ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ,- “ ಕರ್ನಾಟಕ ದಿನಗೂಲಿ ನೌಕರರ ಕ್ಲೇಮಾಭಿವೃದ್ದಿ ಅಧಿನಿಯಮ, 2012” (2013ರ ಕರ್ನಾಟಕ ಅಧಿನಿಯಮ ಸಂಖ್ಯೆ 19;
(ಬಿ) ಈ ನಿಯಮಗಳಲ್ಲಿ ಪ್ರಯೋಗಿಸಿರುವ ಪದಗಳು ಮತ್ತು ಅಭಿವ್ಯಕ್ತಿಗಳಿಗೆ ಪರಿಭಾಷೆಯನ್ನು ನೀಡದೇ ಇದ್ದಲ್ಲಿ ಅವುಗಳು ಕರ್ನಾಟಕ ನಾಗರಿಕ ಸೇವಾ, (ಸಾಮಾನ್ಯ ನೇಮಕಾತಿ) ವಿಯಮಗಳು, 1977 ಅಥವಾ ಕರ್ನಾಟಕ ನಾಗರಿಕ ಸೇವಾ ಕಾಯ್ದೆ, 1978 ಅಥವಾ ಅದರಡಿ ರಚಿಸಲಾದ ಇತರೆ ವಿಯಮಗಳಲ್ಲಿರುವ ಅರ್ಥವನ್ನೇ ಹೊಂದಿರುತ್ತವೆ. 3. ದಿನಗೂಲಿ. ಸೌಕರರ ಮುಂದುವರಿಕೆ: ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿನ ಸಂಬಂಧಿಸಿದ ಆಡಳಿತ ಇಲಾಖೆಯು ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಎಲ್ಲಾ ಸಂಸ್ಥೆಗಳ ಅರ್ಹ ದಿನಗೂಲಿ ನೌಕರರ ಹೆಸರುಗಳನ್ನು ಅಧಿಸೂಚಿಸತಕ್ಕದ್ದು.