(1) ಪ್ರಾಧಿಕಾರದಲ್ಲಿರುವ ಮಂಜೂರಾದ ಪ್ರತಿಯೊಂದು ಹುದ್ದೆಯನ್ನು ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದ ನೌಕರರನ್ನು ಅಥವಾ ಯಾವುದೇ ಸ್ವಾಯತ್ತ ಸಂಸ್ಥೇಯ ನೌಕರರನ್ನು ಪ್ರತಿನಿಯೋಜನೆ ಮೂಲಕ ಭರ್ತಿ ಮಾಡತಕ್ಕದ್ದು;
ಆದರೆ, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಶಾಖೆಗೆ, ಅವರಿಗೆ ರಾಜ್ಯ ಸರ್ಕಾರವು ಘೋಷಿಸಲಾದ ಸ್ಥಾನಮಾನಗಳಿಗೆ ಅನುಗುಣವಾಗಿ ಸರ್ಕಾರವು ನಗಧಿಸಬಹುದಾದ ಮಾದರಿ ಮತ್ತು ಮಿತಿಯಂತೆ ಆಪ್ತ ಸಿಬ್ಬಂಧಿಯನ್ನು ಗುತ್ತಿಗೆ ಆಧಾರದ ಮೇರೆಗೆ ಅಧ್ಯಕ್ಷರ ಅಧಿಕಾರಾವಧಿಯನ್ನು ಮೀರದಂತೆ ನೇಮಿಸಿಕೊಳ್ಳತಕ್ಕದ್ದು.