(1) ಸಕ್ಷಮ ಪ್ರಾಧಿಕಾರವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ರೋಗವಾಹಕಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ಗೊತ್ತುಪಡಿಸಿದ ಎಲ್ಲಾ ಪರಿಹಾರ ಕ್ರಮಗಳ ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಲು ಸಶಕ್ತವಾಗಿರತಕ್ಕದ್ದು.
(2) ಸಕ್ಷಮ ಪ್ರಾಧಿಕಾರವು ಎಲ್ಲಾ ಜಮೀನು, ಕಟ್ಟಡಗಳು, ಕಟ್ಟಡದ ಆವರಣಗಳು, ನೀರಿನ ಟ್ಯಾಂಕುಗಳು, ಉದ್ಯಾನಗಳು, ಆಟದ ಮೈದಾನಗಳು ಮುಂತಾದವುಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ. ಶಿಫಾರಸ್ಸು. ಮಾಡಲು . ಮತ್ತು. ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ಹೊಂದಿರತಕ್ಕದ್ದು.
(3) ಸಕ್ಷಮ ಪ್ರಾಧಿಕಾರವು, ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಎಲ್ಲಾ ಯುಕ್ತ ಸಮಯದಲ್ಲಿ ಮತ್ತು ಯಾವುದೇ ಜಮೀನು ಅಥವಾ ಕಟ್ಟಡದಲ್ಲಿ ಪ್ರವೇಶಿಸುವುದು ಮತ್ತು ಪರಿಶೀಲಿಸುವುದು. ತನಗೆ ಯುಕ್ತವೆಂದು ಕಂಡುಬರಬಹುದಾದಂಥ ಜಮೀನು ಅಥವಾ ಸಂದರ್ಭಾನುಸಾರ, ಕಟ್ಟಡದ ಮಾಲೀಕನಿಗೆ ಅಥವಾ ಅಧಿಭೋಗದಾರನಿಗೆ ಲಿಖಿತದಲ್ಲಿ ನೋಟೀಸ್ ನೀಡಿದ ತರುವಾಯ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹಣೆ ಅಥವಾ ನೀರಿನ ಶೇಖರಣೆಯಾಗುವ ಸ್ಥಳಗಳನ್ನು ಪತ್ತೆಹಚ್ಚುವ ಉದ್ದೇಶಕ್ಕಾಗಿ ಅಂಥ ಪ್ರವೇಶ ಮತ್ತು ಪರಿಶೀಲನೆಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸತಕ್ಕದ್ದು ಮತ್ತು ಆತನು ಅಗತ್ಯಪಡಿಸಬಹುದಾದಂಥ ಎಲ್ಲಾ ಮಾಹಿತಿಯನ್ನು ಒದಗಿಸತಕ್ಕದ್ದು.
(4) ಸಕ್ಷಮ ಪ್ರಾಧಿಕಾರ ಅಥವಾ ಅದರ ಪ್ರಾಧಿಕೃತ ಅಧಿಕಾರಿಯು, . ಸೊಳ್ಳೆಗಳ ಸಂತಾನೋತ್ಪತ್ತಿಯಾಗುವ ಅಥವಾ ಸಂತಾನೋತ್ಪತ್ತಿಯಾಗುವ ಸಂಭವಿರುವ ನೀರು ಸಂಗ್ರಹಣೆಯಾಗುವ ಯಾವುದೇ ಸ್ಥಳದ ಮಾಲೀಕರು ಅಥವಾ ಅಧಿಭೋಗದಾರರಿಗೆ 24 ಗಂಟೆಗಳೊಳಗೆ ಸಕ್ಷಮ ಪ್ರಾಧಿಕಾರವು ಸನ್ನಿವೇಶಗಳಲ್ಲಿ ಸೂಕ್ತವೆಂದು ಪರಿಗಣಿಸಬಹುದಾದಂಥ ಭೌತಿಕ, ರಾಸಾಯನಿಕ ಅಥವಾ ಜೈವಿಕ ಕ್ರಮಗಳು ಅಥವಾ ವಿಧಾನಗಳ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯುವ ಅಥವಾ ಅವುಗಳನ್ನು ನಾಶಪಡಿಸುವಂಂತಹ ಕ್ರಮಗಳನ್ನು ಕೈಗೊಳ್ಳುವಂತೆ ಅಗತ್ಯಪಡಿಸಿ ಲಿಖಿತದಲ್ಲಿ ನೋಟೀಸ್ ನೀಡಬಹುದು.
(5) ಯಾವ ವ್ಯಕ್ತಿಗೆ ನೋಟೀಸನ್ನು ನೀಡಲಾಗಿದೆಯೋ, ಆತನು ಅಂತಹ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಸಂಸ್ಕರಣಾ ವಿಧಾನವನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳುವುದಕ್ಕೆ ವಿಫಲನಾದರೆ ಅಥವಾ ನಿರಾಕರಿಸಿದರೆ, ಸಕ್ಷಮ ಪ್ರಾಧಿಕಾರ ಅಥವಾ ಅದರ ಪ್ರಾಧಿಕೃತ ಅಧಿಕಾರಿಯು ತಾನೇ ಖುದ್ದಾಗಿ ಅಂತಹ ಕ್ರಮಗಳನ್ನು ಕೈಗೊಳ್ಳಬಹುದು ಅಥವಾ ೧೭೪೫೨ ಕರ್ನಾಟಕ ರಾಜ್ಯಪತ್ರ ಶುಕ್ರವಾರ, ೨೫, ಅಕ್ಟೋಬರ್, ೨೦೨೪ ಭಾಗ ೪ಎ ಅಂತಹ ನೋಟೀಸಿನಲ್ಲಿ ಸೂಚಿಸಲಾದ ಅವಧಿಯೊಳಗೆ ಅಂತಹ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಸಂಸ್ಕರಣಾ ವಿಧಾನವನ್ನು ಅಳವಡಿಸಿಕೊಳ್ಳಬಹುದು ಮತ್ತು ಕ್ರಮವಹಿಸಲು ತಪ್ಪಿದ ಮಾಲೀಕ ಅಥವಾ ಅಧಿಭೋಗದಾರನಿಂದ ಅದಕ್ಕೆ ತಗುಲಿದ ಎರಡರಷ್ಟು ವೆಚ್ಚವನ್ನು ವಸೂಲಿ ಮಾಡಬಹುದಾಗಿದೆ.
(6) ಸಕ್ಷಮ ಪ್ರಾಧಿಕಾರ ಅಥವಾ ಅದರ ಪಾಧಿಕೃತ ಅಧಿಕಾರಿಯು ಈ ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷಿಸಿದ ಅಥವಾ ನಿರಾಕರಿಸಿದ ಅಥವಾ ವಿಫಲನಾಗಿದ ಯಾರೇ ವ್ಯಕ್ತಿಗೆ ಈ ಕೆಳಗಿನ ಕೋಷ್ಠಕದಲ್ಲಿ ತೋರಿಸಲಾದಂ೦ತೆ ಜುಲ್ಮಾನೆಯಿಂದ ದಂಡ ವಿಧಿಸಲು ಅಧಿಕಾರಗಳನ್ನು ಹೊಂದಿರತಕ್ಕದ್ದು.
| ಕ್ರಮ ಸಂಖ್ಯೆ | ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದ ಸ್ಥಳ | ಭೌಗೋಳಿಕ ಪ್ರದೇಶ | ಅನ್ವಯವಾಗುವ ಜುಲ್ಮಾನೆ ಮೊತ್ತ (ರೂ.ಗಳಲ್ಲಿ) |
| 1 | ಮನೆಗಳು (ಒಳಾಂಗಣ ಮತ್ತು ಹೊರಾಂಗಣಗಳೆರಡೂ) | ನಗರ ಪ್ರದೇಶ | 800/- |
| ಗ್ರಾಮೀಣ ಪ್ರದೇಶ | 400/- | ||
| 2 | ವಾಣಿಜ್ಯ ಸಂಸ್ಥೆಗಳು, ಕಛೇರಿಗಳು, ವಸತಿ ಸೌಲಭ್ಯಗಳನ್ನು ಒಳಗೊಂಡ ಶಾಲಾ ಮತ್ತು ಕಾಲೇಜುಗಳು, ಆರೋಗ್ಯ ಪಾಲನಾ ಸೌಲಭ್ಯಗಳು, ರೆಸ್ಟೋರೆಂಟ್ಗಳು, ಹೋಟೆಲ್ಗಳು, ಉಪಹಾರ . ಗೃಹಗಳು, ವಸತಿಗೃಹಗಳು (ಲಾಡ್ಜ್ಗಳು), ರೆಸಾರ್ಟ್ಗಳು, ಹೋಂ ಸ್ಟೇಗಳು, ಮನೋರಂಜನಾ ಉದ್ಯಾನವನಗಳು, ಮಾಲ್ಗಳು, ಸೂಪರ್ ಮಾರ್ಕಟ್ಗಳು, ಸಣ್ಣ ಅಂಗಡಿಗಳು, ಎಳನೀರು ವ್ಯಾಪಾರಿಗಳು, ಕಾರ್ಯಾನೆಗಳು.. ಮತ್ತು ಸೈಗಾರಿಕೆಗಳು, ಪಂಚರ್ ಹಾಕುವ ಶಾಪ್ಗಳು, ಘನತ್ಯಾಜ್ಯ ಸಂಗ್ರಹಣಾ ಯಾರ್ಡ್ಗಳು, ಪ್ಲಾಂಟ್ ನರ್ಸರಿಗಳು, ಸಿನಿಮಾ. ಥೀಯೇಟರ್ಗಳು, ಸಮ್ಮೇಳನ ಸಭಾಂಗಣಗಳು ಯಾವುದೇ ಇತರೆ ನಿರ್ಮಿತಿ, ಮುಂತಾದವುಗಳು. | ನಗರ ಪ್ರದೇಶ | 2,000/- |
| ಗ್ರಾಮೀಣ ಪ್ರದೇಶ | 1000/- | ||
| 3 | ನಿರ್ಮಾಣಕಾರ್ಯ ಪ್ರಗತಿಯಲ್ಲಿರುವ ನಿವೇಶನಗಳು, ಪಾಳುಬಿದ್ದ ನಿರ್ಮಾಣಗಳ ನಿವೇಶನಗಳು, ಖಾಲಿ ನಿವೇಶನಗಳು, ಬಯಲು ಜಮೀನು ಮುಂತಾದವುಗಳು | ನಗರ ಪ್ರದೇಶ | 4,000/- |
| ಗ್ರಾಮೀಣ ಪ್ರದೇಶ | 2,000/- |