(1) ಕರ್ನಾಟಕ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1966ರ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ದಿನಗೂಲಿ ನೌಕರನಿಗೆ. ಅನ್ವಯವಾಗತಕ್ಕದ್ದು. ಆತನು, ಕೆಲಸದಿಂದ ತೆಗೆದುಹಾಕುವುದು ಒಳಗೊಂಡಂ೦ತೆ ಅಂತಹ ಶಿಸ್ತು ಕ್ರಮಕ್ಕೆ ಹೊಣೆಗಾರನಾಗತಕ್ಕದ್ದು. ದಿನಗೂಲಿ ನೌಕರನು ಆತನು ಎಸಗಿದ ದುರ್ನಡತೆ ಅಥವಾ ಅಸಭ್ಯ ನಡವಳಿಕೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಉದ್ದೆಶಿಸಿದ್ದಲ್ಲಿ, ಆ ವಿಚಾರಕ್ಕೆ ಸಂಬಂಧಿಸಿದಂತೆ ಆತನಿಗೆ ಲಿಖಿತ ಮೂಲಕ ತಿಳಿಸಿ ಅದರ ವಿರುದ್ಧವಾಗಿ ತನ್ನ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ಕಲ್ಪಿಸತಕ್ಕದ್ದು.
(2) ನೇಮಕಾತಿ ಪ್ರಾಧಿಕಾರವು, ದಿನಗೂಲಿ ನೌಕರನು ಸಲ್ಲಿಸುವ ಮನವಿಯನ್ನು ಪರಿಗಣಿಸಿ, ಪ್ರತಿಯೊಂದು ದುರ್ನಡತೆ ಅಥವಾ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ದಾಖಲಿಸಿ ಮತ್ತು ರುಜುವಾತಾದ ದುರ್ನಡತೆಗೆ ಸಂಬಂಧಿಸಿದಂತೆ ಒಂದು ಆದೇಶ ಹೊರಡಿಸುವುದರ ಮುಖಾಂತರ ದಿನಗೂಲಿ ನೌಕರನನ್ನು ಸೇವೆಯಿಂದ ತೆಗೆದುಹಾಕಬಹುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ (ಡಾ:: ಮಂಗಳ ಜಿ.ಎಸ್) ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1)