ಮೂಲ ಅಧಿನಿಯಮದ 6ನೇ ಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“6. ಸಾರ್ವಜನಿಕ ಹಿತದೃಷ್ಟಿಯಿಂದ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯ ವರ್ಗಾವಣೆ.- (1) ಸೇವೆಯಲ್ಲಿರುವ ಮತ್ತು ಗ್ರಾಮೀಣ ಪ್ರದೇಶ, ಎ-ವಲಯ, ಬಿ-ವಲಯ ಅಥವಾ ಗೇಟರ್ ಬೆಂಗಳೂರು ಪ್ರದೇಶದಲ್ಲಿನ ಸರ್ಕಾರಿ ಆಸ್ಪತ್ರೆ, ಅಥವಾ ಸರ್ಕಾರಿ ಸಂಸ್ಥೆಯಲ್ಲಿ, ನಿಯಮಿಸಲಾದ ಸಂಖ್ಯೆಯ ವಿರಂತರ ಸೇವೆಯ ವರ್ಷಗಳನ್ನು ಪೂರೈಸಿರುವ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು, ಆ ಪ್ರದೇಶ ಅಥವಾ ಹುದ್ದೆಯಲ್ಲಿ ದೀರ್ಫಾವಧಿಯ ಸೇವೆ ಅಥವಾ ಸೇವಾವಧಿಯಲ್ಲಿರುವ ವ್ಯಕ್ತಿಗಳಿಗೆ ಆದ್ಯತೆಯನ್ನು ನೀಡುವ ಮೂಲಕ ಮತ್ತು ನಿಯಮಿಸಬಹುದಾದ GOP ಮಾನದಂಡಗಳು ಅಥವಾ ಮನ್ನಣೆಯನ್ನು (weightage) ಪರಿಗಣಿಸಿ, ಈ ಮುಂದಿನ ಕ್ರಮದಲ್ಲಿ, ಎಂದರೆ.-
(1) ಗ್ರಾಮೀಣ ಪ್ರದೇಶ;
(2) ನಗರ ಪ್ರದೇಶದಲ್ಲಿನ ವಲಯ-ಬಿ:
(3) ನಗರ ಪ್ರದೇಶದಲ್ಲಿನ ವಲಯ - ಎ; ಮತ್ತು
(4) ಗೇಟರ್ ಬೆಂಗಳೂರು ಪ್ರದೇಶ:
- ಇವುಗಳಲ್ಲಿ ಅದೇ ಪ್ರದೇಶದಲ್ಲಿನ ಮತ್ತೊಂದು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಸಂಸ್ಥೆಗೆ ಅಥವಾ ಯಾವುದೇ ಇತರ ಪ್ರದೇಶ ಅಥವಾ ವಲಯಕ್ಕೆ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ವರ್ಗಾಯಿಸಬಹುದು: BOOS, ವರ್ಷಾವಧಿಯಲ್ಲಿ ಅಂಥ ವರ್ಗಾವಣೆಯ ಒಟ್ಟು ಸಂಖ್ಯೆಯು ಅದೇ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಖ್ಯಾಬಲದ “ಶೇಕಡಾ ಹದಿನೈದರಷ್ಟನ್ನು” ಮೀರತಕ್ಕದ್ದಲ್ಲ:
ಮತ್ತು BOOS) ವಿಶೇಷ ಪ್ರವರ್ಗಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ, ಸರ್ಕಾರವು ವರ್ಗಾವಣೆಗಾಗಿ ಪ್ರತ್ಯೇಕ ಷರತ್ತುಗಳು ಮತ್ತು ವಿನಾಯಿತಿಗಳನ್ನು ವಿಯಮಿಸಬಹುದು:
ಅಲ್ಲದೆ ಪರಂತು ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗಾಗಿ, ಗೇಟರ್ ಬೆಂಗಳೂರು ಪ್ರದೇಶದಲ್ಲಿನ ವಿವಿಧ ಹುದ್ದೆಗಳಲ್ಲಿ ವ್ಯಕ್ತಿಯು ಸಲ್ಲಿಸಿದ ಒಟ್ಟು ವಿರಂತರ ಸೇವೆಯನ್ನು, ಪ್ರಸ್ತುತ ಹುದ್ದೆಯಲ್ಲಿ ವ್ಯಕ್ತಿಯು ಸಲ್ಲಿಸಿದ ಒಟ್ಟು ನಿರಂತರ ಸೇವೆಗಿಂತ ಮಿಗಿಲಾಗಿ ಸೇವಾಕಾಲದ ಅವಧಿಯನ್ನು ಅಳೆಯುವ ಉದ್ದೇಶಕ್ಕಾಗಿ ಲೆಕ್ಕಹಾಕತಕ್ಕದ್ದು:
ಅಲ್ಲದೆ BOSD (1S ಉಪ-ಪ್ರಕರಣದ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದಿಂದ ಹೊರಗಡೆಗೆ ವರ್ಗಾಯಿಸಲು ಅರ್ಹರಿರುವ ವ್ಯಕ್ತಿಗಳಿಗೆ ಕೌನ್ಸಿಲಿಂಗ್ ನಡೆಯುವಾಗ, ಗೇಟರ್ ಬೆಂಗಳೂರು ಪ್ರದೇಶದಲ್ಲಿನ ಖಾಲಿ ಹುದ್ದೆಗಳು ಲಭ್ಯವಾಗತಕ್ಕದ್ದಲ್ಲ.
(2 ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಅಮಾನತ್ತಿನಿಂದ ಪೂರ್ವಪದವಿಗೆ ತರುವುದರ (reinstatement) ಮೇರೆಗೆ ಅಥವಾ ಶಿಸ್ತು ವಿಚಾರಣೆ ಬಾಕಿಯಿರಿಸಿದ ಅಮಾನತ್ತಿನ ಜಾಗಕ್ಕೆ ಪ್ರತಿಯಾಗಿ ಪ್ರಸ್ತುತ ಹುದ್ದೆಯಿಂದ ಬದಲಾಯಿಸುವ ಮೇರೆಗೆ ಸಕ್ಷಮ ಪ್ರಾಧಿಕಾರವು ಕೌನ್ಸಿಲಿಂಗ್ ಮೂಲಕ ವರ್ಷಾವಧಿಯ ಯಾವುದೇ ಸಮಯದಲ್ಲಿ ಸ್ಮಳನಿಯುಕ್ತಿಗೊಳಿಸತಕ್ಕದ್ದು, ಆದರೆ ಆತನನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಲಯಕ್ಕಿಂತ ಮೇಲಿನ ವಲಯಕ್ಕೆ ಸ್ಮಳವನಿಯುಕ್ತಿಗೊಳಿಸತಕ್ಕದ್ದಲ್ಲ ಹಾಗೂ ಶಿಸ್ತು... ಪ್ರಾಧಿಕಾರದ ಆದೇಶಗಳಲ್ಲಿ ನಿರ್ದಿಷ್ಟಪಡಿಸಿದ ಪ್ರದೇಶದೊಳಗೆ ಸ್ಥಳನಿಯುಕ್ತಿಯನ್ನು ವಿರ್ಬಂಧಿಸಬಹುದು.
(3) ಮಹತ್ವದ ಖಾಲಿಹುದ್ದಗಳನ್ನು ತುಂಬಲು ಸರ್ಕಾರವು ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ವರ್ಷಾವಧಿಯ ಯಾವುದೇ ಸಮಯದಲ್ಲಿ ಕೌನ್ಸಿಲಿಂಗ್ ಇಲ್ಲದೆ ಸ್ಮಳನಿಯುಕ್ತಿಗೊಳಿಸಬಹುದು:
ಪರಂತು ಸ್ಥಳವನಿಯುಕ್ತಿಗೊಳಿಸಬೇಕಾದ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯು ನಿರ್ದಿಷ್ಟಪಡಿಸಿದ ವಿಶೇಷ ಪ್ರವರ್ಗಗಳ ವಿನಾಯಿತಿಗೊಳಪಟ್ಟು (SE ಉಪ-ಪ್ರಕರಣದ ಅನುಸಾರ ಸಿದ್ಧಪಡಿಸಿದ ದೀರ್ಫ್ಥಾವಧಿ ಸೇವಾ ವ್ಯಕ್ತಿಗಳ ಪಟ್ಟಿಯಲ್ಲಿ ಅತ್ಯಂತ ಜೇೀಷ್ಕರಾಗಿರತಕ್ಕದ್ದು.” 4. ಹೊಸ ಪ್ರಕರಣ 7ಎ ಸೇರ್ಪಡೆ.- ಮೂಲ ಅಧಿನಿಯಮದ 7ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“7ಎ. ಅಪೀಲು.- ಸಕ್ಷಮ ಪ್ರಾಧಿಕಾರದ ಆದೇಶಗಳಿಂದ ಬಾಧಿತನಾದ ಯಾರೇ ವ್ಯಕ್ತಿಯು ಈ ಅಧಿನಿಯಮದ ಉಪಬಂ೦ಧಗಳಡಿಯಲ್ಲಿ ಸರ್ಕಾರಕ್ಕ ಅಪೀಲನ್ನು ಸಲ್ಲಿಸಬಹುದು ಮತ್ತು ಸರ್ಕಾರವು ನಿಯಮಿಸಬಹುದಾದಂಥ ವಿಧಾನದಲ್ಲಿ ಅದನ್ನು ವಿಲೇವಾರಿ ಮಾಡಬಹುದು.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.