ಸದರಿ ನಿಯಮಗಳ 11ನೇ ನಿಯಮದಲ್ಲಿ, ಉಪ–ನಿಯಮ (1)ರ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:–
“(1) ಅಂತಹ ಆವರಣದಲ್ಲಿ ಜೂಜಾಟ ಅಥವಾ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಅನುಮತಿಸತಕ್ಕದ್ದಲ್ಲ”. 6. 17–ಎ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 17–ಎ ನೇ ನಿಯಮದ ತರುವಾಯ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:– “ಪರಂತು, ಮರಣ ಹೊಂದಿದ ಸನ್ನದುದಾರನ ಕಾನೂನು ಸಮ್ಮತ ವಾರಸುದಾರ ಅಥವಾ ಕಾನೂನು ಸಮ್ಮತ ವಾರಸುದಾರನ ಪಾಲಕರು ಮರಣದ ದಿನಾಂಕದಿಂದ ನಲವತ್ತೈದು ದಿನಗಳೊಳಗೆ ಸನ್ನದುದಾರನ ಮರಣದ ಬಗ್ಗೆ ಅಬಕಾರಿ ಉಪ ಆಯುಕ್ತರಿಗೆ ತಿಳಿಸಬೇಕು, ವಿಫಲವಾದರೆ, ಸನ್ನದು ಮಂಜೂರು ಮಾಡುವ ಪ್ರಾಧಿಕಾರವು ಸನ್ನದು ರದ್ದುಗೊಳಿಸುವ ಅಥವಾ ದಂಡವನ್ನು ವಿಧಿಸಲು ವಿವೇಚನೆಯನ್ನು ಹೊಂದಿರುತ್ತದೆ.
ಮತ್ತು ಪರಂತು, ಮರಣ ಹೊಂದಿದ ಸನ್ನದುದಾರನ ಕಾನೂನು ಸಮ್ಮತ ವಾರಸುದಾರ ಅಥವಾ ಕಾನೂನು ಸಮ್ಮತ ವಾರಸುದಾರನ ಪಾಲಕರಿಗೆ ವಿಚಾರಣೆಯ ಅವಕಾಶವನ್ನು ನೀಡದ ಹೊರತು ಸನ್ನದನ್ನು ರದ್ದುಗೊಳಿಸತಕ್ಕದ್ದಲ್ಲ ಅಥವಾ ಅಂತಹ ದಂಡವನ್ನು ವಿಧಿಸತಕ್ಕದ್ದಲ್ಲ”. 7. 17–ಬಿ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 17–ಬಿ ನಿಯಮದಲ್ಲಿ – (1) ಉಪ–ನಿಯಮ (1)ರ ತರುವಾಯ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:–
“ಪರಂತು, ಪಾಲುದಾರಿಕೆಯ ಸಂಸ್ಥೆಯ ಸಂದರ್ಭದಲ್ಲಿ, ಪಾಲುದಾರಿಕೆ ಸಂವಿಧಾನದಲ್ಲಿನ ಯಾವುದೇ ಬದಲಾವಣೆಯು ಹೇಳಲಾದ ಪಾಲುದಾರಿಕೆ ಸಂಸ್ಥೆಯ ನಿಯಂತ್ರಣ ಮತ್ತು ನಿರ್ವಹಣೆಯ ಪರಿಣಾಮಕಾರಿ ಬದಲಾವಣೆಗೆ ಕಾರಣವಾಗುತ್ತಿದ್ದಲ್ಲಿ, ಅಂದರೆ, ಲಾಭ ಹಂಚಿಕೆ ಅನುಪಾತದಲ್ಲಿ ಅದರ ಶೇಕಡಾ ಐವತ್ತು ಅಥವಾ ಹೆಚ್ಚಿನ ಪಾಲನ್ನು ಕೈ ಮತ್ತು ಅಸ್ತಿತ್ವದಲ್ಲಿರುವ ಬಲವನ್ನು ಬದಲಾಯಿಸಿದರೆ ಮತ್ತು ಪಾಲುದಾರರ ಗುಂಪು ಒಟ್ಟು ಶೇಖಡಾ ನೂರ ರ ಪಾಲಿನಲ್ಲಿ ಶೇಕಡಾ ಐವತ್ತು ಅಥವಾ ಹೆಚ್ಚಿನದನ್ನು ಕಳೆದುಕೊಳ್ಳುತ್ತಿದ್ದಲ್ಲಿ, ಪಾಲುದಾರಿಕೆಯ ಸಂಸ್ಥೆಯ ಸಂವಿಧಾನದಲ್ಲಿ ಅಂತಹ ಬದಲಾವಣೆಯು ನಿಯಮ 17–ಬಿ ಅಡಿಯಲ್ಲಿ ವರ್ಗಾವಣೆ ಶುಲ್ಕದ ಪಾವತಿಯನ್ನು ಆಕರ್ಷಿಸುತ್ತದೆ. ಈ ಪರಂತುಕವು ದಿನಾಂಕ: 22–08–2017 ರ ನಂತರ ಪಾಲುದಾರಿಕೆ ಸಂಸ್ಥೆಯಲ್ಲಿ ನಡೆದ ಪ್ರತಿಯೊಂದು ಬದಲಾವಣೆಗೆ ಅನ್ವಯಿಸುತ್ತದೆ.
ಮತ್ತು ಪರಂತು, ಪಾಲುದಾರಿಕೆ ಸಂಸ್ಥೆಯಲ್ಲಿನ ಬದಲಾವಣೆಗಳು ಶೇಖಡಾ ಐವತ್ತು ಕ್ಕಿಂತ ಕಡಿಮೆಯಿದ್ದರೆ, ಅಂತಹ ಸಂದರ್ಭಗಳಲ್ಲಿ ನಿಯಮ 17–ಬಿ ಅಡಿಯಲ್ಲಿ ವರ್ಗಾವಣೆ ಶುಲ್ಕದ ಪಾವತಿಯನ್ನು ಆಕರ್ಷಿಸುವುದಿಲ್ಲ. ದಿನಾಂಕ: 22–08–2017 ರ ನಂತರ ಪಾಲುದಾರಿಕೆ ಸಂಸ್ಥೆಯಲ್ಲಿನ ಒಟ್ಟಾರೆ ಬದಲಾವಣೆಗಳು ಲಾಭ ಹಂಚಿಕೆ ಅನುಪಾತದಲ್ಲಿ ಅದರ ಪಾಲಿನ ಶೇಖಡಾ ಐವತ್ತು ರೊಳಗೆ ಉಳಿದಿದ್ದರೆ ಮತ್ತು ಪಾಲುದಾರರ ಗುಂಪಿನ ಅಸ್ತಿತ್ವದಲ್ಲಿರುವ ಸಾಮರ್ಥ್ಯವು ಶೇಖಡಾ ನೂರ ರ ಒಟ್ಟು ಪಾಲಿನಲ್ಲಿ ಶೇಖಡಾ ಐವತ್ತು ಅಥವಾ ಹೆಚ್ಚಿನದನ್ನು ಕಳೆದುಕೊಳ್ಳದಿದ್ದರೆ, ಅಂತಹ ಪಾಲುದಾರಿಕೆ ಸಂಸ್ಥೆಯ ಸಂವಿಧಾನದಲ್ಲಿನ ಬದಲಾವಣೆಯು ನಿಯಮ 17–ಬಿ ಅಡಿಯಲ್ಲಿ ವರ್ಗಾವಣೆ ಶುಲ್ಕದ ಪಾವತಿಯನ್ನು ಆಕರ್ಷಿಸುವುದಿಲ್ಲ.
(i) ಶೇಖಡಾ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ಬದಲಾವಣೆಯನ್ನು ಸಂಸ್ಥೆಯ ಅಸ್ತಿತ್ವದಲ್ಲಿರುವ ಅಬಕಾರಿ ಸನ್ನದು ಸಂಯೋಜನೆ ಮತ್ತು ನಿಯಮ 17–ಬಿ ಅಡಿಯಲ್ಲಿ ವರ್ಗಾಯಿಸಲಾದ ಅಬಕಾರಿ ಸನ್ನದನ್ನು ಉಲ್ಲೇಖಿಸಿ ಪರಿಗಣಿಸಲಾಗುತ್ತದೆ ಹಾಗೂ ಸಂಸ್ಥೆಯಲ್ಲಿ ಪಾಲುದಾರರ ನಿರ್ಗಮನ ಮತ್ತು ಪ್ರವೇಶದ ಮೂಲಕ ಶೇಖಡಾ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ಪಾಲನ್ನು ಬದಲಾಯಿಸುವ ಪ್ರತಿ ಹಂತದಲ್ಲಿ ನಿಯಮ 17–ಬಿ ಅಡಿಯಲ್ಲಿ ವರ್ಗಾವಣೆ ಶುಲ್ಕ ಆಕರ್ಷಿಸುತ್ತದೆ.
(ii) ದಿನಾಂಕ: 22–08–2017 ಕ್ಕಿಂತ ಮೊದಲು ಅಸ್ತಿತ್ವದಲ್ಲಿರುವ ಪಾಲುದಾರಿಕೆ ಸಂಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಿದ ಪ್ರಕರಣಗಳಿಗೆ ಹೇಳಲಾದ ಪರಂತುಕಗಳು ಅನ್ವಯಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಸನ್ನದುದಾರನು ಪಾಲುದಾರಿಕೆ ಸಂಸ್ಥೆಯಲ್ಲಿನ ಷೇರುಗಳ ಶೇಕಡಾವಾರು ಅಥವಾ ಪಾಲುದಾರರ ಗುಂಪಿನ ಬಲದಲ್ಲಿ ಯಾವುದೇ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳದೆ ವರ್ಗಾವಣೆ ಶುಲ್ಕವನ್ನು ಪಾವತಿಸಲು ಬದ್ಧರಾಗಿರಬೇಕು.
ಮತ್ತು ಅಲ್ಲದೆ, ನಿಯಮ 17–ಬಿ ಅಡಿಯಲ್ಲಿ ವರ್ಗಾವಣೆ ಶುಲ್ಕವು ಪಾಲುದಾರಿಕೆ ಸಂಸ್ಥೆಯನ್ನು ಏಕವ್ಯಕ್ತಿ ಮಾಲೀಕತ್ವಕ್ಕೆ ಪರಿವರ್ತಿಸುವ ಸಂದರ್ಭದಲ್ಲಿ ಅಥವಾ ಪ್ರತಿಯಾಗಿ, ಷೇರಿನಲ್ಲಿ ಶೇಖಡಾ 50 ಅಥವಾ ಅದಕ್ಕಿಂತ ಹೆಚ್ಚಿನ ಬದಲಾವಣೆಯನ್ನು ಅಥವಾ ಪಾಲುದಾರಿಕೆಯ ಸಂಸ್ಥೆಯ ಪರಿಣಾಮಕಾರಿ ನಿಯಂತ್ರಣವನ್ನು ಗಣನೆಗೆ ತೆಗೆದುಕೊಳ್ಳದೆ ಅನ್ವಯಿಸುತ್ತದೆ”.
(2) ಉಪ–ನಿಯಮ (2)ರ ತರುವಾಯ, ಈ ಮುಂದಿನ ಉಪ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:–
“(3) ಪಾಲುದಾರನ ಮರಣ ಅಥವಾ ಪಾಲುದಾರಿಕೆಯ ಸಂಸ್ಥೆಯ ಪುನರ್ರಚನೆ ಸೇರಿದಂತೆ ಯಾವುದೇ ಬದಲಾವಣೆಗಳನ್ನು, ಮರಣ ಸಂಭವಿಸಿದ ದಿನಾಂಕದಿಂದ ಅಥವಾ ಬದಲಾವಣೆ ಅಥವಾ ಪಾಲುದಾರಿಕೆಯ ಸಂಸ್ಥೆಯ ಪುನರ್ರಚನೆ ಅಥವಾ ಪಾಲುದಾರಿಕೆ ಸಂಸ್ಥೆಯನ್ನು ಏಕವ್ಯಕ್ತಿ ಮಾಲೀಕತ್ವಕ್ಕೆ ಅಥವಾ ಪ್ರತಿಯಾಗಿ ಪರಿವರ್ತಿಸಿದ ದಿನಾಂಕದಿಂದ ನಲವತ್ತೈದು ದಿನಗಳೊಳಗೆ ಅಬಕಾರಿ ಉಪ ಆಯುಕ್ತರಿಗೆ ತಿಳಿಸಬೇಕು, ವಿಫಲವಾದರೆ, ಸನ್ನದು ಮಂಜೂರು ಮಾಡುವ ಪ್ರಾಧಿಕಾರವು ಸನ್ನದು ರದ್ದುಗೊಳಿಸುವ ಅಥವಾ ದಂಡವನ್ನು ವಿಧಿಸಲು ವಿವೇಚನೆಯನ್ನು ಹೊಂದಿರುತ್ತದೆ.
ಪರಂತು, ಸನ್ನದುದಾರನಿಗೆ ಅಥವಾ ಮರಣ ಹೊಂದಿದ ಸನ್ನದುದಾರನ ಕಾನೂನು ಸಮ್ಮತ ವಾರಸುದಾರ/ವಾರಸುದಾರರು ಅಥವಾ ಕಾನೂನು ಸಮ್ಮತ ವಾರಸುದಾರನ ಪಾಲಕರಿಗೆ ವಿಚಾರಣೆಯ ಅವಕಾಶವನ್ನು ನೀಡದ ಹೊರತು ಸನ್ನದನ್ನು ರದ್ದುಗೊಳಿಸತಕ್ಕದ್ದಲ್ಲ ಅಥವಾ ಅಂತಹ ದಂಡವನ್ನು ವಿಧಿಸತಕ್ಕದ್ದಲ್ಲ”.