಆ ಅವಧಿಯಲ್ಲಿ ಘೋಷಿಸಿಸುವ ಮೂಲಕ ಕಸ/ತ್ಯಾಜ್ಯ ಉತ್ಪತ್ತಿದಾರನು ವಿಂಗಡಿಸಿದ ತ್ಯಾಜ್ಯವನ್ನು ನೀಡಲು ಸಿದ್ಧರಾಗಿರುವಂತೆ ಮಾಡಬೇಕು. ಒಂದೊಮ್ಮೆ ಕಸ ಉತ್ಪಾದಕನು ಘನತ್ಯಾಜ್ಯವನ್ನು ನೀಡಲು ಹಾಜರಿಲ್ಲದೇ ಹೋದಲ್ಲಿ, ಅಂತಹ ಕಸ ಉತ್ಪತ್ತಿದಾರನು ಘನತ್ಯಾಜ್ಯವನ್ನು ವಿಂಗಡಿಸಿದ ಮಾದರಿಯಲ್ಲಿ ಪ್ರಮುಖವಾಗಿ ಕಾಣುವ ರೀತಿಯಲ್ಲಿ ಸುಲಭವಾಗಿ ಬಿ.ಬಿ.ಎಂ.ಪಿ. ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಘನತ್ಯಾಜ್ಯದ ಸಂಗ್ರಹಕ್ಕೆ ಕೈಗೆಟಕುವ ಸ್ಥಳದಲ್ಲಿ ಇರಿಸಬೇಕು. ಘನತ್ಯಾಜ್ಯವನ್ನು ನಾಯಿ, ದನಗಳು, ಹಂದಿಗಳು ಅಥವಾ ಇತರ ಪ್ರಾಣಿಗಳು ದಾಳಿ ನಡೆಸುವಂತೆ ತೆರದಿಡಬಾರದು. ಅದನ್ನು ಮುಚ್ಚಿದ ರೀತಿಯಲ್ಲಿ ಇರಿಸಬೇಕು. ಅದೇ ರೀತಿಯಾಗಿ ಇಂತಹ ಘನತ್ಯಾಜ್ಯವನ್ನು ನಿಷೇಧಿತ ಒಂದೇ ಬಾರಿ ಬಳಕೆ ಮಾಡುವಂತಹ ಪ್ಲಾಸ್ಟಿಕ್ನಲ್ಲಾಗಲೀ ಅಥವಾ ಪ್ಲಾಸ್ಟಿಕ್ ಲೈನರ್ಯುಕ್ತ ತ್ಯಾಜ್ಯ ಬುಟ್ಟಿಗಳಲ್ಲಿ (ಗಾರ್ಬೇಜ್ ಬಿನ್ ಲೈನರ್) ಇಡಬಾರದು.
(7) ವಿಂಗಡಣೆ ಮಾಡಿದ ಘನತ್ಯಾಜ್ಯ ಸಂಗ್ರಹಣೆಗೆ ಬಿ.ಬಿ.ಎಂ.ಪಿಯೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ಕಸ ಉತ್ಪಾದಕರ ಕರ್ತವ್ಯವಾಗಿದೆ. ಈ ತ್ಯಾಜ್ಯವನ್ನು ಸಮರ್ಪಕವಾದ ಧಾರಕದಲ್ಲಿ (ಪಾತ್ರೆ/ಡಬ್ಬಿ/ಬುಟ್ಟಿ)ಈ ತ್ಯಾಜ್ಯವನ್ನು ಸಂಗ್ರಹಿಸಿ ಬಿ.ಬಿ.ಎಂ.ಪಿ. ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಪ್ರಕಟಿಸಿದ ವೇಳಾಪಟ್ಟಿಯಂತೆ/ನಿಗದಿತ ಸಮಯದಲ್ಲಿ ಸಂಗ್ರಹಕ್ಕೆ ಸಿದ್ಧವಾಗಿಟ್ಟುಕೊಳ್ಳುವುದನ್ನು ಖಾತರಿಪಡಿಸತಕ್ಕದ್ದು. ಈ ಅಧ್ಯಾಯದ ನಿಬಂಧನೆಗಳನ್ನು ಪಾಲಿಸದ ಕಸ ಉತ್ಪಾದಕರ ಕುರಿತು ಮೇಲ್ವಿಚಾರಣೆ ನಡೆಸಿ ವರದಿ ನೀಡುವುದು ಬಿ.ಬಿ.ಎಂ.ಪಿ. ಮತ್ತು/ಅಥವಾ ನೇಮಕ ಮಾಡಿದ ವ್ಯಕ್ತಿಯ ಜವಾಬ್ಧಾರಿಯಾಗಿದೆ. ನಿಯಮಗಳನ್ನು ಪಾಲಿಸದ ಕಸ ಉತ್ಪಾದಕರನ್ನು ಈ ಉಪವಿಧಿಯ ಅನುಸೂಚಿ VII ರಅನ್ವಯ ದಂಡ ವಿಧಿಸಲಾಗುವುದು.
(8) ಉತ್ಪಾದಕರ ವಿಸ್ತೃತ ಜವಾಬ್ಧಾರಿಯನ್ನು ಇ-ತ್ಯಾಜ್ಯ(ನಿರ್ವಹಣೆ) ನಿಯಮಾವಳಿ, 2016ರ ಅನ್ವಯ ಅನುಷ್ಠಾನಗೊಳಿಸುವವರೆಗೆ. ಬಿ.ಬಿ.ಎಂ.ಪಿ.ಯು ಇ-ತ್ಯಾಜ್ಯವನ್ನು ಅವಶ್ಯಕತೆಗೆ ಅನುಗುಣವಾಗಿ ಕನಿಷ್ಟ ಎರಡು ವಾರದಲ್ಲಿ ಒಂದು ಬಾರಿ ಇ-ತ್ಯಾಜ್ಯ ಉತ್ಪಾದಕರ ಸೇವಾ ಶುಲ್ಕ ಪಾವತಿಗೆ ಅನುಗುಣವಾಗಿ ಮನೆ ಮನೆಗಳಿಂದ ಸಂಗ್ರಹಿಸಬಹುದು ಅಥವಾ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರದಲ್ಲಿ (ಪಾಯಿಂಟ್ ಟು ಪಾಯಿಂಟ್) ಸಂಗ್ರಹಿಸಬಹುದಾಗಿದೆ. ಇ-ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು, ಇ-ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ಹಾಗೂ/ಅಥವಾ ವಸ್ತುಗಳನ್ನು ಮತ್ತು ಪಡೆಯುವ ಕೇಂದ್ರಕ್ಕೆ ಇ-ತ್ಯಾಜ್ಯ (ನಿರ್ವಹಣೆ) ನಿಯಮಾವಳಿ 2016ರಂತೆ ಸೂಚಿಸಿದ ಪ್ರಕಾರ ಮುಂದಿನ ಸಂಸ್ಕರಣೆಗಾಗಿ ಸಾಗಿಸಬೇಕು.
(9) ಬಿ.ಬಿ.ಎಂ.ಪಿ.ಯು ಉದ್ಯಾನವನಗಳಿಂದ ವಾರದಲ್ಲಿ ಒಂದು ದಿನವನ್ನು ಬೃಹತ್ ಪ್ರಮಾಣದ ಕಸ ಸಂಗ್ರಹಕ್ಕೆ ಮತ್ತು ಬೃಹತ್ ಪ್ರಮಾಣದ ತೋಟಗಾರಿಕೆ ಮತ್ತು ತ್ಯಾಜ್ಯ ಸಂಗ್ರಹಣೆಗಾಗಿ ನಿಗದಿ ಮಾಡಬೇಕು. ಯಾವುದೇ ಕಸ ಉತ್ಪಾದಕರುತಮ್ಮ ಬೃಹತ್ ಗಾತ್ರದ ತ್ಯಾಜ್ಯಗಳಾದ ಪೀಠೋಪಕರಣಗಳು ಮತ್ತು ವಾರ್ಡ್ರೋಬ್ಗಳು, ಟೇಬಲ್ಗಳು, ಕುರ್ಚಿಗಳು, ಶೂರ್ಯಾಕ್ಗಳು, ಕಂಪ್ಯೂಟರ್ ಟೇಬಲ್ಗಳು, ಹಾಸಿಗೆಗಳು, ಮಂಚ, ಕುರ್ಚಿ, ಊಟದ ಟೇಬಲ್ಗಳು, ಸೋಫಾಗಳು ಇನ್ನಿತರ, ಅಡುಗೆ ಮನೆ ಪಾತ್ರೆಗಳು ಇತ್ಯಾದಿಗಳನ್ನು ಬಿ.ಬಿ.ಎಂ.ಪಿ.ಯು ನಿಗದಿ ಮಾಡಿದ ಅಥವಾ ಅಧಿಸೂಚಿಸಿದ ಸಂಬಂಧಿತ ದ್ವಿತೀಯ ಹಂತದ ಸಂಗ್ರಹ ಕೇಂದ್ರಗಳಿಗೆ ನೇರವಾಗಿ ನೀಡಬಹುದು. ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರು ಅನುಸೂಚಿ VIರಲ್ಲಿ ಪ್ರಕಟಿಸಿರುವಂತೆ ಸೇವಾ ಶುಲ್ಕವನ್ನು ಸೇವೆ ಪಡೆದಿರುವುದಕ್ಕಾಗಿ ಪಾವತಿಸಬೇಕು ಬಿ.ಬಿ.ಎಂ.ಪಿ. ಹಾಗೂ/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹಕ್ಕೆ ಕರೆ ಮಾಡಿದಾಗಲೂ ಬಂದು ಸೇವೆ ಒದಗಿಸುವರು.
(10) ಸಂಗ್ರಹಿಸಿದ ಮತ್ತು ವಿಂಗಡಿಸಿದ ಘನತ್ಯಾಜ್ಯವನ್ನು ದ್ವಿತೀಯ ಹಂತದ ಸಂಗ್ರಹಣಾ ಕೇಂದ್ರಗಳಾದ ತ್ಯಾಜ್ಯ ಶೇಖರಣೆ/ ಸಂಗ್ರಹಣೆ ಉಗ್ರಾಣ (ಡಿಪೋ)ಗಳು, ವಸ್ತುಗಳನ್ನು ಮರಳಿ ಪಡೆಯುವ ಕೇಂದ್ರಗಳು, ಅಥವಾ ವರ್ಗಾವಣೆ ಕೇಂದ್ರಗಳಿಗೆ ಅಥವಾ ಅನುಕ್ರಮವಾದ ಸಂಸ್ಕರಣೆಗಾಗಿ ಕಾಂಪೋಸ್ಟ್ (ಗೊಬ್ಬರ) ಘಟಕಗಳು, ಬಯೋಮಿಥೇನೇಶನ್ ಘಟಕಗಳು, ಪುನರ್ ಬಳಕೆಯಾಗಿ ಪರಿವರ್ತಿಸುವ ಘಟಕಗಳು, ತ್ಯಾಜ್ಯದಿಂದ ಇಂಧನ ಘಟಕಗಳು ಅಥವಾ ಬಿ.ಬಿ.ಎಂ.ಪಿ. ನಿಗದಿಪಡಿಸಿದ ಯಾವುದೇ ನಿವೇಶನ/ಘಟಕಕ್ಕೆ ಸಾಗಣೆ ಮಾಡಬಹುದು.
(11) ಬೇರೆ ಬೇರೆ ಕಸ ಉತ್ಪಾದಕರಿಂದ ಸಂಗ್ರಹಿಸಿದ ವಿಂಗಡಣೆ ಮಾಡಿದ ಘನ ತ್ಯಾಜ್ಯದ ಸಾಗಾಣಿಕೆ, ವರ್ಗಾವಣೆ ಹಾಗೂ ಅಂತಹ ತ್ಯಾಜ್ಯದ ಸಂಸ್ಕರಣೆ ವೇಳೆ ಅವುಗಳು ಒಂದಕ್ಕೊಂದು ಮಿಶ್ರಣಗೊಳ್ಳಬಾರದು. ಇಂತಹ ಮಿಶ್ರಣ ಆಗಿರುವುದು ಕಂಡು ಬಂದರೆ ತ್ಯಾಜ್ಯ ಸಂಗ್ರಾಹಕರಿಗೆ ಮತ್ತು ಸಾಗಣಿಕೆದಾರರಿಗೆ ಬಿ.ಬಿ.ಎಂ.ಪಿ.ಯು ದಂಡ ವಿಧಿಸಬೇಕು.
(12)ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯಗಳ ಸಂಗ್ರಹಕ್ಕಾಗಿ ಸಿ & ಡಿ ನಿಯಮಾವಳಿ ಪ್ರಕಾರ ಅರ್ಹರಾದ ತ್ಯಾಜ್ಯ ಉತ್ಪಾದಕರು ಬಿ.ಬಿ.ಎಂ.ಪಿ. ಅಥವಾ ಏಜೆನ್ಸಿ/ಸೇವೆ ಒದಗಿಸುವವರನ್ನು ಸಂಪರ್ಕಿಸಬಹುದು. ಇವರ ವಿವರಗಳನ್ನು ಬಿ.ಬಿ.ಎಂ.ಪಿ. ಕಚೇರಿ ಅಥವಾ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು. & ಡಿ ನಿಯಮಾವಳಿ ಪ್ರಕಾರ ಅಥವಾ ಬಿ.ಬಿ.ಎಂ.ಪಿ. ಅಧಿಸೂಚಿಸಿದ ಪ್ರಕಾರ ನಿಗದಿಪಡಿಸಿದ ಶುಲ್ಕವನ್ನು ಪಾವತಿ ಮಾಡಿದ ಬಳಿಕ ವಿಂಗಡಿಸಿದ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಉತ್ಪಾದಕರಿಂದ ನಿಗದಿತಕಾಲಾವಧಿಯಲ್ಲಿ ಸಂಗ್ರಹಿಸುತ್ತಾರೆ. ಈ ತ್ಯಾಜ್ಯವನ್ನು ಅಧಿಕೃತ ಸಂಸ್ಕರಣ ಕೇಂದ್ರಕ್ಕೆ ಅಥವಾ ಬಿ.ಬಿ.ಎಂ.ಪಿ. ಅಧಿಸೂಚಿಸಿದ ಸಿ & ಡಿ ನಿಯಮಾವಳಿ ಪ್ರಕಾರ ನಿಗದಿಪಡಿಸಿದ ಸ್ಥಳಕ್ಕೆ ಸಾಗಣೆ ಮಾಡಬೇಕು. ಬಿ.ಬಿ.ಎಂ.ಪಿ.ಯು ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯದ ನಿರ್ವಹಣೆ ಕುರಿತು ಉಪವಿಧಿಗಳನ್ನು ಹೊರಡಿಸಬೇಕು ಮತ್ತು ಈ ಷರತ್ತುಗಳನ್ನು ಅಂತಹ ಉಪವಿಧಿಗಳೊಂದಿಗೆ ಭಿನ್ನಾಭಿಪ್ರಾಯಗಳಿಲ್ಲದೇ ಓದಬೇಕು. 7. ನಿರ್ದಿಷ್ಟ ಸ್ಥಳದಿಂದ ಸ್ಥಳಕ್ಕೆ ಸಂಗ್ರಹಣೆ (ಪಾಯಿಂಟ್ ಟು ಪಾಯಿಂಟ್),-ಕೇಂದ್ರದಿಂದ ಕೇಂದ್ರದ ನಡುವಿನ ಸಂಗ್ರಹಕ್ಕಾಗಿ ಸಂಗ್ರಹ ವಾಹನಗಳಿಗೆ/ತಳ್ಳುಗಾಡಿಗಳಿಗೆ ಅಥವಾ ಸೂಕ್ತವಾದ ಇನ್ನಾವುದೇ ಕಾರಣಗಳಿಗಾಗಿ ತಲುಪಲು ಅಸಾಧ್ಯವಾದ, ತನ್ನ ವ್ಯಾಪ್ತಿಯ ಕೆಲಮೊಂದು ಪ್ರದೇಶಗಳನ್ನು ಬಿ.ಬಿ.ಎಂ.ಪಿಯು ಅಧಿಸೂಚಿಸಬಹುದು. ಪಾಯಿಂಟ್ ಟು ಪಾಯಿಂಟ್ ಸಂಗ್ರಹದ ಅನುಷ್ಟಾನಕ್ಕಾಗಿ ಬಿ.ಬಿ.ಎಂ.ಪಿಯು ಸಂಗ್ರಹ ಕೇಂದ್ರಗಳನ್ನು/ಸ್ಥಳಗಳು/ಪ್ರದೇಶಗಳನ್ನು/ಕಸದ ನೆರವುದಾಣ (ಕಿಯಾಸ್ಕ್)ಗಳನ್ನು ನಿಗದಿ ಮಾಡಬೇಕು ಮತ್ತುಕಸದ ಉತ್ಪಾದಕರು ವಿಂಗಡಿಸಿದ ಕಸವನ್ನು ಇಲ್ಲಿ ನೀಡಬೇಕು. ಕಸ/ತ್ಯಾಜ್ಯ ಧಾರಕಗಳೇನಾದರೂ ಇದ್ದಲ್ಲಿ ಅವು ಸೇರಿದಂತೆ ಕಸ ಸಂಗ್ರಹಣೆಯ ಈ ಅಧಿಸೂಚಿತ ಕೇಂದ್ರದಿಂದ ಕೇಂದ್ರ ಸಂಗ್ರಹದ ಸ್ಥಳಗಳಿಂದ ವಿಂಗಡಣೆ ಮಾಡಿದ ಕಸವನ್ನು ಈ ಉಪವಿಧಿಗಳ ಅಡಿಯಲ್ಲಿ ಸಂಸ್ಕರಣೆಗಾಗಿ ಮತ್ತು ವಿಲೇವಾರಿಗಾಗಿ ಸಾಗಾಟ ಮಾಡಲು ಬಿ.ಬಿ.ಎಂ.ಪಿ. ಮತ್ತು /ಅಥವಾ ಏಜೆನ್ಸಿ/ಸೇವೆ ಒದಗಿಸುವವರು ವ್ಯವಸ್ಥೆ ಕಲ್ಪಿಸಬೇಕು. 8. ಕೆಲವು ಸಂದರ್ಭಗಳಲ್ಲಿ ಕಸ/ತ್ಯಾಜ್ಯ ಉತ್ಪಾದಕರಿಂದಲೇ ಘನತ್ಯಾಜ್ಯ ಬಟವಾಡೆ ಮತ್ತು ಸಾಗಾಣಿಕೆ-.(1) ಕಸ ಉತ್ಪಾದಕರು (ಬೃಹತ್ ಪ್ರಮಾಣದ ಕಸ ಉತ್ಪಾದಕರು ಸೇರಿದಂತೆ) ಒಂದೊಮ್ಮೆ ತ್ಯಾಜ್ಯ ನಿರ್ವಹಣೆಗಾಗಿ ಈ ಉಪವಿಧಿಯಂತೆ ನೋಂದಾಯಿತ ಮಾರಾಟಗಾರರನ್ನು ಗೊತ್ತುಮಾಡಿಕೊಂಡಿದ್ದರೆ ಅಂತಹ ತ್ಯಾಜ್ಯ ಉತ್ಪಾದಕರ ಆವರಣದಲ್ಲಿ ಬಿ.ಬಿ.ಎಂ.ಪಿ.ಯು ಘನ ತ್ಯಾಜ್ಯದ ಮನೆ ಮನೆ ಸಂಗ್ರಹವನ್ನು ಅಂತಹ ತ್ಯಾಜ್ಯ ಉತ್ಪಾದಕರ ಆವರಣದಲಿ ಅನುಷ್ಟಾನಗೊಳಿಸುವುದಿಲ್ಲ ಅಥವಾ ವ್ಯವಸ್ಥೆ ಮಾಡುವುದಿಲ್ಲ. ಅಂತಹ ಕಸ ಉತ್ಪಾದಕರ ಆವರಣದಿಂದ ಅಂತಹ ನೋಂದಾಯಿತ ಮಾರಾಟಗಾರರು ಘನತ್ಯಾಜ್ಯವನ್ನು ಸಂಗ್ರಹಿಸಿ ಮತ್ತು ಸಾಗಾಟ ಮಾಡಿ ಬಿ.ಬಿ.ಎಂ.ಪಿಯು ಘೋಷಿಸಿದ ಶೇಖರಣೆ ಅಥವಾ ಸಂಸ್ಕರಣಾ ಘಟಕಕ್ಕೆ ಬಿ.ಬಿ.ಎಂ.ಪಿ.ಯು ನಿಗದಿ ಮಾಡಿದ ಗರಿಷ್ಟ ಪರಿಮಿತಿಯ ದರದಲ್ಲಿ ತನ್ನದೇ ವ್ಯವಸ್ಥೆಯಲ್ಲಿ ತೆಗೆದುಕೊಂಡು ಹೋಗಬೇಕು. (2) ಬೀದಿ ಬದಿ ಮಾರಾಟಗಾರರು ಸರಿಯಾಗಿ ವಿಂಗಡಿಸಿದ ಕಸವನ್ನು ಕಸ ಸಂಗ್ರಹಣಾ ಡಿಪೋಗಳಿಗೆ, ಪಾಲಿಕಯ ಅಥವಾ ಅಧಿಕೃತ ವಾಹನ ಅಥವಾ ಸಮುದಾಯ ತೊಟ್ಟಿ/ಧಾರಕಗಗಳಿಗೆ ಆಗಾಗ ಬಿ.ಬಿ.ಎಂ.ಪಿ. ಸೂಚಿಸಿದಂತೆ ನೀಡಬೇಕು. ಯಾವುದೇ ಮಿಶ್ರಿತ ತ್ಯಾಜ್ಯವನ್ನು ನೀಡಬಾರದು ತಪ್ಪಿದ್ದಲ್ಲಿ ಅಧಿಸೂಚಿ (Schedule) VIIರ ಪ್ರಕಾರದಂಡ ವಿಧಿಸಲಾಗುವುದು.
(3) ಯಾವುದೇ ಕಸ ಉತ್ಪಾದಕರು ತಮ್ಮ ಪುನರ್ ಬಳಕೆ ಮಾಡಲು ಪರಿವರ್ತಿಸಬಹುದಾದ ವಿಘಟಿಸಲಾಗದೇ ಇರುವ ತ್ಯಾಜ್ಯವನ್ನು ನೇರವಾಗಿ ಏಜೆನ್ಸಿ/ಸೇವೆ ಒದಗಿಸುವವರು, ನೋಂದಾಯಿತ ಚಿಂದಿ ಆಯುವವರು ಹಾಗೂ ತ್ಯಾಜ್ಯ ವ್ಯಾಪಾರಿಗಳಲ್ಲಿ ಪರಸ್ಪರ ಒಪ್ಪಿದ ದರಗಳಿಗೆ ಇರಿಸಬಹುದು ಅಥವಾ ಮಾರಾಟ ಮಾಡಬಹುದು. ಯಾವುದೇ ತ್ಯಾಜ್ಯ ಉತ್ಪಾದಕರು ವಿಘಟಿಸಲು ಆಗದ ಕಸ (ಒಣ ಕಸ)ವನ್ನು ನೋಂದಾಯಿತ ಚಿಂದಿ ಆಯುವವರಿಗೆ ಅಥವಾ ಕಬಾಡಿ ವಾಲಾಗಳಿಗೆ ಹಸ್ತಾಂತರಿಸಬಹುದು ಅಥವಾ ಮಾರಾಟ ಮಾಡಬಹುದು.
(4) ಬಿ.ಬಿ.ಎಂ.ಪಿಯು ಪ್ರಾದೇಶಿಕ ಮಿತಿಯೊಳಗೆ ಘನ ತ್ಯಾಜ್ಯದ ಬಗೆಗಳು, ಕಸ ಉತ್ಪಾದಕರ ವರ್ಗಗಳನ್ನು ಮತ್ತು ಪ್ರದೇಶಗಳನ್ನು ಕಾಲಕಾಲಕ್ಕೆ ಅಧಿಸೂಚಿಸಬಹುದು. ಇಲ್ಲಿ ಕಸ ಉತ್ಪಾದಕರು ವಿಂಗಡಿಸಿದ ಘನತ್ಯಾಜ್ಯವನ್ನು ನೇರವಾಗಿ ನೀಡಲು ಮತ್ತು ದ್ವಿತೀಯ ಹಂತದ ಸಂಗ್ರಹಣಾ ಕೇಂದ್ರಗಳಿಗೆ ಮತ್ತು/ಅಥವಾ ಸಂಸ್ಕರಣಾ ಕೇಂದ್ರಗಳಲ್ಲಿ ನೇರವಾಗಿ ಇರಿಸಲು ಜವಾಬ್ಧಾರರಾಗಿರುತ್ತಾರೆ. 9. ಸಿ ಮತ್ತು ಡಿ ತ್ಯಾಜ್ಯದ ಮತ್ತು ನಿಷ್ಕ್ರಿಯ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆ: (1) ರಸ್ತೆ ಗುಡಿಸಿದಾಗ ಸಿಗುವ ಕಸ (ಯಾಂತ್ರಿಕವಾಗಿ ಸ್ವಚ್ಛಗೊಳಿಸಿದಾಗ ಸಿಗುವ ಕಸವೂ ಸೇರಿದಂತೆ) ಬಿ.ಬಿ.ಎಂ.ಪಿ.ಯು ನಿರ್ದಿಷ್ಟ ಪ್ರದೇಶವನ್ನುಸಿ ಮತ್ತು ಡಿ ತ್ಯಾಜ್ಯ ಹಾಗೂ ಇತರೆ ಜಡ ತ್ಯಾಜ್ಯ ವಿಲೇವಾರಿಯನ್ನು ಅಧಿಸೂಚಿತ ಪ್ರದೇಶದಲ್ಲಿ ಮಾಡಬೇಕು. (2) ಬಿ.ಬಿ.ಎಂ.ಪಿಯು ತನ್ನದೇ ಚಟುಚಟಿಕೆಗಳಿಂದ ಮತ್ತು ತನ್ನ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಇತರೇ ಸರ್ಕಾರಿ ಇಲಾಖೆಗಳಿಂದ ಸಿ ಮತ್ತು ಡಿ ತ್ಯಾಜ್ಯವನ್ನು ಸಂಗ್ರಹಿಸುವುದು ಮತ್ತು ವಿಲೇ ಮಾಡುವ ಜವಾಬ್ಧಾರಿಯನ್ನು ಹೊಂದಬೇಕು.
(3) ರಸ್ತೆಗಳನ್ನು ಗುಡಿಸುವುದು, ಚರಂಡಿಗಳ ಹೂಳೆತ್ತುವುದು ರಸ್ತೆಗಳನ್ನು ಅಗೆಯುವುದು ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕ ಸ್ಥಳಗಳನ್ನು ಇತ್ಯಾದಿ ಕಡೆಗಳಿಂದ ಸಂಗ್ರಹಿಸಿದ ಜಡ ತ್ಯಾಜ್ಯವನ್ನು ನಿಗದಿತ ಕಾಲ ಕ್ರಮದಲ್ಲಿ ಅಧಿಸೂಚಿತ ಪ್ರದೇಶದಲ್ಲಿ ಸಂಗ್ರಹಿಸಿ ವಿಲೇ ಮಾಡುವುದನ್ನು ಬಿ.ಬಿ.ಎಂ.ಪಿ. ಖಾತರಿ ಮಾಡಬೇಕು. ಸಮರ್ಪಕವೆಂದು ಕಂಡು ಬಂದಲ್ಲಿ ತಗ್ಗು ಪ್ರದೇಶಗಳನ್ನು ತುಂಬಲು ಈ ತ್ಯಾಜ್ಯವನ್ನು ಬಳಸಬಹುದು.
(4) ಸಿ ಮತ್ತು ಡಿ ತ್ಯಾಜ್ಯವನ್ನು ಲಾಭದಾಯಕ ಉಪಯೋಗಕ್ಕೆ ಬಳಸಿಕೊಳ್ಳುವ ಎಲ್ಲಾ ಅವಕಾಶಗಳನ್ನು ಬಿಬಿಎಂಪಿಯು ಕಂಡುಕೊಳ್ಳಬೇಕು. 10. ಘನತ್ಯಾಜ್ಯದ ಸಾಗಾಟಕ್ಕಾಗಿ ವಾಹನಗಳು-(1)ವಿಂಗಡಿತ ಘನತ್ಯಾಜ್ಯಗಳ ಸಂಗ್ರಹಕ್ಕಾಗಿ ಬಿ.ಬಿ.ಎಂ.ಪಿಯು ಸೂಕ್ತ ವಾಹನಗಳನ್ನು ನಿಯೋಜಿಸಬೇಕು. ಆಟೋ ಟಿಪ್ಪರ್ಗಳೂ ಸೇರಿದಂತೆ ಅಥವಾ ವಿಂಗಡಿಸಿದ ತ್ಯಾಜ್ಯಕ್ಕಾಗಿ ಪ್ರತ್ಯೇಕ ವಿಭಾಗಗಳನ್ನು ಒಳಗೊಂಡ ವಾಹನಗಳನ್ನು ನಿಯೋಜಿಸಬೇಕು. ಅಂತಹ ವಾಹನಗಳಿಗೆ ಅದರ ಆಗಮನವನ್ನು ಸಾರ್ವಜನಿಕರಿಗೆ ಸೂಚಿಸಲು ಅನುವಾಗುವಂತಹ ಸೂಕ್ತ ಧ್ವನಿವರ್ಧಕ ವ್ಯವಸ್ಥೆ ಮತ್ತು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಂದೇಶಗಳನ್ನು ಸಾರಲು ಅವಕಾಶವಿರಬೇಕು. ಎಲ್ಲಿ ಆಟೋಟಿಪ್ಪರ್ ಅಥವಾ ವಾಹನಗಳ ಮೂಲಕ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲಮೋ ಅಂತಹ ಸಂದುಗಳಲ್ಲಿ ವಿಘಟಿಸಬಲ್ಲುದಾದಂತಹ, ವಿಘಟಿಸಲು ಆಗದಂತಹ ತ್ಯಾಜ್ಯ ಹಾಗೂ ಅಪಾಯಕಾರಿ ಗೃಹ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತಹ ವಿಭಾಗಗಳನ್ನೊಳಗೊಂಡ ಮೋಟರ್ಚಾಲಿತ ಸಣ್ಣ ವಾಹನವನ್ನು ನಿಯೋಜಿಸಬೇಕು. ಒಂದೊಮ್ಮೆ ವಾಹನಗಳಲ್ಲಿ ಘನತ್ಯಾಜ್ಯದಸಂಗ್ರಹಣೆಗಾಗಿ ಮೂರು ಪ್ರತ್ಯೇಕ ವಿಭಾಗಗಳು ಇಲ್ಲದೇ ಹೋದರೆ ಜೈವಿಕವಾಗಿ ವಿಘಟನೆಯಾಗಬಲ್ಲ (ಬಯೋಡೀಗ್ರೇಡೆಬಲ್) ಮತ್ತು ವಿಘಟನೆ ಆಗದೇ ಇರುವ (ನಾನ್ ಬಯೋಡೀಗ್ರೇಡೆಬಲ್) ತ್ಯಾಜ್ಯ ಮತ್ತು ಅಪಾಯಕಾರಿ ಗೃಹ ತ್ಯಾಜ್ಯಗಳನ್ನು ಸಂಗ್ರಹಿಸಲು ಪ್ರತ್ಯೇಕವಾದ ದಿನಗಳನ್ನು ಗೊತ್ತು ಮಾಡಬೇಕು ಹಾಗೂ ವಿವಿಧ ಬಗೆಯ ಘನತ್ಯಾಜ್ಯಗಳು ಯಾವುದೇ ರೀತಿಯಲ್ಲಿ ಮಿಶ್ರಣ ಆಗದಂತೆ ಖಾತರಿಪಡಿಸಿಕೊಳ್ಳಬೇಕು. (2)ಚಿಕ್ಕದಾದ, ಇಕ್ಕಟ್ಟಿನ ಮತ್ತು ದಟ್ಟಣೆಯ ಬೀದಿಗಳು/ಗಲ್ಲಿಗಳಲ್ಲಿ ಸಣ್ಣ ಮೋಟಾರ್ ವಾಹನಗಳೂ ತೆರಳದ ಪ್ರದೇಶಗಳಲ್ಲಿ ಬಿ.ಬಿ.ಎಂ.ಪಿಯು ಹಸ್ತಚಾಲಿತ, ಉತ್ತಮವಾಗಿ ವಿನ್ಯಾಸಗೊಳಿಸಿದ, ಸಂಗ್ರಹಕ್ಕಾಗಿ ತೊಟ್ಟಿ/ಬಿನ್ಗಳನ್ನು ಹೊಂದಿದತಳ್ಳುವ ಗಾಡಿಯನ್ನು ಬಳಸಬೇಕು. ಇದು ವಿಂಗಡಿಸಿದ ಘನತ್ಯಾಜ್ಯವನ್ನು ಸಂಗ್ರಹಣಾ ವಾಹನಕ್ಕೆ /ವರ್ಗಾವಣೆ ಕೇಂದ್ರಕ್ಕೆ ಸುರಿಯುವಂತಿರಬೇಕು.
(3) ಮನೆ ಮನೆ ಕಸ ಸಂಗ್ರಹಣೆ ಮತ್ತು ಸಾಗಾಣೆಗೆ ಬಿ.ಬಿ.ಎಂ.ಪಿಯು ಬ್ಯಾಟರಿ ಚಾಲಿತ ವಾಹನ, ಅಥವಾ ವಿದ್ಯುತ್ಚಾಲಿತ ವಾಹನದಂತಹ ಪರಿಸರ ಸ್ನೇಹಿ ಆಯ್ಕೆಗಳನ್ನು ಅನ್ವೇಷಿಸಬೇಕು. ಪಳೆಯುಳಿಕೆ ಇಂಧನಗಳ ವಾಹನಗಳನ್ನು ನ್ಯಾಯಬದ್ಧವಾಗಿ ಪರಿಚಯಿಸಬೇಕು ಹಾಗೂ ಅದನ್ನು ಅತ್ಯುತ್ತಮವಾಗಿ ಬಳಕೆ ಮಾಡಬೇಕು ಹಾಗೂ ಕಾಲ ಕ್ರಮೇಣವಾಗಿ ಅವುಗಳನ್ನು ಹಂತ ಹಂತವಾಗಿ ಸಂಪೂರ್ಣ ರದ್ದುಮಾಡಲು ಬಿ.ಬಿ.ಎಂ.ಪಿಯು ಪ್ರಯತ್ನಿಸಬೇಕು. ಬಿ.ಬಿ.ಎಂ.ಪಿಯು ಕನಿಷ್ಠ ಒಂದು ಬ್ಯಾಟರಿ ಚಾಲಿತ /ವಿದ್ಯುತ್ಚಾಲಿತ ವಾಹನವನ್ನು ಪ್ರಾಥಮಿಕ ಕಸ ಸಂಗ್ರಹ ವಾಹನವನ್ನು ಪ್ರತೀ ವಾರ್ಡ್/ವಲಯಕ್ಕೆ ಕನಿಷ್ಟ ಒಂದರಂತೆ ಪರಿಚಯಿಸಬೇಕು. ಈ ಮೂಲಕ ಪಳೆಯುಳಿಕೆ ಇಂಧನರಹಿತ ವಾಹನ ಬಳಕೆಯನ್ನು ಅಲ್ಪಾವಧಿಯಲ್ಲೇ ಪ್ರೋತ್ಸಾಹಿಸಿದಂತಾಗುವುದು ಹಾಗೂ ಕ್ರಮೇಣ ಇದರ ಪ್ರಮಾಣ ಹೆಚ್ಚಿಸಬೇಕು.
(4) ಬಿ.ಬಿ.ಎಂ.ಪಿಯು ವ್ಯವಸ್ಥೆಗೊಳಿಸಿದ ಮೂಲಸೌಕರ್ಯಕ್ಕೆ ಅನುಗುಣವಾಗಿ ಘನತ್ಯಾಜ್ಯವನ್ನು ಕಾಂಪಾಕ್ಟರ್ನಂತಹ ದ್ವಿತೀಯ ಹಂತದ ವರ್ಗಾವಣೆ/ಸಾಗಣಿಕೆ ವಾಹನಗಳಿಗೆ ದ್ವಿತೀಯ ಹಂತದ ವರ್ಗಾವಣೆ ಸ್ಥಳಗಳಿಂದ ಸಾಗಣೆ ಮಾಡಬೇಕು. ಪ್ರತಿಯೊಂದು ಪ್ರಾಥಮಿಕ ಸಂಗ್ರಹ ವಾಹನಕ್ಕೂ ದ್ವಿತೀಯ ಹಂತದ ವರ್ಗಾವಣೆಯ/ಸಂಗ್ರಹಣೆ ವಾಹನವನ್ನು ನಿಗದಿ ಮಾಡಬೇಕು ಹಾಗೂ ಯಾವುದೇ ರೀತಿ ಹಸ್ತ ಚಾಲಿತವಾಗಿ ನಿರ್ವಹಣೆ ಮಾಡದೇ ಕಸವನ್ನು ನೇರವಾಗಿ ದ್ವಿತೀಯ ಹಂತದ ಸಾಗಣಿಕಾ ವಾಹನಕ್ಕೆ ಅಥವಾ ದ್ವಿತೀಯ ಹಂತದ ಸಂಗ್ರಹಣಾ ವ್ಯವಸ್ಥೆಗೆ ವರ್ಗಾವಣೆ ಮಾಡಬೇಕು. ವಾರ್ಡ್ ಮೈಕ್ರೋ ಪ್ಲಾನ್ನಲ್ಲಿ ಅಂತಹ ವರ್ಗಾವಣೆ/ಸಂಗ್ರಹಣೆ ಸ್ಥಳವನ್ನು ಗುರುತಿಸಿರಬೇಕು ಮತ್ತು ಆ ಸ್ಥಳವು ಮನೆಗಳಿಂದ ಕಸ ಸಂಗ್ರಹಿಸುವ ಪ್ರಾಥಮಿಕ ಸಂಗ್ರಹಣೆ ಪ್ರದೇಶಗಳಿಂದ ಹತ್ತಿರದಲ್ಲಿ ಮತ್ತು ಅನುಕೂಲಕರವಾದ ಜಾಗದಲ್ಲಿರಬೇಕು. ಪ್ರತಿಯೊಂದು ದ್ವಿತೀಯ ಹಂತದ ವಾಹನಕ್ಕೆ ಸ್ವೀಕೃತವಾಗುವ ಘನತ್ಯಾಜ್ಯದ ವರ್ಗಕ್ಕೆ ಅನುಗುಣವಾಗಿ ಸಂಸ್ಕರಣೆ ಕೇಂದ್ರ, ವಸ್ತುಗಳನ್ನು ಮರಳಿ ಪಡೆಯುವ ಕೇಂದ್ರ, ಡಿಡಬ್ಲ್ಯುಸಿಸಿ ಅಥವಾ ವಿಲೇವಾರಿ ಸ್ಥಳ ತಲುಪುವುದನ್ನು ನಿಗದಿ ಮಾಡಿರಬೇಕು.
(5)ಘನತ್ಯಾಜ್ಯ ಸಾಗಣೆಗೆ ಬಳಕೆ ಮಾಡುವ ವಾಹನಗಳನ್ನು ಈ ಮಾದರಿಯಲ್ಲಿ ಮುಚ್ಚಿರಬೇಕಾಗಿದ್ದು ಸಂಗ್ರಹಿಸಿದತ್ಯಾಜ್ಯವು,
(i) ಬಾಹ್ಯ ಪರಿಸರಕ್ಕೆ ತೆರೆದುಕೊಳ್ಳದಂತೆ
(ii) ಸಾರ್ವಜನಿವಾಗಿ ಕಾಣದಂತೆ ಮತ್ತು
(iii) ಸಾಗಣಿಕೆ ವೇಳೆ ರಸ್ತೆಗಳಲ್ಲಿ ಮತ್ತು/ಅಥವಾ ಪಾದಾಚಾರಿ ಸ್ಥಳಗಳಲ್ಲಿ ಚೆಲ್ಲದಂತೆ ಇರಬೇಕು.
(6) ಘನತ್ಯಾಜ್ಯವು ಸಂಸ್ಕರಣಾ/ ವಿಲೇವಾರಿ ಸ್ಥಳ ತಲುಪುವವರೆಗೂ ಮತ್ತು ಅಂತಹ ತ್ಯಾಜ್ಯವನ್ನು ಪದೇ ಪದೇ ಹಸ್ತಚಾಲಿತವಾಗಿ ನಿರ್ವಹಿಸಲು ಅವಕಾಶ ಇಲ್ಲದಂತೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಣಿಕ ವಾಹನಗಳನ್ನು ವಿನ್ಯಾಸಗೊಳಿಸಿರಬೇಕು. ಹೀಗಾಗಿ ವಿಂಗಡಿತ ಘನ ತ್ಯಾಜ್ಯದ ವರ್ಗಾವಣೆಯು ಬಿನ್ನಿಂದ ತೊಟ್ಟಿಗೆ ಮತ್ತು ವಾಹನದಿಂದ ವಾಹನಕ್ಕೆ ನಡೆಯಬೇಕು. ಬಿ.ಬಿ.ಎಂ.ಪಿಯು ಹಸಿ ತ್ಯಾಜ್ಯದ ನಿರ್ವಹಣೆ ವೇಳೆ ಪ್ರಾಥಮಿಕ ಸಂಗ್ರಹಣೆ ವಾಹನಗಳಿಂದ ಮತ್ತು ದ್ವಿತೀಯ ಹಂತದ ಸಾಗಣಿಕಾ ವಾಹನಗಳಿಂದ ಯಾವುದೇ ಲೀಚೆಟ್ ಸೋರಿಕೆ ಆಗದೇ ಇರುವುದನ್ನು ಖಾತರಿಪಡಿಸಿಕೊಳ್ಳಲು ಬೇಕಾದ ತ ನ್ನೆಲ್ಲಾ ಪ್ರಯತ್ನಗಳ ನ್ನು ಮಾಡಬೇಕು. ಪ್ರಾಥಮಿಕ ಸಂಗ್ರಹಣೆ ವಾಹನಗಳು ಮತ್ತು ಎರಡನೇ ಹಂತದ ಸಾಗಣೆ ವಾಹನಗಳಲ್ಲಿ ಸಂಗ್ರಹವಾಗುವ ಲೀಚೆಟ್ನ್ನು ಯಾವುದೇ ಮಳೆ ನೀರು ಚರಂಡಿಗಳಿಗೆ ಅಥವಾ ಒಳಚರಂಡಿಗಳಿಗೆ ವಿಸರ್ಜಿಸದ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿಮಾಡಬೇಕು.
(7) ಪ್ರಾಥಮಿಕ ಸಂಗ್ರಹಣೆ ವಾಹನಗಳು ಮತ್ತು ದ್ವಿತೀಯ ಹಂತದ ಸಾಗಣಿಕಾ ವಾಹನಗಳೂ ಸೇರಿದಂತೆ ಬಿ.ಬಿ.ಎಂ.ಪಿ.ಯು ಎಲ್ಲಾ ಘನತ್ಯಾಜ್ಯ ನಿರ್ವಹಣಾ ವಾಹನಗಳನ್ನು ಐ.ಸಿ.ಟಿ. ಸಕ್ರಿಯಗೊಳಿಸಿದ ವ್ಯವಸ್ಥೆಯುಳ್ಳ ನೇರಜಿ.ಪಿ.ಎಸ್. ಮೂಲಕ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣಿಕೆಯ ಮೇಲ್ವಿಚಾರಣೆಯನ್ನು ಖಚಿತಪಡಿಸಬೇಕು. ಅಂತಹ ವಾಹನಗಳ ಮೇಲ್ವಿಚಾರಣೆಯನ್ನು ಬಿ.ಬಿ.ಎಂ.ಪಿ.ಯು ಬಹುದೂರದ (ಕೇಂದ್ರೀಕೃತ ವ್ಯವಸ್ಥೆ ಅಳವಡಿಸಿ) ಕೇಂದ್ರದಿಂದ ನಡೆಸಬೇಕು. ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉದ್ದೇಶದಿಂದ (ಉತ್ತರಧಾಯಿತ್ವ) ಈ ವ್ಯವಸ್ಥೆಗೆ ಸಾರ್ವಜನಿಕ ಪ್ರವೇಶ ಅವಕಾಶವನ್ನು ಕಲ್ಪಿಸಬೇಕು.
(8) ನಿಗದಿತ ಪ್ರದೇಶದಲ್ಲಿ ಸಂಗ್ರಹವಾಗುವ ಘನತ್ಯಾಜ್ಯದ ಪ್ರಮಾಣ ಮತ್ತುಜನ ಸಂಖ್ಯೆಯ ಸಾಂದ್ರತೆಗೆ /ದಟ್ಟಣೆಗೆ ಅನುಗುಣವಾಗಿ ಘನತ್ಯಾಜ್ಯದ ಎರಡನೇ ಹಂತದ ಸಾಗಣಿಕಾ ವ್ಯವಸ್ಥೆಯನ್ನು ರೂಪಿಸಬೇಕು ಈ ವ್ಯವಸ್ಥೆಯು ಮೊದಲೇ ನಿಗದಿ ಮಾಡಿದ ನಿರ್ವಹಣಾ ಮಾನದಂಡದಂತೆ ನಿರ್ವಹಿಸಬೇಕು.