ನೀರಿನ ಟ್ಯಾಂಕುಗಳು, ಉದ್ಯಾನಗಳು, ಆಟದ ಮೈದಾನಗಳನ್ನು ಒಳಗೊಂಡಂ೦ತೆ ಯಾವುದೇ ಭೂಮಿ ಅಥವಾ ಕಟ್ಟಡ ಅಥವಾ ಯಾವುದೇ ಸ್ಥಳದ ಪ್ರತಿಯೊಬ್ಬ ಮಾಲೀಕ, ಅಧಿಭೋಗದಾರ, ಕಟ್ಟಡ ನಿರ್ಮಾಣಗಾರ ಅಥವಾ ಪ್ರಭಾರ ಹೊಂದಿರುವ ಇತರೆ ವ್ಯಕ್ತಿಯು (ಈ ಮುಂದಿನವುಗಳಲ್ಲಿ ಒಳಗೊಂಡಿರುವ ಆದರೆ ಅವುಗಳಿಗೆ. ಸೀಮಿತವಾಗಿರದ) ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಆತನ ಕರ್ತವ್ಯವಾಗಿರತಕ್ಕದ್ದು: ಎಂದರೆ,-
(i) ಯಾವುದೇ ಉದ್ದೇಶಕ್ಕಾಗಿ ಮನೆ ಅಥವಾ ಬಹುಮಹಡಿ ಕಟ್ಟಡ ಅಥವಾ ಯಾವುದೇ ಇತರೆ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವ ಪ್ರತಿಯೊಬ್ಬ ವ್ಯಕ್ತಿ, ಪ್ರಾಧಿಕಾರ ಅಥವಾ ಸಂಸ್ಥೆಯು ಅಂತಹ ಚಟುವಟಿಕೆಯ ಭಾಗವಾಗಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಉದ್ದೇಶದಿಂದ ಕ್ರಮಗಳನ್ನು ಕೈಗೊಳ್ಳತಕ್ಕದ್ದು;
(ii) ಮನೆಯ, ಯಾವುದೇ ಕಟ್ಟಿಡ, ನಿರ್ಮಾಣ ಸ್ಥಳ ಅಥವಾ ಶೆಡ್ ಅಥವಾ ಜಮೀನಿನ ಮಾಲೀಕ ಅಥವಾ ಅಧಿಭೋಗದಾರನು ಸೊಳ್ಳೆಯ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದಕ್ಕಾಗಿ ನೀರು. ಸಂಗ್ರಹಣಾ ಕಂಟೇನರುಗಳು, ಸಂಪುಗಳು ಅಥವಾ ಓವರ್ಹೆಡ್ ಟ್ಯಾಂಕ್ಗಳನ್ನು ಮುಚ್ಚಳದಿಂದ ಅಥವಾ ಯಾವುದೇ ವಸ್ತುಗಳಿಂದ ಮುಚ್ಚಿರುವುದನ್ನು .. ಮತ್ತು ನೀರಿನ ಶೇಖರಣೆ ಹಾಗೂ ಸೊಳ್ಳೆಯ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಘನ ತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳತಕ್ಕದು,
(iii) ಮನೆಯ, ಯಾವುದೇ ಕಟ್ಟಡ ಅಥವಾ ಶೆಡ್ ಅಥವಾ ಜಮೀನಿನ ಮಾಲೀಕ ಅಥವಾ ಅಧಿಭೋಗದಾರನು ನೀರು... ಸಂಗ್ರಹವಾಗಿ . ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದಾದ ಯಾವುದೇ ಖಾಲಿ ಪಾತ್ರೆಗಳು, ಮಡಕೆ ತಟ್ಟೆಗಳು, ಕ್ಯಾನ್ಗಳು, ಕಂಟೇನರ್ಗಳು, ಅನುಪಯುಕ್ತ ಟೈರುಗಳು, ಅದರ ಭಾಗಗಳು ಅಥವಾ ಯಾವುದೇ ಇತರೆ ಘನ ತ್ಯಾಜ್ಯ ವಸ್ತುಗಳನ್ನು ಇಲ್ಲದ ಹಾಗೆ ನೋಡಿಕೊಳ್ಳತಕ್ಕದ್ದು;
(iv) ಯಾವುದೇ ಕಟ್ಟಡ ಅಥವಾ ಜಮೀನಿನ ಮಾಲೀಕನು ಅಥವಾ ಅಧಿಭೋಗದಾರನು ಆ ಕಟ್ಟಡ ಅಥವಾ ಜಮೀನಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದಾದ ನೀರು ಶೇಖರಣೆ ಹಾಗೂ ಸಂಗ್ರಹಣೆವಾಗುವ ಸಂಭವವಿರುವ ಅನುಪಯುಕ್ತ ಟ್ಯಾಂಕ್, ಹೊಂಡ, ಬಿಲಗಳನ್ನು ಇಲ್ಲದ ಹಾಗೆ ನೋಡಿಕೊಳ್ಳತಕ್ಕದ್ದು;
(v) ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ ಅಥವಾ ಏಜೆನ್ಸಿಯು ಆವರಣದ ಒಳಗೆ ಅಥವಾ ಹೊರಗೆ ನೀರಿನ ಸಂಗ್ರಹಣೆ ಅಥವಾ ನೀರಿನ ಶೇಖರಣೆಯನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸತಕ್ಕದ್ದು... ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಯ ಕಾರಣದಿಂದ ನೆರೆಹೊರೆಯವರು ಅಥವಾ ಸಮುದಾಯಕ್ಕೆ ತೊಂದರೆಯಾಗುವುದನ್ನು ತಡೆಗಟ್ಟಬಹುದು;
(vi) ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಉದ್ದೇಶಕ್ಕಾಗಿ, ಕಟ್ಟಡದ ಮಾಲೀಕರು ಅಥವಾ ಅಧಿಭೋಗದಾರರು, ನಿರ್ಮಾಣ ಹಂತದಲ್ಲಿರುವ ಕಟ್ಟಡ ಅಥವಾ ಖಾಲಿ ಸ್ಥಳವು ಸೊಳ್ಳೆಗಳ ಸಂತಾನೋತ್ಪತ್ತಿ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹವನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು; ಮತ್ತು
(vii) ಖಾಸಗಿ ವ್ಯಕ್ತಿ ಅಥವಾ ಸರ್ಕಾರ, ಅರೆ ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಸೇರಿರುವಂಂಥ ಭೂಮಿ ಅಥವಾ ಕಟ್ಟಡದ ಮಾಲೀಕನು ಅಥವಾ ಅಧಿಭೋಗದಾರನು ಅಥವಾ ಪ್ರಭಾರ ಹೊಂದಿರುವ ಯಾರೇ ವ್ಯಕ್ತಿಯು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹ ಅಥವಾ ಸಂಗ್ರಹಣೆಯನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು.