ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ವಿಯಂ೦ತ್ರಣ) ಅಧಿನಿಯಮ, 2011ನ್ನು(2011ರ ಕರ್ನಾಟಕ ಅಧಿನಿಯಮ 2) «ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 2ನೇ ಪ್ರಕರಣದಲ್ಲಿ,-
(i) ಈಗಾಗಲೇ ಇರುವ (ಎ) ಖಂಡವನ್ನು (ಎಎ) ಎಂಬುದಾಗಿ ಮರುಸಂಖ್ಯೆ ನೀಡತಕ್ಕದ್ದು;
(ii) ಹಾಗೆ ಮರುಸಂಖ್ಯೆ ನೀಡಲಾದ (ಎಎ) ಖಂಡಕ್ಕೆ ಮೊದಲು ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಎ) “ಆಡಳಿತಾತ್ಮಕ ಹುದ್ದೆಗಳು” ಎಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ BA, ಚಿಕಿತ್ಸಕ, ತರಬೇತಿ ಸಂಸ್ಥೆಗಳ ಪ್ರಾಂಶುಪಾಲ, ಜಂಟೆ ನಿರ್ದೇಶಕ, ಉಪ ನಿರ್ದೇಶಕ, ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ದೊಡ್ಡ ಆಸ್ಪತ್ರೆಗಳ ಅಧೀಕ್ಷಕ ಹಾಗೂ ಆಯುಷ್ ಉಪ ನಿರ್ದೇಶಕ ಮತ್ತು ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಎಂಬುದಾಗಿ ಗುರುತಿಸಲಾದ ಹುದ್ದೆಗಳು;”;
(iii) (ಸಿ) ಐಂಡಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ಸ) “ಸಕ್ಷಮ ಪ್ರಾಧಿಕಾರಿ” ಎಂದರೆ ಆರೋಗ್ಯ ಅಧಿಕಾರಿಗಳು ಅಥವಾ ಇತರ ಸಿಬ್ಬಂದಿಗಳ ವರ್ಗಾವಣೆಯ ಆದೇಶಗಳನ್ನು ಮಾಡಲು ಸಕ್ಷಮವೆಂದು ನಿಯಮಿಸಬಹುದಾದ ಅಂಥ ಪಾಧಿಕಾರಿ;
(iv) ಹಾಗೆ ಪ್ರತಿಯೋಜಿಸಲಾದ (A) ಐಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
(ಸಿಎ “ಗೇಟರ್ ಬೆಂಗಳೂರು ಪ್ರದೇಶ” ಎಂದರೆ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ 36)ರಡಿ ರಚಿಸಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪರಿಮಿತಿಗಳಲ್ಲಿ ಬರುವ ಪ್ರದೇಶಗಳು;
“ಸಿಬಿ) “ಮಹತ್ವದ ಖಾಲಿಹುದ್ದೆ” ಎಂದರೆ ನಿಯಮಿಸಬಹುದಾದ ಅಂಥ ಹುದ್ದೆಗಳ ಖಾಲಿ ಸ್ಥಾನಗಳು;”;
(ಗ (ಜಿ) ಖಂಡದಲ್ಲಿ “ನಿರ್ದಿಷ್ಟ ಅವಧಿಗಾಗಿ ಸೃಜಿಸಿದ” ಎಂಬ ಪದಗಳ ತರುವಾಯ “ಅಧಿಸೂಚನೆಯ ಮೂಲಕ ಸರ್ಕಾರವು ಹಾಗೆಂದು ಗುರುತಿಸಲಾದ” ಎಂಬ ಪದಗಳನ್ನು ಸೇರಿಸತಕ್ಕದ್ದು;
(vi) (ಎಂ) ಖಂಡದಲ್ಲಿ “ಹಿರಿಯ ವಿಶೇಷಜ್ಞನಾಗಿ ಕಾರ್ಯ ನಿರ್ವಿಹಿಸುತ್ತಿರುವ” Dow ಪದಗಳ ಬದಲಿಗೆ “ಹಿರಿಯ ವಿಶೇಷಜ್ಞ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(vii) (ಎನ್) ಖಂಡದಲ್ಲಿ “ವಿಶೇಷಣ್ಞನಾಗಿ ಕಾರ್ಯ ನಿರ್ವಿಹಿಸುತ್ತಿರುವ” ಎಂಬ ಪದಗಳ ಬದಲಿಗೆ. “ವಿಶೇಷಜ್ಞ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(viii) ಹಾಗೆ ಪ್ರತಿಯೋಜಿಸಲಾದ (ಎನ್) ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
(ಎನ್ಎ) "ವ್ಯಕ್ತಿಗಳ ವಿಶೇಷ ಪ್ರವರ್ಗ” ಎಂದರೆ ನಿಯಮಿಸಬಹುದಾದ ಅಂಥ ವಿಶೇಷ ಪ್ರವರ್ಗಗಳಿಗೆ ಸೇರಿದ ವ್ಯಕ್ತಿಗಳು.”