Annexure
(2) ಈ ನಿಯಮಗಳು, ಅವು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
-
2ನೇ ನಿಯಮದ ತಿದ್ದುಪಡಿ.- ಕರ್ನಾಟಕ ಭೂ ಸುಧಾರಣೆ ನಿಯಮಗಳು, 1977ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂಬುದಾಗಿ ಕರೆಯಲಾಗಿದೆ) 2ನೇ ನಿಯಮದಲ್ಲಿನ ಖಂಡ (ii-ಎ) ನಲ್ಲಿ “ಉನ್ನತ ಮಟ್ಟದ ಸಮಿತಿ ಅಥವಾ” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.
-
28ನೇ ನಿಯಮವನ್ನು ಬಿಟ್ಟು ಬಿಡುವುದು.- ಸದರಿ ನಿಯಮಗಳ 28ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
-
29ನೇ ನಿಯಮವನ್ನು ಬಿಟ್ಟು ಬಿಡುವುದು.- ಸದರಿ ನಿಯಮಗಳ 29ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
-
30ನೇ ನಿಯಮವನ್ನು ಬಿಟ್ಟು ಬಿಡುವುದು.- ಸದರಿ ನಿಯಮಗಳ 30ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
-
31ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳನ್ನು 31ನೇ ನಿಯಮದ 2ನೇ ಉಪ ನಿಯಮದಲ್ಲಿ “79-ಬಿ ಪ್ರಕರಣದ (3)ನೇ ಉಪ ಪ್ರಕರಣದಡಿ” ಎಂಬ ಪದಗಳು, ಆವರಣಗಳು, ಅಂಕಿಗಳು ಮತ್ತು ಅಕ್ಷರಗಳನ್ನು ಬಿಟ್ಟುಬಿಡತಕ್ಕದ್ದು.
-
32ನೇ ನಿಯಮವನ್ನು ಬಿಟ್ಟು ಬಿಡುವುದು.- ಸದರಿ ನಿಯಮಗಳ 32ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
-
33ನೇ ನಿಯಮವನ್ನು ಬಿಟ್ಟು ಬಿಡುವುದು.- ಸದರಿ ನಿಯಮಗಳ 33ನೇ ನಿಯಮವನ್ನು ಬಿಟ್ಟುಬಿಡತಕ್ಕದ್ದು.
-
38 ಬಿ ನಿಯಮದ ತಿದ್ದುಪಡಿ.- ಸದರಿ ನಿಯಮಗಳನ್ನು 38ಬಿ ನಿಯಮದಲ್ಲಿನ,-
(i) (1)ನೇ ಉಪ ನಿಯಮದಲ್ಲಿ “ವಿವರಣೆ” ಹೊರತುಪಡಿಸಿ ಖಂಡ (ಎ) ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(ಎ) ಕೈಗಾರಿಕಾ ಅಭಿವೃದ್ಧಿ ಉದ್ದೇಶಕ್ಕಾಗಿ 109ನೇ ಪ್ರಕರಣದಡಿ,-
(i) ಹದಿನೈದು ಕೋಟಿ ರೂಪಾಯಿಗಳವರೆಗೆ ಬಮಡವಾಳ ಹೂಡಿಕೆಯನ್ನು ಹೊಂದಿರುವ ಕೈಗಾರಿಕೆಗಳ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಏಜೆನ್ಸಿಯ ಶಿಫಾರಸಿನ ಮೇಲೆ;
(ii) ಐದು ನೂರು ಕೋಟಿ ರೂಪಾಯಿಗಳ ಒಟ್ಟು ಬಂಡವಾಳ ಹೂಡಿಕೆಯನ್ನು ಹೊಂದಿರುವ ಕೈಗಾರಿಕೆಗಳ ಸಂದರ್ಭದಲ್ಲಿ ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಪ್ರಭಾರ ಹೊಂದಿರುವ ಸಚಿವರ ನೇತೃತ್ವದ ಭೂ ಲೆಕ್ಕಪರಿಶೋಧನಾ ಸಮಿತಿಯ ಶಿಫಾರಸಿನ ಮೇಲೆ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿ (ಎಸ್ಎಲ್ಎಸ್ಡಬ್ಲ್ಯೂಸಿಸಿ) ಯು; ಮತ್ತು
(iii) ಐದು ನೂರು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಂಡವಾಲ ಹೂಡಿಕೆಯನ್ನು ಹೊಂದಿರವ ಕೈಗಾರಿಕೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ಭೂ ಲೆಕ್ಕ ಪರಿಶೋಧನಾ ಸಮಿತಿಯ ಶಿಫಾರಸಿನ ಮೇಲೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮತಿ (ಎಸ್ಹೆಚ್ಎಲ್ಸಿಸಿ)ಯು ವಿನಾಯಿತಿಯನ್ನು ನೀಡಬಹುದು.”
(ii) (3)ನೇ ಉಪನಿಯಮದಲ್ಲಿ, (ಬಿ) ಖಂಡ (I)ನೇ ಉಪ ಖಂಡದಲ್ಲಿ,-
(ಎ) (i)ನೇ ಬಾಬಿನ ಬದಲಿಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(i) ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 (2001ರ ಕರ್ನಾಟಕ ಅಧಿನಿಯಮ ಸಂಖ್ಯೆ 33);
(ಬಿ) (ii) ರಿಂದ (vii) ರ ವರೆಗಿನ ಬಾಬುಗಳನ್ನು ಹಾಗೂ (ix) ನೇ ಬಾಬನ್ನು ಬಿಟ್ಟುಬಿಡತಕ್ಕದ್ದು.
(iii) (5) ನೇ ಉಪ ನಿಯಮದಲ್ಲಿ, ಖಂಡ (ಎ) ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ಪುಷ್ಪ ಕೃಷಿ ಮತ್ತು ಕೃಷಿ ಆಧಾರತ ಕೈಗಾರಿಕೆ ಸೇರಿದಂತೆ ತೋಟಗಾರಿಕೆ ಸೇರಿದಂತೆ ತೋಟಗಾರಿಕೆಯ ಉದ್ದೇಶಕ್ಕಾಗಿ 109ನೇ ಪ್ರಕರಣದಡಿ ವಿನಾಯಿತಿಯನ್ನು.-
(i) ಇಪ್ಪತ್ತು ಯೂನಿಟ್ಗಳವರೆಗೆ ಭೂಮಿ ಅಗತ್ಯವಿರುವ ಯಾವುದೇ ಯೋಜನೆಯ ಸಂಬಂಧದಲ್ಲಿ ಜಿಲ್ಲಾದಿಕಾರಿಯವರ ನೇತೃತ್ವದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಏಜೆನ್ಸಿಯ ಶಿಫಾರಸಿನ ಮೇಲೆ; ಮತ್ತು
(ii) ಇಪತ್ತು ಯೂನಿಟ್ಗಳಿಗಿಂತ ಹೆಚ್ಚು ಭೂಮಿಯ ಅಗತ್ಯವಿರುವ ಒಂದು ಯೋಜನೆಯ ಸಂಬಂಧದಲ್ಲಿ, ಸರ್ಕಾರವು ಮಾಡತಕ್ಕದ್ದು.”
- 38-ಸಿ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 38-ಸಿ ನಿಯಮದಲ್ಲಿ,-
(i) (2) ನೇ ಉಪ ನಿಯಮದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(2) ಈ ನಿಯಮಗಳಡಿಯ ಎಲ್ಲಾ ವಿನಾಯಿತಿಗಳನ್ನು, ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಯ (ಎಸ್ಎಲ್ಎಸ್ಡಬ್ಲ್ಯೂಸಿಸಿ) / ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯ (ಎಸ್ಹೆಚ್ಎಲ್ಸಿಸಿ) ಅನುಮೋದನೆಗೆ ಒಳಪಟ್ಟು ಮಂಜೂರು ಮಾಡತಕ್ಕದ್ದು.
(ii) (3) ನೇ ಉಪ ನಿಯಮದ ಬದಲಿಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
(3) ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ (ಎಸ್ಎಲ್ಎಸ್ಡಬ್ಲ್ಯೂಸಿಸಿ)/ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯ (ಎಸ್ಹೆಚ್ಎಲ್ಸಿಸಿ) ಅನುಮೋದನೆ ನೀಡುವಾಗ, ಅನುಮತಿಯನ್ನು ಕೋರಿರುವ ಉದ್ದೇಶವನ್ನು ಅವಲಂಬಿಸಿ, 38-ಡಿ ನಿಯಮದಡಿ ವಿಧಿಸಲಾಗಿರುವ ಸಾಮಾನ್ಯ ಷರತ್ತುಗಳನ್ನು ಸಹ ತೃಪ್ತಿಕರವಾಗಿ ಪೂರೈಸಲಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳತಕ್ಕದ್ದು.”
- 38-ಡಿ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 38-ಡಿ ನಿಯಮದಲ್ಲಿ, (4) ನೇ ಉಪ ನಿಯಮದಲ್ಲಿನ ಖಂಡ (ii) ರ ಪರಂತುಕದಲ್ಲಿ,-
(i) “ಷಡ್ಯೂಲ್ ಬ್ಯಾಂಕ್” ಎಂಬ ಪದಗಳಿಗೆ ಬದಲಾಗಿ, “81ನೇ ಪ್ರಕರಣದ (1)ನೇ ಉಪ ಪ್ರಕರಣದ (ಎ) ಮತ್ತು (ಬಿ) ಖಂಡಗಳಲ್ಲಿ, ನಿರ್ದಿಷ್ಟ ಪಡಿಸಿದ ಹಣಕಾಸು ಸಂಸ್ಥೆ” ಎಂಬ ಪದಗಳು ಮತ್ತು ಅಂಕಿಗಳ ಬದಲಿಗೆ “ಕಂಪನಿಗಳ ಅಧಿನಿಯಮ, 2013ರ 2ನೇ ಪ್ರಕರಣ” ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.
-
ನಮೂನೆ-12 ಅನ್ನು ಬಿಟ್ಟುಬಿಡುವುದು.- ಸದರಿ ನಿಯಮಗಳಲ್ಲಿ, ನಮೂನೆ-12 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
-
ನಮೂನೆ-13 ಅನ್ನು ಬಿಟ್ಟುಬಿಡುವುದು.- ಸದರಿ ನಿಯಮಗಳಲ್ಲಿ, ನಮೂನೆ-13 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
-
ನಮೂನೆ-14 ಅನ್ನು ಬಿಟ್ಟುಬಿಡುವುದು.- ಸದರಿ ನಿಯಮಗಳಲ್ಲಿ, ನಮೂನೆ-14 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
-
ನಮೂನೆ-15ಎ ಮತ್ತು 15-ಬಿ ಗಳ ಪ್ರತಿಯೋಜನೆ,- ಸದರಿ ನಿಯಮಗಳಲ್ಲಿ, ನಮೂನೆ-15ಎ ಮತ್ತು ನಮೂನೆ-15ಬಿ ಹಾಗೂ ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ನಮೂನೆ 15-ಎ
(ನಿಯಮ 38-ಡಿ ನೋಡಿ)
ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961 ರ 109ನೇ ಪ್ರಕರಣದಡಿ ವಿನಾಯಿತಿ ಕ್ಲೇಮು ಮಾಡುವುದಕ್ಕಾಗಿ / ಮಂಜೂರಾತಿಗಾಗಿ ಅರ್ಜಿ (ಅರ್ಜಿದಾರರು / ಅರ್ಜಿದಾರ ಸಂಸ್ಥೆಯು ಭರ್ತಿ ಮಾಡಬೇಕಾದುದು)
| 1 | ವಿವರವಾದ ವಿಳಾಸ ಸಹಿತ ಅರ್ಜಿದಾರರ / ಅರ್ಜಿದಾರ ಸಂಸ್ಥೆಯ ಹೆಸರು (ದಪ್ಪ ಅಕ್ಷರಗಳಲ್ಲಿ) | |
| 2 | ವಿನಾಯಿತಿ ಕೋರಿರುವ ಉದ್ದೇಶ | |
| 3 | ಕಂಪನಿಗಳ ಅಧಿನಿಯಮ, 2013 (2013ರ ಕೇಂದ್ರ ಅಧಿನಿಯಮ 18) / ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 (1960ರ ಕರ್ನಾಟಕ ಅಧಿನಿಯಮ ಸಂಖ್ಯೆ 17) / ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೇರೆಗೆ ಉದ್ಯಮ/ಸಂಸ್ಥೆಯು ನೋಂದಣಿಯಾದ ದಿನಾಂಕ (ಸಂಘ ವಿವರ ಪತ್ರ ಮತ್ತು ನಿಯಮಾವಳಿಗಳ ಜೊತೆಗೆ ನೋಂದಣಿ ದಸ್ತಾವೇಜಿನ ಪ್ರತಿಯನ್ನು ಲಗತ್ತಿಸುವುದು) ಸಹಕಾರ ಗೃಹ ನಿರ್ಮಾಣ ಸಂಘವಾಗಿದ್ದ ಪಕ್ಷದಲ್ಲಿ ಸದಸ್ಯರ ಪಟ್ಟಿಯನ್ನು ಲಗತ್ತಿಸುವುದು. | |
| 4 | (ಎ) ಕೈಗಾರಿಕೆ / ಐ. ಇ. ಎಂ (ಕೈಗಾರಿಕೋದ್ಯಮಿ ವಿವರ ಪತ್ರ) ಆಗಿ ನೋಂದಣಿ ಮಾಡಿಸಿಕೊಂಡುರುವುದಕ್ಕಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನೀಡುವ ನೋಂದಣಿ ಪ್ರಮಾಣ ಪತ್ರ (ಪ್ರತಿ ಲಗತ್ತಿಸುವುದು). (ಬಿ) ಶೈಕ್ಷಣಿಕ ಸಂಸ್ಥೆಗಳ ಸಂದರ್ಭದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರವು ನೀಡಿದ ಮಾನ್ಯತೆ ಪತ್ರ/ಆದೇಶ. |
| 1 | ವಿವರವಾದ ವಿಳಾಸ ಸಹಿತ ಅರ್ಜಿದಾರರ / ಅರ್ಜಿದಾರ ಸಂಸ್ಥೆಯ ಹೆಸರು (ದಪ್ಪ ಅಕ್ಷರಗಳಲ್ಲಿ) | |
| 5 | ವಿನಾಯಿತಿ ಕೋರಿದ ಭೂಮಿ ಇರುವ ಜಿಲ್ಲೆ, ಗ್ರಾಮ, ತಾಲ್ಲೂಕು, ಸರ್ವೆ ನಂಬರ್ ಹಾಗೂ ವಿಸ್ತೀರ್ಣದ ವಿವರಗಳು. | |
| 6 | ಅರ್ಜಿದಾರರು ಈಗಾಗಲೇ ತನ್ನ ಹೆಸರಿನಲ್ಲಾಗಲೀ ಇಲ್ಲವೆ ಯಾವುದೇ ಅಧೀನ ಸಂಸ್ಥೆ / ಕಂಪನಿಯ ಹೆಸರಿನಲ್ಲಾಗಲೀ ಕೃಷಿ ಭೂಮಿಯನ್ನು ಹೊಂದಿದ್ದಾನೆಯೇ? ಹೊಂದಿದ್ದಲ್ಲಿ, ಆ ಭೂಮಿ ಇರುವ ಜಿಲ್ಲೆ, ತಾಲ್ಲೂಕು, ಗ್ರಾಮ, ಸರ್ವೆ ನಂಬರ್ ಹಾಗೂ ವಿಸ್ತೀರ್ಣದ ವಿವರಗಳನ್ನು ಒದಗಿಸಿ. |
ಸ್ಥಳ : ಅರ್ಜಿದಾರನ /ಅರ್ಜಿದಾರ ಸಂಸ್ಥೆಯ ಸಹಿ
ದಿನಾಂಕ: