ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ), 2ನೇ ನಿಯಮದಲ್ಲಿ, ಖಂಡ (1–ಎ)ರ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:–
“(1–ಎ) ಮೈಕ್ರೋಬ್ರೀವರಿಯ ಸಂದರ್ಭದಲ್ಲಿ, ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದಕ್ಕೆ ಅನ್ವಯವಾಗುವ ಅಬಕಾರಿ ಸುಂಕವನ್ನು ಅನುಸೂಚಿ ಎ ನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಸನ್ನದು ಶುಲ್ಕದೊಂದಿಗೆ ಪಾವತಿಸತಕ್ಕದ್ದು. ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದಕ್ಕೆ ಅನ್ವಯವಾಗುವ ಅಬಕಾರಿ ಸುಂಕದ ಮುಂದಿನ ಕಂತನ್ನು, ಡ್ರಾಟ್ ಬಿಯರ್ ಉತ್ಪಾದನೆಯು ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದನ್ನು ಮೀರಿದಾಗ ಅಥವಾ ಅಬಕಾರಿ ವರ್ಷದ ಡಿಸೆಂಬರ್ ತಿಂಗಳ ಅಂತ್ಯದೊಳಗೆ, ಯಾವುದು ಮೊದಲಿನದು, ಆಗ ಪಾವತಿಸತಕ್ಕದ್ದು. ಡ್ರಾಟ್ ಬಿಯರ್ ಉತ್ಪಾದನೆಯು ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತನ್ನು ಮೀರಿದರೆ, ಸನ್ನದುದಾರನು ಡ್ರಾಟ್ ಬಿಯರ್ನ ಹೆಚ್ಚುವರಿ ಉತ್ಪಾದನೆಯ ಪ್ರಮಾಣಕ್ಕೆ ಅಬಕಾರಿ ಸುಂಕವನ್ನು ಅನುಸೂಚಿ ಎ ನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಪಾವತಿಸತಕ್ಕದ್ದು”. 3. 2–ಎಎಎ ನೇ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 2–ಎಎಎ ನಿಯಮದಲ್ಲಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:– “2–ಎಎಎ. ಮೈಕ್ರೋಬ್ರೀವರಿಯಲ್ಲಿ ಡ್ರಾಟ್ ಬಿಯರ್ ತಯಾರಿಕೆಯ ಸಂದರ್ಭದಲ್ಲಿ, ನಿಯಮ 2 ರ ಅಡಿಯಲ್ಲಿ ಸನ್ನದುದಾರನು ಪಾವತಿಸಿದ ಅಬಕಾರಿ ಸುಂಕ ಜೊತೆಗೆ, ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದಕ್ಕೆ ಅನ್ವಯವಾಗುವ ಹೆಚ್ಚುವರಿ ಅಬಕಾರಿ ಸುಂಕವನ್ನು ಅನುಸೂಚಿ ಡಿ1 ನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಸನ್ನದು ಶುಲ್ಕದೊಂದಿಗೆ ಪಾವತಿಸತಕ್ಕದ್ದು. ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದಕ್ಕೆ ಅನ್ವಯವಾಗುವ ಹೆಚ್ಚುವರಿ ಅಬಕಾರಿ ಸುಂಕದ ಮುಂದಿನ ಕಂತನ್ನು, ಡ್ರಾಟ್ ಬಿಯರ್ ಉತ್ಪಾದನೆಯು ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಇಪ್ಪತ್ತೈದನ್ನು ಮೀರಿದಾಗ ಅಥವಾ ಅಬಕಾರಿ ವರ್ಷದ ಡಿಸೆಂಬರ್ ತಿಂಗಳ ಅಂತ್ಯದೊಳಗೆ, ಯಾವುದು ಮೊದಲಿನದು, ಆಗ ಪಾವತಿಸತಕ್ಕದ್ದು. ಡ್ರಾಟ್ ಬಿಯರ್ ಉತ್ಪಾದನೆಯು ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತನ್ನು ಮೀರಿದರೆ, ಸನ್ನದುದಾರನು ಡ್ರಾಟ್ ಬಿಯರ್ನ ಹೆಚ್ಚುವರಿ ಉತ್ಪಾದನೆಯ ಪ್ರಮಾಣಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು ಅನುಸೂಚಿ ಡಿ1 ನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಪಾವತಿಸತಕ್ಕದ್ದು”.