ಸದರಿ ನಿಯಮಗಳ 5ನೇ ನಿಯಮದಲ್ಲಿ,–
(1) ಉಪ–ನಿಯಮ (1)ರಲ್ಲಿ,–
(i) “ಅಥವಾ ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಿಂದ 220 ಮೀಟರ್ ದೂರದಲ್ಲಿ” ಎಂಬ ಪದಗಳ ಬದಲಾಗಿ, “ಅಥವಾ ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳ ಹೊರ ಅಂಚಿನಿಂದ 500 ಮೀಟರ್ ದೂರದಲ್ಲಿ ಅಥವಾ ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಇರುವ ಸೇವಾ ಲೇನ್ನಿಂದ” ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.
(ii) ಪರಂತುಕದ ತರುವಾಯ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:–
ಮತ್ತು ಪರಂತು, 20,000 ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳಲ್ಲಿ ಒಳಗೊಂಡಿರುವ ಪ್ರದೇಶಗಳ ಸಂದರ್ಭದಲ್ಲಿ, ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ದೂರದ ಮಾನದಂಡಗಳು 220 ಮೀಟರ್ ಆಗಿರತಕ್ಕದ್ದು:
ಅಲ್ಲದೆ, ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ಮೇಲಿನ ನಿರ್ಬಂಧಗಳು ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮದ್ಯದ ಮಳಿಗೆಗಳ ಸಂದರ್ಭದಲ್ಲಿ ಅನ್ವಯಿಸತಕ್ಕದ್ದಲ್ಲ:
ಅಲ್ಲದೆ, ರಾಜ್ಯ ಹೆದ್ದಾರಿಗಳು ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ಉಪ ನಿಯಮ (1) ನಲ್ಲಿರುವ ಯಾವುದೂ, 2011 ರ ಜನಗಣತಿಯ ಪ್ರಕಾರ 3,000 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ ಸಿಎಲ್–6A ಮತ್ತು ನಮೂನೆ ಸಿಎಲ್–7ನಲ್ಲಿ ಮಂಜೂರು ಮಾಡಲಾಗಿರುವ ಹೊಸ ಸನ್ನದುಗಳಿಗೆ ಅನ್ವಯಿಸತಕ್ಕದ್ದಲ್ಲ.
(iii) ವಿವರಣೆಯನ್ನು (1) ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
(2) ಉಪ–ನಿಯಮ (2)ರಲ್ಲಿ, 3ನೇ ಪರಂತುಕದ ತರುವಾಯ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:–
“ಅಲ್ಲದೆ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳ ಯಾವುದೇ ಕಛೇರಿಯಿಂದ ದೂರದ ಮಾನದಂಡಗಳಿಗೆ ಸಂಬಂಧಿಸಿದಂತೆ ಉಪ ನಿಯಮ (1)ರಲ್ಲಿ ಯಾವುದೂ, ಮಹಾನಗರ ಮಿತಿಯೊಳಗೆ ನಮೂನೆ ಸಿಎಲ್–4 ಅಥವಾ ನಮೂನೆ ಸಿಎಲ್–6A ಮತ್ತು ನಮೂನೆ ಸಿಎಲ್–7 ನಲ್ಲಿ ಮಂಜೂರು ಮಾಡುವ ಹೊಸ ಸನ್ನದುಗಳಿಗೆ ಅನ್ವಯಿಸುವುದಿಲ್ಲ.
ಅಲ್ಲದೆ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳ ಯಾವುದೇ ಕಛೇರಿಯಿಂದ ದೂರದ ಮಾನದಂಡಗಳಿಗೆ ಸಂಬಂಧಿಸಿದಂತೆ ಉಪ ನಿಯಮ (1) ನಲ್ಲಿರುವ ಯಾವುದೂ, ಮಹಾನಗರ ಮಿತಿಯೊಳಗೆ ಅಸ್ತಿತ್ವದಲ್ಲಿರುವ ನಮೂನೆ ಸಿಎಲ್–4 ಅಥವಾ ನಮೂನೆ ಸಿಎಲ್–6A ಮತ್ತು ನಮೂನೆ ಸಿಎಲ್–7 ನಲ್ಲಿರುವ ಸನ್ನದುಗಳಿಗೆ ಅನ್ವಯಿಸುವುದಿಲ್ಲ ಮತ್ತು ಅಂತಹ ಸನ್ನದುಗಳನ್ನು ನವೀಕರಿಸಲು ಸಹ ಅನುಮತಿಸಲಾಗುತ್ತದೆ”.
(3) ಉಪ–ನಿಯಮ (4)ರ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:–
“ಪರಂತು, ಉಪ–ನಿಯಮ (4)ನಲ್ಲಿರುವ ಯಾವುದೂ, ಮೈಕ್ರೋಬ್ರೀವರಿ ಸನ್ನದು ಹೊಂದಿರುವ ಅಥವಾ ನಮೂನೆ ಸಿಎಲ್–4 ಅಥವಾ ನಮೂನೆ ಸಿಎಲ್–7 ಅಥವಾ ನಮೂನೆ ಸಿಎಲ್–6ಎ ಅಥವಾ ನಮೂನೆ ಸಿಎಲ್–9 ರಲ್ಲಿ ಸನ್ನದು ಹೊಂದಿರುವ ಯಾವುದೇ ವ್ಯಕ್ತಿಗೆ ಅನ್ವಯಿಸತಕ್ಕದ್ದಲ್ಲ”. 4. 10–ಬಿ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 10–ಬಿ ನಿಯಮದಲ್ಲಿ, “ರಾಜ್ಯ ವಿಧಾನ ಸಭೆ” ಎಂಬ ಪದಗಳ ತರುವಾಯ, “ರಾಜ್ಯ ವಿಧಾನ ಪರಿಷತ್ತು” ಎಂಬ ಪದಗಳನ್ನು ಸೇರಿಸತಕ್ಕದ್ದು.