Annexure
(ಹೆಚ್.ಎಂ.ಸುದರ್ಶನ್)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಸುಧಾರಣೆಗಳು)
By order and in the name of the Governor of Karnataka
[H.M.Sudarshan] Under Secretary to Government Department of Revenue [Land Reforms]
ಕರ್ನಾಟಕ ಸರ್ಕಾರ
ಸಂಖ್ಯೆ: ಕಂಇ 77 ಎಲ್ಆರ್ಎ 2020
ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು, ದಿನಾಂಕ:27.10.2021
ಅಧಿಸೂಚನೆ
ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961 (1962 ರ ಕರ್ನಾಟಕ ಅಧಿನಿಯಮ ಸಂಖ್ಯೆ 10ರ 38ಎನ ಪ್ರಕರಣದೊಂ೦ದಿಗೆ ಓದಿಕೊಂಡಂತೆ 137ನೇ ಪ್ರಕರಣದ (1ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 2020ನ್ನು ಪ್ರಸ್ತಾಪಿಸಿ ದಿನಾಂಕ: 21.01.2021ರ ಕರಡು ಅಧಿಸೂಚನೆ ಸಂಖ್ಯೆ: ಕಂಇ 77 ದಿನಾಂಕ: 22.01.2021ರ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಎಲ್ಆರ್ಐ 2020ನ್ನು ಪತ್ರಿಕೆಯಲ್ಲಿ (ಭಾಗ 1/-ಓ) (ವಾಲ್ಯೂಮ್-84) ಪ್ರಕಟಿಸಿದ್ದು, ಆ ಮೂಲಕ ಭಾದಿತರಾಗುವ ಸಂಭವವಿರುವ ವ್ಯಕ್ತಿಗಳಿಂದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ;
ಮೇಲ್ಕಂಡ ವಿಶೇಷ ರಾಜ್ಯಪತ್ರವನ್ನು ದಿನಾಂಕ: 22ನೇ ಜನವರಿ 2021 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು, ಸದರಿ ಕರಡು ನಿಯಮಗಳ ಬಗ್ಗೆ ನಿಗದಿಪಡಿಸಲ್ಪಟ್ಟ ಮೇಲ್ಕಂಡ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳು ಸರ್ಕಾರದಲ್ಲಿ ಸ್ವೀಕೃತವಾಗದಿರುವುದರಿಂದ;
ಈಗ ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961 (1962 ರ ಕರ್ನಾಟಕ ಅಧಿನಿಯಮ ಸಂಖ್ಯೆ 10)ರ 38ಎನ ಪ್ರಕರಣದೊಂದಿಗೆ ಓದಿಕೊಂಡಂತೆ 137ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ಕರ್ನಾಟಕ ಭೂ ಸುಧಾರಣೆ ನಿಯಮಗಳು, 1974ಕ್ಕೆ ಮತ್ತಷ್ಟು ತಿದ್ದುಪಡಿಗಳನ್ನು ತರಲು ನಿಯಮಗಳನ್ನು ರಚಿಸುತ್ತದೆ:-
ನಿಯಮಗಳು
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 2021 ಎಂದು ಕರೆಯತಕ್ಕದ್ದು. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ