(1) ಪ್ರಾಧಿಕಾರದ ಆಯುಕ್ತರು ಮತ್ತು ಇತರ ನೌಕರರ ಅರ್ಹತೆಗಳು, ನೇಮಕ ವಿಧಾನ ಮತ್ತು ಸೇವಾ ಷರತ್ತುಗಳು ಕರ್ನಾಟಕ ಸರ್ಕಾರಿ ನೌಕರರಿಗೆ ಸಮಾನವಾಗಿರತಕ್ಕದ್ದು.
(2) ಪ್ರಾಧಿಕಾರವು ಸೃಜಿಸುವ ಪ್ರತಿಯೊಂದು ಹುದ್ದೆಯು, ಸರ್ಕಾರದ ಅಧೀನದಲ್ಲಿರುವ ಹುದ್ದೆಗೆ. ಸಮಾನವಾಗಿರತಕ್ಕದ್ದು.ಪ್ರಾಧಿಕಾರವು ಪ್ರತಿಯೊಂದು ಹುದ್ದೆಯನ್ನು ಸರ್ಕಾರದ ಅನುಮೋದನೆ ಪಡೆದು ಸೃಜಿಸತಕ್ಕದ್ದು.
(3) ಪ್ರಾಧಿಕಾರದಲ್ಲಿರುವ ಪ್ರತಿಯೊಂದು ಹುದ್ದೆಯನ್ನು ಸಾಧ್ಯವಾದಷ್ಟು ಮಲ್ಗ್ಲೆಗೆ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದ ನೌಕರರನ್ನು ಅಥವಾ ಭಾರತದ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿ ನಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು.
(4) ಪ್ರಾಧಿಕಾರದ ನೌಕರರಿಗೆ. ಅನ್ವಯವಾಗುವ ವೇತನ ಶ್ರೇಣಿಗಳು, ಕರ್ನಾಟಕ ಸರ್ಕಾರದಲ್ಲಿರುವ ಸಮಾನ ಹುದ್ದೆಗಳಿಗೆ ಅನ್ವಯವಾಗುವ ವೇತನ ಶ್ರೇಣಿಗಳಾಗಿರತಕ್ಕದ್ದು.
(5) ಪ್ರಾಧಿಕಾರದ ನೌಕರರು, ಈ ನಿಯಮಗಳಿಗೆ ಅಸಂಗತವಾಗಿರದಷ್ಟರ ಮಟ್ಟಿಗೆ, ಕರ್ನಾಟಕ ಸಿವಿಲ್ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು.
(6) ಪ್ರಾಧಿಕಾರದ ನೌಕರರು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021 ರಮತ್ತು ಪಾಧಿಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂಂತಹ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕ ಇತರ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು. 7. ಪ್ರಾಧಿಕಾರದ ಟಿಪ್ಪಣಿಯ ವಿಷಯಗಳನ್ನು ತಿಳಿಯಪಡಿಸುವುದು: (1) 16 ನೇ ಪ್ರಕರಣದ (1) (2) ಮತ್ತು (3) ನೇ ಉಪ-ಪ್ರಕರಣಗಳ ಮೇರೆಗೆ ಸುತ್ತೋಲೆ ಮೂಲಕ ಕಳುಹಿಸಬೇಕಾಗಿರುವ ಪ್ರಾಧಿಕಾರದ ಟಿಪ್ಪಣೆಯಲ್ಲಿ ವಿಷಯದ ವಾಸ್ತವಾಂಶಗಳನ್ನು ತೀರ್ಮಾನದ ಅಂ೦ಶಗಳನ್ನು ಯಾವುದೇ ಪಕ್ಷಕಾರರೊಡನೆ ಸಮಾಲೋಚಿಸಿದ್ದರೆ, ಪಕ್ಷಕಾರರ ಅಭಿಪ್ರಾಯಗಳನ್ನು ಮತ್ತು ಆಯುಕ್ತರು ಅಂತಿವ ಶಿಫಾರಸ್ಸುಗಳನ್ನು ತಿಳಿಯಪಡಿಸತಕ್ಕದ್ದು. (2) ಪ್ರಾಧಿಕಾರದ ಇಂತಹ ಪ್ರತಿಯೊಂದು ಟಿಪ್ಪಣಿಗೂ ಆಯುಕ್ತರು ಸಹಿ ಮಾಡತಕ್ಕದ್ದು. 8. ಪ್ರಾಧಿಕಾರದ ಸ್ಥಿರಾಸ್ತಿಗಳನ್ನು ಮಾರುವ ಬಗ್ಗೆ ಷರತ್ತುಗಳು: (1) ಪ್ರಾಧಿಕಾರದ ಯಾವುದೇ ಸ್ಮಿರಾಸ್ತಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚರಾಸ್ಮಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಭಾರೆ ಮಾಡತಕ್ಕದ್ದಲ್ಲ. (2) ನಿರುಪಯುಕ್ತ ವಸ್ತುಗಳನ್ನು ಕರ್ನಾಟಕ ಸರ್ಕಾರದ ಅರ್ಥಿಕ ಸಂಹಿತೆ ವಿಯಮಗಳ ಅನುಸಾರ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಮಾರತಕ್ಕದ್ದು. 9. ಆಯವ್ಯಯದ ನಮೂನೆ: ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ಮುಂದಿನ ಅರ್ಥಿಕ ವರ್ಷದ ಬಜೆಟ್ ನ್ನು ಪ್ರಾಧಿಕಾರವು ಸರ್ಕಾರದ ಆರ್ಥಿಕ ಇಲಾಖೆಯು ಗೊತ್ತು ಪಡಿಸಲಾದ ನಮೂನೆಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ ಅಂಥಹದೇ ಅನುಬಂಧಗಳೊಡನೆ ತಯಾರಿಸತಕ್ಕದ್ದು. 10.ಲೆಕ್ಕ ಪುಸ್ತಕಗಳು ಮತ್ತು ಇತರ ರಿಜಿಸ್ಟರಗಳ ನಮೂನೆ: (1) ಕರ್ನಾಟಕ ಆರ್ಥಿಕ ಸಂಹಿತೆ 1958 ರ ಉಪಬಂ೦ಧಗಳು ಮತ್ತು ಅದರ ಮೇರೆಗೆ ರಚಿಸಲಾದ ನಮೂನೆಗಳು ಯಥೋಚಿತ ಬದಲಾವಣೆಗಳೊಂದಿಗೆ ಪ್ರಾಧಿಕಾರವು ನಿರ್ವಹಿಸುವ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕದ್ದು.
(2) ಪ್ರಾಧಿಕಾರದ ಉದ್ದೇಶಕ್ಕೆ ಸೂಕ್ತವಾಗುವ ಪರಿನಿಯಮಗಳನ್ನು ಅಥವಾ ನಮೂನೆಗಳನ್ನು ಕರ್ನಾಟಕ ಸರ್ಕಾರವು ರಚಿಸಿರದಿದ್ದಲ್ಲಿ. ಅನುಸರಿಸತಕ್ಕ ಪರಿನಿಯಮಗಳನ್ನು ಮತ್ತು ನಮೂನೆಗಳನ್ನು ಆಯುಕ್ತರು ನಿರ್ದಿಷ್ಟಪಡಿಸಬಹುದು ಮತ್ತು 4 ನೇ ನಿಯಮದಲ್ಲಿ ನಿರ್ಧಿಷ್ಟ ಪಡಿಸಿರುವಂತೆ. ಪ್ರಾಧಿಕಾರದ ಘಟನೋತ್ತರಅನುಮೋದನೆ.. ವಿರ್ಬಂಧವು ಯಥೋಚಿತ ಬದಲಾವಣೆಯೊಂದಿಗೆ ಅನ್ವಯವಾಗತಕ್ಕದ್ದು. 11. ವರದಿಗಳು: - ಪ್ರಾಧಿಕಾರವು ಪ್ರತಿ ವರ್ಷ ಜುಲೈ ಅಂ೦ತ್ಯದ ಒಳಗಾಗಿ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸತಕ್ಕದ್ದು, ಅದಾಗ್ಯೂ ಪ್ರಪತ್ರ 1ರಲ್ಲಿ ಸರ್ಕಾರ ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯ ಚಟುವಟಿಕೆಗಳು, ಹಣಕಾಸು ಪರಿಸ್ಥಿತಿ, ಸಿಬ್ಬಂದಿ ಮತ್ತು ಅಧಿಕಾರಗಳು ಮತ್ತು ಇತರ ಅದೇ ಬಗೆಯ ವಿಷಯಗಳನ್ನೊಳಗೊಂಡ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಮಂಡಳಿಯ ಅನುಮೋದನೆ ಪಡೆಯತಕ್ಕದ್ದು ಮತ್ತು ಮುಂದಿನ ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಜೂನ್ ಅಂತ್ಯದಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಸರ್ಕಾರವು ಅಂತಹ ವರದಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಮಾಡಬಹುದು. ಪ್ರಪತ್ರ -1 (ನಿಯಮ 11ನ್ನು ನೋಡಿ) ವರ್ಷಕ್ಕಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಆಡಳಿತ ವರದಿ.
(ಎ) ಆಡಳಿತ:
(1) ಪ್ರಾಧಿಕಾರದ ರಚನೆ ಅನರ್ಹಗೊಳಿಸುವಿಕೆ, ತೆಗೆದು ಹಾಕುವುದು, ಇತ್ಯಾದಿ.
(2) ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಪದನಿಮಿತ್ತ ಅಥವಾ ನಾಮನಿರ್ದೇಶಿತ ಅಥವಾ ನೇಮಕಗೊಂಡಂ೦ತೆ ಅವರ ಸಾಮರ್ಥ್ಯ.
(3) ವರದಿಯ ವರ್ಷದಲ್ಲಿ ನಡೆಸಲಾದ ಪಾಧಿಕಾರದ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(4) (ಎ) ವರದಿಯ ವರ್ಷದಲ್ಲಿ ನಡೆದ ಕಾರ್ಯಗೊಳಿಸುವ ಸಮಿತಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(ಬಿ) ನಿರಂತರವಾಗಿ ಅಥವಾ ಹೆಚ್ಚು ಸಭೆಗಳಿಗೆ ಗೈರು ಹಾಜರಾದ ಪ್ರಾಧಿಕಾರದ ಮತ್ತು ಕಾರ್ಯಗತಗೊಳಿಸುವ ಸಮಿತಿಯ ಸದಸ್ಯರ ಪಟ್ಟೆ,
(5) ಪ್ರಾಧಿಕಾರದ ಸಮಿತಿಗಳ ಮತ್ತು ಉಪಸಮಿತಿಗಳ ರಚನೆ.
(6) ಪ್ರತಿಯೊಂದು ಸಮಿತಿ /ಉಪಸಮಿತಿಗೆ ಪ್ರತ್ಯೇಕವಾಗಿ ನಡೆಸಲಾದ ಸಭೆಗಳ ಸಂಖ್ಯೆ.
(7) ಪ್ರಾಧಿಕಾರದ ಅಧಿಕಾರಿ ಮತ್ತು ನೌಕರರುಗಳು.
(8) ಪ್ರಾಧಿಕಾರದ ಆವರಣದ ವ್ಯಾಪ್ತಿ ಮತ್ತು ಅಧಿಕಾರಿಗಳು ಮತ್ತು ನೌಕರರುಗಳು.
(9) ಪೀಠೋಪಕರಣಗಳು ಮತ್ತು ಕಛೇರಿ ಸಾಮಗ್ರಿಗಳು.
(10) ಮೇಲೆ ಬಾಬ್ತು 8 ರಲ್ಲಿ ತೋರಿಸಿರುವ ಹೊರತಾಗಿ ACoA.
(11) ಮೋಟಾರು ವಾಹನಗಳು ಉಪಕರಣಗಳು ಮತ್ತು ಸ್ಥಿರ ವಸ್ತುಗಳು.
(12) ಪುಸ್ತಕಗಳು ಮತ್ತು ಪ್ರಪತ್ರಗಳು/ನಮೂನೆಗಳು ಮತ್ತು ದಾಖಲೆ ಪತ್ರಗಳ ನಿರ್ವಹಣೆ.
(13) ನಗದು, ಬೆಲೆಬಾಳುವ ದಸ್ತಾವೇಜು ಮತ್ತು ಪ್ರಮುಖ ದಾಖಲೆ ಪತ್ರಗಳ ಭದ್ರತೆ ಮತ್ತು ಸುರಕ್ಷತೆ ಮತ್ತು ODOT...
(ಬಿ; ಆಯವ್ಯಯ ಮತ್ತು ಯೋಜನೆಗಳು:
(14) ವಾರ್ಷಿಕ ಸ್ವೀಕೃತಿ ಮತ್ತು ವೆಚ್ಚಗಳು.
ಕಾಮಗಾರಿಯ ಹೆಸರು ಯೋಜನೆಗಳು/ಸೇವೆಗಳು ವೆಚ್ಚ ವಾಸ್ತವಿಕ ಪ್ರಗತಿ ಹಿಂದಿನ ವರ್ಷದವರೆಗೆ ವೆಚ್ಚ ವಾಸ್ತವಿಕ ಪ್ರಗತಿ ಪ್ರಸಕ್ತ ಸಾಲಿನವರೆಗೆ ವೆಚ್ಚ ಎಂದರೆ ಕಟ್ಟಡಗಳು/ ಹಿಂದಿನ ವರ್ಷದವರೆಗೆ (2) (3)
(1) (2) (3)
(15) ಕಾಮಗಾರಿಯ ನಿಧಾನಗತಿಯ ಪ್ರಗತಿಗೆ 14 ರಲ್ಲಿ ಉಲ್ಲೇಖಿಸಲಾಗಿರುವಂತೆ ಕಾರಣಗಳು.
(16) ಯೋಜನೆಗಳು ಮತ್ತು ಸ್ಕೀಮುಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ ಕಳುಹಿಸಿಕೊಡುವುದು.
(17) ತಪ್ಪಿತಸ್ಥ, ಕರ್ತವ್ಯಲೋಪವೆಸಗಿರುವ ಜನ್ಸಿಗಳು, ಇಲಾಖೆಗಳು, ಇತ್ಯಾದಿ ಅಂತಹ ಏಜೆನ್ಸಿಗಳ ಮತ್ತು ಇಲಾಖೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು.
(18) ಪ್ರಾಧಿಕಾರದ ಅನುದಾನದ ಪ್ರಸ್ತುತ BOS.
॥ (ಎ) ಖಜಾನೆಯ ನಿಧಿಯನ್ನು ಇಡಲಾಗಿರುವ ಬ್ಯಾಲಕಿನ ಹೆಸರುಗಳು.
(ಬಿ) ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳ ಸ್ವರೂಪ
(ಸಿ) ಶಿಲ್ಕು ॥) ಠೇವಣಿ ಮತ್ತು ಠೇವಣಿಯ ಸ್ವರೂಪ.
Ill) ಸಂಗ್ರಹಿಸಿದ ಸಾಲಗಳು ಮತ್ತು ಅದರ ವೆಚ್ಚಗಳು.
lv) ಅನುದಾನ, ಉಪದಾನ, ಕೊಡುಗೆಗಳು, ದೇಣಿಗೆಗಳು, ಉಡುಗೊರೆಗಳ ವಿವರಗಳು.
(19) ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅವುಗಳ Bos.
(20) ಹಣಕಾಸು ವರ್ಷದಲ್ಲಿ ಹಣ ದುರುಪಯೋಗ ಹಾಗೂ ಆರ್ಥಿಕ ನಷ್ಟ, ಆಸ್ತಿ ನಷ್ಟ, ಆಸ್ತಿ ಅತಿಕ್ರಮಣ ಪ್ರಕರಣಗಳಲ್ಲಿ ತೆಗೆದುಕೊಳ್ಳಲಾದ ಕ್ರಮ ಅಥವಾ ಶಿಫಾರಸ್ಸು ಮಾಡಲಾದ ಪ್ರಕರಣಗಳು.
(21) ಆಯುಕ್ತರು ತಮ್ಮ ಕಛೇರಿಯ ಅಧಿಕಾರಿ ಮತ್ತು ಅಧಿಕೃತ ಏಜನ್ಸಿಗಳೊಂದಿಗೆ ಯೋಜನೆಗಳ ಪರಿವೀಕ್ಷಣೆ ನಡೆಸಿ, ಅಧಿಕೃತ ಏಜೆನ್ಸಿಗಳಿಂದ ಕಾರ್ಯಗತಗೊಳಿಸಲಾದ ಅಂತಕ ಯೋಜನೆಗಳ ತಪಾಸಣೆ ಮಾಡುವುದು ಹಾಗೂ ಯೋಜನೆಗಳ ಟಿಪ್ಪಣಿಗಳನ್ನು ರಚಿಸಿ ಕಾರ್ಯಗತಗೊಳಿಸುವುದು (22) ಯಾವುದೇ ಪ್ರಮುಖ ವಿಷಯಗಳು ಷರಾದೊಂದಿಗೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕಲಾವತಿ.ಎಸ್.ಎನ್)
ಸರ್ಕಾರದ ಉಪ ಕಾರ್ಯದರ್ಶಿ
ಕಂದಾಯ ಇಲಾಖೆ
[ಸಮನ್ಹಯ, ಸೇವೆಗಳು-2 ಮತ್ತು ಮಂ & ಪ್ರಾ]