ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಅಧಿನಿಯಮ, 2012 (2015ರ ಕರ್ನಾಟಕ ಅಧಿನಿಯಮ 26) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ), 3ನೇ ಪ್ರಕರಣದಲ್ಲಿ-
(i) (NSE ಉಪಪ್ರಕರಣದ ಈಗಾಗಲೇ ಇರುವ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು ಪರಂತು, ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿಸ್ಥಾನಗಳನ್ನು ಆದ್ಯತೆಯ ಮೇಲೆ ತುಂಬತಕ್ಕದ್ದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳ ಸಂಖ್ಯೆಯಿರುವ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿನ ಖಾಲಿಸ್ಮಾನಗಳಿಗೆ ಒಂದು ವರ್ಷದ ಕಡ್ಡಾಯ ಸೇವೆ ಸಲ್ಲಿಸಲು ಅಭ್ಯರ್ಥಿಗಳನ್ನು ಸ್ಥಳವಿಯುಕ್ತಿಗೊಳಿಸುವ ಮೂಲಕ ತುಂಬಬಹುದು.”
(ii) (3)ನೇ ಉಪಪ್ರಕರಣದಲ್ಲಿ “ಗ್ರಾಮೀಣ” ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು;
(ii) 1)ನೇ ಉಪಪ್ರಕರಣದಲ್ಲಿ,-
(ಎ) "ಗ್ರಾಮೀಣ" ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು;
(ಬಿ) ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು ಪರಂತು ಅಭ್ಯರ್ಥಿಗಳು ಉನ್ನತ ವಾಸಂಗವನ್ನು ಪೂರ್ಣಗೊಳಿಸಿದ ನಂತರ ಒಂದು ವರ್ಷದ ಕಡ್ಡಾಯ ಸೇವೆಯ ಹೊಣೆಗಾರಿಕೆಯನ್ನು ಪೂರೈಸುವ ಅವರ ಬದ್ಧತೆಯನ್ನು ನಮೂದಿಸಿ, ತಪ್ಪಿದಲ್ಲಿ ಆತನು ದಂಡನೆಗೆ ಮತ್ತು ಅಫಿಡವಿಟ್ ಅಥವಾ ಮುಚ್ಚಳಿಕೆಯಲ್ಲಿ ನಿರ್ದಿಷ್ಟಪಡಿಸಿದ ಅಂಥ ಇತರ ತತ್ಪರಿಣಾಮಗಳಿಗೆ ಹೊಣೆಯಾಗತಕ್ಕದ್ದು DOD ಮುಚ್ಚಳಿಕೆ ಅಥವಾ ಅಫಿಡವಿಟ್ಟನ್ನು ಸಲ್ಲಿಸಿದ ಮೇಲೆ, ಅವರಿಗೆ ಕಾನೂನು ರೀತ್ಯಾ ಸ್ಥಾಪಿಸಲಾದ ವಿಶ್ವವಿದ್ಯಾನಿಲಯಗಳಲ್ಲಿ DOB ಅಥವಾ ಎಂಎಸ್ ಅಥವಾ ಫೆಲೋಪಿಪ್ನಂತಹ ಉನ್ನತ ವ್ಯಾಸಂಗಗಳನ್ನು ಪಡೆಯಲು ಷರತ್ತುಬದ್ಧ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಬಹುದು.” 3.3ಎ ಹೊಸ ಪ್ರಕರಣದ ಸೇರ್ಪಡೆ.- ಮೂಲ ಅಧಿನಿಯಮದ 3ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"3ಎ. ಆದ್ಯತೆ ಮತ್ತು ವಿನಾಯಿತಿ.- ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, 3, 4 ಮತ್ತು 5ನೇ ಪ್ರಕರಣಗಳಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆಗಾಗಿ ಸರ್ಕಾರವು ನಿರ್ದಿಷ್ಟಪಡಿಸಿದ ಅಸ್ತಿತ್ವದಲ್ಲಿರುವ ಖಾಲಿಸ್ಥಾನಗಳನ್ನು ತುಂಬುವಾಗ, ಸರ್ಕಾರಿ ಕೋಟಾ ಸೀಟುಗಳಡಿ ವೈದ್ಯಕೀಯ ಕೋರ್ಸು ಉತ್ತೀರ್ಣರಾದ ಅಭ್ಯರ್ಥಿಗಳನ್ನು ಆದ್ಯತೆಯ ಮೇಲೆ ತುಂಬತಕ್ಕದ್ದು ಹಾಗೂ ಉಳಿದ ಖಾಲಿಸ್ಥಾನಗಳನ್ನು ಸಾಂಸ್ಥಿಕ ಸೀಟುಗಳಡಿ ವೈದ್ಯಕೀಯ ಕೋರ್ಸುಗಳನ್ನು ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಂದ ತುಂಬಬಹುದು ಮತ್ತು ಹೆಚ್ಚುವರಿ ಅಭ್ಯರ್ಥಿಗಳನ್ನು ಕಡ್ಡಾಯ ಸೇವೆಯಿಂದ ವಿನಾಯಿತಿಗೊಳಿಸಬಹುದು.
ವಿವರಣೆ: ಈ ಪ್ರಕರಣದ ಉದ್ದೇಶಕ್ಕಾಗಿ “ಸರ್ಕಾರಿ ಸೀಟುಗಳು” ಮತ್ತು “ಸಾಂಸ್ಥಿಕ ಸೀಟುಗಳು” ಎಂಬುದು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿರ್ಧರಣೆ) ಅಧಿನಿಯಮ, 2006 (2006ರ ಕರ್ನಾಟಕ ಅಧಿನಿಯಮ 8)ರಲ್ಲಿ ಪರಿಭಾಷಿಸಲಾದ ಅದೇ ಅರ್ಥವನ್ನು ಹೊಂ೦ದಿರತಕ್ಕದ್ದು.”