(1) ಈ ನಿಯಮಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು, 1966 ಎಂದು ಕರೆಯತಕ್ಕದ್ದು.
(2) ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಯಮಗಳು, 1966, Kannada, Culture, Information & Tourism Department
1996 · PDF page 2
Hover any section to copy its link or text, ask Copilot about it, or bookmark it.
(1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು -
i. ‘ಅಧಿನಿಯಮ' ಎಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1994 ii. ‘ಪ್ರಕರಣ' ಎಂದರೆ ಈ ಅಧಿನಿಯಮದ ಪ್ರಕರಣ.
iii. ‘ನಮೂನೆ' ಎಂದರೆ ನಿಯಮಗಳಿಗೆ ಲಗತ್ತಿಸಲಾದ ನಮೂನೆ.
iv. ‘ಹಣಕಾಸು ವರ್ಷ ಅಥವಾ ವರ್ಷ' ಎಂದರೆ ಪ್ರತಿವರ್ಷ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗಿ ಮಾರ್ಚ್ 31ನೇ ದಿನಾಂಕಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿ.
v. ‘ಸಭೆ' ಎಂದರೆ ಪ್ರಾಧಿಕಾರದ ಸಭೆ ಅಥವಾ ಪ್ರಾಧಿಕಾರದ ಉಪ ಸಮಿತಿಯ ಸಭೆ.
(2) ಈ ನಿಯಮಗಳಲ್ಲಿ ಉಪಯೋಗಿಸಿದ, ಆದರೆ ಅರ್ಥ ವಿವರಣೆ ನೀಡಿರದ ಪದಗಳು ಹಾಗೂ ಪದಾವಳಿಗಳು ಅವುಗಳಿಗೆ ಅಧಿನಿಯಮದಲ್ಲಿ ಅನುಕ್ರಮವಾಗಿ ಕೊಟ್ಟ ಅರ್ಥವನ್ನೇ ಹೊಂದಿರತಕ್ಕದ್ದು.