ಈ ನಿಯಮಾವಳಿಗಳಲ್ಲಿ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿದ್ದ ಹೊರತು,- (ಎ) “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ: 14); ಮತ್ತು (ಬಿ) “ಪ್ರಕರಣ” ಎಂದರೆ ಅಧಿನಿಯಮದ ಒಂದು ಪ್ರಕರಣ.