ಮೂಲ ಅಧಿನಿಯಮದ 5ನೇ ಪ್ರಕರಣದಲ್ಲಿನ (2ನೇ ಉಪ- ಪ್ರಕರಣದಲ್ಲಿ,-
(ಎ) ಈಗಾಗಲೇ ಇರುವ ಪರಂತುಕದಲ್ಲಿ “ಗ್ರಾಮೀಣ” ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು.
(ಬಿ) ಈಗಾಗಲೇ ಇರುವ ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು BOOS) ಅಭ್ಯರ್ಥಿಗಳು ಉನ್ನತ ವಾಸಂಗವನ್ನು ಪೂರ್ಣಗೊಳಿಸಿದ ನಂತರ ಒಂದು ವರ್ಷದ ಕಡ್ಡಾಯ ಸೇವೆಯ ಹೊಣೆಗಾರಿಕೆಯನ್ನು ಪೂರೈಸುವ ಅವರ ಬದ್ಧತೆಯನ್ನು ನಮೂದಿಸಿ, ತಪ್ಪಿದಲ್ಲಿ ಆತನು ದಂಡನೆಗೆ ಮತ್ತು ಅಫಿಡವಿಟ್ ಅಥವಾ ಮುಚ್ಚಳಿಕೆಯಲ್ಲಿ ನಿರ್ದಿಷ್ಟಪಡಿಸಿದ ಅಂಥ ಇತರ ತತ್ಪರಿಣಾಮಗಳಿಗೆ. ಹೊಣೆಯಾಗತಕ್ಕದ್ದು ಎಂದು ಮುಚ್ಚಳಿಕೆ. ಅಥವಾ ಅಫಿಡವಿಟ್ಟನ್ನು ಸಲ್ಲಿಸಿದ ಮೇಲೆ, ಅವರಿಗೆ ಕಾನೂನು ರೀತ್ಯಾ ಸ್ಥಾಪಿಸಲಾದ ವಿಶ್ವವಿದ್ಯಾನಿಲಯಗಳಲ್ಲಿ ಫೆಲೋಪಷಿಪ್ನಂತಹ ಉನ್ನತ ವ್ಯಾಸಂಗಗಳನ್ನು ಪಡೆಯಲು ಷರತ್ತುಬದ್ಧ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಬಹುದು.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.