ಮಂಡಲಿಯ ಅಧ್ಯಕ್ಷರಿಗೆ ಸಂದಾಯ ಮಾಡಬೇಕಾದ ಭತ್ಯೆಗಳು1957 ರ ಕರ್ನಾಟಕ ಸಚಿವರ ವೇತನಗಳು ಮತ್ತು ಭತ್ಯೆಗಳ ಅಧಿನಿಯಮದ (1957 ರ ಕರ್ನಾಟಕ ಅಧಿನಿಯಮ 5) ಮೇರೆಗೆ ರಾಜ್ಯ ಸಚಿವರಿಗೆ ಸಂದಾಯ ಮಾಡುವವಮೊತ್ತಕ್ಕೆ ಸರಿಸಮವಾಗಿರತಕ್ಕದ್ದು.
ಅಧ್ಯಕ್ಷನಲ್ಲದ ಮಂಡಳಿಯ ಪತಿಯೊಬ್ಬ ಸರ್ಕಾರೇತರ ಸದಸ್ಯನು.
ಎ) ಮಂಡಲಿಯ ಸಭೆಗಳಿಗೆ ಹಾಜರಾಗುವುದಕ್ಕಾಗಿ ಆಗಿಂದಾಗ್ಗೆ ಸರ್ಕಾರದ 'ಎ' ಗುಂಪಿನ ಅಧಿಕಾರಿಗಳಿಗೆ ಅನುಮತಿಸಬಹುದಾದಂಥ ದರದಲ್ಲಿ ಪ್ರಯಾಣ ಮತ್ತು ದಿನ ಭತ್ಯೆನ್ನು ಮತ್ತು.
ಬಿ) ಮಂಡಲಿಯ ಸಭೆಗಳಿಗೆ ಹಾಜರಾಗುವುದಕ್ಕಾಗಿ ದಿನವೊಂದಕ್ಕೆ ಒಂದು ನೂರು ರೂ. ಗಳ ಉಪ ವೇತನ ಸಂಭಾವನೆಯನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.
ಬಿ) . ಮಂಡಲಿಯ ಪ್ರತಿಯೊಂದು ಸಭೆಯ ವ್ಯವಹರಣೆಗಳ ನಡವಳಿಕೆಯ ಸಂಕ್ಷಿಪ್ತ ದಾಖಲೆಯನ್ನು ದಾಖಲು ಮಾಡತಕ್ಕದ್ದು, ಅಥವಾ ದಾಖಲು ಮಾಡುವಂತೆ ಮಾಡತಕ್ಕದ್ದು.
ಸಿ) ಸಭೆಯಲ್ಲಿ ಮಂಡಿಸಲಾದ ಅಥವಾ ಯಾವುದೇ ಗೊತ್ತುವಳಿ ಅಥವಾ ಇಡಲಾದ ಪ್ರಶ್ನೆಗಳ ಸಂಬಂಧದಲ್ಲಿ ತಮ್ಮ ಅಭಿಪ್ರಾಯವನ್ನು ಅಥವಾ ಯಾವುದೇ ಸ್ಪಷ್ಟಿಕರಣವನ್ನು ಒದಗಿಸತಕ್ಕದ್ದು, ಡಿಎ ಮಂಡಲಿಯ ಎಲ್ಲ ಗೊತ್ತುವಳಿಗಳು ಮತ್ತು ಆದೇಶಗಳು ಜಾರಿಗೊಳಿಸತಕ್ಕದ್ದು. ಪರಂತು, ಗೊತ್ತುವಳಿಗಳು ಅಥವಾ ಆದೇಶಗಳನ್ನು ಜಾರಿಗೆ ತರುವಲ್ಲಿ ಎಲ್ಲಿ ತೊಂದರೆಗಳು ಇರುತ್ತವೋ ಅಲ್ಲಿ ಅದನ್ನು ಮಂಡಲಿಗೆ, ಅದರ ಮುಂದಿನ ಸಭೆಯಲ್ಲಿ. ವರದಿ ಮಾಡತಕ್ಕದ್ದು ಮತ್ತು ಮಂಡಲಿಯ ನಿರ್ದೆಶನಗಳಿಗನುಸಾರವಾಗಿ ನಡೆಯತಕ್ಕದ್ದು.
ಇ) ಮಂಡಲಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಮೇಲ್ವಿಚಾರಣೆ ನಡೆಸತಕ್ಕದ್ದು ಮತ್ತು ನಿಯಂತ್ರಿಸತಕ್ಕದ್ದು.
ಎಫ್) ಮಂಡಲಿಯ ಸಭೆಯ ವ್ಯವಹರಣೆಗಳಿಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳು ಮತ್ತು ದಸ್ತಾವೇಜುಗಳ, ನಿರ್ವಹಿಸಿದ ಅಥವಾ ನಿರ್ವಹಣೆಯಲ್ಲಿರುವ ಕಾಮಗಾರಿಗಳು ಮತ್ತು ಯೋಜನೆಗಳ ಮತ್ತು ಮಂಡಲಿಯ ಪ್ರಾಧಿಕಾರದ ಮೇರೆಗೆ ಅಥವಾ ಅವನ ಸ್ವಂತ ಅಧಿಕಾರದ ಮೇರೆಗೆ ನಡೆಸಿದ ಪತ್ರ ವ್ಯವಹಾರಗಳ ಅಭಿರಕ್ಷಣೆಯನ್ನು ಹೊಂದಿರತಕ್ಕದ್ದು.
ಜಿ) ಮಂಡಲಿಯು ಕೃಗೊಂಡಿರುವ ಪ್ರತಿಯೊಂದು ಕಾಮಗಾರಿಯ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ಕಾಮಗಾರಿಯ ತ್ವರಿತ ವಿರ್ವಹಣೆಯನ್ನು ಸಾಧಿಸಲು ಕ್ರಮ ಕೈಗೊಳ್ಳತಕ್ಕದ್ದು ಮತ್ತು ಅಂಥ ಕಾಮಗಾರಿಯ ನಿರ್ವಹಣೆಯಲ್ಲಿ ಲೋಪ ಅಥವಾ ಪ್ರಗತಿಯು ನಿಧಾನವಾಗಿರುವ ಸಂದರ್ಭದಲ್ಲಿ ಮಂಡಲಿಗೆ ವರದಿ ಮಾಡತಕ್ಕದ್ದು.
ಹೆಚ್) ರಾಜ್ಯ ಸರ್ಕಾರದ ಅಥವಾ ಸರ್ಕಾರೇತರ ಖ್ಯಾತ ತಜ್ಞರು ಅಥವಾ ಸಮಾಲೋಚಕರ ನೆರವಿನೊಂದಿಗೆ ಮಂಡಲಿಯು ಸೂಕ್ತವೆಂದು ಪರಿಗಣಿಸಬಹುದಾದ ಬಯಲು ಸೀಮೆ ಪ್ರದೇಶ ಅಥವಾ ಯಾವುದೇ ವಿಶೇಷ ವಿಭಾಗ ಅಥವಾ ಅದರ ಭಾಗದ ಅಭಿವೃದ್ಧಿಗಾಗಿ ವಿಶೇಷ ಅಧ್ಯಯನ ಮತ್ತು ಸಮೀಕ್ಷೆ ನಡೆಸುವುದು ಮತ್ತು ಅದರ ಮೇಲಣ ವರದಿಯನ್ನು ತನ್ನ Ses ಟಿಪ್ಪಣೆಗಳೊಂದಿಗೆ ಮಂಡಲಿಯ ಪರಿಗಣನೆಗಾಗಿ ಅವರ ಮುಂದೆ ಇಡತಕ್ಕದ್ದು.
ಐ) ಅದೇ ತರಹದ ತಜ್ಜ ಅಥವಾ ಸಮಾಲೋಚಕರ ನೆರವಿನೊಂದಿಗೆ ಸದರಿ ಪ್ರದೇಶದಲ್ಲಿ ಪೂರ್ಣಗೊಂಡಿರುವ ಅಥವಾ ಕಾರ್ಯರೂಪಕ್ಕೆ ತರಬೇಕೆಂದಿರುವ ಯಾವುದೇ ನಿರ್ದಿಷ್ಟ ಯೋಜನೆ ಅಥವಾ ಸ್ಕೀಂನ ವಿಶೇಷ ಮೌಲ್ಯ ನಿರ್ಣಯ ಅಥವಾ ಲೆಕ್ಕ ಪರಿಶೋಧನೆಯನ್ನು ಮಾಡತಕ್ಕದ್ದು ಮತ್ತು ಅದರ ಮೇಲಣ ವರದಿಗಳನ್ನು ಪರಿಗಣನೆಗಾಗಿ ತನ್ನ ಟೀಕೆ ಟಿಪ್ಪಣೆಯೊಂದಿಗೆ ಮಂಡಲಿ ಮತ್ತು ಸರ್ಕಾರದ ಮುಂದೆ ಇಡತಕ್ಕದ್ದು.
ಜಿ) ಲೆಕ್ಕ ಪರಿಶೋಧಕನು ಸೂಚಿಸುವ ಯಾವುದೇ ಅಕ್ರಮತೆಯನ್ನು ತೆಗೆದು ಹಾಕುವುದಕ್ಕೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
ಕೆ) ಈ ಅಧಿನಿಯಮದಿಂದ ಅಥವಾ ಅದರ ಮೇರೆಗೆ ಅವರಿಗೆ ಪ್ರತ್ಯಾಯೋಜಿಸಬಹುದಾದ ಯಾವುದೇ ಪ್ರತ್ಯೇಕ ಅಥವಾ ವಿಶೇಷ ಅಧಿಕಾರಗಳೂಂ೦ದಿಗೆ ಆಗಿಂದಾಗ್ಗೆ ತಿದ್ದುಪಡಿಯಾದಂಥ ಹಣಕಾಸಿನ ಅಧಿಕಾರಿಗಳ (ಎಲ್ಲ ಇಲಾಖೆಗಳಿಗೂ ಸಮಾನ್ಯವಾಗಿರುವ) ಕೃಪಿಡಿಯಲ್ಲಿ ವಿರ್ಧಿಷ್ಠ್ಟಪಡಿಸಲಾದ ಇಲಾಖೆಯ ಪ್ರಧಾನ ಮುಖ್ಯಸ್ಥನ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು.
ಎಲ್)ಯಾವುದೇ ಇಲಾಖೆಯಿಂದ ಮತ್ತೊಂದು ಇಲಾಖೆಯೊಂದಿಗೆ ವೆಚ್ಚ ಮಾಡದಿರುವ ಮೊಬಲಗನ್ನು ಪುನರ್ ವಿನಿಯೋಗಿಸಲು ಅನುಮೋದನೆ ಪಡೆಯಲು ಸಕ್ಷಮವಾಗಿರತಕ್ಕದ್ದು. BOOS ಇಲಾಖೆಯಿಂದ ಹಾಗೆ ವಿನಿಯೋಗಿಸಲಾದ ಮೊಬಲಗು ಆ ಇಲಾಖೆಗೆ ಮೂಲತಃ ಹಂಚಿಕೆ ಮಾಡಲಾದ ಮೊಬಲಗಿನ ಶೇಕಡ 10ರ ಗರಿಷ್ಟ ಪರಿಮಿತಿಗಿಂತ ಹೆಚ್ಚು ಇರತಕ್ಕದ್ದಲ್ಲ.
ಎಂ) ಸ್ವತಃ ತಾನೇ ಆಗಲಿ ಅಥವಾ ಅವನ ಅಧೀನ ಅಧಿಕಾರಿಗಳ ಮೂಲಕವಾಗಲಿ ಕಾಮಗಾರಿಗಳು ಮತ್ತು ಸರಬರಾಜುಗಳೂ ಸೇರಿದಂತೆ ಸ್ಕೀಮ್ಗಳು ಮತ್ತು ಯೋಜನೆಗಳನ್ನು ಪರಿಶೀಲಿಸತಕ್ಕದ್ದು.
ಎನ್) ಅದೇ ರೀತಿಯ ಉದ್ದೇಶಕ್ಕಾಗಿ ಅದೇ ರೀತಿಯ ಕರಾರನ್ನು ಸಂಬಂಧಪಲ್ಟ ಅಭಿವೃದ್ಧಿ ಇಲಾಖೆಯಿಂದ ಉಪಯೋಗಿಸುವಂತಹ ವಿಧಾನದಲ್ಲಿ ಮತ್ತು ಅಂಥ ನಮೂನೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು ಅಧಿಕಾರ ಹೊಂದಿರತಕ್ಕದ್ದು.
BOOS, ಐವತ್ತು OF ರೂ. ಗಳಿಗಿಂತ ಹೆಚ್ಚಾಗಿರುವ ವೆಚ್ಚವನ್ನು ಒಳಗೊಂಡಿರುವ ಯಾವುದೇ ಒಪ್ಪಂದವನ್ನು ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಮಾಡಿಕೊಳ್ಳತಕ್ಕದ್ದಲ್ಲ.
ಓ) ಏಕ ಕಾಲದಲ್ಲಿ ಐದು ಲಕ್ಷರೂ. ಗಳನ್ನು ಮೀರದ ವೆಚ್ಚವನ್ನು ಭರಿಸುವ ಅಧಿಕಾರವಿರತಕ್ಕದ್ದು.