ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು 2020ರ ವಿನಿಯಮ 5ರ ಬದಲಾಗಿ ಈ ಕೆಳಕಂಡಂ೦ತೆ ಪ್ರಸ್ಥಾಪಿಸತಕ್ಕದ್ದು:-
"5. ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ದಂಡನೆಯನ್ನು ವಿಧಿಸುವ ಉದ್ದೇಶದಿಂದ ಸರ್ಕಾರಿ ನೌಕರನ ವಿರುದ್ಧ ಮೂಲ ಆದೇಶವನ್ನು ಹೊರಡಿಸಲು ಶಿಸ್ತು ಪ್ರಾಧಿಕಾರವು ಪ್ರಸ್ತಾಪಿಸಿದ ಅಥವಾ ಸದರಿ ನಿಯಮಗಳ ಅಡಿ ಹೊರಡಿಸಲಾದ ಮೂಲ ಆದೇಶದ ಮೇಲಿನ ಅಪೀಲು ಅಥವಾ ಪುನರೀಕ್ಷಣೆ ಅಥವಾ ಪುನರಾವಲೋಕನದಲ್ಲಿ ಆದೇಶ ಮಾಡಲು ಸಕ್ಷಮ ಪ್ರಾಧಿಕಾರವು ಪ್ರಸ್ತಾಪಿಸಿದಂತಹ ಸರ್ಕಾರಿ ನೌಕರನ ಮೇಲೆ ಪರಿಣಾಮವನ್ನು ಉಂಟು ಮಾಡುವ ಶಿಸ್ತು ಕ್ರಮವನ್ನು. ಒಳಗೊಂಡ . ಯಾವುದೇ ಪ್ರಕರಣದಲ್ಲಿ ಆಯೋಗದೊಂದಿಗೆ ಸಮಾಲೋಚಿಸುವುದು ಅಗತ್ಯವಾಗಿರತಕ್ಕದ್ದಲ್ಲ” ಸಹಿ/-
(ವಜುಬಾಯಿ ವಾಲಾ) ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಎ.ವಿ. ಶೈಲಜ)
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು -2)