(1) 2ನೇ ನಿಯಮದ ಮೇರೆಗೆ ತಮ್ಮ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಲು ಇಚ್ಚಿಸುವ ವ್ಯಕ್ತಿಗಳು ತಮ್ಮ ಉದ್ಯೋಗಿ ವೃಂದವನ್ನು ಬದಲಾವಣೆ ಮಾಡುವಂತೆ ಕೋರಿ ತಮ್ಮನ್ನು ನೇಮಕ ಮಾಡಿದ ಪ್ರಾಧಿಕಾರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) (1) ನೇ ಉಪನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ನೇಮಕ ಪ್ರಾಧಿಕಾರಿಯು, ಅರ್ಜಿದಾರನು ಉದ್ಯೋಗಿ ವೃಂದವನ್ನು ಬದಲಾವಣೆ ಮಾಡಲು ಹಕ್ಕನ್ನು ಹೊಂದಿದ್ದಾನೆಂದು ಮನವರಿಕೆಯಾದರೆ, ಕೋರಿಕೆಯನ್ನು ಮಂಜೂರು ಮಾಡುವ ಆದೇಶಗಳನ್ನು ಹೊರಡಿಸಬಹುದು.