ಯಾವನೇ ಸರ್ಕಾರಿ ನೌಕರನಿಗೆ 2ನೇ ನಿಯಮದ ಮೇರೆಗೆ ತನ್ನ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಲು ಒಂದಕ್ಕಿಂತ ಹೆಚ್ಚು ಬಾರಿ ಅನುಮತಿ ನೀಡತಕ್ಕುದಲ್ಲ.
ಉದ್ಯೋಗಿ BOD ಬದಲಾವಣೆ ಪರಿಣಾಮ :- 5, (1) 1957ರ ಕರ್ನಾಟಕ ಸರ್ಕಾರಿ ನೌಕರರ (ಜೀಷ್ಠತೆ) ನಿಯಮಗಳಲ್ಲಿ ಅಥವಾ ಇತರ ಯಾವುದೇ ನಿಯಮಗಳಲ್ಲಿ ಏನೇ ಇದ್ದರೂ ಮತ್ತು (2ನೇ ಉಪನಿಯಮದ ಉಪಬಂಧಿಸಿರುವಂಂತೆ ಹೊರತು, 2ನೇ ನಿಯಮದ ಮೇರೆಗೆ ತನ್ನ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಲು ಅನುಮತಿ ಪಡೆದಿರುವ ವ್ಯಕ್ತಿಯು ರಜೆ, ನಿವೃತ್ತಿ ವೇತನ ಮತ್ತು ಜೀಷ್ಠತೆಯ ಉದ್ದೇಶಗಳಿಗಾಗಿ ತನ್ನ ಹಿಂದಿನ ಸೇವಾವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಹಕ್ಕನ್ನು ಹೊಂ೦ದಿರತಕ್ಕದ್ದು.
ಪರಂತು,
(ಎ) ಅವನು ಸ್ಥಳೀಯ ಅಭ್ಯರ್ಥಿಯಾಗಿ ಸಲ್ಲಿಸಿದ ತನ್ನ ಹಿಂದಿನ ಸೇವೆಯನ್ನು ಜೇಷ್ಠತೆಗೆ ಲೆಕ್ಕಕ್ಕೆ ತೆಗೆದುಕೊಳ್ಳಲು ಹಕ್ಕನ್ನು ಹೊಂದಿರತಕ್ಕುದಲ್ಲ ಮತ್ತು
(ಬಿ) (19653 ರಾಜ್ಯಗಳ ಪುನಸ್ಸಂಘಟಣಾ ಅಧಿನಿಯಮದ ಮೇರೆಗೆ ಹಂಚಿಕೆ ದಾರನಲ್ಲದ) ಕಿರಿಯ ಸಹಾಯಕ ಅಥವಾ ದ್ವಿತೀಯ ದರ್ಜೆ ಸಹಾಯಕ ಗುಮಾಸ್ತನಾಗಿ ತನ್ನ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಿಕೊಂಡಿರುವ ಬೆರಳಚ್ಚುಗಾರನ ಸಂದರ್ಭದಲ್ಲಿ ಹೆಚ್ಚಿನ ಎರಡು ವರ್ಷಗಳ ಅವಧಿಯನ್ನು ಬದಲಾವಣೆ ಹೊಂದಿದ ಉದ್ಯೋಗಿ ವೃಂದದಲ್ಲಿ ಜೀಷ್ಠತೆಯ ಉದ್ದೇಶಕ್ಕಾಗಿ ಹಿಂದಿನ ಸೇವೆಯಿಂದ ಹೊರತುಪಡಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 65 ಎಸ್ ಸಿ ಆರ್ 81 ದಿನಾಂಕ 12-10-1982 * ಅಧಿಸೂಚನೆ ಸಂಖ್ಯೆ ಡಿಪಿಎಆರ್ 42 ಎಸ್ ಸಿ ಆರ್ 85 ದಿನಾಂಕ 12-8-1986 2) 2ನೇ ನಿಯಮದ ಮೇರೆಗೆ ತನ್ನ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಿಕೊಳ್ಳಲು ಅನುಮತಿ ಹೊಂದಿದ ಒಬ್ಬ ವ್ಯಕ್ತಿಯನ್ನು ಬದಲಾವಣೆ ಹೊಂದಿದ ಉದ್ಯೋಗಿ ವೃಂದದಲ್ಲಿ ಕಡೇ ಪಕ್ಷ ಒಂದು ವರ್ಷ ಸೇವೆ ಸಲ್ಲಿಸಿದ್ದ ಹೊರತು ಬಡ್ತಿಗೆ ಪರಿಗಣಿಸತಕ್ಕದಲ್ಲ ಮತ್ತು ಅವನು wn ಅರ್ಹನಾಗುವುದಕ್ಕೆ ಮುಂಚೆ, ಬಡ್ತಿ ಹೊಂದಿದ ವ್ಯಕ್ತಿಗಳ ಮೇಲೆ ಜೇಷ್ಠತೆಯನ್ನು ಕ್ಲೇಮು ಮಾಡಲು ಮಂದಿನ ಉನ್ನತ ಹುದ್ದೆಗೆ ಬಡ್ತಿ ಹೊಂದಲು ಯಾವುದೇ ಕ್ಲೇಮನ್ನು ಹೊಂದಿರತಕ್ಕದಲ್ಲ. ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸೈಯದ್ ಜಹಾರುದ್ದೀನ್ ಹಸ್ಸಾನ್ ಸರ್ಕಾರದ ಅಧೀನ ಕಾರ್ಯದರ್ಶಿ, ಸಾಮಾನ್ಯಾಡಳಿತ ಇಲಾಖೆ. (ಒಮತ್ತು ಮ)