ಕರ್ನಾಟಕ ಸರ್ಕಾರ (ಕೆಲಸಗಳ ಹಂಚಿಕೆ) ನಿಯಮಗಳು, 1977 ರಲ್ಲಿ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ) ಅನುಸೂಚಿ- ॥ರ “ಸಿಬ್ಬಂದಿ ಮತು, ಆಡಳಿತ ಸುಧಾರಣೆ ಇಲಾಖೆ” ಶೀರ್ಷಿಕೆಯಡಿಯಲ್ಲಿ, (1 “ಎಲ್. ಆಡಳಿತ ಸುಧಾರಣೆ” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ 12 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು.
“13. ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ, 2005 ಮತ್ತು ಅದಕ್ಕೆ ಸಂಬಂ೦ಧಪಟ್ಟ ವಿಷಯಗಳು. 14. ದೂರುಗಳು ಮತ್ತು ಕುಂದುಕೊರತೆಗಳನ್ನು ಹೊತುಪಡಿಸಿ ಜನಸ್ಪಂದನದ ವಿಷಯಗಳು”. (ii) “ts, ಜನಸ್ಪಂದನ ಕೋಶ” ಉಪ ಶೀರ್ಷಿಕೆ ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನು ಕೈ ಬಿಡತಕ್ಕದ್ದು.
(iii) “ಎಸ್.ಇ- ಆಡಳಿತ” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ 17 ಮತ್ತು ಅದರ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-
“18. ಜನಸ್ಪಂದನದ ದೂರುಗಳು ಮತ್ತು ಕುಂದುಕೊರತೆಗಳು”.