(1) ಒಬ್ಬ ಮಹಿಳಾ ದಿನಗೂಲಿ ನೌಕರಳು 180 ದಿನಗಳ ಪ್ರಸೂತಿ ರಜೆಗೆ ಅರ್ಹಳಾಗಿರತಕ್ಕದ್ದು.
(2) ಒಬ್ಬ ಪುರುಷ ದಿನಗೂಲಿ ನೌಕರನು 15 ದಿನಗಳ ಪೆಟರ್ನಿಟಿ dar ಅರ್ಹನಾಗಿರತಕ್ಕದ್ದು.
(3) ಒಬ್ಬ ದಿನಗೂಲಿ ನೌಕರನಿಗೆ 60 ವರ್ಷಗಳ ವಯಸ್ಸಾದ ತರುವಾಯ, ಪೂರ್ಣಗೊಳಿಸಿದ ಸೇವೆಯ ಪ್ರತಿಯೊಂದು ವರ್ಷಕ್ಕೆ 15 ದಿನಗಳ ವೇತನದಂತೆ ಗರಿಷ್ಠ 12 ತಿಂಗಳುಗಳ ವೇತನಕ್ಕೆ ಮಿತಿಗೊಳಿಸಿದ ಎಕ್ಕ್-ಗ್ರೇಷಿಯವನ್ನು (ಅನುಗ್ರಹ ಪೂರ್ವಕ) ಆತನಿಗೆ ನೀಡತಕ್ಕದ್ದು.
(4) ಪಿಂಚಣಿ ನಿಧಿ ನಿರ್ವಹಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುವ ಹೊಸ ಪಿಂಚಣಿ. ಯೋಜನೆ(ಎನ್ಪಿಎಸ್) ಸ್ವಾವಲಂಬನ್ ಯೋಜನೆಯನ್ನು ದಿನಗೂಲಿ ನೌಕರನಿಗೆ ಅನ್ವಯಿಸತಕ್ಕದ್ದು.
(5) ಒಬ್ಬ ದಿನಗೂಲಿ ನೌಕರನು ಸೇವೆಯಲ್ಲಿ ಮುಂದುವರಿದ ವೃಂದದಲ್ಲಿ ಜ್ಯೇಷ್ಠತೆಗೆ ಅರ್ಹನಾಗುವುದಿಲ್ಲ ಮತ್ತು ಉಳಿದ ಸೇವಾ ಅವಧಿಯಲ್ಲಿ ಯಾವುದೇ ಮುಂಬಡ್ಡಿಗೆ ಅರ್ಹನಾಗತಕ್ಕದ್ದಲ್ಲ.