ಯಾವುದೇ ಸೇವೆಗೆ ಸಂಬಂಧಿಸಿದಂತೆ ವಿಶೇಷವಾಗಿ ರಚಿಸಲಾದ ನೇಮಕಾತಿ ನಿಯಮಗಳಲ್ಲಿ ಏನೇ ಇದ್ದರೂ
(i) ಕಿರಿಯ ಸಹಾಯಕರುಗಳ/ದ್ವಿತೀಯ ದರ್ಜೆ/ಸಹಾಯಕರುಗಳ ಹುದ್ದೆಗಾಗಿ ಗೊತ್ತುಪಡಿಸಿರುವ ವಿದ್ಯಾರ್ಹತೆಗಳನ್ನು ಹೊಂದಿರುವ ಒಬ್ಬ ಬೆರಳಚ್ಚುಗಾರನು ತನ್ನ ಉದ್ಯೋಗಿ ವೃಂದವನ್ನು ಸಂದರ್ಭಾನುಸಾರವಾಗಿ, ಕಿರಿಯ ಸಹಾಯಕ/ದ್ವಿತೀಯ ದರ್ಜೆ/ಸಹಾಯಕನಾಗಿ ಬದಲಾವಣೆ ಮಾಡಿಕೊಳ್ಳಬಹುದು.
(1) ಬೆರಳಚ್ಚುಗಾರರ ಹುದ್ದೆಗಾಗಿ ಗೊತ್ತುಪಡಿಸಿರುವ ವಿದ್ಯಾರ್ಹತೆಗಳನ್ನು ಹೊಂದಿರುವ ಒಬ್ಬ ಕಿರಿಯ ಸಹಾಯಕ/ದ್ವಿತೀಯ ದರ್ಜೆ/ಸಹಾಯಕನು ತನ್ನ ಉದ್ಯೋಗಿ. ವೃಂದವನ್ನು ಬೆರಳಚ್ಚುಗಾರನಾಗಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಅವನು ಬೆರಳಚ್ಚುಗಾರ ಅಥವಾ ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಮತ್ತು ಸ್ಮಳೀಯ ಅಭ್ಯರ್ಥಿಯಾಗಿ ತಾನು ಸಲ್ಲಿಸಿದ ಸೇವೆ ಯಾವುದಾದರೂ ಇದ್ದರೂ ಆ ಸೇವಾ ಅವಧಿಯನ್ನು ಉದ್ಯೋಗಿ ವೃಂದದಲ್ಲಿ * ಅಧಿಸೂಚನೆ ಸಂಖ್ಯೆ ಡಿಪಿಎಆರ್ 42 ಎಸ್ ಸಿ ಆರ್ 85 ದಿನಾಂಕ 12-8-86 ಅರ್ಹತಾಪರೀಕ್ಕಾವಧಿ ಅಥವಾ ಸ್ಥಾನಪನ್ನ ಅವಧಿಯನ್ನು ಹೊರತುಪಡಿಸಿ ಐದು ವರ್ಷಗಳಿಗೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿದ್ದ ಹೊರತು, ಅವನ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಲು ಅರ್ಹನಾಗಿರತಕ್ಕದ್ದಲ್ಲ.