ಎ) “ಅಧಿನಿಯಮ” ಎಂದರೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012 ಕರ್ನಾಟಕ ಅಧಿನಿಯಮ ಸಂಖ್ಯೆ (10);
ಬಿ) “ಪ್ರಕರಣ” ಎಂದರೆ ಈ ಅಧಿನಿಯಮದ ಪ್ರಕರಣ; ಮತ್ತು (ಸಿ “ಪ್ರಪತ್ರ” ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಪ್ರಪತ್ರ. 3. ಸರ್ಕಾರೇತರ ಸದಸ್ಯರುಗಳಿಗೆ ಪ್ರಯಾಣ ಭತ್ಯೆ : ಸರ್ಕಾರೇತರ ಸದಸ್ಯರು ಅಂದರೆ ಅಧಿನಿಯಮದ ಪ್ರಕರಣ 3 ರಉಪ ಪ್ರಕರಣ (A) (ಟಿ) ಮತ್ತು (ಯು) ಗಳನ್ವ್ಹಯ ನಾಮನಿರ್ದೇಶಿತರಾದ ಸರ್ಕಾರೇತರ ಸದಸ್ಯರು ಪ್ರಯಾಣ ಭತ್ಯೆ ಮತ್ತು ಉಪಸ್ಥಿತಿ ಭತ್ಯೆಗಳನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳ ಅನುಬಂಧ “ಎ” ರನ್ವಯ ಸರ್ಕಾರವು ಕಾಲಕಾಲಕ್ಕೆ ವಿಗದಿಪಡಿಸುವ ದರಗಳನ್ವಯ ಪಡೆಯಲು ಅರ್ಹರಾಗಿರತಕ್ಕದ್ದು. 4. ಕರಾರುಗಳನ್ನು ಮಾಡಿಕೊಳ್ಳುವುದು: ಪ್ರಾಧಿಕಾರದ ಪರವಾಗಿ ಅಥವಾ ಪ್ರಾಧಿಕಾರದ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವುದು ಅಥವಾ ಸಾಮಗ್ರಿಗಳನ್ನು, ಸರಕುಗಳನ್ನು ಸರಬರಾಜು ಮಾಡುವ ಅಥವಾ ಸೇವೆಯನ್ನು ಸಲ್ಲಿಸುವ ಸಲುವಾಗಿ ಸರ್ಕಾರವು ಕಾಲಕಾಲಕ್ಕೆ ರಚಿಸಿದ ಯಾವುದೇ ನಿಯಮಗಳು ಮತ್ತು ನಮೂನೆಗಳು ಇದ್ದರೆ, ಸಾಧ್ಯವಾದಷ್ಟು ಮಟ್ಟಿಗೆ ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಸತಕ್ಕದ್ದು ಮತ್ತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಆಯುಕರು ಅದನ್ನು ಸಭೆಯ ಮುಂದೆ ಮಂಡಿಸತಕ್ಕದ್ದು. ಪ್ರಾಧಿಕಾರದ ಅಯುಕ್ತರ ಅಂಥ ನಡವಳಿಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಅಥವಾ ರದ್ದುಪಡಿಸಲು ಪ್ರಾಧಿಕಾರವು ತೀರ್ಮಾನಿಸಿದರೆ, ಆಯುಕ್ತರ ನಡವಳಿಗಳನ್ನು ಪ್ರಾಧಿಕಾರವು ಮಾರ್ಪಾಡು ಮಾಡಲು ಅಥವಾ ರದ್ದುಗೊಳಿಸಲು ತೀರ್ಮಾನಿಸಿದ ದಿನಾಂಕದಿಂದ ನಡವಳಿಗಳು ಹಾಗೆ ಮಾರ್ಪಾಡಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ.